India
  For Quick Alerts
  ALLOW NOTIFICATIONS  
  For Daily Alerts

  ರಾಣಾನ ಕುತಂತ್ರಕ್ಕೆ ಪಾರು ಬಲಿ: ಕಂಗಾಲಾದ ಆದಿ

  By ಪೂರ್ವ
  |

  ಪಾರು ಧಾರವಾಹಿ ದಿನಕ್ಕೊಂದು ಹೊಸ ಹೊಸ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿದೆ. ಇದೀಗ ಪಾರು ಕಾಣೆಯಾಗಿದ್ದಾಳೆ. ಆದಿ ಕಂಗಾಲಾಗಿದ್ದಾನೆ. ಮನೆಯಲ್ಲಿ ಅಖಿಲಾಂಡೆಶ್ವರಿ ಕೂಡ ಭಯದಿಂದ ತತ್ತರಿಸಿ ಹೋಗಿದ್ದಾಳೆ. ಅರುಂಧತಿ, ಅಖಿಲಾಂಡೆಶ್ವರಿ ಮನೆಯ ನೆಮ್ಮದಿ ಕೆಡಿಸಲು ಹುನ್ನಾರ ಮಾಡುತ್ತಲೇ ಇದ್ದಾಳೆ. ಆದರೆ ಇದೀಗ ಮುಗ್ದ ಪಾರು ಅರುಂಧತಿಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

  ರಾಣಾ, ಕುತಂತ್ರದಿಂದ ಆದಿಯನ್ನೂ ದೇವಾಲಯಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಆದಿಗೆ ಕರೆ ಮಾಡಿದ ರಾಣಾ ಪಾರುವನ್ನೂ ನೋಡಬೇಕೆಂದರೆ ನಾನು ಹೇಳುವ ಜಾಗ 15 ನಿಮಿಷದಲ್ಲಿ ಬಂದರೆ ಅವಳು ನಿಮಗೆ ಸಿಗುತ್ತಾಳೆ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ. ಆದಿ ಆತ ಹೇಳಿದ ಕಡೆ ಬರುತ್ತಾನೆ ಬಂದು ನೋಡಿದಾಗ ಆದಿ ಕೊಡಿಸಿದ ಬಳೆ ಮಾತ್ರ ಅಲ್ಲಿತ್ತು. ಪಾರು ಇರದ್ದನ್ನು ಕಂಡು ಕಂಗಾಲಾಗುತ್ತಾನೆ. ಪಾರುವನ್ನು ಏಷ್ಟು ಕರೆದರು ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದರಿಂದ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾನೆ.

  ವೈಭವದ ದಿನಗಳು ಮುಗಿದು ಕಷ್ಟದ ದಿನಗಳಲ್ಲಿ ಪಾರು ಪಯಣ: ಮುಂದೇನು?ವೈಭವದ ದಿನಗಳು ಮುಗಿದು ಕಷ್ಟದ ದಿನಗಳಲ್ಲಿ ಪಾರು ಪಯಣ: ಮುಂದೇನು?

  ಇತ್ತ ಅಖಿಲಾಂಡೆಶ್ವರಿಗೆ ಭಯ ಹೆಚ್ಚಾಗಿದೆ. ಅರಂಧತಿಗೆ ತನ್ನ ಮನೆಯಲ್ಲಿ ಆಗುತ್ತಿರುವ ವಿಚಾರ ಎಲ್ಲಾ ತಿಳಿಯುತ್ತಿದೆ ಅದು ಹೇಗೆ? ಅವಳೆನಾದರು ನಮ್ಮ ಮನೆಯಲ್ಲಿ ನಡೆಯುತ್ತಿರುವುದನ್ನು ಸಿಸಿ ಕ್ಯಾಮರಾ ಬಳಸಿ ನೋಡುತ್ತಿರಬಹುದೇ ಎಂದೆಲ್ಲಾ ಅನುಮಾನಗಳು ಮೂಡುತ್ತದೆ ಆದರೂ ಮನದಲ್ಲಿ ಯೋಚಿಸುತ್ತಾ ಕೆಲಸಗಾರರನ್ನು ಬರ ಹೇಳುತ್ತಾಳೆ. ಬಳಿಕ ಅಖಿಲಾಂಡೆಶ್ವರಿ ಹೇಳುತ್ತಾಳೆ ಮನೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರ ಹೊರಗಿನವರಿಗೆ ತಿಳಿಯುತ್ತಿದೆ. ಅದು ಹೇಗೆ ಎಂದು ಕೇಳುತ್ತಾಳೆ ಬಳಿಕ ನೀವೇನಾದರೂ ಎಂದಾಗ ಇಲ್ಲ ಮೇಡಂ ನಾವು ಆ ಥರ ಯಾರಿಗೂ ಹೇಳಿಲ್ಲ. ನನ್ನ ಗಂಡನಿಗೂ ಇಲ್ಲಿ ನಡೆಯೋ ವಿಚಾರ ಹೇಳೋದಿಲ್ಲ ಎಂದು ಹೇಳುತ್ತಾಳೆ ಕೆಲಸದಾಕೆ.

  ಇಡೀ ಮನೆ ಜಾಲಾಡಿದ ಕೆಲಸದವರು

  ಇಡೀ ಮನೆ ಜಾಲಾಡಿದ ಕೆಲಸದವರು

  ಕೆಲಸದವರ ಮಾತು ನಂಬಿದ ಅಖಿಲಾಂಡೆಶ್ವರಿ ಇಡೀ ಮನೆ ಜಾಲಾಡುವಂತೆ ಸೂಚನೆ ನೀಡುತ್ತಾಳೆ. ಅಖಿಲಾಂಡೆಶ್ವರಿ ಮಾತಿಗೆ ಮನೆಯ ಕೆಲಸದವರು ಒಂದು ರೂಮ್ ಬಿಡದೆ ಎಲ್ಲವನ್ನೂ ಚೆಕ್ ಮಾಡುತ್ತಾರೆ ಆದರೆ ಅಂಥದ್ದೇನೂ ಅಲ್ಲಿ ಸಿಗದ ಕಾರಣ ಅಖಿಲಾಂಡೆಶ್ವರಿ ಬಳಿ ಬರುತ್ತಾರೆ. ಸಿಸಿ ಕ್ಯಾಮರಾ ಕಂಡು ಬಂದಿಲ್ಲ ಮೇಡಂ ಎಲ್ಲಾ ಕಡೆ ಹುಡುಕಿದೆವು ನಮಗೆ ಸಿಗಲಿಲ್ಲ ಎಂದಾಗ ಸ್ವಲ್ಪ ತುಲು ನಿರಾಳ ಆಗುತ್ತಾಳೆ. ಬಳಿಕ ಕೆಲಸದವರನ್ನೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೇಳುತ್ತಾಳೆ.

  ಯೋಚಿಸುತ್ತಿರುವ ಅಖಿಲಾಂಡೇಶ್ವರಿ

  ಯೋಚಿಸುತ್ತಿರುವ ಅಖಿಲಾಂಡೇಶ್ವರಿ

  ಇನ್ನೂ ಇಷ್ಟೆಲ್ಲ ನಡೆದರೂ ಯಾಮಿನಿ ಗೊರಕೆ ಹಾಕಿ ನಿದ್ದೆ ಮಾಡುತ್ತಲೇ ಇದ್ದಳು. ಇತ್ತ ಅಖಿಲಾಂಡೆಶ್ವರಿ ಮನದಲ್ಲಿಯೇ ಯೋಚಿಸುತ್ತಾ, ಇಲ್ಲಿ ಸಿಸಿ ಕ್ಯಾಮರ ಇಲ್ಲ ಆದರೂ ಇಲ್ಲಿ ನಡೆಯೋ ವಿಚಾರ ಅರುಂಧತಿಗೆ ಹೇಗೆ ಗೊತ್ತಾಗುತ್ತಿದೆ. ನನಗೆ ಗೊತ್ತಾದ ವಿಚಾರ ಆಕೆಗೆ ಹೇಗೆ ಗೊತ್ತಾಯಿತು. ಬೇರೆಯವರು ಆಕೆಗೆ ಹೇಳಿರಬಹುದಲ್ವಾ ನಾನೇಕೆ ಆ ಬಗ್ಗೆ ಯೋಚಿಸುತ್ತಿಲ್ಲ ಎಂದುಕೊಳ್ಳುತ್ತಾಳೆ.

  ಆಫೀಸಿಗೆ ಬರುವ ಪ್ರೀತು

  ಆಫೀಸಿಗೆ ಬರುವ ಪ್ರೀತು

  ಇತ್ತ ಪ್ರೀತು ಮತ್ತು ಚಿಕ್ಕಪ್ಪ ಆಫೀಸಿಗೆ ಬರುತ್ತಾರೆ ಪ್ರೀತುವನ್ನು ನೋಡಿ ಎಲ್ಲರೂ ಗೌರವ ನೀಡುತ್ತಾರೆ ಇದನ್ನು ಕಂಡ ಪ್ರೀತುಗೆ ಖುಷಿಯಾಗುತ್ತದೆ. ಚಿಕ್ಕಪ್ಪನ ಬಳಿ ಬಂದು ಇದೆಲ್ಲ ನನಗೆ ಇಷ್ಟ ಇಲ್ಲ ಆದರೂ ನಮಸ್ತೆ ಎನ್ನಬೇಕು. ನನ್ನ ಹೆಂಡತಿಯ ಒತ್ತಾಯಕ್ಕೆ ಮಣಿದು ಇಲ್ಲಿಗೆ ಬಂದಿರುವೆ. ಚಿಕ್ಕಪ್ಪ ನನಗೆ ಆಫೀಸಿಗೆ ಬರಲು ಮನಸ್ಸೇ ಇಲ್ಲ ಎಂದು ಹೇಳುತ್ತಾನೆ ಏನು ಮಾಡುವುದು ಮನೆಯಲ್ಲಿ ಇದ್ದರೆ ಹೆಂಡತಿ ಬೇಸರಿಸಿಕೊಳ್ಳುತ್ತಾಳೆ ಅದಕ್ಕೆ ಬಂದೆ ಎಂದು ಹೇಳುತ್ತಾನೆ .ಈ ಆಫೀಸ್ ವ್ಯವಹಾರ ಎಲ್ಲಾ ಅಣ್ಣನೇ ನೋಡಿಕೊಳ್ಳುವುದೇ ಒಳ್ಳೇದು, ನಾನು ಯಾವತ್ತೂ ಫ್ರೀಯಾಗಿರಬೇಕು ಎಂದು ಹೇಳುತ್ತಿದ್ದಾಗ ಪ್ರೀತುನ ಚಿಕ್ಕಪ್ಪ ನಗುತ್ತಿರುತ್ತಾರೆ.

  ಜನನಿಯನ್ನು ಹೊಗಳುವ ಅಖಿಲಾಂಡೇಶ್ವರಿ

  ಜನನಿಯನ್ನು ಹೊಗಳುವ ಅಖಿಲಾಂಡೇಶ್ವರಿ

  ಇನ್ನೂ ಅಖಿಲ ಬಳಿ ಬಂದ ಜನನಿಯನ್ನು ಕಂಡು ಬಾ ಜನನಿ ಎಂದು ಹೇಳುತ್ತಾಳೆ. ಜನನಿ ಹೇಳುತ್ತಾಳೆ ಮೊನ್ನೆ ಮಾಡಿದ ಕಾಫಿ ಅಷ್ಟಾಗಿ ಚೆನ್ನಾಗಿರಲಿಲ್ಲ. ಇವತ್ತು ಹೇಗೆ ಮಾಡಿದ್ದೇನೆ ನೋಡಿ ಎಂದು ಹೇಳುತ್ತಾಳೆ. ಅದಕ್ಕೆ ಅಖಿಲಾಂಡೆಶ್ವರಿ ಹೇಳುತ್ತಾಳೆ, ಮೊದಲ ಸಾರಿ ಅಡಿಗೆ ಮಾಡುವಾಗ ತಪ್ಪುಗಳಾಗುತ್ತದೆ. ಅದನ್ನು ತಿದ್ದಿ ನಡೆಯಬೇಕು. ಅಷ್ಟಕ್ಕೂ ನೀನು ಸಿಹಿ ಅಡಿಗೆಯನ್ನು ಉತ್ತಮವಾಗಿಯೇ ಮಾಡುತ್ತೀಯಾ ಎಂದು ಹೇಳಿದಳು ಇದನ್ನು ಕೇಳಿದ ಜನನಿಗೆ ಬಹಳ ಖುಷಿಯಾಗುತ್ತದೆ. ಬಳಿಕ ಕಾಫಿನು ಸೂಪರ್ ಎಂದು ಹೋಗುತ್ತಾಳೆ.

  English summary
  Zee Kannada Paaru Serial June 27th Episode Written Update. Paaru is an Kannada language television serial. Hear is more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X