ಹಠಾತ್ತನೆ ಕಾಣೆಯಾದ ಪಾರು: ಆದಿಗೆ ಕಾದಿವೆ ಕಷ್ಟಗಳ ಸರಮಾಲೆ!

By ಪೂರ್ವ

'ಪಾರು' ಧಾರವಾಹಿಯಲ್ಲಿ ರಾಣಾನ ಕೈವಾಡದಿಂದ ಇದೀಗ ಪಾರು ಕಾಣೆಯಾಗಿದ್ದಾಳೆ. ಆಫೀಸಿನಲ್ಲಿ ಧನ್ವಂತರಿ ಸೋಪ್ ನ ಬಗ್ಗೆ ದೊಡ್ಡ ಮಟ್ಟದ ಮೀಟಿಂಗ್ ಕೂಡ ಆಯೋಜಿಸಲಾಗಿದೆ. ಈ ಮೀಟಿಂಗ್ ಗೆ ಆದಿ ಹೋಗಬಾರದು ಎಂದು ಕಿಡಿಗೇಡಿಗಳು ಪಾರುವನ್ನು ಕಿಡ್ನಾಪ್ ಮಾಡಿದ್ದಾರೆ. ಆದಿಗೆ ಆಫೀಸ್ ಮೀಟಿಂಗ್ ಇದೆ ಆದರೆ ಇನ್ನೊಂದು ಕಡೆ ಪಾರು ಕಾಣದೆ ಇರೋದು ಆದಿಯನ್ನೂ ಕಂಗಾಲು ಮಾಡಿದೆ.

ಪ್ರೀತು ಜನನಿಗೆ ಆಫೀಸಿನಿಂದ ಕರೆ ಮಾಡಿ ಜನನಿ ಅಣ್ಣ ಆಫೀಸ್ ಗೆ ಬಂದಿಲ್ಲ. ದೇವಸ್ಥಾನ ಕ್ಕೆ ಅತ್ತಿಗೆಯನ್ನು ಕರೆದುಕೊಂಡು ಹೋಗಿ ಬಿಟ್ಟು ಬರುತ್ತೇನೆ ಎಂದ ಆದರೆ ಅಣ್ಣ ಇನ್ನೂ ಬಂದಿಲ್ಲ ಎಂದಾಗ ಜನನಿ ಜೋರಾಗಿ ಏನೂ ಬಾವ ಇನ್ನೂ ಆಫೀಸ್ ಗೆ ಬಂದಿಲ್ವಾ ಎಂದು ಹೇಳಿದ್ದೆ ತಡ ಅಖಿಲಾಂಡೆಶ್ವರಿ ಜನನಿ ಕೈ ಯಿಂದ ಫೋನ್ ಕಸಿದುಕೊಂಡರೂ, ಬಳಿಕ ಹೇಳಿದ ಪ್ರೀತು ಯಾವುದೇ ಕಾರಣಕ್ಕೂ ಅಣ್ಣ ಆಫೀಸ್ ಗೆ ಬಾರದೆ ಇರುವುದನ್ನು ಅಮ್ಮನ ಬಳಿ ಹೇಳಬೇಡ ಮುಂಚೆನೇ ಅಮ್ಮ ಅಣ್ಣನ ಬಗ್ಗೆ ತುಂಬಾ ಕೋಪ ಮಾಡಿಕೊಂಡಿದ್ದಾರೆ. ಇನ್ನೂ ಇದನ್ನು ಅವರ ಬಳಿ ಹೇಳಿ ಇನ್ನೂ ಕೋಪ ಭರಿಸಬೇಡ ಎಂದು ಹೇಳಿದಾಗ ಅದನ್ನು ಕೇಳಿಸಿಕೊಂಡ ಅಖಿಲಾಂಡೇಶ್ವರಿ ಕರೆಯನ್ನು ಕಟ್ ಮಾಡುತ್ತಾರೆ.

ಬಳಿಕ ಪ್ರೀತು ಪುನಃ ಕರೆ ಮಾಡಿದಾಗ ಜನನಿ ರಿಸೀವ್ ಮಾಡಿ ನೀನು ಮಾತನಾಡಿದ್ದು ಅತ್ತೆಯ ಬಳಿಯಲ್ಲಿ ..ನಾನು ಮಾತನಾಡುತ್ತಿರಬೇಕಾದರೆ ಅವರೇ ಮೊಬೈಲನ್ನು ಕಸಿದುಕೊಂಡರು. ಎಂದು ಹೇಳಿದಾಗ, ಛೇ ಅಮ್ಮನಿಗೆ ತಿಳಿಯಿತಾ ಸರಿ ನೀನು ಅತ್ತಿಗೆಗೆ ಕಾಲ್ ಮಾಡು ನಾನು ಅಣ್ಣನಿಗೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ. ಬಳಿಕ ಜನನಿ ಹಲವು ಬಾರಿ ಕಾಲ್ ಮಾಡಿದರು ಪಾರು ರಿಸೀವ್ ಮಾಡಲಿಲ್ಲ. ಇತ್ತ ಪ್ರೀತು ಕೂಡ ಆದಿಗೆ ಕರೆ ಮಾಡುತ್ತಾನೆ ಆದರೆ ಕಾಲ್ ಪಿಕ್ ಮಾಡುವುದಿಲ್ಲ.

ಅಖಿಲಾಂಡೇಶ್ವರಿ ಕೋಪಕ್ಕೆ ಗುರಿಯಾದ ಆದಿ

ಅಖಿಲಾಂಡೇಶ್ವರಿ ಕೋಪಕ್ಕೆ ಗುರಿಯಾದ ಆದಿ

ಇತ್ತ ಅಖಿಲಾಂಡೆಶ್ವರಿ ಕೂಡ ಕರೆ ಮಾಡುತ್ತಾಳೆ ಆದರೆ ಆದಿಗೆ ಇದರ ಬಗ್ಗೆ ಯಾವುದೇ ಪರಿವೆ ಇಲ್ಲ. ಆದರೆ ಕರೆ ಸ್ವೀಕರಿಸದೆ ಇರುವುದನ್ನು ಕಂಡು ಕುಪಿತಳಾದ ಅಖಿಲಾಂಡೆಶ್ವರಿ, ''ಇನ್ನೂ ಈತನಿಗೆ ಕ್ಷಮೆ ಇಲ್ಲ. ಆಫೀಸ್ ಗಿಂತ ಹೆಂಡತಿಯನ್ನು ಸುತ್ತಾಡಿಸುವುದೆ ಹೆಚ್ಚಾಯಿತು ಇವನಿಗೆ'' ಎಂದುಕೊಂಡು ಕೋಪಗೊಳ್ಳುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಯಾಮಿನಿ, ಇವರಿಬ್ಬರೂ ಕಾಲ್ ತೆಗೆಯುತ್ತಿಲ್ಲ. ಇವರಿಬ್ಬರ ನಡವಳಿಕೆಯಿಂದ ಮನೆಯಲ್ಲಿ ಬಹಳ ತೊಂದರೆಯಾಗುತ್ತಿದೆ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಖಿಲಾಂಡೆಶ್ವರಿಗೆ ಇನ್ನೂ ಕೋಪ ಅತಿಯಾಗುತ್ತದೆ.

ಸಂಕಟದಲ್ಲಿ ಸಿಕ್ಕಿಬಿದ್ದ ಆದಿ

ಸಂಕಟದಲ್ಲಿ ಸಿಕ್ಕಿಬಿದ್ದ ಆದಿ

ಇನ್ನೂ ಇತ್ತ ಆದಿ, ಪಾರುವಿನ ಹುಡುಕಾಟದಲ್ಲಿ ಇದ್ದಾನೆ. ರಾಣಾನ ಆಟಕ್ಕೆ ಆದಿ ಸಿಕ್ಕಿಬಿದ್ದಿದ್ದಾನೆ. ಇನ್ನೂ ಪಾರುವನ್ನು ಹುಡುಕುತ್ತಿದ್ದ ಆದಿಗೆ ಪಾರುವಿಗೆ ಕೊಟ್ಟಿದ್ದ ಕಿವಿಯೋಲೆ ಸಿಗುತ್ತದೆ ಇದನ್ನು ಕಂಡ ಆದಿಗೆ ಇನ್ನೂ ಭಯ ಹೆಚ್ಚಾಗುತ್ತದೆ. ಬಳಿಕ ಕರೆ ಮಾಡಿದ ರಾಣಾ ಯಾರಿಗಾದರೂ ಕರೆ ಮಾಡಿದರೆ ಈಗ ಕಿವಿಯೋಲೆ ಇದೆ. ಕರೆ ಮಾಡಿದರೆ ನಿನ್ನ ಹೆಂಡತಿಯ ಕಿವಿ ನಿನ್ನ ಕೈಯಲ್ಲಿರುತ್ತದೆ ಎಂದು ಹೇಳಿ ನಾನು ಹೇಳಿದ ಜಾಗಕ್ಕೆ ಬಾ ಎಂದು ಹೇಳುತ್ತಾನೆ.

ಕೆಟ್ಟು ಹೋದ ಆದಿ ಕಾರು

ಕೆಟ್ಟು ಹೋದ ಆದಿ ಕಾರು

ಆದಿ ರಾಣಾ ಹೇಳಿದ ಕಡೆಗೆ ಹೊರಡುತ್ತಾನೆ. ಮದ್ಯದಲ್ಲಿ ಕಾರು ಕೆಟ್ಟು ಹೋಗುತ್ತದೆ. ಬಳಿಕ ಅಲ್ಲಿಂದ ಓಡುತ್ತಾ ತೆರಳಿದ ಆದಿಗೆ ಫೋನಿನ ನೆನಪಾಗುತ್ತದೆ. ಬಳಿಕ ಆದಿ ತನ್ನ ಪ್ಯಾಂಟಿನ ಜೇಬಿಗೆ ಕೈ ಹಾಕಿ ಮೋಬೈಲನ್ನು ಹೊರತೆಗೆದು ಕರೆ ಮಾಡುತ್ತಾನೆ ಆದರೆ ಆ ನಂಬರ್ ಚಾಲ್ತಿಯಲ್ಲಿರೋದಿಲ್ಲ. ಇನ್ನೂ ಇಬ್ಬರು ಗೂಂಡಾಗಳು ಬಂದು ಆತನಿಗೆ ಮೊಬೈಲ್ ಕೊಡುತ್ತಾರೆ ಥಾಂಕ್ಸ್ ಸರ್ ಅನ್ನುತ್ತಾರೆ ಆದಿ, ಅದಕ್ಕೆ ಆತ ಅದು ನಿಮ್ಮದೇ ಮೋಬೈಲ್ ಸರ್ ಎನ್ನುತ್ತಾನೆ ನಗುತ್ತಾ.

ಆದಿ ಕೋಪಕ್ಕೆ ನಡುಗುತ್ತಾನಾ ರಾಣಾ

ಆದಿ ಕೋಪಕ್ಕೆ ನಡುಗುತ್ತಾನಾ ರಾಣಾ

ಇನ್ನೂ ಮೊಬೈಲ್‌ಗೆ ಕರೆ ಮಾಡಿದಾತ ಹೇಳುತ್ತಾನೆ, ಆ ಗೂಂಡಾಗಳು ಇಬ್ಬರಿಗೆ ಹೊಡಿ ಆಮೇಲೆ ನಿನ್ನ ಹೆಂಡತಿ ಇರೋ ಕಡೆ ಕರೆದುಕೊಂಡು ಹೋಗುತ್ತೇನೆ ಎಂದ. ಆತ ಹೇಳಿದಕ್ಕೇ ಆದಿ ಸರಿಯಾಗಿ ಗೂಂಡಾಗಳಿಗೆ ಪೆಟ್ಟು ಕೊಡುತ್ತಾನೆ. ಅವರ ಕುತ್ತಿಗೆ ಹಿಡಿದು 'ಎಲ್ಲಿ ಪಾರು' ಎಂದು ಕೇಳುತ್ತಾನೆ. ಸ್ವಲ್ಪ ಮುಂದೆ ಹೋದಾಗ ಆದಿಗೆ ಒಂದು ಡಬ್ಬಿ ಸಿಗುತ್ತದೆ ಅದರಲ್ಲಿ ಪಾರು ಬಳೆಗಳು ಸಿಗುತ್ತವೆ. ಆದರೆ ಪಾರು ಮಾತ್ರ ಸಿಗದೇ ಇರುವುದನ್ನು ಕಂಡ ಆದಿಗೆ ಬೇಸರವಾಗುತ್ತದೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Zee Kannada Paaru Serial June 29th Episode Written Update. Paaru is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X