ಪಾರು ಮನದಲ್ಲಿ ಮನೆ ಮಾಡಿದ ಆತಂಕ ಅಖಿಲಾಂಡೇಶ್ವರಿ ಕಿಡಿಕಿಡಿ

By ಪೂರ್ವ

ಪಾರು ಯಡವಟ್ಟಿನ ಕೆಲಸದಿಂದ ಇದೀಗ ಅರಸನಕೋಟೆಯೇ ಅಲ್ಲೋಲ ಕಲ್ಲೋಲ ಆಗಿದೆ. ಅರಸನಕೋಟೆಯ ಮಹಾರಾಣಿ ಅಖಿಲಾಂಡೇಶ್ವರಿಯ ಕೆಂಗಣ್ಣಿಗೆ ಪಾರು ಗುರಿಯಾಗಿದ್ದಾಳೆ. ಪಾರುವನ್ನು ಈ ಕ್ಷಣ ಯಾರು ನಂಬುತ್ತಿಲ್ಲ ಆದರೆ ಪಾರು ಮಾಡಿದ ಕೆಲಸದಿಂದ ಎಲ್ಲರ ಮನಸ್ಸಿಗೂ ಘಾಸಿಯಾಗಿರುವುದಂತು ಸತ್ಯ, ಮನೆಯ ಎಲ್ಲಾ ಜವಾಬ್ಧಾರಿಯನ್ನು ಸರಿಯಾಗಿಯೇ ನಿಭಾಯಿಸಿದ ಪಾರುಗೆ ತಾನು ಮೋಸ ಹೊದ ಬಗ್ಗೆ ಅರಿವಿಗೆ ಬಂದಿದೆ. ಪಾರು ಜಾಣೆಯಾಗಿದ್ದರೂ ಅರುಂಧತಿಯ ಮೋಸದಾಟಕ್ಕೆ ಇದೀಗ ಬಲಿಯಾಗಿದ್ದು, ಪಾರು ಮುಂದೇನು ಮಾಡುತ್ತಾಳೆ ಎಂಬ ಕುತೂಹಲ ಮೂಡಿಸಿದೆ.

ಪಾರು ತಪ್ಪಿನಿಂದಾಗಿ ಆಕೆಯ ಕೈಯಲ್ಲಿದ್ದ ಎಲ್ಲಾ ಅಧಿಕಾರವನ್ನು ಸಂಪೂರ್ಣವಾಗಿ ತೆಗೆದುಕೊಂಡಿದ್ದಾರೆ ಅಖಿಲಾಂಡೇಶ್ವರಿ. ಆದರೆ ಪಾರು ಮಾತ್ರ ನಾನೇನು ತಪ್ಪು ಮಾಡಿಲ್ಲ ಎಂದು ಅಳುತ್ತಳೇ ಹೇಳಿದರೂ ಯಾರು ನಂಬುತ್ತಿಲ್ಲ. ಇದೀಗ ಅಖಿಲಾಂಡೇಶ್ವರಿ ಮೊದಲಿನ ಸ್ಥಿತಿಗೆ ಬಂದಿದ್ದಾರೆ. ಪಾರು ಕುಳಿತುಕೊಳ್ಳುತ್ತಿರುವ ಸೀಟಿನಲ್ಲಿ ಕುಳಿತಿರುವ ಅಖಿಲ ಇನ್ನು ಮುಂದೆ ನಾನೇ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಅವಳು ಅವಳ ಜಾಗದಲ್ಲಿ ಇರುತ್ತಾಳೆ ಎಂದು ಖಡಕ್ ಆಗಿ ಹೇಳಿದ್ದಾರೆ. ಅದಕ್ಕೆ ಪಾರು ಆಯ್ತಮ್ಮ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಹೇಳುತ್ತಾಳೆ.

ಒಡವೆ ಬಿಚ್ಚಿಡುವ ಪಾರು

ಒಡವೆ ಬಿಚ್ಚಿಡುವ ಪಾರು

ಬಳಿಕ ಕ್ಷಮಿಸಿ ಎಂದು ಇದ್ದ ಒಡವೆಗಳನ್ನು ಬಿಚ್ಚಿಡುತ್ತಾಳೆ ಪಾರು. ಆದಿಗೆ ಇದರಿಂದ ಬಹಳ ನೋವಾಗುತ್ತದೆ. ಅಖಿಲಾಂಡೇಶ್ವರಿಯ ಪ್ರತಿಯೊಂದು ನಿರ್ಧಾರವೂ ಪಾರು ಮನದಲ್ಲಿ ಇದೀಗ ನಡುಕ ಹುಟ್ಟಿಸಿದೆ. ಬಳಿಕ ಅಖಿಲಾಂಡೇಶ್ವರಿ ಸೊಸೆ ಎಂದರೆ ಹೇಗಿರಬೇಕು ಎಂಬುವುದರ ಬಗ್ಗೆ ಹೇಳುತ್ತಾರೆ. ಜನನಿಯನ್ನು ಉದಾಹರಣೆ ತೆಗೆದುಕೊಂಡ ಅಖಿಲಾಂಡೇಶ್ವರಿ ಇದುವರೆಗೂ ಜನನಿ ಅರಸನಕೋಟೆಗೆ ಕಪ್ಪು ಚುಕ್ಕಿ ತಂದವಳಲ್ಲ, ಇಂದಿಗೂ ಕೂಡ ಜನನಿ ನಿನಗೆ ಅಧಿಕಾರ ಕೊಟ್ಟಾಗಲೂ ಮಾತನಾಡಲಿಲ್ಲ ಎನ್ನುತ್ತಾರೆ ಅಖಿಲಾಂಡೇಶ್ವರಿ.

ಮನಸಲ್ಲಿಯೇ ಮಂಡಿಗೆ ತಿಂದ ಜನನಿ

ಮನಸಲ್ಲಿಯೇ ಮಂಡಿಗೆ ತಿಂದ ಜನನಿ

ಅಷ್ಟು ದೊಡ್ಡ ಮನೆತನದಿಂದ ಬಂದಿದ್ದ ಜನನಿಯ ಗುಣವನ್ನು ಪಾರು ಎದುರು ಕೊಂಡಾಡಿದ್ದಾರೆ ಅಖಿಲಾಂಡೇಶ್ವರಿ. ಬಳಿಕ, ನೀನು ಜನನಿ ಕಾಲಿನ ಧೂಳಿಗೂ ಸಮಯಿಲ್ಲ ಎಂದು ಹೇಳುತ್ತಾರೆ. ಈ ಮಾತು ಕೇಳಿ ಆದಿಗೆ ಬಹಳ ಬೇಸರವಾಗುತ್ತದೆ. ಜನನಿಗೆ ಬಹಳ ಖುಷಿಯಾಗುತ್ತದೆ. ಯಾಮಿನಿ ಮಾತ್ರ ಹಾಲು ಕುಡಿದಷ್ಟು ಸಂತೋಷ. ಆಕೆಗೆ ಪಾರುವನ್ನು ಹೇಗಾದರೂ ಕೆಳಗಿಳಿಸಲೇ ಬೇಕು ಎನ್ನುವ ಆಲೋಚನೆ ಇತ್ತು ಆದರೆ ಇದೀಗ ಪಾರುವನ್ನು ಅಖಿಲಾಂಡೇಶ್ವರಿಯ ಸ್ಥಾನದಿಂದ ಕೆಳಗಿಳಿಸಿದರು. ಇದಕ್ಕೆ ಚಪ್ಪಾಳೆ ತಟ್ಟಿದ್ದರಿಂದ ಮನೆಯವರ ಕೆಂಗಣ್ಣಿಗೆ ಯಾಮಿನಿ ಗುರಿಯಾಗಿದ್ದಾಳೆ.

ಎಲ್ಲಾ ಜವಾಬ್ದಾರಿಯಿಂದ ಪಾರುಗೆ ಮುಕ್ತಿ

ಎಲ್ಲಾ ಜವಾಬ್ದಾರಿಯಿಂದ ಪಾರುಗೆ ಮುಕ್ತಿ

ಅಖಿಲಾಂಡೇಶ್ವರಿ ಆಡಿದ ಮಾತಿಗೆ ಖುಷಿಯಾದ ಜನನಿ ಮನದಲ್ಲಿ ಬಹಳ ಖುಷಿ ಪಡುತ್ತಾಳೆ. ಬಳಿಕ ಸಾವಿತ್ರಿಗೆ ಅಡಿಗೆ ವಿಚಾರವಾಗಿ ಮಾತನಾಡಲು ಹೇಳುತ್ತಾಳೆ. ಬಳಿಕ ಟೀ ಮಾಡಲು ಹೇಳುತ್ತಾಳೆ. ಅಲ್ಲಿಂದ ಪಾರು ಹೋಗುತ್ತಾಳೆ, ಪಾರುವನ್ನು ಆದಿ ಹಿಂಬಾಲಿಸುತ್ತಾನೆ. ಇದನ್ನೆಲ್ಲ ನೋಡಿದ ಪ್ರೀತುಗೆ ಬಹಳ ನೋವಾಗುತ್ತದೆ. ಜನನಿಯ ಬಳಿ ಮಾತನಾಡಲು ಯಾಮಿನಿ ಕರೆದುಕೊಂಡು ಹೋಗುತ್ತಾಳೆ, ಬಳಿಕ ಎಲ್ಲರೂ ಊಟದ ಹಾಲ್ ಬಳಿಗೆ ಬರುತ್ತಾರೆ.

ಊಟ ಬಿಟ್ಟ ಆದಿ

ಊಟ ಬಿಟ್ಟ ಆದಿ

ಪಾರ್ವತಿ ಬಡಿಸಲು ನಿಂತಿರುವುದನ್ನು ನೋಡಿದ ಅಖಿಲಾಂಡೇಶ್ವರಿ ಜೋರಾಗಿ ಸಾವಿತ್ರಿಯನ್ನು ಕರೆದು ಹೇಳುತ್ತಾಳೆ ಇನ್ನು ಮುಂದೆ ನೀವು ಊಟ ಬಡಿಸಬೇಕು ಎಂದು ಹೇಳುತ್ತಾಳೆ, ಪಾರು ಹಿಂದೆ ಸರಿಯುತ್ತಾಳೆ, ಆದಿ ಊಟವನ್ನೇ ಬಿಟ್ಟು ಹೋಗುತ್ತಾನೆ ಇದನ್ನು ನೋಡಿದ ಅಖಿಲಾಂಡೇಶ್ವರಿ ಒಬ್ಬರು ಊಟ ಬಿಟ್ಟು ಹೋದರೆ ಏನಾಗಲ್ಲ ನೀವೆಲ್ಲರೂ ತಿನ್ನಿ ಎಂದು ಹೇಳುತ್ತಾಳೆ. ಇದನ್ನೆಲ್ಲವನ್ನು ದಮಯಂತಿ ನೋಡುತ್ತಿರುತ್ತಾಳೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ

More from Filmibeat

English summary
Zee Kannada Paaru Serial June 15th Episode Written Update. Paaru is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X