ಜೋಡಿ ನಂ.1 ರಿಯಾಲಿಟಿ ಶೋ: ಕಂಟೆಸ್ಟೆಂಟ್ ಪಟ್ಟಿ ಇಲ್ಲಿದೆ!

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿ ಈಗ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ಪ್ರತಿ ಬಾರಿಯೂ ಹೊಸ ಹೊಸ ಐಡಿಯಾಗಳೊಂದಿಗೆ. ಹೊಸ ಹೊಸ ರಿಯಾಲಿಟಿ ಶೋ, ಧಾರಾವಾಹಿಯ ಕಥೆಗಳನ್ನು ಹೊತ್ತು ತರುವ ಜೀ ವಾಹಿನಿ, ಈಗ ಜೋಡಿಗಳಿಗಾಗಿ ಹೊಸ ರಿಯಾಲಿಟಿ ಶೋ ಆರಂಭಿಸಲು ಮುಂದಾಗಿರೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ.

ಬಿಗ್ ಬಾಸ್, ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಗೋಲ್ಡನ್ ಗ್ಯಾಂಗ್, ಡಿಕೆಡಿ, ಸಿಕೆಡಿ ಸೇರಿದಂತೆ ಡ್ಯಾನ್ಸ್ ಶೋ, ಟಾಕ್ ಶೋ ಗಳನ್ನು ಈ ವಾಹಿನಿ ನೀಡಿದೆ. ಈ ಮೂಲಕ ಪ್ರೇಕ್ಷಕರಿಗೆ ಬೋರ್ ಆಗದಂತೆ ಮನರಂಜಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ದಂಪತಿಗಳ ಬಬ್ಲಿ ಬಬ್ಲಿ ಕಿತ್ತಾಟ, ಮುದ್ದು ಮುದ್ದು ಮುದ್ದಾಟ ನೋಡಿ ಅಭಿಮಾನಿಗಳ ಸಂತಸ ಪಡಲು ಕಾಯುತ್ತಿದ್ದಾರೆ. ದಂಪತಿಗಳನ್ನು ಆಟವಾಡಿಸಲು ವಾಹಿನಿಯೂ ಸಿದ್ಧಗೊಂಡಿದೆ. ಇನ್ಮುಂದೆ ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ ರಾತ್ರಿ 10 ರ ವರೆಗೆ ಪ್ರೇಕ್ಷಕರಿಗೆ ರಸದೌತಣ ಬಡಿಸುವುದಂತೂ ಗ್ಯಾರೆಂಟಿ.

ದಂಪತಿಗಳಿಗಾಗಿ ಜೋಡಿ ನಂ.1 ಶೋ!

ಇದೀಗ ದಂಪತಿಗಳಿಗಾಗಿ ಜೋಡಿ ನಂ.1 ರಿಯಾಲಿಟಿ ಶೋ ಆರಂಭಿಸಲಾಗಿದೆ. ಈಗಾಗಲೇ ಮನರಂಜನೆಯ ಮಂಟಪದಲ್ಲಿ ದಾಂಪತ್ಯದ ಉತ್ಸವಕ್ಕೆ ಶುಭ ಮೂಹೂರ್ತ ಕೂಡಿ ಬರುತ್ತಿದೆ. 'ಜೋಡಿ ನಂ.1'ನಲ್ಲಿ ಶೀಘ್ರದಲ್ಲಿ ಎಂದು ಕಳೆದ ತಿಂಗಳೇ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರೋಮೋವನ್ನು ನೋಡಿ ಪ್ರೇಕ್ಷಕರು ಯಾವಾಗ ಶುರುವಾಗುತ್ತೆ ಎಂದು ಕಾತುರರಾಗಿದ್ದರು. ಇದೀಗ ಬಿಟ್ಟಿರುವ ಪ್ರೋಮೋದಲ್ಲಿ ಈ ರಿಯಾಲಿಟಿ ಶೋ ಯಾವಾಗ ಶುರುವಾಗುತ್ತೆ ಎಂಬುದನ್ನು ಕೂಡ ತಿಳಿಸಲಾಗಿದೆ.

'ಜೋಡಿ ನಂ.1' ಎಷ್ಟೊತ್ತಿಗೆ ಶುರುವಾಗುತ್ತೆ?

ಇದೇ ಶನಿವಾರದಿಂದ (ಜೂನ್ 11) ಪ್ರಸಾರವಾಗುತ್ತೆ. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಜೋಡಿ ನಂ.1 ಶುರುವಾಗಲಿದೆ. ಇನ್ನು ಈ ರಿಯಾಲಿಟಿ ಶೋ ನಡೆಸಿಕೊಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ ಅರ್ಜುನ್ ಜನ್ಯ ಹಾಗೂ ಅನುಶ್ರೀ. ಈ ಕುರಿತು ಹೊಸ ಪ್ರೋಮೋ ಬಂದಿದೆ. ಇದರಲ್ಲಿ ಸದ್ಯಕ್ಕೆ 8 ಜೋಡಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜೋಡಿಗಳು ಯಾರು..?

ಈ ಕಾರ್ಯಕ್ರಮದಲ್ಲಿ, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ದಂಪತಿ, ಇತ್ತೀಚೆಗಷ್ಟೇ ಮದುವೆಯಾದ ನಿನಾದ್ ಹಾಗೂ ರಮ್ಯಾ, ಕಿರಿಕ್ ಕೀರ್ತಿ ಹಾಗೂ ಪತ್ನಿ ಅರ್ಪಿತಾ, ಕಾಮಿಡಿ ಕಿಂಗ್ ಎನಿಸಿಕೊಂಡಿರುವ ಮೇಸ್ಟ್ರು ಕೃಷ್ಣೇಗೌಡ್ರು ಹಾಗೂ ಪತ್ನಿ, ಹಾಸ್ಯ ನಟ ಮಿತ್ರಾ ದಂಪತಿ, ಹಿರಿಯ ನಟ ಅಭಿಜಿತ್ ಹಾಗೂ ಪತ್ನಿ, ನಟಿ ನೇಹಾ ಪಾಟೀಲ್ ಹಾಗೂ ಪತಿ, ಹಾಸ್ಯ ಕಲಾವಿದ ಗೋವಿಂದೇ ಗೌಡ ಹಾಗೂ ಪತ್ನಿ ದಿವ್ಯಾ ಮತ್ತು ಕೊನೆಯದಾಗಿ ನಟ ಸಂತೋಷ್ ಹಾಗೂ ಪತ್ನಿ ಭಾಗವಹಿಸಲಿದ್ದಾರೆ.

ಸಂಕ್ರಾಂತಿಯಲ್ಲಿ ಗೋಲ್ಡನ್ ಗ್ಯಾಂಗ್!

ಈ ವರ್ಷ ಜೀ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಆರಂಭಿಸಿತ್ತು. ಅದೇ ಗೋಲ್ಡನ್ ಗ್ಯಾಂಗ್. ಸಂಕ್ರಾಂತಿ ವಿಶೇಷದಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ ಮಾಡಿದ್ದರು. ಈ ರಿಯಾಲಿಟಿ ಶೋನಲ್ಲಿ ಹಲವು ವರ್ಷಗಳಿಂದ ಸ್ನೇತರಾಗಿದ್ದವರನ್ನು ಕರೆಸಿ ಮಾತನಾಡಿಸಲಾಗಿತ್ತು. ಕೆಲ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಲು ವೇದಿಕೆಯನ್ನು ಕಲ್ಪಿಸಲಾಗಿತ್ತು. ಸತತವಾಗಿ ಎರಡೂವರೆ ತಿಂಗಳ ಕಾಲ ಒಟ್ಟು 22 ಎಪಿಸೋಡ್ ಗಳು ಪ್ರಸಾರವಾಗಿತ್ತು.

More from Filmibeat

English summary
: Zee kannada New Reality Show Jodi No.1 Contestants List Is Here,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X