ಹೊಸ ಕಥೆ 'ಅಮೃತಧಾರೆ' ನೋಡಲು ವೀಕ್ಷಕರ ಕಾತರ

By ಪ್ರಿಯಾ ದೊರೆ

ಹುಡುಗ-ಹುಡುಗಿ ಹೊಂದುಕೊಂಡಿದ್ದರೆ ಅದೊಂದು ಚೆಂದದ ಕಥೆ. ಅವರಿಬ್ಬರೂ ಕಿತ್ತಾಡಿಕೊಂಡಿದ್ದರೆ ಅದು ಬೇರೆನೆ ಕಥೆ. ಬರ್ತಿದೆ ಒಂದು ಬೊಂಬಾಟ್ ಕಥೆ. ಎಂದು ಇಷ್ಟು ದಿನ ಅಮೃತಧಾರೆ ಧಾರಾವಾಹಿಯ ಪ್ರೋಮೋ ಮೂಡಿಬರುತ್ತಿತ್ತು. ಇನ್ಮೇಲೆ ಪ್ರೋಮೋ ನೋಡುವ ಅಗತ್ಯವಿಲ್ಲ. ಯಾಕೆಂದರೆ ಧಾರಾವಾಹಿಯೇ ಪ್ರಸಾರ ಕಾಣಲಿದೆ. ಧಾರಾವಾಹಿ ಪ್ರಸಾರದ ಸಮಯ ದಿನಾಂಕವನ್ನು ಈಗಾಗಲೇ ಜೀ ಕನ್ನಡ ವಾಹಿನಿ ತಿಳಿಸಿದೆ.

ಕನ್ನಡ ಕಿರುತೆರೆ ವೀಕ್ಷಕರು ಕೂಡ ಈ ಧಾರಾವಾಹಿ ನೋಡಲು ಕಾತುರರಾಗಿದ್ದಾರೆ. ಇದರಲ್ಲೂ ಇದು ವಯಸ್ಕರ ಪ್ರೇಮ ಕಥೆಯಾಗಿದ್ದು, ಹೇಗಿರಲಿದೆ ಎಂಬುದನ್ನು ನೋಡುವ ಕುತೂಹಲ ವೀಕ್ಷಕರಲ್ಲಿದೆ. 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ನಾಯಕ, ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Zee Kannada new TV serial Amruthadhare to be telecast from May 29

ಭೂಮಿಕಾ ಎನ್ನುವ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ನಟ ರಾಜೇಶ್ ಅವರು ಗೌತಮ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮೇ 29ರಿಂದ ಸೋಮವಾರದಿಂದ ಸಂಜೆ 7ಕ್ಕೆ 'ಅಮೃತಧಾರೆ' ಸೀರಿಯಲ್ ಪ್ರಸಾರವಾಗಲಿದೆ. ಅದಕ್ಕೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಮುಕ್ತಾಯವಾಗುತ್ತಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ.

ರಿಮೇಕ್ ಧಾರಾವಾಹಿ

ಪ್ರೋಮೊದಲ್ಲಿ ನಾಯಕ ಹಾಗೂ ನಾಯಕಿ ನಟಿ ಇಬ್ಬರು ಕಿತ್ತಾಡುತ್ತಿದ್ದು, ಹೇಗೆ ಪ್ರೀತಿ ಚಿಗುರೊಡೆಯುತ್ತೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಹಿಂದಿಯಲ್ಲೇ ಇದೇ ಕಥೆ ಆಧರಿಸಿ ಧಾರಾವಾಹಿ ಮೂಡಿಬರ್ತಿದೆ. ಅದು ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಹಿಂದಿಯ 'ಬಡೆ ಅಚ್ಚೆ ಲಗ್ತಾ' ಧಾರಾವಾಹಿ ಕನ್ನಡದಲ್ಲಿ 'ಅಮೃತಧಾರೆ' ಆಗಿ ಬರ್ತಿದೆ.

Zee Kannada new TV serial Amruthadhare to be telecast from May 29

ತಮ್ಮ ತಮ್ಮೆ ಕುಟುಂಬಕ್ಕಾಗಿ ಮದುವೆಯಾಗದೇ ಉಳಿದ ಇವರಿಬ್ಬರು, ಹೇಗೆ ಒಟ್ಟಾಗಿ ಪ್ರೀತಿ ಮಾಡಿ ಮದುವೆಯಾಗುತ್ತಾರೆ. 45 ವರ್ಷದ ಉದ್ಯಮಿ ಗೌತಮ್ ದಿವಾನ್ ಹಾಗೂ 35 ವರ್ಷದ ಟೀಚರ್ ಭೂಮಿಕಾ ನಡುವಿನ ಪ್ರೇಮ ಕಥೆ ಹೇಗಿರುತ್ತದೆ ಎಂಬುದನ್ನು ನೋಡಬೇಕಿದೆ.

ಅಮೃತಧಾರೆಯಲ್ಲಿರುವ ಕಲಾವಿದರು

ಧಾರಾವಾಹಿಯಲ್ಲಿ ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ವನಿತಾ ವಾಸು, ಅಮೃತಾ ನಾಯಕ್, ಶಶಿ ಹೆಗ್ಡೆ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೀರ್ತಿ ಅಕ್ಷಯ್ ಸಂಸ್ಥೆ ಹೊತ್ತಿದೆ. ಬೆಳ್ಳಿತೆರೆಯಲ್ಲಿ ಯಶ್‌ಗೆ ಆಕ್ಷನ್ ಕಟ್ ಹೇಳಿದ ಮಹೇಶ್ ರಾವ್ ಅವರು ಈಗ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ್ ಮಧು ಅವರು ಧಾರಾವಾಹಿಯವರು ನಿರ್ದೇಶಿಸುತ್ತಿದ್ದಾರೆ.

Zee Kannada new TV serial Amruthadhare to be telecast from May 29

'ಅಮೃತಧಾರೆ' ಧಾರಾವಾಹಿ ಶೀರ್ಷಿಕೆ ಗೀತೆಗೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ಧಾರಾವಾಹಿಯ ಹಾಡಿಗೆ ಸುಧೀಂದ್ರ ಭಾರದ್ವಾಜ್ ಹಾಗೂ ಚೇತನ್ ಸೊಲಗಿ ಸಾಹಿತ್ಯವನ್ನು ರಚಿಸಿದ್ದಾರೆ. ನಟಿ ಛಾಯಾ ಸಿಂಗ್ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಮದುವೆಯಾದ ನಂತರ ಬ್ರೇಕ್ ಪಡೆದು ಬಳಿಕ 'ಮಫ್ತಿ' ಸಿನಿಮಾ ಮೂಲಕ ರೀಎಂಟ್ರಿ ಕೊಟ್ಟರು. ಇದಾದ ಬಳಿಕ ಈಗ ಕನ್ನಡ ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ.

ಒಂದಾಗುತ್ತಿರುವ ಜೋಡಿ

ಇತ್ತೀಚೆಗಷ್ಟೇ ಉದಯ ಟಿವಿಯಲ್ಲಿ ಮೂಡಿ ಬಂದ 'ನಂದಿನಿ' ಎಂಬ ಧಾರಾವಾಹಿಯಲ್ಲೂ ಛಾಯಾ ಸಿಂಗ್ ಬಣ್ಣ ಹಚ್ಚಿದ್ದರು. ಇನ್ನು ಹಲವು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿರುವ ನಟ ರಾಜೇಶ್ ನಟರಂಗ ಅವರು, ಮಾಯಾಮೃಗ, ಮುಕ್ತ, ಬದುಕು, ಶಕ್ತಿ, ಗುಪ್ತ ಗಾಮಿನಿ ಮುಂತಾದ ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರದಲ್ಲಿ ಮಿಂಚಿದರು. ಇದೀಗ ಈ ಜೋಡಿಗಳು ಅಮೃತಧಾರೆಯಲ್ಲಿ ಒಂದಾಗುತ್ತಿದ್ದಾರೆ.

More from Filmibeat

English summary
Zee Kannada new TV serial Amruthadhare to be telecast from May 29. Chaya Singh and Rajesh Nataranga acted in lead roles. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X