'ಜೋಡಿ ನಂ.1'ನಲ್ಲಿ ಅಭಿಜಿತ್ ದಂಪತಿ ರೆಟ್ರೋ ಲುಕ್ ಕಮಾಲ್!
'ಜೋಡಿ ನಂ.1' ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿಬರುತ್ತಿದೆ. ಹಿರಿಯರಿಂದ ಕಿರಿಯವರವರೆಗೂ ಈ ರಿಯಾಲಿಟಿ ಶೋ ಅನ್ನು ನೋಡಬಹುದು. ಈ ಕಾರ್ಯಕ್ರಮವನ್ನು ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿದ್ದಾರೆ.
ಜೀವನದಲ್ಲಿ ಮನುಷ್ಯನಿಗೆ ಯಾವುದೇ ಅಡೆತಡೆಗಳು ಎದುರಾದರೂ ಅದನ್ನೆಲ್ಲ ಮೆಟ್ಟಿ ನಿಂತು ಹೇಗೆಲ್ಲ ಜೀವನ ಸಾಗಿಸಬೇಕು ಎಂದು ತೋರಿಸಿಕೊಡಲಾಗುತ್ತಿದೆ. ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವ ಕಾರ್ಯಕ್ರಮವೇ ಜೋಡಿ ನಂ.1
ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಎರಡು ವಿಭಿನ್ನ ರೀತಿಯ ವ್ಯಕ್ತಿಗಳು ಮದುವೆ ಆಗಿ ಬದುಕುತ್ತಾರೆ ಎಂದರೆ ಅದು ಬಹಳ ದೊಡ್ಡ ಅದ್ಭುತ. ಎರಡು ಸಂಬಂಧಗಳ ಬೆಸುಗೆಯ ಬಗ್ಗೆ ಜೋಡಿ ನಂ.1 ಕಾರ್ಯಕ್ರಮದಲ್ಲಿ ತುಂಬಾನೇ ಚೆನ್ನಾಗಿ ತೋರಿಸಿಕೊಡಲಾಗುತ್ತಿದೆ.
ರೆಟ್ರೋ ಲುಕ್‌ನಲ್ಲಿ ಜೋಡಿಗಳು!
ಈ ವಾರದ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಎಲ್ಲರೂ ರೆಟ್ರೋ ಲುಕ್‌ನಲ್ಲಿ ಮಿಂಚಿದ್ದರು. 70-80ರ ತಾರೆಯರ ಲುಕ್‌ನಲ್ಲಿ ದಂಪತಿಗಳು ಆಗಮಿಸಿದ್ದರೂ. ಶಂಕರ್‌ನಾಗ್, ವಿಷ್ಣುವರ್ಧನ್, ಅಂಬರೀಶ್, ರಾಜ್ ಕುಮಾರ್ ಅವರಂತೆ ರೆಡಿಯಾಗಿ ಬಂದಿದ್ದರು. ಎಲ್ಲರನ್ನು ನೋಡಿದ ಪ್ರೇಕ್ಷಕರು ಖುಷಿಯಾದರು. ಸ್ಪರ್ಧಿಗಳೆಲ್ಲರೂ ರವಿಚಂದ್ರನ್, ವಿಷ್ಣುವರ್ಧನ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಈ ವೇಳೆ ಕಿರಿಕ್ ಕೀರ್ತಿ, ಶಂಕರ್ ನಾಗ್ ಅವರಂತೆ ಡೈಲಾಗ್ ಹೊಡೆದು ಎಲ್ಲರನ್ನೂ ರಂಜಿಸಿದರು.
ನಟ ಅಭಿಜಿತ್ ದಂಪತಿಗಳ ಪಯಣ!
ನಟ ಅಭಿಜಿತ್ ಅವರು ವಿಷ್ಣುವರ್ಧನ್ ಲುಕ್‌ನಲ್ಲಿ ಮಿಂಚಿದರು. ಬಂಧನ ಸಿನಿಮಾದ ಬಣ್ಣ ಒಲವಿನ ಬಣ್ಣ, ಈ ಬಂಧನ ಹಾಡಿಗೆ ಪತಿ-ಪತ್ನಿ ಹೆಜ್ಜೆ ಹಾಕಿದರು. ಬಳಿಕ ಅಭಿಜಿತ್ ಅವರು ವಿಷ್ಣುವರ್ಧನ್ ಅವರಂತೆ 'ಬಂಧನ'ಸಿನಿಮಾದ ಪಾತ್ರವನ್ನು ಮಾಡಿದರು. ನಂದಿನಿ ಅವರಿಗೆ ಪ್ರಪೋಸ್ ಮಾಡುವ ಸೀನ್ ಅನ್ನು ಮರು ಸೃಷ್ಟಿಸಿದರು. ಅಭಿಜಿತ್ ಅಭಿನಯವನ್ನು ನೋಡಿದ ಮಾಳವಿಕಾ, ಪ್ರೇಮ್, ಶ್ವೇತಾ ಚೆಂಗಪ್ಪ ಒಂದು ಕ್ಷಣ ದಂಗಾದರು.

ವಿಷ್ಣು-ಅಭಿಜಿತ್ ಬಾಂಧವ್ಯ!
ಅಭಿಜಿತ್ ವಿಷ್ಣುವರ್ಧನ್ ಅವರ ಜೊತೆಗೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಭಿಜಿತ್ ಹಾಗೂ ವಿಷ್ಣುವರ್ಧನ್ ಅಣ್ಣ-ತಮ್ಮಂದಿರಂತೆಯೇ ಸದಾ ಒಟ್ಟಿಗೆ ಇರುತ್ತಿದ್ದರು. ಈ ಬಗ್ಗೆ ಮಾತನಾಡಿದ ಅಭಿಜಿತ್, 'ತುಂಬಿದ ಮನೆ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಮೊದಲ ಬಾರಿಗೆ ನಟಿಸಿದ್ದೆವು. ಅಲ್ಲಿ ಪರಿಚಯವಾಯಿತು. ಬಳಿಕ 'ಯಜಮಾನ' ಚಿತ್ರದಲ್ಲಿ ಅಣ್ಣ-ತಮ್ಮನ ಪಾತ್ರದಲ್ಲಿ ನಟಿಸಿದಾಗ ಇಬ್ಬರೂ ಕ್ಲೋಸ್ ಆದೆವು. ಅಲ್ಲಿಂದ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವು ಎಂದು ಅಭಿಜಿತ್ ಅವರು ವಿಷ್ಣುದಾದನನ್ನು ನೆನಪಿಸಿಕೊಂಡರು.

ಮತ್ತೆ ಕಿರುತೆರೆ ಪಯಣ ಶುರು!
ಕೇವಲ, ಸಿನಿಮಾ ಕ್ಷೇತ್ರಕ್ಕೆ ಮಾತ್ರವೇ ಮೀಸಲಾಗಿರದ ಅಭಿಜಿತ್ ಅವರು ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಅಕ್ಷರಮಾಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಬಳಿಕ ಅಭಿಜಿತ್ ಸುಮಾರು 7 ರಿಂದ 8 ವರ್ಷಗಳ ಕಾಲ ತೆರೆಮರೆಯಲ್ಲಿ ಇದ್ದರು. ಇದೀಗ ಮತ್ತೆ ಕಿರುತೆರೆಗೆ 'ಸತ್ಯ' ಧಾರಾವಾಹಿ ಮೂಲಕ ಬಂದಿದ್ದಾರೆ. ಕಿರುತೆಯಲ್ಲಿ ಮತ್ತೆ ಮಿಂಚುತ್ತಿದ್ದಾರೆ.


Click it and Unblock the Notifications











