ದುಷ್ಟರು ಹೂಡಿರುವ ಚಕ್ರವ್ಯೂಹಕ್ಕೆ ಸಿಲುಕುತ್ತಾಳ ಪಾರು?

By Poorva

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಹೊಸದೊಂದು ತಿರುವು ಬರುವ ಮುನ್ಸೂಚನೆ ಸಿಕ್ಕಿದೆ. ಅರಸನಕೋಟೆಯ ಸೊಸೆಯಾಗಿ ವಿಜೃಂಭಿಸುತ್ತಿರುವ ಪಾರು ಮೇಲೆ ಕೆಲವು ದುಷ್ಟರ ಕಣ್ಣು ಬಿದ್ದಿದೆ.

'ಪಾರು' ಧಾರಾವಾಹಿಯ ಜೂನ್ 07 ರ ಎಪಿಸೋಡ್‌ನಲ್ಲಿ, ದೇವಾಸ್ಥಾನಕ್ಕೆ ತೆರಳಲು ಪಾರು ಸಿದ್ಧಗೊಳ್ಳುತ್ತಾಳೆ. ಅಖಿಲಾಂಡೇಶ್ವರಿ ಬಳಿ ವಿಚಾರ ತಿಳಿಸಿ, ಅನುಮತಿ ಪಡೆದು ದೇವಾಸ್ಥಾನಕ್ಕೆ ಹೊರಡುತ್ತಾಳೆ. ಗಂಡನ ಬಳಿಯಲ್ಲಿ ನನ್ನ ದೇವಾಲಯದ ಹತ್ತಿರ ಬಿಟ್ಟುಬಿಡಿ ಎಂದು ಹೇಳುತ್ತಾಳೆ. ಆದಿ ಪಾರುವನ್ನು ದೇವಾಲಯದ ಹತ್ತಿರ ಬಿಟ್ಟು ಆಫೀಸಿಗೆ ತೆರಳುತ್ತಾನೆ. ಇತ್ತ ಆದಿ ಆಫೀಸಿಗೆ ತೆರಳುವುದನ್ನು ದುಷ್ಟರು ರಣಹದ್ದಿನಂತೆ ನೋಡುತ್ತಿದ್ದಾರೆ. ಪಾರ್ವತಿಯನ್ನು ಸಿಲುಕಿಸಲು ಚಕ್ರವ್ಯೂಹವನ್ನೇ ಹೆಣೆದಿದ್ದಾರೆ.

ಇತ್ತ ಪಾರ್ವತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿ ಕಟ್ಟೆಯ ಬಳಿ ಬಂದಾಗ, ಅಲ್ಲಿಗೆ ದುಷ್ಟ ಕಳುಹಿಸಿರುವ ಇಬ್ಬರು ಯುವತಿಯರು ಆಗಮಿಸುತ್ತಾರೆ. ಪಾರು ಬಳಿ ಬಂದು ನೀವು ಪಾರ್ವತಿಯವರು ಅಲ್ವಾ ನೀವು ಅಖಿಲಾಂಡೇಶ್ವರಿ ಅವರ ಸೊಸೆ ಅಲ್ವಾ, ಎಂದೆಲ್ಲ ಕೇಳುತ್ತಾರೆ ಪಾರು ಇವರ ಮಾತಿಗೆ ಹೌದು ಯಾಕೆ ಎಂದು ಪ್ರತಿಕ್ರಿಯೆ ನೀಡುತ್ತಾಳೆ ಇದನ್ನು ನೋಡಿದ ಆ ಹೆಣ್ಣು ಮಕ್ಕಳು ಮೇಡಂ ನಾವು ಅನಾಥಶ್ರಮದಲ್ಲಿದ್ದೇವೆ ಅದಕ್ಕೆ ಡೊನೇಷನ್ ಕೊಡಬಹುದಾ ಎಂದು ಕೇಳುತ್ತಾಳೆ.

ಪಾರು ಮನವೊಲಿಸಲು ಪ್ರಯತ್ನಿಸುತ್ತಿರುವ ಯುವತಿಯರು

ಪಾರು ಮನವೊಲಿಸಲು ಪ್ರಯತ್ನಿಸುತ್ತಿರುವ ಯುವತಿಯರು

ಪಾರು ಸ್ವಲ್ಪ ದಿಗಿಲುಗೊಂಡು ನಾನು ನನ್ನ ಮನೆಯವರ ಹಾಗೂ ಅತ್ತೆಯವರ ಪರ್ಮಿಷನ್ ತೆಗೆದುಕೊಳ್ಳಬೇಕು ನಾನಾಗಿಯೇ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಇದಕೆ ಅವರು ಇಲ್ಲ ಮೇಡಂ ನೀವು ಮದುವೆಗೆ ಮುನ್ನ ಬಡವರ ಮನೆಯವಳಾಗಿದ್ದೀರಿ ಅದಕ್ಕೋಸ್ಕರ ನಿಮಗೆ ನಮ್ಮ ಕಷ್ಟ ಅರ್ಥವಾಗುತ್ತದೆ ಹಾಗಾಗಿ ನಿಮ್ಮ ಸಹಾಯ ಕೇಳಿದೆವು ಎಂದು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಈ ಬಗ್ಗೆ ಏನೂ ಹೇಳಬೇಡಿ ಇದರಿಂದ ನಮಗೆ ತೊಂದರೆಯಾಗುತ್ತದೆ. ನೀವು ದೊಡ್ಡ ಮನೆಯವರು ಏನು ಬೇಕಾದರು ಮಾಡಬಹುದು ಎಂದೆಲ್ಲ ಹೇಳುತ್ತಿರುವಾಗ ಆದಿ ವಾಪಸ್ ದೆವಾಸ್ಥಾನ ಬಳಿ ಬರುತ್ತಾನೆ.

ಆದಿ ಕಂಡು ಅಲರ್ಟ್ ಆದ ಕೇಡಿ

ಆದಿ ಕಂಡು ಅಲರ್ಟ್ ಆದ ಕೇಡಿ

ಆದಿ ವಾಪಸ್ ಬಂದಿದ್ದು ನೋಡಿದ ಒಬ್ಬ ದುಷ್ಟ ಆ ಇಬ್ಬರು ಹೆಂಗಸರಿಗೆ ಕಾಲ್ ಮಾಡುತ್ತಾನೆ ಆದರೆ ಆ ಹುಡುಗಿಗೆ ಗೊತ್ತಾಗುವುದಿಲ್ಲ. ಇದರಿಂದ ಕೇಡಿ ಕುಪಿತಗೊಳ್ಳುತ್ತಾನೆ. ಪುನಃ ಕರೆ ಮಾಡುತ್ತಾನೆ, ಆಗ ಹುಡುಗಿ ಫೋನ್ ರಿಸಿವ್ ಮಾಡುತ್ತಾಳೆ. ಆತ ಆದಿ ಬಂದಿರುವುದನ್ನು ತಿಳಿಸುತ್ತಾನೆ ಬೇಗ ಅಲ್ಲಿಂದ ತೆರಳುವಂತೆ ಹೇಳುತ್ತಾನೆ. ಅಪಾಯವನ್ನು ಅರಿತ ಇಬ್ಬರು ಹೆಣ್ಣು ಮಕ್ಕಳು ಪಾರು ಬಳಿಯಿಂದ ತೆರಳುತ್ತಾರೆ. ಪರಾರಿಯಾಗಿ ಬಂದ ಯುವತಿಯರು ಕಾರಿನಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆ ದುಷ್ಟ ಒಬ್ಬಳು ಹೆಣ್ಣು ಮಗಳ ಕೆನ್ನೆಗೆ ಬಾರಿಸುತ್ತಾನೆ. ಆ ವೇಳೆ ಆ ಹುಡುಗಿ ಫೋನ್ ಸೈಲೆಂಟಲ್ಲಿ ಇತ್ತು. ಆದ್ರೆ ನಿಮ್ಮ ಕೆಲಸ ಆಯ್ತು ಅಂದ್ಕೋಳ್ಳಿ ನಾಳೆ ಇದೇ ಜಾಗಕ್ಕೆ ಆಕೆ ಬರುವುದಾಗಿ ಹೇಳಿದ್ದಾಳೆ ನಾಳೆ ಇದೇ ಜಾಗಕ್ಕೆ ಬರಬೇಕು ನಾವು ಎಂದು ಹೇಳುತ್ತಾಳೆ.

ಜನನಿ ತಲೆಗೆ ವಿಷ ತುಂಬಿದ ಯಾಮಿನಿ

ಜನನಿ ತಲೆಗೆ ವಿಷ ತುಂಬಿದ ಯಾಮಿನಿ

ಅರಸನಕೋಟೆಯ ಇನ್ನೊಬ್ಬ ಸೊಸೆ ಬಳಿಗೆ ಯಾಮಿನಿ ಬಂದು ಮಾತನಾಡುತ್ತಾಳೆ, ಜನನಿ ಬಳಿ ಪಾರ್ವತಿ ಎಲ್ಲಮ್ಮ ಎಂದು ಕೇಳುತ್ತಾಳೆ, ಆಕೆ ದೇವಸ್ಥಾನಕ್ಕೆ ತೆರಳಿರುವುದನ್ನು ಹೇಳುತ್ತಾಳೆ ಅದಕ್ಕೆ ಯಾಮಿನಿ ಸರಿ ಹೋಯಿತಮ್ಮ ನೀನು ಎಲ್ಲ ಕೆಲಸ ಮಾಡು ಆಕೆ ಅಲ್ಲಿ ಇಲ್ಲಿ ಗಂಡನ ಜೊತೆ ತಿರುಗಲಿ ಎಂದು ಹೇಳುತ್ತಾಳೆ, ಇದನ್ನು ಕೇಳಿದ ಜನನಿ ಮನದಲ್ಲಿ ಸಂಶಯ ಮೊಳಕೆಯೊಡೆಯುತ್ತದೆ. ಪಾರ್ವತಿ ಈ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾಳೆ. ಅರಸನ ಕೋಟೆಯ ಸೊಸೆಯಾಗಿ ನಿನ್ನ ಸ್ಥಾನವನ್ನು ಭದ್ರಗೊಳಿಸಬೇಕು ಎಂದೆಲ್ಲ ಕುತಂತ್ರದ ಮಾತುಗಳನ್ನು ಆಕೆಯ ಕಿವಿಯಲ್ಲಿ ಊದಿ ಬಿಡುತ್ತಾಳೆ.

ಅಖಿಲಾಂಡೇಶ್ವರಿ ಬಳಿ ಒಪ್ಪಿಗೆ ಕೇಳಿದ ಪಾರು

ಅಖಿಲಾಂಡೇಶ್ವರಿ ಬಳಿ ಒಪ್ಪಿಗೆ ಕೇಳಿದ ಪಾರು

ಇನ್ನೂ ಪಾರು ಮನೆಗೆ ಬಂದವಳೇ ಅತ್ತೆಯ ಬಳಿ ನಾನೊಂದು ಒಳ್ಳೆಯ ಕೆಲಸ ಮಾಡಲು ತೆರಳಿದ್ದೇನೆ ಅದನ್ನು ನಿಮ್ಮೆಲ್ಲರ ಬಳಿ ಹೇಳಿದರೆ ತಪ್ಪಾಗುತ್ತದಾ ಎಂದೆಲ್ಲ ಕೇಳುತ್ತಾಳೆ. ಅದಕ್ಕೆ ಅಖಿಲಾಂಡೇಶ್ವರಿ ಒಳ್ಳೆ ಕೆಲಸಕ್ಕೆ ಪರ್ಮಿಷನ್ ಅಗತ್ಯ ಇಲ್ಲ ಎಂದೆಲ್ಲ ಹೇಳುತ್ತಾರೆ, ಇದರಿಂದ ಸ್ವಲ್ಪ ರಿಲೀಪ್‌ಗೊಂಡ ಪಾರು ಮರುದಿನ ದೇವಾಲಯಕ್ಕೆ ಹೋಗಲು ನಿರ್ಧರಿಸುತ್ತಾಳೆ. ಜನನಿಯನ್ನು ದೇವಾಸ್ಥಾನಕ್ಕೆ ಬರುತ್ತೀಯ ಎಂದು ಕೇಳುತ್ತಾಳೆ, ಆದರೆ ಜನನಿ ಮುಖ ತಿರುಗಿಸಿ ಇಲ್ಲ ನೀವೆ ಹೋಗಿ ಎಂದು ಹೇಳಿದ ಕೂಡಲೇ ಪಾರು ಅಲ್ಲಿಂದ ಹೊರಡುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

English summary
Zee Kannada Paaru Serial June 07th Episode Written Update. Paaru serial getting many twists and turns in recent episodes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X