ಪಾರುಗೆ ಕಪಾಳಮೋಕ್ಷ ಮಾಡಿದ ಅಖಿಲಾಂಡೇಶ್ವರಿ! ಅಪ್ಪನಿಂದಲೂ ಪಾರುಗೆ ಮಂಗಳಾರತಿ
ಪಾರು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಆದರೆ ಈಗ ಪಾರು ಮಾಡಿರುವ ಯಡವಟ್ಟಿನಿಂದ ಅಖಿಲಾಂಡೇಶ್ವರಿ ಮರ್ಯಾದೆಯನ್ನು ಮೂರು ಖಾಸಿಗೆ ಹರಾಜಾಗುವಂತಾಗಿದೆ. ಪಾರು ವರ್ತನೆಗೆ ಮನೆಯವರು ಬೇಸರ ಪಟ್ಟುಕೊಂಡಿದ್ದಾಳೆ. ಪಾರು ನಡವಳಿಕೆಯಿಂದ ಜನನಿಯೂ ಪಾರುವಿನ ವಿರುದ್ಧ ನಿಲ್ಲುವ ಹಾಗೆ ಆಗಿದೆ. ಯಾಮಿನಿಯ ಸಂಚಿಗೆ ದಮಯಂತಿಯ ಕುತಂತ್ರಕ್ಕೆ ರಾಣಾನ ಮೋಸದ ಬಲೆಗೆ ಪಾರು ಈಗ ಬಿದ್ದಿದ್ದಾಳೆ. ಇತ್ತ ಅಖಿಲಾಂಡೇಶ್ವರಿಗೆ ಬ್ಯುಸಿನೆಸ್ ಪಾರ್ಟನರ್ಸ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಏರು ದನಿಯಲ್ಲಿ ಮಾತನಾಡುತ್ತಿದ್ದ ಅಖಿಲಾಂಡೇಶ್ವರಿಗೆ ಬ್ಯುಸಿನೆಸ್ ಪಾರ್ಟನರ್ಸ್ ನೀವು ಏರು ಧ್ವನಿಯಲ್ಲಿ ಮಾತನಾಡೋ ಅವಶ್ಯಕತೆ ಇಲ್ಲ. ನಿಮ್ಮ ಸೊಸೆಗೆ ಎಲ್ಲಾ ಅಧಿಕಾರ ವಹಿಸಿ ನೀವು ಅದರ ಜವಾಬ್ಧಾರಿಯನ್ನು ವಹಿಸಿಕೊಳ್ಳದೇ ಇರುವುದು ಸರಿಯಲ್ಲ ಇದರಲ್ಲಿ ನಿಮ್ಮದು ತಪ್ಪಿದೆ ಎಂದೆಲ್ಲ ಬಯ್ದು ಹೋಗುತ್ತಾರೆ. ಅಖಿಲಾಂಡೇಶ್ವರಿ ಇದರಿಂದ ಸಿಟ್ಟಿಗೇಳುತ್ತಾರೆ, ಪಾರ್ವತಿಯ ಮೂರ್ಖತನಕ್ಕೆ ಏನು ಹೇಳಬೇಕೋ ತಿಳಿಯದೇ ಸುಮ್ಮನಾಗುತ್ತಾರೆ, ಅದೆಷ್ಟು ಸಪೋರ್ಟ್ ಮಾಡಿದರೂ ಪಾರ್ವತಿ ಮಾತ್ರ ಈ ಥರಹ ನಡೆದುಕೊಂಡಿರುವುದು ಮನೆಯವರಿಗೂ ಅಖಿಲಾಂಡೇಶ್ವರಿಗೂ ಬೇಸರ ತರಿಸಿದೆ.
ಇತ್ತ ಹನುಮಂತುವನ್ನು ಕರೆದ ಅಖಿಲಾಂಡೇಶ್ವರಿ ತಗೋ 60 ಲಕ್ಷ ಎಂದು ಹೇಳುತ್ತಾಳೆ, ಅದಕ್ಕೆ ಇದೇನು ಎಂದು ಅರಿಯದೇ ಹನುಮಂತು ಅಮ್ಮ ಇದೇನಮ್ಮ ಎಂದು ಕೇಳುತ್ತಾರೆ, ಅದಕ್ಕೆ ನಿನ್ನ ಮಗಳು ಸಂಪಾದಿಸಿದ ಹಣ ಇದು ತೆಗೆದುಕೋ ಮನೆ ಕಟ್ಟಿಕೋ ಎಂದು ಹೇಳುತ್ತಾರೆ ಇದನ್ನು ಕೇಳಿದ ಹನುಮಂತುಗೆ ಸಿಡಿಲು ಬಡಿದ ಹಾಗೆ ಆಗುತ್ತದೆ ಮೊದಲೇ ಸ್ವಾಭಿಮಾನಿ ಹನುಮಂತು ತನ್ನ ಮಗಳು ಈ ರೀತಿಯ ತಪ್ಪು ಮಾಡುತ್ತಾಳೆ ಎಂದರೆ ಆತ ಖಂಡಿತ ಇದನ್ನು ಸಹಿಸಲಾರ ಆದರೆ ಮಗಳು ಮಾಡಿದ ಘನಕಾರ್ಯ ನೋಡಿ ಹನುಮಂತುಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಪಾರು ಮೇಲೆ ಕೈ ಎತ್ತಿದ ಹನುಮಂತು
ಆ ಬಳಿಕ ಹನುಮಂತು ಕೇಳುತ್ತಾನೆ ನೀವು ಯಾಕೆ ಇಷ್ಟು ಹಣ ಕೊಡುತ್ತಿದ್ದೀರಾ ಮನೆ ತೆಗೆದುಕೊಳ್ಳಲು ದೊಡ್ಡ ಯಜಮಾನ್ರೆ ಮನೆ ತೆಗೆದುಕೊಳ್ಳಲು ಸಹಾಯ ಮಾಡುತ್ತೇನೆ ಎಂದು ಹೇಳಿದರು, ಹಣ ಕೊಟ್ಟರು ನಾನೇ ಬೇಡ ಹೇಳಿದೆ. ಈಗ ಇದನ್ನು ನಿಮ್ಮ ಮೂಲಕ ಕೊಡುತ್ತಿದ್ದಾರೆ ದಯವಿಟ್ಟು ಬೇಡ ಅಮ್ಮ ಎಂದು ತಿರಸ್ಕರಿಸುತ್ತಾರೆ. ಇದನ್ನೆಲ್ಲ ಯಾಮಿನಿ ಕುತ್ತಿಗೆಗೆ ಹಾಕಿದ ತಾಯತದಲ್ಲಿ ಫಿಕ್ಸ್ ಮಾಡಿದ್ದ ಕ್ಯಾಮೆರಾದ ಮೂಲಕ ಧಮಯಂತಿ ವೀಕ್ಷಿಸುತ್ತಿದ್ದಾಳೆ, ಬಳಿಕ ಹನುಮಂತು ಹೇಳುತ್ತಾನೆ ನನ್ನ ಮೈನಲ್ಲಿ ಇನ್ನೂ ಶಕ್ತಿ ಇದೆ ಅಮ್ಮವರೇ, ದುಡಿದು ಸಂಪಾದನೆ ಮಾಡುತ್ತೇನೆ ಆ ಹಣದಲ್ಲಿಯೇ ಮನೆತೆಗೆದುಕೊಳ್ಳುತ್ತೇನೆ ಅದು ಆಗುತ್ತೊ ಇಲ್ಲವೋ ಆ ದೇವರಿಗೆ ಬಿಟ್ಟಿದ್ದು, ಆದ್ರೆ ಇದು ಮಾತ್ರ ಬೇಡ ಎಂದು ನಿರಾಕರಿಸುತ್ತಾನೆ.

ಯಾಮಿನಿಯ ಮಾತಿಗೆ ಪೆಚ್ಚಾದ ಸಾರಥಿ
ಆ ವೇಳೆ ಅಖಿಲಾಂಡೇಶ್ವರಿ ಹೇಳುತ್ತಾರೆ, ನೀನೆನೋ ಬೇಡ ಅಂತಿದ್ದೀಯಾ ಆದರೆ ನಿನ್ನ ಮಗಳು ಕಷ್ಟ ಪಟ್ಟು ದುಡಿದು ತೆಗೆದುಕೊಂಡು ಬಂದಿದ್ದಾಳೆ ತಗೋ ಹನುಮಂತು ಎಂದು ಹೇಳಿದಾಗ ಶಾಕ್ ಆಗುತ್ತದೆ. ಹನುಮಂತು ಹೇಳುತ್ತಾನೆ ಇಷ್ಟೋಂದು ದುಡ್ಡಾ ನಾನು ಯಾರತ್ರನೂ ಬೇಕು ಎಂದು ಕೇಳಿದವನು ಅಲ್ಲ ಎಂದು ಹೇಳುತ್ತಾನೆ ಈ ವೇಳೆ ಯಾಮಿನಿ ಅಪ್ಪ ಹನುಮಂತಪ್ಪ ಬೇವು ಸಿಹಿಯಾಗಲ್ಲ, ಬೆಲ್ಲ ಕಹಿಯಾಗಲ್ಲ, ನಿನ್ನ ಮಾತನ್ನು ನಾವು ಯಾರು ನಂಬಲ್ಲ, ನೀನೇ ಕೇಳದೇ ನಿನ್ನ ಮಗಳು ಇಷ್ಟು ದೊಡ್ಡ ಕೆಲಸ ಮಾಡುತ್ತಾಳ, ಬೇರೆಯವರ ಕಂಪನಿ ಸೋಪ್‌ಗೆ ಮಹಾರಾಣಿಯ ಹಾಗೆ ಪೋಸ್ ಕೊಟ್ಟು ಇಷ್ಟೋಂದು ದುಡ್ಡು ದುಡಿದಿದ್ದಾಳೆ ನಿನ್ನ ಮಗಳು, ನಿನಗೆ ಗೊತ್ತಿಲ್ಲದ ಹಾಗೆ ಅರಸನ ಕೋಟೆಯ ಮರ್ಯಾದಿ ತೆಗೆದಿದ್ದಾಳೆ ಎನ್ನುತ್ತಾಳೆ.

ಅರಸನ ಕೋಟೆ ಮರ್ಯಾದೆ ತೆಗೆದ ಪಾರು
400 ಕೋಟಿ ಬ್ಯುಸಿನೆಸ್ ಅನ್ನು ಹಾಳು ಮಾಡಿದ್ದಾಳೆ ನಿನ್ನ ಮಗಳು ಎಂದಾಗ ಎಂದಾಗ ಆಕಾಶವೇ ಖಳಚಿ ಹನುಮಂತುಗೆ ಬಿದ್ದ ಅನುಭವವಾಗುತ್ತದೆ. ಪಾರ್ವತಿಯ ಮೇಲೆ ಕೈ ಯೆತ್ತಲು ಬರುತ್ತಾನೆ ಹನುಮಂತು ಬಳಿಕ ಕೈ ಕೆಳಗಿಳಿಸುತ್ತಾನೆ, ಬಳಿಕ ಹೇಳುತ್ತಾನೆ ಇವಳು ಗಳಿಸಿದ ಹಣ ನನ್ನ ಹೆಣಕ್ಕೂ ಬೇಡ ನಿಮಗೂ ಮೋಸ ಮಾಡಿ ಗಳಿಸಿರುವ ಹಣ ಮಹಾ ಪಾಪ ಇದನ್ನು ನಾನು ತೆಗೆದುಕೊಳ್ಳುತ್ತೇನೆ ಖಂಡಿತ ಇಲ್ಲ ಬೇಕಾಗಿಲ್ಲ ಎಂದು ಹೇಳಿ ಪಾರ್ವತಿಯ ಮುಖದ ಮೇಲೆ ಅದನ್ನು ಎಸೆಯುತ್ತಾನೆ.ಬಳಿಕ ಅಲ್ಲಿಂದ ಹನುಮಂತು ಕೋಪದಿಂದ ಹೊರನಡೆಯುತ್ತಾನೆ.

ಮುಂದೇ ಪಾರು ಗತಿ?
ಆದರೆ ಅಖಿಲಾಂಡೇಶ್ವರಿ ಬಳಿ ಪಾರು ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ ನನ್ನಿಂದ ಏನು ತಪ್ಪಾಗಿಲ್ಲ ಎಂದು ಹೇಳಿದಾಗಲೂ ಅಖಿಲಾಂಡೇಶ್ವರಿ ನಂಬದೇ ಪಾರು ಮೇಲೆ ಕೈ ಮಾಡುತ್ತಾಳೆ. ಬಳಿಕ ಅಲ್ಲಿಂದ ತೆರಳುತ್ತಾಳೆ, ಪಾರುವನ್ನು ಆದಿ ರೂಮಿಗೆ ಕರೆದುಕೊಂಡು ಹೋಗುತ್ತಾನೆ ಏನು ಮಾಡಿದೆ ಪಾರ್ವತಿ ನಿನ್ನನ್ನು ಇಷ್ಟಪಟ್ಟು ಮದುವೆಯಾದೆ ಆದರೆ ನೀನು ಮಾಡಿದ್ದಾದರೂ ಏನು ಎಂದೆಲ್ಲ ಚೆನ್ನಾಗಿ ಬಯ್ಯುತ್ತಾನೆ ಆದರೆ ಪಾರು ನನ್ನಿಂದ ಏನು ತಪ್ಪಾಗಿಲ್ಲ ಎಂದು ನಡೆದ ವಿಚಾರವೆಲ್ಲ ಹೇಳಿತ್ತಾಳೆ, ಆದರೆ ಗಂಡನಾಗಿ ನನ್ನ ಬಳಿ ಹೇಳಬಹುದಿತ್ತಲ್ಲ ಎಂದೆಲ್ಲ ಬಯ್ದು ಅಲ್ಲಿಂದ ಹೋಗುತ್ತಾನೆ ಮುಂದೇನಾಗುತ್ತದೇ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











