ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಪವಿತ್ರ ನಾಯ್ಕ್!

By ಪ್ರಿಯಾ ದೊರೆ

ಚಿತ್ರರಂಗಕ್ಕೆ ಈಗೀಗ ಹೊಸ ನಿರ್ದೇಶಕರು ಹಾಗೂ ಹೊಸ ಕಲಾವಿದರು ಆಗಮಿಸುತ್ತಿದ್ದಾರೆ. ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಈಗಂತೂ ಕಿರುತೆರೆಯಲ್ಲಿ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಂಡವರು ಮತ್ತೊಂದರಲ್ಲಿ ನಟಿಸುವುದು ಅಪರೂಪ.

ಇನ್ನು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ಹಲವು ಕಲಾವಿದರು, ತಮ್ಮ ಮುಂದಿನ ಹೆಜ್ಜೆಯನ್ನು ಸಿನಿಮಾರಂಗದಲ್ಲಿಡಲು ಬಯಸುತ್ತಾರೆ. ಇನ್ನೂ ಕೆಲ ನಟ-ನಟಿಯರು, ಸಿನಿಮಾ, ಕಿರುತೆರೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುತ್ತಾರೆ. ಹಲವು ಕಲಾವಿದರು, ಕನ್ನಡ ಕಿರುತೆರೆಯಿಂದ ಪರಭಾಷೆಗಳಿಗೆ ವಲಸೆ ಹೋಗುವುದಂತೂ ಮೊದಲಿನಿಂದಲೂ ಇದೆ.

ಪಾರು ಧಾರಾವಾಹಿ ಶುರುವಿನಿಂದಲೂ ಪ್ರೇಕ್ಷಕರನ್ನು ಹಾಗೆ ಹಿಡಿದಿಟ್ಟುಕೊಂಡಿದ್ದು. ಈ ಧಾರಾವಾಹಿಯಲ್ಲಿ ಹಲವು ನಟ-ನಟಿಯರು ಹೊಸಬರಿದ್ದಾರೆ. ಪಾರು ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಸೇರಿದಂತೆ ಹಲವರು ಹೊಸಬರಿದ್ದಾರೆ. ಈಗ ಮೋಕ್ಷಿತಾ ಪೈ ಹಾಗೂ ಪವಿತ್ರಾ ಬಿ ನಾಯ್ಕ್ ಇಬ್ಬರೂ ಕೂಡ ಪರಭಾಷೆಯತ್ತ ಮುಖ ಮಾಡಿದ್ದಾರೆ.

Zee kannada Paaru Serial Actress Pavitra B Naik Serial Journey, Biography

ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿರುವ ಪವಿತ್ರ ಬಿ ನಾಯ್ಕ್, ಉದಯೋನ್ಮುಖ ನಟಿ. ಪಾರು ಧಾರಾವಾಹಿಯಲ್ಲಿ ಜನನಿ ಪಾತ್ರ ಮಾಡುತ್ತಿರುವ ನಟಿ ಪವಿತ್ರಾ ಬಿ ನಾಯ್ಕ್ ಅವರು ಇಂಜಿನಿಯರಿಂಗ್ ಮುಗಿಸಿದ್ದು, ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಕಿರುತೆರೆಗೆ ಪಾದಾರ್ಪಣೆ ಮಾಡುವ ಮೂಲಕ ನಟನೆಯನ್ನೇ ಈಗ ಫುಲ್ ಟೈಂ ಜಾಬ್ ಮಾಡಿಕೊಂಡಿದ್ದಾರೆ. ಅಕಸ್ಮಾತ್ ಆಗಿ ಯಾರನ್ನೋ ನೋಡಲು ಹೋಗಿ ಆಡಿಷನ್ ಕೊಟ್ಟು ಮನೆಯವರ ಒತ್ತಾಯದ ಮೇರೆಗೆ ನಟನೆಗೆ ಬಂದರಂತೆ.

ಸಿನಿಮಾ ಒಂದಕ್ಕೆ ನಟಿಯನ್ನು ಹುಡುಕುವಾಗ ಅಕಸ್ಮಾತ್ ಆಗಿ ಪವಿತ್ರಾ ಅವರನ್ನು ಒತ್ತಾಯಿಸಿ ಡೈಲಾಗ್ ಹೇಳಿಸಲಾಯ್ತಂತೆ. ಬಲವಂತಕ್ಕೆ ಹೇಳಿದ ಡೈಲಾಗ್ ಕೂಡ ಓಕೆ ಅಂದರಂತೆ. ಆದರೆ ನಟಿಸಲು ಒಲ್ಲೆ ಎಂದ ಪವಿತ್ರಾ ರನ್ನು ಮನೆಯವರು ಬಲವಂತ ಮಾಡಿ ಒಪ್ಪಿಸಿದರಂತೆ. ಆಗ ಪವಿತ್ರಾ ಅವರು, ಎಲ್ಲಿ ನನ್ನ ವಿಳಾಸ ಎಂಬ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಲಡ್ಡು, ಸ್ವೇಚ್ಛಾ ಸಿನಿಮಾಗಳಲ್ಲೂ ನಟಿಸಿದರು. ಈ ನಡುವೆ ಕಿರುತೆರೆಗೂ ಪಾದಾರ್ಪಣೆ ಮಾಡಿದ ಪವಿತ್ರಾ ಅವರು ಈಗಾಗಲೇ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Zee kannada Paaru Serial Actress Pavitra B Naik Serial Journey, Biography

ಪವಿತ್ರಾ ಬಿ.ನಾಯ್ಕ್ ಅವರು ಕಿರುತೆರೆಗೆ ಬಂದದ್ದು ರಕ್ಷಾ ಬಂಧನ ಧಾರಾವಾಹಿ ಮೂಲಕ. ರಕ್ಷಾ ಬಂಧನ ಧಾರಾವಾಹಿ ತುಂಬಾ ಬೇಗ ಮುಗಿದಿತ್ತು. ಈ ವಿಚಾರಕ್ಕೆ ಪವಿತ್ರಾ ಅವರು ರಕ್ಷಾ ಬಂಧನ ಧಾರಾವಾಹಿ ತುಂಬಾ ಚೆನ್ನಾಗಿತ್ತು. ಕತೆ ಕೂಡ ಇಷ್ಟವಾಗಿತ್ತು. ಆದರೆ ಧಾರಾವಾಹಿ ಬೇಗ ಮುಗಿದಿದ್ದೇ ಬೇಸರವಾಯ್ತು ಎಂದು ಹೇಳಿದ್ದಾರೆ. ಇದಾದ ಬಳಿಕ ಪವಿತ್ರಾ ಅವರು ಪಾರು ಧಾರಾವಾಹಿಯಲ್ಲಿ ನಟಿಸಲು ಆರಂಬಿಸಿದರು. ಸದ್ಯ ಇದೇ ಧಾರಾವಾಹಿಯಲ್ಲಿ ಪವಿತ್ರಾ ಬಿ.ನಾಯ್ಕ್ ಮುಂದುವರಿದಿದ್ದಾರೆ.

ಪವಿತ್ರಾ ಬಿ.ನಾಯ್ಕ್ ಅವರಿಗೆ ಈ ಹಿಂದೆಯೇ ಇತರೆ ಭಾಷೆಗಳು ಹಾಗೂ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಆಫರ್ ಗಳು ಬರುತ್ತಿದ್ದವು. ಆದರೆ ಪವಿತ್ರಾ ಅವರಿಗೆ ವೆಬ್ ಸಿರೀಸ್ ನಲ್ಲಿ ನಟಿಸುವುದು ಅಷ್ಟು ಇಷ್ಟವಿರಲಿಲ್ಲವಂತೆ. ಹಾಗಾಗಿ ವೆಬ್ ಸಿರೀಸ್ ನಲ್ಲಿ ನಟಿಸಲು ಸಿಕ್ಕ ಅವಕಾಶಗಳನ್ನು ಕೈ ಬಿಟ್ಟಿದ್ದಾರೆ. ಇನ್ನು ಇದೀಗ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಪವಿತ್ರಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ನುವ್ವು ನೇನು ಪ್ರೇಮ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Zee kannada Paaru Serial Actress Pavitra B Naik Serial Journey, biography, Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X