ಸರಸುಗೆ ಮೂರು ಕಂಡೀಷನ್ ಹಾಕಿದ ವಾಗ್ದೇವಿ!

By ಪೂರ್ವ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅನೇಕ ಧಾರಾವಾಹಿಗಳು ಹಿಟ್ ಆಗಿವೆ. ಅದರಲ್ಲಿ 'ನಂಬರ್ 1 ಸೊಸೆ' ಸಹ ಒಂದು. ಧಾರಾವಾಹಿಯಲ್ಲಿ ಈಗ ವಾಗ್ದೇವಿಯ ದರ್ಪದ ಮಾತುಗಳಿಗೆ ಕಡಿವಾಣವೇ ಇಲ್ಲದಾಗಿದೆ. ಮಗನ ಜೀವನದಲ್ಲಿ ಬಿರುಗಾಳಿ ಎದ್ದಿರಬೇಕದ್ರೆ ವಾಗ್ದೇವಿ ಹೀಗೆ ನಡೆದುಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಆಶ್ಚರ್ಯ ತಂದಿದೆ. ಮನೇಲಿ ಇದೀಗ ಇರೋದು ಸರಸು ಅನ್ನೋ ವಿಚಾರ ಸಹ ವಾಗ್ದೇವಿ ತಿಳಿದು ಹೋಗಿದೆ. ಮುಂದೇನಾಗುತ್ತದೆಯೋ ಏನೋ?

ಮನೆಯಲ್ಲಿರುವುದು ಸರಸು ಎಂಬ ಸತ್ಯ ತಿಳಿದ ವಾಗ್ದೇವಿಯ ಪಿತ್ತ ನೆತ್ತಿಗೇರಿದೆ. ಅದೆಷ್ಟು ಬಾರಿ ಸರಸು ಕೇಳಿಕೊಂಡರು ಆಕೆಯ ಮನಸ್ಸು ಸ್ವಲ್ಪವೂ ಕೂಡ ಕರಗದೆ ದರ್ಪದಿಂದಲೇ ಮಾತನಾಡುತ್ತಾಳೆ. ಇದೀಗ ವಾಗ್ದೇವಿ, ಸರಸುವಿಗೆ ಮೂರು ಕಂಡೀಷನ್ ಹಾಕಿದ್ದಾಳೆ. ಮೊದನೇಯ ಕಂಡೀಷನ್ ನೀನು ಸರಸು ಅಂತ ರಾಹುಲ್ ಗೆ ಯಾವ ಕಾರಣಕ್ಕೂ ಗೊತ್ತಾಗಬಾರದು. ಹಾಗೇನಾದ್ರೂ ಗೊತ್ತಾದರೆ ರಾಹುಲ್ ಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ ಯಾಗುತ್ತದೆ. ಅದು ನನ್ನಿಂದ ನನ್ನ ಮಗನನ್ನು ಇನ್ನೂ ದೂರ ಮಾಡುತ್ತದೆ ಎಂಬುದು ವಾಗ್ದೇವಿಯ ಮಾತು.

ಮಗುವಿನ ವಿಷಯ ಯಾರಿಗೂ ಗೊತ್ತಾಗಬಾರದು!

ಮಗುವಿನ ವಿಷಯ ಯಾರಿಗೂ ಗೊತ್ತಾಗಬಾರದು!

ಎರಡನೆಯದು, ವಿದ್ಯಾ ನಿಮಗಿಬ್ಬರಿಗು ಹುಟ್ಟಿದ ಮಗು ಅಂತ ರಾಹುಲ್ ಗೆ ಮಾತ್ರ ಅಲ್ಲಾ ಈ ಪ್ರಪಂಚಕ್ಕೆ ಗೊತ್ತಾಗ ಕೂಡದು. ಯಾವ ಕ್ಷಣದಲ್ಲೂ ಎಂತಹ ಪರಿಸ್ಥಿತಿ ಬಂದರು ನೀನು ಸತ್ಯವನ್ನು ಹೇಳಬಾರದು. ಹಾಗೇನಾದ್ರೂ ಗೊತ್ತಾದರೆ ನನ್ನ ಮೊಮ್ಮಗಳ ಸ್ಥಾನ ಮಾನ ಮಾತ್ರವಲ್ಲ ನನ್ನ ಗೌರವ, ಮರ್ಯಾದೆ ನಾಶವಾಗಿಬಿಡುತ್ತದೆ. ಮೂರನೆಯದು ನೀ ನಿಲ್ಲಿ ಇರುವಷ್ಟು ದಿನ ನೀವಿಬ್ಬರೂ ಕೂಡ ಗಂಡ ಹೆಂಡತಿ ಥರ ಒಂದಾಗಬಾರದು. ಜೀವನ ನಡೆಸಬಾರದು. ಯಾಕೆ ಎಂದರೆ ನೀನು ಹೊರಗಡೆ ಹೋಗೋ ದಿನ ಎಮೋಷನಲ್ ಆಗಿ ರಾಹುಲ್ ನಿನಗೆ ಕನೆಕ್ಟ್ ಆಗುವುದು ನನಗೆ ಇಷ್ಟವಿಲ್ಲ. ನೀನು ಮಾತು ತಪ್ಪಿದ ಪ್ರತಿ ಸಾರಿನೂ ಒಂದೊಂದು ಮಡಿಕೇನೂ ಒಡೆಯುತ್ತೆ ಎಂದಿದ್ದಾಳೆ ವಾಗ್ದೇವಿ.

ಕಂಡೀಷನ್ ಮೀರಿದರೆ ಸರಸು ಮನೆಯಿಂದ ಹೊರಕ್ಕೆ

ಕಂಡೀಷನ್ ಮೀರಿದರೆ ಸರಸು ಮನೆಯಿಂದ ಹೊರಕ್ಕೆ

ಈ ಮೂರನೇ ಮಡಿಕೆ ಒಡೆದ ಕ್ಷಣ ನಿನ್ನ ಹೆಜ್ಜೆ ನನ್ನ ಮನೆಯಿಂದ ಹೊರಗೆ ಹೋಗಬೇಕು. ಈ ಜನ್ಮದಲ್ಲಿ ನಿನ್ನ ನೆರಳು ನನ್ನ ಮನೆನಾ ಮುಟ್ಟು ಬಾರದು. ಹೇಳಿದ್ದು ಅರ್ಥ ಆಯ್ತಾ ಎಂದು ವಾಗ್ದೇವಿ ದರ್ಪದಿಂದ ಕೇಳುತ್ತಾಳೆ. ಅದಕ್ಕೆ ಸರಸು ಅರ್ಥವಾಯ್ತು ಅಮ್ಮಾವರೇ ರಾಹುಲ್ ಅವರ ಪ್ರೀತಿಗೋಸ್ಕರ ನಿಮ್ಮ ಮನದಲ್ಲಿರುವ ದ್ವೇಷನ ದೂರ ಮಾಡುವುದಕ್ಕೂಸ್ಕರ ನಾನು ಈ ಷರತ್ತು ಗಳಿಗೆ ಒಪ್ಪಿಕೊಳ್ಳುತ್ತೇನೆ. ಎಂದು ಒಪ್ಪಿಗೆಯನ್ನು ಸೂಚಿಸುತ್ತಾಳೆ.

ಪುಸ್ತಕ, ಅಪ್ಲಿಕೇಶನ್ ತರುವ ಸರಸು

ಪುಸ್ತಕ, ಅಪ್ಲಿಕೇಶನ್ ತರುವ ಸರಸು

ಸರಸು ಹೇಗಾದರೂ ಮಾಡಿ ಪದವಿ ಶಿಕ್ಷಣ ಪಡೆದುಕೊಳ್ಳಬೇಕು, ಅತ್ತೆಯ ಮನಸ್ಸನ್ನು ಗೆಲ್ಲಬೇಕು ಎಂದು ಹೊರಡುತ್ತಾಳೆ. ಆದರೆ ಡಿಗ್ರಿ ಓದಲು ಎಲ್ಲಾ ಅಪ್ಲಿಕೇಶನ್, ಬುಕ್ಸ್ ಎಲ್ಲವನ್ನೂ ತೆಗೆದುಕೊಂಡು ಮನೆಗೆ ಬರುತ್ತಾಳೆ. ಸರಸುವನ್ನು ನೋಡಿದ ಆಕೆಯ ಅಕ್ಕ ಎಲ್ಲಿ ಹೋಗಿದ್ದೆ ಎಂದೆಲ್ಲ ಕೇಳುತ್ತಾಳೆ ಎಲ್ಲರ ಮುಂದೆ ಅವಳ ವ್ಯಾನಿಟಿ ಬ್ಯಾಗನ್ನು ಚೆಕ್ ಮಾಡುತ್ತಾಳೆ ಆದರೆ ಅದರಲ್ಲಿ ಏನು ಇರದ್ದನ್ನು ಕಂಡು ಸುಮ್ಮನಾಗುತ್ತಾಳೆ. ಇನ್ನೂ ಸರಸು ಬದುಕಿದೆಯಾ ಬಡಜೀವ ಎಂಬಂತೆ ರೂಮಿಗೆ ತೆರಳುತ್ತಾಳೆ ತಾನು ತಂದಿದ್ದ ಬುಕ್ ನ್ನೂ ತೆಗೆದು ಇಡುವ ವೇಳೆ ಕವರ್ ಒಂದು ಸೋಫಾದ ಮೇಲೆ ಬೀಳುತ್ತದೆ ಆದರೆ ಈ ಬಗ್ಗೆ ಸರಸುಗೆ ಗೊತ್ತಾಗುವುದಿಲ್ಲ.

ವಾಗ್ದೇವಿಯ ಮಾತುಗಳು ನೆನಪಾಗುತ್ತವೆ ಸರಸುಗೆ

ವಾಗ್ದೇವಿಯ ಮಾತುಗಳು ನೆನಪಾಗುತ್ತವೆ ಸರಸುಗೆ

ಬಳಿಕ ಮುಖ ತೊಳೆಯಲು ಹೋಗುತ್ತಾಳೆ ಈ ವೇಳೆ ರಾಹುಲ್ ಬರುತ್ತಾನೆ. ಆ ಲೆಟರ್ ಅವನ ಕಣ್ಣಿಗೆ ಬೀಳುತ್ತದೆ. ಅದನ್ನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮಗು ಜೋರಾಗಿ ಅಳುತ್ತದೆ. ಮಗುವನ್ನು ಎತ್ತಿ ಕೊಂಡ ರಾಹುಲ್ ಮಗುವನ್ನು ಸಮಾಧಾನ ಪಡಿಸುತ್ತಾನೆ. ಬಳಿಕ ಸರಸು ಬಳಿ ರಾಹುಲ್ ಮುತ್ತು ಕೇಳುತ್ತಾನೆ. ಇದನ್ನು ನೋಡಿದ ಸರಸುಗೆ ವಾಗ್ದೇವಿಯ ಮಾತುಗಳು ನೆನಪಾಗಿ ದೂರ ತಳ್ಳುತ್ತಾಳೆ.

More from Filmibeat

English summary
Zee Kannada No.1 sose serial June 25th episode written update. No.1 sose is a Kannada language serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X