ಮೊದಲ ವಾರವೇ ಜೋಡಿ ನಂ.1 TRP ದಾಖಲೆ!

ಕಲರ್ ಫುಲ್ ಕಾರ್ಯಕ್ರಮಗಳ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ಈಗ ಜೋಡಿ ನಂ.1 ರಿಯಾಲಿಟಿ ಶೋ ಆರಂಭಿಸುವ ಮೂಲಕ ಮತ್ತಷ್ಟ ಮನರಂಜಿಸಲು ಮೂಂದಾಗಿದೆ. ಜೋಡಿ ನಂ.1 ಕಾರ್ಯಕ್ರಮ ಜೂನ್ 11ರಂದು ಶುಭಾರಂಭಗೊಂಡಿದ್ದು, ಪ್ರತೀ ವೀಕೆಂಡ್ ರಸದೌತಣ ಬಡಿಸುತ್ತಿದೆ.

ಜೋಡಿ ನಂ.1 ಕಾರ್ಯಕ್ರಮದ ಪ್ರೋಮೋ ಬಿಟ್ಟಾಗಲೇ ಪ್ರೇಕ್ಷಕರು ಫುಲ್ ಖುಷಿ ಪಟ್ಟಿದ್ದರು. ಇದರ ಪ್ರೋಮೋ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದಿತ್ತು. ಕಾರ್ಯಕ್ರಮ ಶುರುವಾದ ಮೇಲಂತೂ ವೀಕೆಂಡ್ ದಿನವಿಡೀ ಜೋಡಿ ನಂ.1 ಪ್ರಸಾರ ಮಾಡಿದರೂ ಜನ ನೋಡಲು ಸಿದ್ಧರಿದ್ದಾರೆ. ಇದರ ಟಿಆರ್ ಪಿ ರೇಟ್ ಚಿಂದಿ ಉಡಾಯಿಸಿದೆ.

ಜೋಡಿ ನಂ.1 ಕಾರ್ಯಕ್ರಮದ ಮೂಲಕ ಮತ್ತೆ ನಿರೂಪಕಿಯಾಗಿ ಕಮ್ ಬ್ಯಾಕ್ ಮಾಡಿರುವ ಶ್ವೇತಾ ಚಂಗಪ್ಪಾ ಅವರ ಆಂಕರಿಂಗ್ ಕೂಡ ಜನ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಮೊದಲ ಎಪಿಸೋಡ್ ಅತಿ ಹೆಚ್ಚು ಟಿಆರ್ ಪಿ ರೇಟಿಂಗ್ ಪಡೆದುಕೊಂಡಿದೆ. ಈ ಬಗ್ಗೆ ಸ್ವತಃ ಶ್ವೇತಾ ಚಂಗಪ್ಪಾ ಅವರೇ ಹೇಳಿದ್ದಾರೆ.

ದಂಪತಿಗಳಿಗಾಗಿ ಜೋಡಿ ನಂ.1!

ದಂಪತಿಗಳಿಗಾಗಿ ಜೋಡಿ ನಂ.1!

ದಂಪತಿಗಳಿಗಾಗಿ ಜೋಡಿ ನಂ.1 ರಿಯಾಲಿಟಿ ಶೋ ಅನ್ನು ಪ್ರಾರಂಭಿಸಿರುವ ವಾಹಿನಿ, ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಜೋಡಿ ನಂ.1 ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ನಟಿ ಮಾಳವಿಕಾ ಅವಿನಾಶ್ ಹಾಗೂ ನಟ ನೆನಪಿರಲಿ ಪ್ರೇಮ್ ತೀರ್ಪುಗಾರರ ಪಟ್ಟವನ್ನು ಅಲಂಕರಿಸಿದ್ದಾರೆ. ಕಾರ್ಯಕ್ರಮಕ್ಕಾಗಿ ಹಿರಿಯ- ಕಿರಿಯ ಜೋಡಿಗಳನ್ನು ಆಯ್ಕೆ ಮಾಡುವಲ್ಲಿ ತಂಡ ಸಫಲವಾಗಿದೆ. ಕಾರ್ಯಕ್ರಮದ ನಿರೂಪಣೆಯಲ್ಲೂ ಶ್ರೀಮಂತಿಕೆಯನ್ನು ಕಾಯ್ದಿರಿಸಿಕೊಂಡಿದ್ದು, ಶ್ವೇತಾ ಚಂಗಪ್ಪಾ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಅದ್ಧೂರಿ ಸೆಟ್‌ನಲ್ಲಿ ಜೋಡಿಗಳ ಆಟ!

ಅದ್ಧೂರಿ ಸೆಟ್‌ನಲ್ಲಿ ಜೋಡಿಗಳ ಆಟ!

ಜೀ ಕನ್ನಡ ವಾಹಿನಿ ಜೋಡಿ ನಂ.1 ಕಾರ್ಯಕ್ರಮಕ್ಕಾಗಿ ಅದ್ಧೂರಿ ಸೆಟ್ ಅನ್ನು ನಿರ್ಮಿಸಿದೆ. ಸೆಟ್ ನೋಡಿದರೆ ಪ್ಯಾಲೆಸ್ ನೆನಪಾಗುತ್ತವೆ. ಅರಮನೆಯಂತಹ ವಾತಾವರಣದಲ್ಲಿ ಜೋಡಿಗಳು ಆಟವಾಡಲು ಮುಂದಾಗಿದ್ದಾರೆ. ದಂಪತಿಗಳ ಬಬ್ಲಿ ಬಬ್ಲಿ ಹೊಡೆದಾಟ, ಮುದ್ದು ಮುದ್ದು ಮುದ್ದಾಟ ನೋಡಿ ಪ್ರೇಕ್ಷಕರು ಸಂತಸಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಗಳಾಗಿ ಕಂಬದ ರಂಗಯ್ಯ ಹಾಗೂ ಲೀಲಾವತಿ, ನಟ ನಿನಾದ್ ಹರಿತ್ಸಾ ಹಾಗೂ ರಮ್ಯಾ, ಕಿರಿಕ್ ಕೀರ್ತಿ ಹಾಗೂ ಪತ್ನಿ ಅರ್ಪಿತಾ, ಕಾಮಿಡಿ ಕಿಂಗ್ ಮೇಸ್ಟ್ರು ಕೃಷ್ಣೇಗೌಡ್ರು ಹಾಗೂ ಪತ್ನಿ ಕಲ್ಪನಾ, ಹಾಸ್ಯ ನಟ ಮಿತ್ರಾ ಹಾಗೂ ಪತ್ನಿ ಗೀತಾ, ಹಿರಿಯ ನಟ ಅಭಿಜೀತ್ ಹಾಗೂ ಪತ್ನಿ ರೋಹಿಣಿ, ನಟಿ ನೇಹಾ ಪಾಟೀಲ್ ಹಾಗೂ ಪತಿ ಪ್ರಣವ್, ಹಾಸ್ಯ ಕಲಾವಿದ ಗೋವಿಂದೇ ಗೌಡ ಹಾಗೂ ಪತ್ನಿ ದಿವ್ಯಾಶ್ರೀ, ನಟ ಸಂತೋಷ್ ಹಾಗೂ ಪತ್ನಿ ಮಾನಸ ಮತ್ತು ನಟ ಭವಾನಿಸಿಂಗ್ ಹಾಗೂ ಪಂಕಜಾ ಭಾಗವಹಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ ಸೆಲೆಬ್ರಿಟಿ ಜೋಡಿಗಳುಠ

ಕಾರ್ಯಕ್ರಮಕ್ಕೆ ಆಗಮಿಸಿದ ಸೆಲೆಬ್ರಿಟಿ ಜೋಡಿಗಳುಠ

ಇನ್ನು ಈ ಕಾರ್ಯಕ್ರಮವನ್ನು ಪ್ರಾರಂಭಿಸುವಾಗ ಹಾಗೂ ಕಳೆದ ವಾರ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿತ್ತು. 50 ವರ್ಷಗಳ ದಾಂಪತ್ಯ ಜೀವನ ನಡೆಸಿದ ಹಿರಿಯ ನಟಿ ಶೃತಿ ಅವರ ತಂದೆ-ತಾಯಿ, ವಿನಯಪ್ರಸಾದ್ ಆಗಮಿಸಿದ್ದರು. ಇನ್ನು 25 ವರ್ಷ ಒಟ್ಟಿಗೆ ಬದುಕಿನ ಬಂಡಿ ಎಳೆದ ಗುರುಕಿರಣ್ ಹಾಗೂ ಪತ್ನಿ ಸೇರಿದಂತೆ ಹಲವು ಸೆಲಬ್ರಿಟಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಇನ್ನು ಕಂಟೆಸ್ಟೆಂಟ್ ಗಳ ಕುಟುಂಬಸ್ಥರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಹಿ-ಕಹಿ ದಿನಗಳನ್ನು ನೆನೆದು ಖುಷಿಪಟ್ಟರು.

ಜೋಡಿ ನಂ.1 ಅತಿಹೆಚ್ಚು TRP

ಜೋಡಿ ನಂ.1 ಅತಿಹೆಚ್ಚು TRP

ಜೋಡಿ ನಂ.1 ಕಾರ್ಯಕ್ರಮವನ್ನು ಪ್ರಕ್ಷಕರು ಇಷ್ಟಪಟ್ಟಿದ್ದು, ಮೊದಲ ಎಪಿಸೋಡ್ ಅನ್ನು ಅತಿ ಹೆಚ್ಚು ಜನ ವೀಕ್ಷಿಸಿದ್ದಾರೆ ಎಂದು ನಿರೂಪಕಿ ಶ್ವೇತಾ ಚಂಗಪ್ಪಾ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಖುಷಿ ಪಟ್ಟಿದ್ದಾರೆ. ಸಪೋರ್ಟ್ ಮಾಡಿರುವ ಅಭಿಮಾನಿಗಳು, ಹಿತೈಷಿಗಳಿಗೆ ಶ್ವೇತಾ ಅವರು ಧನ್ಯವಾದ ತಿಳಿಸಿದ್ದಾರೆ. ಜೀ ಕನ್ನಡ ಜೋಡಿ ನಂ.1 ತಂಡ ಹಾಗೂ ಕಂಟೆಸ್ಟೆಂಟ್ ಗಳ ಬಗ್ಗೆಯೂ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಇಂದಿನ ಎಪಿಸೋಡ್ ನಲ್ಲಿ ಜೋಡಿಗಳು ಏನೇನು ಮಾಡುತ್ತಾರೆ ಎಂದು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

More from Filmibeat

English summary
Zee kannada New Reality Show Jodi No.1 Got Highest TRP Rating,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X