ವೈಭವದ ದಿನಗಳು ಮುಗಿದು ಕಷ್ಟದ ದಿನಗಳಲ್ಲಿ ಪಾರು ಪಯಣ: ಮುಂದೇನು?

By ಪೂರ್ವ

ಹೆಂಗಳೆಯೆರ ಮನೆ ಮಾತಾಗಿದೆ 'ಪಾರು' ಧಾರವಾಹಿ. ಇತ್ತೀಚಿನ ದಿನಗಳಲ್ಲಿ ಅಖಿಲಾಂಡೇಶ್ವರಿಯ ದರ್ಪ ಹೆಚ್ಚಾಗಿದೆ. ಪಾರುವಿನ ಸ್ಥಿತಿ ಕಂಡು ವೀಕ್ಷಕರು ಮರುಕಪಡುತ್ತಿದ್ದಾರೆ. ಪಾರು ಮಾಡಿದ ಎಡವಟ್ಟಿನಿಂದ ಆದಿಯೂ ಬೆಲೆ ತೆರಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ಅಖಿಲಾಂಡೇಶ್ವರಿಗೆ ತನ್ನ ಪ್ರೀತಿಯ ಮಗ ನನ್ನ ಮಾತನ್ನೇ ಧಿಕ್ಕರಿಸಿದ್ದಾನೆ ಎಂಬ ಬೇಸರ ಮೂಡಿದೆ. ಪಾರು, ಆದಿ ಬಳಿ ಹೇಳುತ್ತಾಳೆ ಜನನಿಗೆ ನನ್ನ ಮೇಲೆ ಕೋಪ ಇರಬಹುದು ಅದರಿಂದಾಗಿ ನನ್ನಿಂದ ಬೇಸರಗೊಂಡಿದ್ದಾರೆ ಎಂದು ಹೇಳುತ್ತಾಳೆ, ಅದಕ್ಕೆ ಆದಿ ನಾನು ಆಫೀಸಿನಿಂದ ಬರುವ ವೇಳೆಗೆ ಅದೆಲ್ಲ ಸರಿ ಹೊಗಿರುತ್ತದೆ ಎಂದು ಸಮಾಧಾನ ಮಾಡುತ್ತಾನೆ.

ಅಖಿಲಾಂಡೇಶ್ವರಿ ಆದಿಯ ದಾರಿ ಕಾಯುತ್ತಿರುತ್ತಾಳೆ, 10 ಗಂಟೆಗೆ ಆಫೀಸ್‌ ಮೀಟಿಂಗ್ ಇದೆ, ಆದಿ ಇನ್ನೂ ಹೋಗಿಲ್ಲ ಎಂದು ಯೋಚಿಸುತ್ತಾ ಇರುತ್ತಾಳೆ. ಇತ್ತ ಆದಿ ಚಿಕ್ಕಪ್ಪ, ಅಖಿಲಾಂಡೇಶ್ವರಿ ಬಳಿ ಬಂದು ಆದಿ ಎಲ್ಲಿದ್ದಾನೆ ಎಂದು ಕೇಳುತ್ತಾನೆ, ಅಲ್ಲಿಗೆ ಬಂದ ಯಾಮಿನಿ ಆದಿ ಹೆಂಡತಿಯ ಬಳಿ ಮಾತನಾಡಿಕೊಂಡು ಬರುತ್ತಾನೆ ಈಗಲೇ ಇಷ್ಟು ಲೇಟ್ ಆಗಿದೆ ಎಂದೆಲ್ಲ ಹೇಳಿದಾಗ ಅಖಿಲಾಂಡೇಶ್ವರಿಗೆ ಕೋಪ ನೆತ್ತಿಗೇರುತ್ತದೆ ಪ್ರೀತುವನ್ನು ಜೋರಾಗಿ ಕರೆದು ಆಫೀಸಿಗೆ ತೆರಳುವಂತೆ ಹೇಳುತ್ತಾಳೆ ಇದಕ್ಕೆ ಪ್ರೀತು ಹಿಂದೇಟು ಹಾಕಿದಾಗ 'ಹೋಗಿ ಬೇಗಾ' ಎಂದು ಜೋರಾಗಿ ಹೇಳುತ್ತಾಳೆ ಕೂಡಲೇ ಪ್ರೀತು ಹೋಗುತ್ತಾನೆ.

ಪ್ರೀತು ನಡೆಗೆ ಖುಷಿ ವ್ಯಕ್ತಪಡಿಸಿದ ಆದಿ

ಪ್ರೀತು ನಡೆಗೆ ಖುಷಿ ವ್ಯಕ್ತಪಡಿಸಿದ ಆದಿ

ಇತ್ತ ಆದಿ ಬಂದು ಅಮ್ಮನ ಪಾದ ಮುಟ್ಟಿ ಆಶಿರ್ವಾದ ಮಾಡಮ್ಮ ಅಂದಾಗ ಅಖಿಲಾಂಡೇಶ್ವರಿ ಆಫೀಸಿಗೆ ಹೋಗುವವರು ಹೋಗಿಯಾಯಿತು ಎಂದು ಹೇಳಿದಾಗ ಆದಿಗೆ ಯಾರೆಂದು ತಿಳಿಯದೇ ಶಾಕ್ ಆಯಿತು. ಪ್ರೀತು ಹೋದ ಎಂದು ತಿಳಿದು ಬಹಳ ಖುಷಿನೂ ಪಟ್ಟ. ಇದನ್ನೆಲ್ಲ ನೋಡುತ್ತಿದ್ದ ಪಾರ್ವತಿಗೆ ನನ್ನಿಂದಲೇ ಆದಿಗೆ ಹೀಗಾಯಿತಲ್ಲ ಎಂದು ಮರುಕ ಕೂಡ ಆಗುತ್ತದೆ. ಪಾರುಗೆ ಜನನಿ ವರ್ತನೆಯಿಂದ ಬೇಸರ ಮೂಡಿದೆ. ಜನನಿಗೆ ತಾನು ಕೊಟ್ಟ ಕಾಫಿಯನ್ನು ಯಾರು ತೆಗೆದುಕೊಳ್ಳದೇ ಪಾರ್ವತಿ ಕೊಟ್ಟ ಕಾಫಿಯನ್ನು ಎಲ್ಲರೂ ಖುಷಿಪಟ್ಟು ಸೇವಿಸಿದರು ಎಂಬ ಹುಟ್ಟೆ ಉರಿ ಬೇರೆ ಸೇರಿಕೊಂಡಿದೆ.

ಜನನಿಯ ಸೊಕ್ಕಿನ ಮಾತಿಗೆ ಪಾರು ಬೇಸರ

ಜನನಿಯ ಸೊಕ್ಕಿನ ಮಾತಿಗೆ ಪಾರು ಬೇಸರ

ಪಾರು ಬಂದು ಜನನಿಯ ಬಳಿ ಕಾಫಿ ತೆಗೆದುಕೋ ಜನನಿ ಎಂದು ಹೇಳಿದಾಗ ಜನನಿ ನನಗೆ ಬೇಡ ಎಂದು ಹೇಳುತ್ತಾಳೆ ಆದರೆ ಪಾರು ಕಾಫಿ ತೆಗೆದುಕೊಂಡರೆ ಮೈಂಡ್ ಫ್ರೆಶ್ ಆಗುತ್ತದೆ ತಗೋ ಜನನಿ ಎಂದು ಹೇಳುತ್ತಾಳೆ ಆದರೆ ಜನನಿ ಮಾತ್ರ ಕುಪಿತಗೊಂಡು ನನಗೆ ಕಾಫಿ ಬೇಡ, ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಲು ನನ್ನ ಗಂಡ ಇದ್ದಾರೆ ಬೇರೆ ಯಾರು ಆ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಹೇಳುತ್ತಾಳೆ. ಈ ಮಾತಿನಿಂದ ಪಾರ್ವತಿಗೆ ಬಹಳ ಬೇಸರವಾಗುತ್ತದೆ. ಬಳಿಕ ಅಲ್ಲಿಂದ ಪಾರು ತೆರಳುತ್ತಾಳೆ. ಇದನ್ನೆಲ್ಲ ಗಮನಿಸಿದ ಯಾಮಿನಿಗೆ ಮನದಲ್ಲಿ ಬಹಳ ಖುಷಿಯಾಗುತ್ತಾಳೆ.

ಜನನಿ ಮಾತಿಗೆ ಖುಷಿಗೊಂಡ ಯಾಮಿನಿ

ಜನನಿ ಮಾತಿಗೆ ಖುಷಿಗೊಂಡ ಯಾಮಿನಿ

ಜನನಿ ಬಳಿ ಬಂದು ನಿನ್ನ ಮಾತಿನಿಂದ ನನಗೆ ಬಹಳ ಖುಷಿಯಾಯಿತು. ಪಾರ್ವತಿಯ ದರ್ಪದ ಮಾತುಗಳಿಗೆ ಕಡಿವಾಣ ಹಾಕಿದೆ ಎಂದೆಲ್ಲ ಹೇಳುತ್ತಾಳೆ. ಬಳಿಕ ಯಾಮಿನಿ ಪ್ರೀತು ಬಗ್ಗೆ ನಿನಗೆ ಏನು ಅನ್ನಿಸುತ್ತದೆ ಎಂದು ಕೇಳುತ್ತಾಳೆ ಅದಕ್ಕೆ ಜನನಿ, ಅವನು ಕೂಡ ಆದಿ ಬಾವನ ಹಾಗೆ ಆಫೀಸಿಗೆ ಹೊಗಬೇಕೆಂದು ನನ್ನ ಆಸೆ, ಆದರೆ ನನ್ನ ಜೊತೆನೆ ಅವರು ಇರುತ್ತಾರೆ ಅದು ಖುಷಿ ಆದರೆ ಅವನು ಆಫೀಸಿಗೆ ಹೋದರೆ ಅವನಿಗೆ ಗೌರವ ಸಿಗುತ್ತದೆ ಎಂದು ನನ್ನ ಆಸೆ, ಆದರೆ ಪ್ರೀತುಗೆ ಆಫೀಸಿಗೆ ಹೋಗಲು ಕೊಂಚವೂ ಇಷ್ಟ ಇಲ್ಲ ಎಂದು ಹೇಳುತ್ತಾಳೆ ಅದಕ್ಕೆ ಯಾಮಿನಿ ಫೋಟೋವನ್ನು ತೋರಿಸುತ್ತಾಳೆ.

ಪ್ರೀತು ಆಫೀಸಿನಲ್ಲಿರುವ ಫೋಟೋ ತೋರಿಸಿದ ಯಾಮಿನಿ

ಪ್ರೀತು ಆಫೀಸಿನಲ್ಲಿರುವ ಫೋಟೋ ತೋರಿಸಿದ ಯಾಮಿನಿ

ಪ್ರೀತು ಆಫೀಸಿನಲ್ಲಿ ಇರುವ ಫೋಟೋವನ್ನು ನೋಡಿದ ಜನನಿಗೆ ಬಹಳ ಖುಷಿಯಾಗುತ್ತದೆ. ಇದು ನಿಜವ ಚಿಕ್ಕತ್ತೆ ಎಂದೆಲ್ಲ ಹೇಳಿ ಖುಷಿ ಪಡುತ್ತಾಳೆ. ಆಫೀಸಿನಲ್ಲಿ ಪ್ರೀತುವನ್ನು ನೋಡಿದ ಅಮ್ಮ ಅಖಿಲಾಂಡೇಶ್ವರಿಗೆ ಬಹಳ ಖುಷಿಯಾಗುತ್ತದೆ. ಪ್ರೀತು ಆಫೀಸಿನಲ್ಲಿ ಬಹಳ ಚೆನ್ನಾಗಿ ಮಾತನಾಡಿದ್ಯಂತೆ ಬ್ಯುಸಿನೆಸ್ ನಮ್ಮ ಪಾಲಾಯಿತಂತೆ ಎಂದೆಲ್ಲ ಹೇಳಿ ಖುಷಿ ಪಡುತ್ತಾಳೆ. ಆದರೆ ಪ್ರೀತುಗೆ ಖುಷಿಯಾದರು ಅಣ್ಣನ ಜಾಗವನ್ನು ನಾನು ತುಂಬಲಸಾಧ್ಯ ಎಂಬ ಭಾವನೆಯೂ ಮೂಡಿದೆ. ಬಳಿಕ ಅಖಿಲಾಂಡೇಶ್ವರಿ ಒಬ್ಬರನ್ನೇ ನಂಬಿದರೇ ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ವ್ಯವಸ್ಥೆ ಬೇಕು ಎಂದು ಹೇಳಿದಾಗ ಆದಿಗೆ ಸ್ವಲ್ಪ ಬೇಸರವಾದರೂ, ಪಾರ್ವತಿಗೆ ಅವರ ಮಾತಿನ ಅರ್ಥ ತಿಳಿಯದೇ ಮಂಕಾಗುತ್ತಾಳೆ.

More from Filmibeat

English summary
Zee Kannada Paaru Serial June 20th Episode Written Update. Paaru is an Kannada language television serial. Hear is more details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X