'ನಾಗಿಣಿ' ನಟಿ ನಮ್ರತಾ ಗೌಡಗೆ ಜಾಮೂನ್ ಇಷ್ಟ, ಅಪ್ಪು ಅಪ್ಪಟ್ಟ ಅಭಿಮಾನಿ!

By ಪ್ರಿಯಾ ದೊರೆ

'ನಾಗಿಣಿ 2' ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ನಮ್ರತಾ ಗೌಡ 'ನಾಗಿಣಿ 2' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಈಗ ಜೀವನದಲ್ಲಿ ನಮ್ರತಾ ಗೌಡ ಹೊಸ ಹೆಜ್ಜೆಯನ್ನು ಇಟ್ಟಿದ್ದು, ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಜನರಿಗೆ ತಮ್ಮ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

Recommended Video

Puneeth Rajkumar ಗೆ ಫ್ರೆಂಡ್ ತರ ಮಾತನಾಡಿಸಿದ ಪುಟಾಣಿ | Filmibeat Kannada

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಮ್ರತಾ ಡ್ಯಾನ್ಸ್, ಕರಾಟೆ, ಮ್ಯೂಸಿಕ್ ಎಲ್ಲವನ್ನೂ ಕಲಿತಿದ್ದಾರೆ. ಕರಾಟೆ ಪಟುವಾಗಿದ್ದ ನಟಿ ಈಗ ಒಳ್ಳೆಯ ಡ್ಯಾನ್ಸರ್ ಹಾಗೂ ಆಕ್ಟರ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣುವ ನಮ್ರತಾ, ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್.

'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ನಟಿಸಿರುವ ನಮ್ರತಾ ಬಾಲ ನಟಿಯಾಗಿ ಡಿಡಿ ಚಂದನದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಗೂ ಬಣ್ಣ ಹಚ್ಚಿದರು. 'ಮಿಲನ', 'ಗೇಮ್', 'ಎಕ್ಸ್‌ಕ್ಲ್ಯೂಸ್ ಮೀ', 'ತುತ್ತೂರಿ' ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ.

Zee Kannada Nagini Serial Actress Namrutha Gowda Youtube Channel

ತಮ್ಮ ಅಭಿನಯದಿಂದಲೇ ವೀಕ್ಷಕರ ಮನ ಗೆದ್ದಿರುವ ನಮ್ರತಾ ಗೌಡ, ತಮ್ಮ ತಂದೆ-ತಾಯಿಗಾಗಿ ಸಾಧನೆಯ ಹಾದಿಯಲ್ಲಿದ್ದಾರೆ. ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ನಮ್ರತಾ ಗೌಡ, ಹೆಣ್ಣು ಮಗು ಎಂಬ ಕಾರಣಕ್ಕಾಗಿ ತಿರಸ್ಕಾರಕ್ಕೆ ಒಳಗಾದವರು. ನಮ್ರತಾ ತಂದೆ ತಾಯಿಯನ್ನು ಆ ಮನೆಯಲ್ಲಿ ಯಾರೂ ಗೌರವಿಸುತ್ತಿರಲಿಲ್ಲವಂತೆ. ಇದೆಲ್ಲಾ ಅರ್ಥ ಮಾಡಿಕೊಂಡ ನಮ್ರತಾ, ಅಪ್ಪ-ಅಮ್ಮನನ್ನು ಬೇರೆ ಕರೆದುಕೊಂಡು ಬಂದು ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ.

ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಮ್ರತಾ ಗೌಡ, ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ. ಜೊತೆಗೆ ಆಗಾಗ ಫೋಟೊಶೂಟ್ ಮಾಡಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ನಮ್ರತಾ ಗೌಡ ಬಾಲ್ಯದಿಂದಲೂ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದವರು. ಹೀಗಾಗಿ ಬಣ್ಣದ ನಂಟು ತುಂಬಾನೇ ಹಳೆಯದು.

Zee Kannada Nagini Serial Actress Namrutha Gowda Youtube Channel

ಅಂದ್ಹಾಗೆ ನಮ್ರತಾ ಗೌಡ ಫಸ್ಟ್ ಕ್ರಶ್ ಯಾರು ಗೊತ್ತಾ? ನಮ್ರತಾ ಮೊದಲ ಕ್ರಶ್ ಪುನೀತ್ ರಾಜ್ ಕುಮಾರ್ ಅಂತೆ. ಪುನೀತ್ ರಾಜ್ ಕುಮಾರ್ ಎಂದರೆ ತುಂಬಾ ಇಷ್ಟ ಎನ್ನುವ ನಮ್ರತಾ, ಅಪ್ಪು ನಟಿಸಿದ ಎಲ್ಲಾ ಸಿನಿಮಾಗಳನ್ನೂ ನೋಡಿದ್ದಾರೆ. ಇನ್ನು 'ಪರಮಾತ್ಮ' ಚಿತ್ರವನ್ನೂ 5ಕ್ಕೂ ಹೆಚ್ಚು ಬಾರಿ ನೋಡಿದ್ದಾರಂತೆ ನಮ್ರತಾ.

ನಮ್ರತಾ ಗೌಡ ಸದ್ಯ ತಮ್ಮ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿರಲು ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿ ನಮ್ರತಾ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಇದರ ಮೂಲಕ ನಮ್ರತಾ ಗೌಡ ಅಭಿಮಾನಿಗಳ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಉತ್ತರ ನೀಡಲಿದ್ದಾರೆ. ಸದ್ಯ ಈ ಯುಟ್ಯೂಬ್ ಚಾನೆಲ್‌ನ ಪ್ರೋಮೊ ರಿಲೀಸ್ ಮಾಡಿರುವ, ತಮಗೆ ಎನಿ ಟೈಂ ವೆಜ್ ಊಟ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೇ, ಮುದ್ದೆ, ಬಜ್ಜಿ ಹಾಗೂ ಗುಲಾಬ್ ಜಾಮೂನ್ ತುಂಬಾ ಇಷ್ಟ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

More from Filmibeat

English summary
Actress Namrtha Gowda Opened New Youtube Channel, Know More about that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X