Bharjari Bachelor: "ಇವ್ರಿಗೆಲ್ಲಾ ಯಾರ್ ಬೀಳ್ತಾರೆ ಗುರು?" ಭರ್ಜರಿ ಬ್ಯಾಚುಲರ್‌ಗಳಿಗೆ ಇದೇ ಟ್ಯಾಗ್ ಲೈನ್!
ಜೀ ಕನ್ನಡದಲ್ಲಿ ಆಗಾಗ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಸೀರಿಯಲ್ ಮೇಳ ಒಂದು ಕಡೆಯಾದರೆ, ವೀಕೆಂಡ್ ಮಸ್ತಿ ಇನ್ನೊಂದು ಕಡೆ. ದಿನವಿಡೀ ಸೀರಿಯಲ್ ನೋಡುವ ಪ್ರಿಯರಿಗೂ ಆ ಕಡೆ ಈ ಕಡೆ ಕಣ್ಣು ಮಿಟುಕಿಸದಂತೆ, ರಿಮೋಟ್‌ನಲ್ಲಿ ಬದಲಾವಣೆ ಮಾಡದಂತೆ, ಅದ್ಭುತ ಸೀರಿಯಲ್‌ಗಳನ್ನು ನೀಡಿ ರಂಜಿಸುತ್ತಿದೆ. ಅದರಂತೆ ವೀಕೆಂಡ್‌ನಲ್ಲಿ ಸಿಗುವ ಪ್ರೇಕ್ಷಕ ವರ್ಗವೂ ಜೀ ಕನ್ನಡ ವಾಹಿನಿಗೆ ಬಹಳ ಮುಖ್ಯವಾಗಿದೆ.
ಹೀಗಾಗಿಯೇ ವೀಕೆಂಡ್ ಪ್ರೇಕ್ಷಕರಿಗೂ ಒಂದಿಷ್ಟು ಮನರಂಜನೆಯನ್ನು ನೀಡುವುದರಲ್ಲಿ ಹಿಂದೆ ಉಳಿದಿಲ್ಲ. ವೀಕೆಂಡ್ ವಿತ್ ರಮೇಶ್, ಡಿಕೆಡಿ ಹೀಗೆ ಸದ್ಯಕ್ಕೆ ಮನರಂಜನೆಯ ಕಾರ್ಯಕ್ರಮಗಳಾಗಿದೆ. ಆದ್ರೆ, ಶೀಘ್ರದಲ್ಲಿ ಆ ಮನರಂಜನೆಯ ಸಾಲಿಗೆ ಮತ್ತೊಂದು ಹೊಸದಾಗಿ ಸೇರ್ಪಡೆಯಾಗುತ್ತಿದೆ. ಅದುವೇ ಭರ್ಜರಿ ಬ್ಯಾಚುಲರ್ಸ್.

ಫೇಮಸ್ ಆಗಿದ್ದ ಡೈಲಾಗ್‌ನಲ್ಲೇ ಶೋ
ಬ್ಯಾಚುಲರ್‌ಗಳು ಯಾವಾಗಲೂ ಎಲ್ಲೆಂದರಲ್ಲಿ ಹೊಡೆಯುವ ಡೈಲಾಗ್ ಅಂದ್ರೆ ಅದು ಒಂದೇ ನಮಗೆಲ್ಲಾ ಯಾರ್ ಬೀಳ್ತಾರೆ ಗುರು? ಸಿಂಗಲ್ ಆಗಿದ್ದೀಯಲ್ಲ ಗುರು ಅಂದ್ರು, ನಮ್ಗೆಲ್ಲಾ ಯಾರ್ ಬೀಳ್ತಾರೆ ಬಿಡು ಗುರು ಅಂತಾರೆ. ಒಮ್ಮೊಮ್ಮೆ ಕಮಿಟೆಡ್ ಆದವರು, ಇನ್ನೊಬ್ಬರ ಮುಂದೆ ಇಂಪ್ರೆಸ್ ಮಾಡೋದಕ್ಕೂ ಇದೇ ಡೈಲಾಗ್ ಹೊಡಿತಾರೆ. ಅಷ್ಟು ವೈರಲ್ ಆದ ಡೈಲಾಗ್‌ನ ಟ್ಯಾಗ್ ಲೈನ್ ಮಾಡಿ, ಇದೀಗ ಜೀ ಕನ್ನಡ ರಿಯಾಲಿಟೋ ಶೋ ಆರಂಭಿಸುತ್ತಿದೆ. ಅದೇ 'ಇವ್ರಿಗೆಲ್ಲಾ ಯಾರ್ ಬೀಳ್ತಾರೆ ಗುರು'?
ಜೀ ಕನ್ನಡದ ಪ್ರೋಮೋ ವೈರಲ್
ಯಾವುದೇ ಪ್ರೋಗ್ರಾಂ ಆಗಿರಲಿ. ಅದಕ್ಕೆ ಯಾವತ್ತಿಗೂ ಪ್ರೋಮೋ ತುಂಬಾ ಮುಖ್ಯ ಆಗುತ್ತೆ. ಪ್ರೋಮೋ ಪ್ರೋಗ್ರಾಂ ನೋಡುವುದಕ್ಕೆ ಒಂದು ರೀತಿಯ ಇನ್ವಿಟೇಷನ್ ಇದ್ದಂಗೆ. ಹೀಗಾಗಿಯೇ ಜೀ ಕನ್ನಡದಲ್ಲಿ ಪ್ರೋಮೋಗೆ ತುಂಬಾ ಆದ್ಯತೆ ನೀಡಲಾಗುತ್ತದೆ. ಒಂದೊಂದು ಕಾರ್ಯಕ್ರಮದ ಬಗ್ಗೆಯೂ ವಿಭಿನ್ನ ಎನಿಸುವಂತ ಪ್ರೋಮೋಗಳನ್ನೇ ನೀಡುತ್ತಾರೆ. ಇದೀಗ ಭರ್ಜರಿ ಬ್ಯಾಚುಲರ್ ಕೂಡ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿದೆ.
ಬ್ಯಾಚುಲರ್ ಲೀಸ್ಟ್ ನಲ್ಲಿರೋರು ಇವ್ರೇ ನೋಡಿ
ಭರ್ಜರಿ ಬ್ಯಾಚುಲರ್ ಶೋ ಪ್ರೋಮೋದಲ್ಲಿ ಮೊದಲಿಗೆ ಫ್ಯಾಷನ್ ಶೋ ನಡೆಯುತ್ತಾ ಇರುತ್ತೆ. ಆಗ ನಿಮ್ಮ ಪಾಟ್ನರ್ ಹೇಗಿರಬೇಕೆಂಬ ಪ್ರಶ್ನೆ ಜಡ್ಜ್‌ಗಳಿಂದ ಬರುತ್ತೆ. ಆಗ ಮಾಡೆಲ್‌ಗಳೆಲ್ಲಾ ಒಂದೊಂದು ರೀತಿಯ ಗುಣಗಳನ್ನು ಹೇಳುತ್ತಾರೆ. ಅದೇ ಸಮಯಕ್ಕೆ ಬ್ಯಾಚುಲರ್‌ಗಳಾದ, ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಕಾರಿನಿಂದ ಇಳಿಯುತ್ತಾರೆ. ಫ್ಯಾಷನ್ ಶೋ ನಡೆಯುವ ಜಾಗಕ್ಕೆ ಫುಲ್ ಹೈಫೈ ಆಗಿ ಬರುತ್ತಾರೆ.
ರುದ್ರ ಮಾಸ್ಟರ್‌ಗೆ ಫುಲ್ ಡಿಮ್ಯಾಂಡ್
ಜೀ ಕನ್ನಡ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಬ್ಯಾಚುಲರ್ಸ್ ಪ್ರೋಮೋ ಬಿಡಲಾಗಿದೆ. ಹೇಳಿ ಕೇಳಿ ರುದ್ರ ಮಾಸ್ಟರ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರ ಡ್ಯಾನ್ಸ್, ಅವರ ಬಾಡಿ ಲಾಂಗ್ವೇಜ್‌ಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ಹೀಗಾಗಿ ಪ್ರೋಮೋ ಹಾಕಿರುವ ಕಮೆಂಟ್ ಸೆಕ್ಷನ್‌ನಲ್ಲಿ ರುದ್ರ ಮಾಸ್ಟರ್ ಬಗ್ಗೆಯೇ ಹೆಚ್ಚು ಕಮೆಂಟ್ಸ್ ಬಂದಿದೆ. ನಿರೀಕ್ಷೆಯೇ ಮಾಡಿರಲಿಲ್ಲ, ಖುಷಿ ಆಯ್ತು ಅಂತೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೇ ಸಿನಿಮಾಗಳಿಗೆ ಹೋಗಿ ತನ್ನ ರೈಮಿಂಗ್ ಸಾಲುಗಳಿಂದಾನೇ ಖ್ಯಾತಿ ಪಡೆದು, ಬಿಗ್ ಬಾಸ್‌ನಲ್ಲಿ ಆರಂಭದ ದಿನಗಳನ್ನು ಕಳೆದು ಬಂದ ನವಾಜ್‌ನನ್ನು ನೋಡಲು ಕೆಲವರು ಉತ್ಸುಕರಾಗಿದ್ದಾರೆ.


Click it and Unblock the Notifications











