ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಜೋಡಿ NO.1'!

By ಪ್ರಿಯಾ ದೊರೆ

ಕಳೆದ 15 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತೀಚೆಗಷ್ಟೇ, ಗೋಲ್ಡನ್ ಗ್ಯಾಂಗ್ ಎಂಬ ಹೊಸ ರಿಯಾಲಿಟಿ ಶೋ ಆರಂಭಿಸಿ ಸೈ ಎನಿಸಿಕೊಂಡಿತ್ತು. ಇದೀಗ ಮತ್ತೊಂದು ಕಾರ್ಯಕ್ರಮವನ್ನು ನಡೆಸಿಕೊಡಲು ಮುಂದಾಗಿದೆ.

ಇದೀಗ ದಂಪತಿಗಳಿಗಾಗಿ ಜೋಡಿ ನಂ.1 ರಿಯಾಲಿಟಿ ಶೋ ಅನ್ನು ಆರಂಭಿಸಲು ಮುಂದಾಗಿದೆ. ಈಗಾಗಲೇ ಮನರಂಜನೆಯ ಮಂಟಪದಲ್ಲಿ ದಾಂಪತ್ಯದ ಉತ್ಸವಕ್ಕೆ ಶುಭ ಮೂಹೂರ್ತ ಕೂಡಿ ಬರುತ್ತಿದೆ. ಜೋಡಿ ನಂ. ನಲ್ಲಿ ಶೀಘ್ರದಲ್ಲಿ ಎಂದು ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋವನ್ನು ನೋಡಿ ಪ್ರೇಕ್ಷಕರು ಯಾವಾಗ ಶುರುವಾಗುತ್ತೆ ಎಂದು ಕಾತುರರಾಗಿದ್ದಾರೆ. ದಂಪತಿಗಳ ಬಬ್ಲಿ-ಬಬ್ಲಿ ಕಿತ್ತಾಟ, ಮುದ್ದು ಮುದ್ದು ಮುದ್ದಾಟ ನೋಡಿ ಅಭಿಮಾನಿಗಳ ಸಂತಸ ಪಡಲು ಕಾಯುತ್ತಿದ್ದಾರೆ. ದಂಪತಿಗಳನ್ನು ಆಟವಾಡಿಸಲು ವಾಹಿನಿ ಏನೋ ಸಿದ್ಧಗೊಂಡಿದೆ. ಆದರೆ, ಈ ಶೋನಲ್ಲಿ ಸೆಲಬ್ರಿಟಿ ದಂಪತಿಗಳಿರುತ್ತಾರಾ.? ಅಥವಾ ಯಾರಿರುತ್ತಾರೆ ಅನ್ನೋ ಪ್ರಶ್ನೆ ಎದ್ದಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕೆಂದರೆ ರಿಯಾಲಿಟಿ ಶೋ ಆರಂಭವಾಗುವವರೆಗೂ ಕಾಯಲೇ ಬೇಕಿದೆ.

ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಗೋಲ್ಡನ್ ಗ್ಯಾಂಗ್, ಡಿಕೆಡಿ, ಸಿಕೆಡಿ ಸೇರಿದಂತೆ ಡ್ಯಾನ್ಸ್ ಶೋ, ಟಾಕ್ ಶೋ ಗಳನ್ನು ಜೀ ಕನ್ನಡ ವಾಹಿನಿ ನೀಡಿದೆ. ಈ ಮೂಲಕ ಪ್ರೇಕ್ಷಕರನ್ನು ಎಲ್ಲೂ ಬೋರ್ ಆಗದಂತೆ ಮನರಂಜಿಸಿದೆ. ರಿಯಾಲಿಟಿ ಶೋಗಳಷ್ಟೇ ಅಲ್ಲದೇ, ಒಳ್ಳೆಯ ಕಥೆ ಹೊಂದಿರುವ ಧಾರಾವಾಹಿಗಳನ್ನೂ ನೀಡುತ್ತಾ ಬಂದಿದೆ.

Zee kannada New Reality Show Jodi No.1 With Celebrity Couples

ಈಗಾಗಲೇ ಈ ವಾಹಿನಿ ಹಲವು ರಿಯಾಲಿಟಿ ಶೋಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದೆ. ಡ್ಯಾನ್ಸ್ ಶೋ ಆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರತಿಭೆಗಳು ಬಂದಿದ್ದಾರೆ. ಇನ್ನು ಸರಿಗಮಪ ಕಾರ್ಯಕ್ರಮಕ್ಕಂತೂ ಹಳ್ಳಿಯಲ್ಲಿದ್ದವರೂ ಕೂಡ ಬೆಳಕಿಗೆ ಬಂದಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜೂನಿಯರ್ ಮಾಲಾಶ್ರೀ, ಜೂನಿಯರ್ ಜಗ್ಗೇಶ್ ಅಂತಹ ಹಾಸ್ಯ ಕಲಾವಿದರನ್ನು ಈ ಶೋ ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಪುಟಾಣಿಗಳಿಗೂ ಜೀ ಕನ್ನಡ ವೇದಿಕೆ ನೀಡಿದೆ. ಅದೇ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ. ಈ ಶೋ ಮೂಲಕ ಪುಟಾಣಿಗಳು ಕೂಡ ತಮ್ಮ ನಟನೆಯ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ತೋರಿಸಿಕೊಟ್ಟಿದೆ. ಇನ್ನು ಜನ ಮೆಚ್ಚಿದ ದಿ ಬೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್ ಬಾಸ್ ಮೂಲಕ ಪ್ರೇಕ್ಷಕರು ತಮ್ಮ ನೆಚ್ಚಿನ ಕಲಾವಿದರ ಆಟ-ತುಂಟಾಟಗಳನ್ನು ನೋಡಿ ಖುಷಿ ಪಟ್ಟಿದ್ದರು.

ಈ ವರ್ಷ ಜೀ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಅನ್ನು ಆರಂಭಿಸಿತ್ತು. ಅದೇ ಗೋಲ್ಡನ್ ಗ್ಯಾಂಗ್ ಶೋ. ಈ ಶೋ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರೂಪಣೆ ಮಾಡಿದ್ದರು. ಈ ರಿಯಾಲಿಟಿ ಶೋ ನಲ್ಲಿ ಹಲವು ವರ್ಷಗಳಿಂದ ಸ್ನೇತರಾಗಿದ್ದವರನ್ನು ಕರೆಸಿ ಮಾತನಾಡಿಸಿದ್ದರು, ಅವರನ್ನು ಆಟವಾಡಿಸಿ, ಕೆಲ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಲು ವೇದಿಕೆಯನ್ನು ಕಲ್ಪಿಸಲಾಗಿತ್ತು. ಕಷ್ಟ-ಸುಖಗಳಲ್ಲಿ ಭಾಗಿಯಾದಿದ್ದ ಕಲಾವಿದ ಸ್ನೇಹಿತರು ಈ ಶೋನಲ್ಲಿ ಬಂದು ತಮ್ಮ ಹಳೆ ದಿನಗಳನ್ನು ನೆನೆದು ಭಾವುಕರಾಗಿದ್ದರು.

More from Filmibeat

English summary
Zee Kannada New Reality Show Jodi No.1 With Celebrity Couples,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X