India
  For Quick Alerts
  ALLOW NOTIFICATIONS  
  For Daily Alerts

  ಅಖಿಲಾಂಡೇಶ್ವರಿಯನ್ನು ಆಟ ಆಡಿಸಲು ಬಂದ ಅರುಂಧತಿ: ಯಾರೀಕೆ?

  By ಪೂರ್ವ
  |

  ಪಾರು ಧಾರವಾಹಿ ಇದೀಗ ಒಂದಲ್ಲ ಒಂದು ಟ್ವಿಸ್ಟ್ ಮೂಲಕ ಜನರ ಕುತೂಹಲ ಗಳಿಸಿಕೊಂಡಿದೆ. ಆದಿ ಮತ್ತು ಪಾರು ದೇವಸ್ಥಾನಕ್ಕೆ ತೆರಳುತ್ತಾರೆ. ಎಲ್ಲ ಕೆಲಸವೂ ನಿರ್ವಿಘ್ನವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ದೇವರ ಆಶೀರ್ವಾದ ಇದ್ದರೆ ಇದೆಲ್ಲ ಸಾಧ್ಯ ಎಂದುಕೊಂಡು ದೇವರ ದರ್ಶನಕ್ಕೆ ಹೋಗುತ್ತಾರೆ.

  ಈ ಸಂದರ್ಭವನ್ನೆ ಕಾಯುತ್ತಿದ್ದ ರಾಣಾ ಮತ್ತು ಸಂಗಡಿಗರು ಏನೋ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಆದಿ ಪಾರುವನ್ನು ಬಿಟ್ಟು ಆಫೀಸಿನಲ್ಲಿ ನಡೆಯಲಿರುವ ಮುಖ್ಯವಾದ ಮೀಟಿಂಗ್ ನಲ್ಲಿ ಭಾಗವಹಿಸಲು ತೆರಳಬೇಕಾದರೆ ಯಾರದ್ದೋ ಒಬ್ಬರ ಕರೆ ಬರುತ್ತದೆ.

  ನಿಮ್ಮ ಹೆಂಡತಿ ಪಾರು ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಇದ್ದು ಬರುತ್ತೇನೆ ಎಂದು ಹೇಳಿದರಲ್ಲ ಅವರು ಅಲ್ಲಿಯೇ ಇದ್ದಾರಾ ಎಂದು ನೋಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಆದಿ ಏನಪ್ಪ ಈ ಥರ ಮಾತನಾಡುತ್ತಿದ್ದಾರೆ ಯಾರಿರಬಹುದು ಎಂದು ಕೇಳಿದಾಗ ಕಾಲ್ ಕಟ್ ಆಗುತ್ತದೆ. ಪಾರುಗೆ ಏನೋ ತೊಂದರೆ ಆಗಿದೆ ಎಂದುಕೊಂಡ ಆದಿ ಕಾರನ್ನು ದೇವಸ್ಥಾನಕ್ಕೆ ತಿರುಗಿಸುತ್ತಾನೆ. ಅಲ್ಲಿ ಪಾರ್ವತಿಯನ್ನು ಎಷ್ಟು ಹುಡುಕಿದರೂ ಪಾರು ಮಾತ್ರ ಆದಿಗೇ ಸಿಗುವುದಿಲ್ಲ. ಇದನ್ನು ಕಂಡ ಆದಿಗೆ ದಿಕ್ಕೇ ತೋಚದಂತಾಗಿದೆ.

  ಅರುಂಧತಿ ಬಿಡುಗಡೆ ಸುದ್ದಿ ತಿಳಿದ ಅಖಿಲಾ

  ಅರುಂಧತಿ ಬಿಡುಗಡೆ ಸುದ್ದಿ ತಿಳಿದ ಅಖಿಲಾ

  ಇತ್ತ ಅಖಿಲಾಂಡೇಶ್ವರಿ ಪೇಪರ್ ಓದುತ್ತಾ ಕುಳಿತಿರಬೇಕಾದರೆ ಒಂದು ಕರೆ ಬರುತ್ತದೆ. ಆ ಕರೆ ಸ್ವೀಕರಿಸಿದ ಬಳಿಕ ಅಖಿಲಾಂಡೇಶ್ವರಿಗೆ ಫುಲ್ ಶಾಕ್ ಆಗುತ್ತದೆ. ಏನು ಅರುಂಧತಿ ಜೈಲಿನಿಂದ ಬಿಡುಗಡೆಯಾಗಿದ್ದಾಳಾ ಎಂದು ಜೋರಾಗಿಯೇ ಹೇಳುತ್ತಾಳೆ ಇದನ್ನು ಕದ್ದು ಯಾಮಿನಿ ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ಯಾಮಿನಿಯ ಕುತ್ತಿಗೆಯಲ್ಲಿ ಸಿಸಿ ಕ್ಯಾಮರಾ ಇರುವುದರಿಂದ ಈ ಮಾಹಿತಿ ಅರುಂಧತಿಗೆ ತಿಳಿಯುತ್ತದೆ. ಇತ್ತ ಬೆದರಿದ ಅಖಿಲಾಂಡೇಶ್ವರಿ ಅರುಂಧತಿಗೆ ಬೇಲ್ ನೀಡಿದವರು ಯಾರು ಎಂದು ಕೇಳುತ್ತಾಳೆ.

  ಬೆದರಿ ಕಂಗಾಲಾದ ಅಖಿಲಾಂಡೇಶ್ವರಿ

  ಬೆದರಿ ಕಂಗಾಲಾದ ಅಖಿಲಾಂಡೇಶ್ವರಿ

  ಅತ್ತ ಕಡೆಯಿಂದ ಅರುಂಧತಿಯ ಅಣ್ಣ ರಾಣಾ ಎಂದು ಹೇಳಿದಾಗ ಅಖಿಲಾಂಡೇಶ್ವರಿಗೆ ಇನ್ನೂ ಭಯ ಹೆಚ್ಚಾಗುತ್ತದೆ. ಬಳಿಕ ಕರೆ ಕಟ್ ಮಾಡಿ ಶಾಕ್ ನಿಂದ ಹೊರಬರಲಾರದೆ ನಿಂತುಕೊಂಡೆ ಇರುತ್ತಾಳೆ. ಈ ವೇಳೆ ಕರೆ ಮಾಡಿದ ಅರುಂಧತಿ, ನಾನು ಅರುಂಧತಿ ಎಂದು ಹೇಳುತ್ತಾಳೆ. ಕೊನೆಗೂ ನನಗೆ ಬೇಲ್ ಸಿಕ್ಕಿರುವ ವಿಚಾರ ತಿಳಿಯಿತಾ ಅಖಿಲಾಂಡೇಶ್ವರಿ. ಅಲ್ಲಾ ನನ್ನ ಧ್ವನಿ ಕೇಳಿಸಿಕೊಂಡ ಮೇಲೆ. ನಿನಗೆ ಮಾತೇ ಬರುತ್ತಿಲ್ಲ. ಶಭಾಶ್ ಅಲ್ಲಿಗೆ ಈ ಅರುಂಧತಿನ ಕಂಡ್ರೆ ಅಖಿಲಾಂಡೇಶ್ವರಿಗೆ ಭಯ ಇದೆಂತ ಆಯ್ತು. ಹಾ ನಿನ್ನ ಹೆಸರನ್ನು ಸ್ವಲ್ಪ ಶಾಟ್ ಮಾಡಿಕೊಳ್ಳುತ್ತಿಯಾ ಇಂತಹ ಸಮಯದಲ್ಲಿ ಅಖಿಲಾಂಡೇಶ್ವರಿ ಎಂದು ಕರೆಯುವುದಕ್ಕೆ ಕಷ್ಟವಾಗುತ್ತಿದೆ'' ಎನ್ನುತ್ತಾಳೆ.

  ಹೆದರುವುದಿಲ್ಲ ಎಂದ ಅಖಿಲಾಂಡೇಶ್ವರಿ

  ಹೆದರುವುದಿಲ್ಲ ಎಂದ ಅಖಿಲಾಂಡೇಶ್ವರಿ

  ಸ್ವೀಟ್ ಆಗಿ ಅಖಿಲ ಎಂದು ಕರೆಯುತ್ತೇನೆ ಏನು ಹೇಳುತ್ತಿಯಾ? ನನ್ನ ಮೇಲಿನ ಈ ಭಯ ಸಾಯೋವರೆಗು ಇರಬೇಕು ಅದಕ್ಕೆ ಅಖಿಲಾಂಡೇಶ್ವರಿ, ಅರುಂಧತಿ ಎಂದು ಜೋರಾಗಿ ಕರೆಯುತ್ತಾಳೆ. ಬಳಿಕ ಅಖಿಲಾಂಡೇಶ್ವರಿ, ಹೆದರಿಕೊಳ್ಳುವ ಮಾತೇ ಇಲ್ಲ. ನಿನ್ನಂತಹ ನೂರಾರು ಕ್ರಿಮಿ ಕೀಟಗಳು ಬಂದ್ರು ಏನು ಮಾಡುವುದಕ್ಕೆ ಆಗುವುದಿಲ್ಲ. ಅಂಥದ್ರಲ್ಲಿ ನಿನ್ನ ನೋಡಿ ನಾನು ಹೆದರಿಕೊಳ್ಳುವುದಾ ನೆವರ್, ಅರುಂಧತಿ ಜೈಲಿನ ನಾಲಕ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ನೀನು ಅದು ಹೇಗೆ ಹೊರಗೆ ಬಂದೆ ಎಂದು ಆಶ್ಚರ್ಯ ಆಗಿತ್ತು ಅದಕ್ಕೆ ಸುಮ್ಮನಿದ್ದೆ'' ಎನ್ನುತ್ತಾರೆ.

  ಬುದ್ಧಿ ಕಲಿಸುತ್ತೇನೆ ಎಂದ ಅರುಂಧತಿ

  ಬುದ್ಧಿ ಕಲಿಸುತ್ತೇನೆ ಎಂದ ಅರುಂಧತಿ

  ಮಗಳನ್ನು ಕಳೆದುಕೊಂಡರು ನಿನಗೆ ಬುದ್ದಿ ಬಂದಿಲ್ಲ ಅಲ್ವಾ ಎಂದು ಹೇಳಿದಾಗ ಕೆಂಡಾಮಂಡಲವಾದ ಅರುಂಧತಿ ಹೇಳುತ್ತಾಳೆ ದಡ್ಡಿ ನೀನು ಬುದ್ದಿ ಕಲಿಯಬೇಕಾದವಳು ನಾನಲ್ಲ. ಇವತ್ತಿನಿಂದ ನೀನು ಇಡುವ ಒಂದೊಂದು ಹೆಜ್ಜೆ ಕೂಡ ಸೋಲಿನ ಸರಪಳಿಯಾಗುತ್ತದೆ. ನೀನು ಗೆದ್ದೆ ಎಂದು ಬಿಗುತ್ತಿದ್ದೆ ಅಲ್ವಾ ಆಗಿನ ಆಟ ನಕಲಿ ಆಟ ಈಗ ಆಡುತ್ತಿರುವ ಆಟ ಅಸಲಿಯಾಟ. ಇನ್ನೂ ಮುಂದೆ ನೀನು ಅದು ಹೇಗೆ ನೆಮ್ಮದಿಯಿಂದ ಇರುತ್ತಿಯಾ ನೋಡುತ್ತೇನೆ ಎಂದು ಹೇಳುತ್ತಾಳೆ.

  English summary
  Zee Kannada Paaru Serial June 24th Episode Written Update. Paaru is an Kannada language telivission serial. Hear is more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X