»   » ಜೀ ಕನ್ನಡದಿಂದ 'ಶುಭವಿವಾಹ'ಕ್ಕೆ ಒಲವಿನ ಕರೆಯೋಲೆ

ಜೀ ಕನ್ನಡದಿಂದ 'ಶುಭವಿವಾಹ'ಕ್ಕೆ ಒಲವಿನ ಕರೆಯೋಲೆ

Posted By:
Subscribe to Filmibeat Kannada

ಈಗಾಗಲೆ ಹಲವಾರು ಜನಪ್ರಿಯ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ವಾಹಿನಿ ಜೀ ಕನ್ನಡ. ಇದೀಗ ಮತ್ತೊಂದು ನೂತನ ಉಡುಗೊರೆಯೊಂದಿಗೆ ವೀಕ್ಷಕರ ಮುಂದೆ ಬರುತ್ತಿದೆ. ಶುಭವಿವಾಹ ನೂತನ ಧಾರಾವಾಹಿ ಇದೇ ಡಿಸೆಂಬರ್ 22ರಿಂದ ಆರಂಭವಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 10ಕ್ಕೆ ಈ ಧಾರಾವಾಹಿಯನ್ನು ಕಣ್ತುಂಬಿಕೊಳ್ಳಬಹುದು. ತನ್ನ ಹೃದಯ ಸಾಮ್ರಾಜ್ಯದ ರಾಜನ ನಿರೀಕ್ಷೆಯಲ್ಲಿರುವ 29ರ ರಾಜಕುಮಾರಿಯ ಕಥೆ ಇದು. ಪಾಸಿಟೀವ್ ಆಗಿರುವ ಶೀರ್ಷಿಕೆಯೇ ತಮ್ಮ ಧಾರಾವಾಹಿಯ ಟ್ರಂಪ್ ಕಾರ್ಡ್ ಎನ್ನುತ್ತಾರೆ ನಿರ್ದೇಶಕ ಆರೂರು ಜಗದೀಶ್. [ಜೀ ಕನ್ನಡ ಹೊಸ ಸೀರಿಯಲ್ ಜೊತೆ ಜೊತೆಯಲಿ]

A still from Shubha Vivaha

ಈ ಹಿಂದೆ ಇವರು ಅರುಂಧತಿ ಹಾಗೂ ಅಶ್ವಿನಿ ನಕ್ಷತ್ರದಂತಹ ಜನಪ್ರಿಯ ಸೀರಿಯಲ್ ಗಳನ್ನು ಕಿರುತೆರೆ ವೀಕ್ಷಕರಿಗೆ ಕೊಟ್ಟವರು. ಇದೀಗ 'ಶುಭವಿವಾಹ' ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಒಂದಷ್ಟು ಹೊಸಮುಖಗಳು ಇನ್ನೊಂದಿಷ್ಟು ಜನಪ್ರಿಯ ಕಿರುತೆರೆ ತಾರೆಗಳ ಸಂಗಮ ಈ ಧಾರಾವಾಹಿ.

ಮೀರಾಮಾಧವ ಖ್ಯಾತಿಯ ಕಾವ್ಯಗೌಡ, ಜನಪ್ರಿಯ ನಿರೂಪಕಿ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಕಾವ್ಯಾಶಾಸ್ತ್ರಿ ಮುಖ್ಯಪಾತ್ರಧಾರಿಗಳು. ಧಾರಾವಾಹಿ ನಾಯಕನಾಗಿ ಭುವನ್ ಪೊನ್ನಪ್ಪ ಇದ್ದಾರೆ. ಶುಭಮಂಗಳದ ಆಯಿ, ಅಶ್ವಿನಿ ನಕ್ಷತ್ರದ ಮಾಯಿ ರೇಖಾರಾವ್ ಅವರದು ಇಲ್ಲಿ ಬಹುಮುಖ್ಯ ಪಾತ್ರ.

ಅಂದಹಾಗೆ ಇದು ಹಿಂದಿಯ 'ಕುಂಕುಮಭಾಗ್ಯ' ಧಾರಾವಾಹಿಯ ರೀಮೇಕ್. ಆದರೆ ಅದರ ಯಥಾವತ್ ಭಟ್ಟಿಯಲ್ಲಿ ಈ ಶುಭವಿವಾಹ ಎನ್ನುತ್ತಾರೆ ನಿರ್ದೇಶಕರು. ಮೂಲಕಥೆಯ ಎಳೆಯನ್ನಿಟ್ಟುಕೊಂಡು ನಮ್ಮದೇ ರೀತಿಯಲ್ಲಿ ವಿಸ್ತರಿಸುತ್ತಾ ಹೋಗುತ್ತೇವೆ ಎನ್ನುತ್ತಾರೆ.

"ದೇವನೆಲ್ಲೋ ಕೂತು ಹೊಸೆವ ಮನುಜರನ್ನು ಇಲ್ಲಿ ಬೆಸೆವ, ಅಂದವಾದ ಬಂಧ ಬರೆವ ಕನಸಿಗೊಂದು ಕಣ್ಣ ಕೊಡುವ, ನಿನ್ನೆಗಳ ನೋವನು ಮರೆತು, ನಾಳೆಗಳ ನೆಮ್ಮದಿ ಅರಿತು ಜೀವಕೆ ಜೀವ ಸೇರಲು, ಭಾವಕೆ ಭಾವವು ಹೆಣೆದು..ಆಗಲೀ ಶುಭ ವಿವಾಹ...

ಆತ್ಮಬಂಧು ಜೊತೆಗೆ ಇರಲು, ಬದುಕಿಕೊಂದು ಅರ್ಥ ಬರಲು, ಒಲುಮೆಗಾಗಿ ನಲ್ಮೆಗಾಗಿ, ಹೆಜ್ಜೆಗೊಂದು ಹೆಜ್ಜೆ ಸೇರಿ ಆಗಲೀ, ಶುಭವಿವಾಹ.." ಎಂಬುದು ಧಾರಾವಾಹಿಯ ಶೀರ್ಷಿಕೆ ಗೀತೆ. ಬಹಳ ಅರ್ಥಗರ್ಭಿತವಾಗಿದೆ ಅಲ್ಲವೇ? ಧಾರಾವಾಹಿಯನ್ನು ನಿರೀಕ್ಷಿಸಿ. (ಫಿಲ್ಮಿಬೀಟ್ ಕನ್ನಡ)

English summary
Zee Kannada new daily soap 'Shubha Vivaha' starts from 22th December, 2014. The serial starts at 10 pm from Monday to Saturday. The serial directed by Aroor Jagadish, earlier he directed hit serials Arundhati and Ashwini Nakshatra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada