Seetharama: ಸಿಹಿಯಿಂದಾಗಿ ರಾಮನಿಗೆ ಸಿಕ್ತು ಸೀತಾಳ ಕೈಯಿಂದ ಹಾರ್ಟ್..ಮುಂದೇನು?
ಮಕ್ಕಳ ಮಾತು, ಆಟ, ತುಂಟಾಟ ಎಲ್ಲವೂ ನೋಡುಗರಿಗೆ ಚೆಂದ ಅನ್ನೋದು ಹೊಸದಾಗಿ ಹೇಳಬೇಕಿಲ್ಲ. ಈಗ ಜೀ ಕನ್ನಡದಲ್ಲಿ ಆರಂಭವಾಗಿರುವ 'ಸೀತಾ ರಾಮ' ಧಾರಾವಾಹಿ ಕೂಡ ಅಂತದ್ದೇ ಸಂತಸ, ಸಂಭ್ರಮವನ್ನು ನೀಡುತ್ತಿದೆ. ಸಿಹಿಯ ಮಾತುಗಳು ಸಿಹಿಯಷ್ಟೇ ಮುದ್ದಾಗಿದೆ. ಆ ಮಗುವಿನ ಎಕ್ಸ್‌ಪ್ರೆಷನ್‌ಗಂತೂ ಮಾರು ಹೋಗದವರೇ ಇಲ್ಲ. ಅಷ್ಟು ಮುದ್ದು ನಮ್ಮ ಸಿಹಿ.
ಸಿಹಿ ಏನೇ ಹೇಳಿದರೂ ಅದು ನಡೆಯುತ್ತೆ. ಒಂಥರ ದೇವತಾ ಮಗು. ಅದನ್ನು ಈಗಾಗಲೇ ಪ್ರೂವ್ ಕೂಡ ಮಾಡಿದ್ದಾಳೆ. ಅದರಲ್ಲೂ ಸೀತಾಳ ಫ್ರೆಂಡ್ ಪ್ರಿಯಾಗೆ ಸಿಹಿ ಮಾತು ಅಂದ್ರೆ ವೇದ ವಾಕ್ಯ. ಪದೇ ಪದೇ ಶ್ರೀಮಂತ ಹುಡುಗ ಸಿಗಲಿ ಅಂತ ಆಶೀರ್ವಾದ ಮಾಡು ಅಂತ ಕೇಳ್ತಾ ಇರ್ತಾಳೆ. ಆದರೆ, ನಮ್ಮ ಸಿಹಿ ಆಶೀರ್ವಾದನ ಮಾಡಿದ್ದಾಳೆ. ಹೇಗೆ ಅಂದ್ರೆ ಆ ರೀತಿಯ ಶ್ರೀಮಂತ ಹುಡುಗ ಸಿಗುವುದಾದರೆ ಮೊದಲು ನಮ್ಮ ಅಮ್ಮನಿಗೆ ಸಿಗಲಿ ಎಂದು.

ರಾಮ್ -ಸಿಹಿ ಬೆಸ್ಟ್ ಫ್ರೆಂಡ್
ರಾಮನಿಗೆ ಸಿಹಿ ಎಂದರೆ ಇನ್ನಿಲ್ಲದ ಖುಷಿ. ಆಫೀಸಲ್ಲಿ ಏನೋ ಮೋಸ ಆಗ್ತಾ ಇದೆ ಎಂದು ಗೊತ್ತಾದಾಗ ರಾಮ ಹೊಸ ಪ್ಲ್ಯಾನ್ ಮಾಡಿದ್ದ. ಬಾಸ್ ಆಗಿ ಹೋಗುವುದಕ್ಕಿಂತ ನಾನು ಎಂಪ್ಲಾಯ್ ಆಗಿನೇ ಹೋಗಬೇಕು ಎಂದು ಹೋಗಿದ್ದ. ಆ ಸಮಯದಲ್ಲಿ ಸಿಹಿ ಆಫೀಸಿಗೆ ಬಂದಿದ್ದಳು. ಆಗ ಅವಳ ಮಾತು ಸಿಕ್ಕಾಪಟ್ಟೆ ಸಿಹಿಯಾಗಿದ್ದ ಕಾರಣ ಹೆಚ್ಚು ರಾಮನಿಗೆ ಹತ್ತಿರವಾಗಿದ್ದಳು. ರಾಮನಿಗೆ ಬೆಸ್ಟ್ ಫ್ರೆಂಡ್ ಕೂಡ ಆಗಿದ್ದಾಳೆ. ಸಿಹಿಗೆ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗ್ತೀನಿ ಎಂಬ ಪ್ರಾಮೀಸ್ ಕೂಡ ಮಾಡಿದ್ದಾನೆ ರಾಮ.
ಅಮ್ಮನಿಗೆ ಕಷ್ಟ ಕೊಡದ ಮಗಳು ಸಿಹಿ
ಇದ್ದರೆ ಸಿಹಿಯಂತ ಮಗಳಿರಬೇಕು ಎನ್ನುವಷ್ಟು ಒಳ್ಳೆಯತನ ತೋರುತ್ತಿದ್ದಾಳೆ ಸಿಹಿ. ಚಿಕ್ಕ ಮಗುಗೆ ಶುಗರ್ ಇರುವುದೇ ಎಲ್ಲರ ಬೇಸರಕ್ಕೆ ಕಾರಣ. ಆದರೆ, ಆ ನೋವಿನ ನಡುವೆಯೂ ಎಲ್ಲವನ್ನು ಮರೆಸುವುದು ಸಿಹಿಯ ಆ ಮುದ್ದು ಮುದ್ದು ಮಾತುಗಳು. ಅಮ್ಮನ ಬಳಿ ಇದು ಬೇಕು ಅದು ಬೇಕು ಅಂತ ಯಾವತ್ತಿಗೂ ಹಠ ಮಾಡುವುದೇ ಇಲ್ಲ. ಅಮ್ಮನಿಗೆ ಅಡುಗೆ ಮನೆಯಲ್ಲೂ ಸಹಾಯ ಮಾಡುತ್ತಾಳೆ. ಸಿಹಿ ತನ್ನ ಟಿಫನ್ ಬಾಕ್ಸ್ ಅವಳೇ ತೊಳೆದುಕೊಳ್ಳುತ್ತಾಳೆ. ಗ್ಯಾಸ್ ಮುಗಿದು ಹೋದ್ರೆ ಇರುವಷ್ಟೇ ಚಪಾತಿ ಸಾಕು ಅಂತಾಳೆ. ಅಂತ ಮುಗ್ಧ ಮನಸ್ಸಿಗೆ ದೇವರು ಮೋಸ ಮಾಡಲ್ಲ. ಊಟ ಹೆಚ್ಚಾಗಿಯೇ ಒದಗಿಸುತ್ತಾನೆ.

ಫ್ರೆಂಡ್‌ಗಾಗಿ ಹಾರ್ಟ್ ಕಳುಹಿಸಿದ ಸಿಹಿ
ರಾಮ್ ಮತ್ತು ಸಿಹಿ ಈಗ ಫ್ರೆಂಡ್. ಬ್ಯಾಡ್ ಅಂಕಲ್ ಮನೆಗೆ ಬಂದಾಗ ಸಿಹಿಗೆ ಸಹಾಯ ಮಾಡಿದ್ದೇ ರಾಮ್. ದೊಡ್ಡ ಸಮಸ್ಯೆ ಬಗೆ ಹರಿದಿತ್ತು. ಸಿಹಿ ಅದಕ್ಕೆ ಥ್ಯಾಂಕ್ಸ್ ಹೇಳಲೇಬೇಕು ಅಲ್ವಾ. ಹೀಗಾಗಿ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾಳೆ. ತನ್ನ ಸ್ಕೆಚ್ ಮೂಲಕ ಹಾರ್ಟ್ ಬಿಡಿಸಿ, ಅದರಲ್ಲಿ ಫ್ರೆಂಡ್ ಅಂತ ಬರೆದಿದ್ದಾಳೆ.
ಹಾರ್ಟ್ ಕಂಡು ಖುಷಿ ಪಟ್ಟ ರಾಮ್
ಇದನ್ನ ರಾಮ್‌ಗೆ ತಲುಪಿಸುವುದು ಹೇಗೆ ಎಂಬ ಐಡಿಯಾ ಸಿಹಿಗೆ ಗೊತ್ತೇ ಇದೆ. ಸೇತುವೆಯೇ ಅಮ್ಮ. ಹೀಗಾಗಿ ಅಮ್ಮನ ಕೈಗೆ ಈ ಹಾರ್ಟ್ ಅನ್ನಿಟ್ಟು ಫ್ರೆಂಡ್‌ಗೆ ಕೊಡ್ತೀಯಾ ಅಂತ ಕೇಳಿದ್ದಾಳೆ. ಸೀತಾಗೂ ಮನಸ್ಸಲ್ಲಿ ಅಂದೊಂದು ಕೊರೆಯುತ್ತಿತ್ತು. ಥ್ಯಾಂಕ್ಸ್ ಹೇಳಿಲ್ಲವಲ್ಲ ಅಂತ. ಮಗಳು ಕೊಟ್ಟ ಗಿಫ್ಟ್ ತೆಗೆದುಕೊಂಡು ಹೋಗಿ, ಸಿಹಿ ಕೊಟ್ಟ ಹಾರ್ಟ್ ನೀಡಿದ್ದಾಳೆ. ಅದನ್ನು ನೋಡಿದ ರಾಮ್ ಫುಲ್ ಖುಷಿಯಾಗಿದ್ದಾನೆ.


Click it and Unblock the Notifications











