For Quick Alerts
  ALLOW NOTIFICATIONS  
  For Daily Alerts

  ಪಾರು ಧಾರಾವಾಹಿ: ಯಾಮಿನಿ ಕುತಂತ್ರಕ್ಕೆ ಬಲಿಯಾಗುತ್ತಾಳಾ ಜನನಿ

  By ಪೂರ್ವ
  |

  ಕಿರುತೆರೆಯಲ್ಲಿ ಮೂಡಿಬರುತ್ತಿರುವ ಉತ್ತಮ ಧಾರವಾಹಿಗಳಲ್ಲಿ ಪಾರು ಸಹ ಒಂದು. ಪಾರು ಧಾರವಾಹಿಯಲ್ಲಿ ಪಾರ್ವತಿಯ ಅಭಿನಯ ಉತ್ತಮವಾಗಿ ಮೂಡಿಬರುತ್ತಿದೆ.ಇದೀಗ ಜನನಿ ಪಾತ್ರದ ವರ್ತನೆ ನಿಧಾನಕ್ಕೆ ಬದಲಾಗುತ್ತಿದೆ. ಜನನಿ ಮತ್ತು ಪಾರು ಅಕ್ಕ ತಂಗಿಯ ಹಾಗೆ ಸಹಬಾಳ್ವೆಯಿಂದ ಇರಲಿ ಅವರಿಬ್ಬರನ್ನು ಬೇರೆ ಮಾಡುವುದು ಬೇಡ ವಿಲನ್ ಪಾತ್ರವನ್ನು ಜನನಿಗೆ ಕೊಡಬೇಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುವಂತಾಗಿದೆ.

  ಧಾರಾವಾಹಿಯಲ್ಲಿ ಈಗ ಪಾರು ವಿರುದ್ಧ ಜನನಿ ಸಿಡಿದುನಿಂತಿದ್ದಾಳೆ, ಯಾಮಿನಿಯ ಕುತಂತ್ರದಿಂದ ಜನನಿಯ ಮನದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಯಾಮಿನಿ ಇದಕ್ಕೆ ಕಾಯುತ್ತಿದ್ದು, ಇದೀಗ ಅಕ್ಕ ತಂಗಿಯ ಮಧ್ಯೆ ತಂದಿಡುವ ಕೆಲಸವನ್ನು ಮಾಡುತ್ತಿದ್ದಾಳೆ. ಆದರೆ ಇದರ ಅರಿವು ಜನನಿಗಾಗಲಿ, ಪಾರುಗಾಗಲಿ ಇಲ್ಲ.

  ತಂದೆಗೆ ಮನೆ ಖರೀದಿಸಲು ಹೊರಟ ಆದಿ-ಪಾರು: ಅಡ್ಡಿಯಾಗುತ್ತಾಳಾ ಜನನಿ ತಂದೆಗೆ ಮನೆ ಖರೀದಿಸಲು ಹೊರಟ ಆದಿ-ಪಾರು: ಅಡ್ಡಿಯಾಗುತ್ತಾಳಾ ಜನನಿ

  ಇನ್ನೂ ಅಧಿಕಾರದ ಆಸೆಗೋಸ್ಕರ ಯಾಮಿನಿ ಏನು ಮಾಡಲು ಸಿದ್ಧಳಿದ್ದಾಳೆ, ಪಾರುವನ್ನು ಅಖಿಲಾಂಡೆಶ್ವರಿ ಸ್ಥಾನದಲ್ಲಿ ಕೂರಿಸಿದರೆ ಜನನಿಗೆ ಮನೆಯಲ್ಲಿ ಏನು ಸ್ಥಾನ ಎನ್ನುವುದರ ಬಗ್ಗೆ ಯಾಮಿನಿ ಈಗಾಗಲೇ ಜನನಿ ತಲೆಗೆ ತುಂಬಿದ್ದಾಳೆ.

  ಇದೀಗ ಹನುಮಂತು ಮನೆಗೆ ಪಾರು ಹಾಗೆ ಆದಿ ಬಂದಿದ್ದಾರೆ, ಹನುಮಂತುಗೆ 60 ಲಕ್ಷ ಹಣ ನೀಡಲು ಮುಂದಾಗಿದ್ದಾರೆ. ಆದರೆ ಆ ಹಣವನ್ನು ಹನುಮಂತು ಸ್ವೀಕರಿಸುವುದಿಲ್ಲ. ಮಗಳು ನಾನು ಮಾತನಾಡಿದ್ದೆಲ್ಲ ಕೇಳಿಸಿಕೊಂಡು ಚಿಕ್ಕೆಜಮಾನರ ಬಳಿ ಹೇಳಿದ್ದಾಳೆ ಇದರಿಂದ ಚಿಕ್ಕೆಜಮಾನರು ಹಣ ನೀಡುವುದಾಗಿ ಇಲ್ಲಿಗೆ ಬಂದಿರುವುದು ಎಂದು ತಿಳಿದುಕೊಂಡಿದ್ದಾನೆ ಹನುಮಂತು. ಆದರೆ ಪಾರ್ವತಿಗೆ ಕೂಡ ಆದಿ ನಡೆಗೆ ಸರ್‌ಪ್ರೈಸ್ ಆಗಿದ್ದಾಳೆ. ಹನುಮಂತು ಬಹಳ ಸ್ವಾಭಿಮಾನಿ ಯಾರ ಹಂಗಲ್ಲೂ ಇರಲು ಇಷ್ಟಪಡುವುದಿಲ್ಲ ಇನ್ನೂ ಚಿಕ್ಕೆಜನಮಾನರು 60 ಲಕ್ಷಕೊಟ್ಟರೇ ಸ್ವೀಕರಿಸುತ್ತಾರಾ? ಇಲ್ಲ ಹನುಮಂತು ಮಾತ್ರ ಆದಿ ಏನೇ ಹೇಳಿದರು ಹಣ ಸ್ವೀಕರಿಸಲು ಮಾತ್ರ ಹಿಂದೇಟು ಹಾಕುತ್ತಾರೆ.

  ಪ್ರೀತಿಗೆ ಬೆಲೆ ಕಟ್ಟಲು ಹೊರಟ ಆದಿ

  ಪ್ರೀತಿಗೆ ಬೆಲೆ ಕಟ್ಟಲು ಹೊರಟ ಆದಿ

  ಆದಿ ಹೇಳುತ್ತಾನೆ ಸಾರಥಿ, ನಾನು ಚಿಕ್ಕ ವಯಸ್ಸಿನಿಂದ ನೀವು ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಿರಾ ಅದಕ್ಕಾದರೂ ನೀವು ತೆಗೆದುಕೊಳ್ಳಿ ಎಂದು ಹೇಳಿದಾಗ ಪ್ರೀತಿಗೆ ಬೆಲೆ ಕಟ್ಟುತ್ತಿದ್ದೀರಾ ಚಿಕ್ಕೆಜಮಾನರೇ ಎಂದು ಹೇಳುತ್ತಾನೆ. ಆ ಮಾತು ಆದಿಗೆ ಬಹಳ ಬೇಸರ ತರಿಸುತ್ತದೆ. ಬಳಿಕ ಸರಿ ಆಯ್ತು ಹಣ ಸ್ವೀಕರಿಸುತ್ತೇನೆ ಎಂದು ಒಪ್ಪಿಗೆ ಸೂಚಿಸುತ್ತಾನೆ. ಇದನ್ನು ಕಂಡ ಪಾರ್ವತಿ, ಆದಿಗೆ ಬಹಳ ಖುಷಿಯಾಗುತ್ತದೆ. ಸದ್ಯ ಅಪ್ಪ ಹಣ ತೆಗೆದುಕೊಂಡರಲ್ಲ ಎಂದು ಮನದಲ್ಲಿಯೇ ಬಹಳ ಖುಷಿಪಡುತ್ತಾಳೆ, ಹನುಮಂತುಗೆ ಆದಿ ಹಣದ ಸೂಟ್‌ಕೇಸ್ ಕೊಡುತ್ತಾರೆ ಅದನ್ನು ನೋಡಿದ ಪಾರುಗೆ ಬಹಳ ಖುಷಿಯಾಗುತ್ತದೆ.

  ಪೆಚ್ಚು ಮುಖ ಹಾಕಿದ ಪಾರು

  ಪೆಚ್ಚು ಮುಖ ಹಾಕಿದ ಪಾರು

  ಹನುಮಂತು ಸೂಟ್‌ಕೇಸ್ ತೆಗೆದುಕೊಳ್ಳುತ್ತಿದ್ದ ಹಾಗೆಯೇ ತನ್ನ ಶರ್ಟ್‌ನ ಕಿಸೆಯಿಂದ ಒಂದು ರೂಪಾಯಿ ತೆಗೆದು ತೆಗೆದುಕೊಳ್ಳಿ ಚಿಕ್ಕೆಜಮಾನರೇ ಇದು ನನ್ನ ಕಡೆಯಿಂದ ನಿಮಗೆ ಬಹುಮಾನ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಾನೆ ಸಾರಥಿ. ಇದನ್ನು ಕಂಡು ಆದಿ, ಪಾರುಗೆ ಶಾಕ್ ಆಗುತ್ತದೆ ಅದಕ್ಕಿಂತ ಹೆಚ್ಚಾಗಿ ಬೇಸರವಾಗುತ್ತದೆ. ಪೆಚ್ಚು ಮುಖ ಹಾಕಿ ಆದಿ, ಪಾರು ಮನೆಯತ್ತ ಹೆಜ್ಜೆ ಹಾಕುತ್ತಾರೆ.

  ಪ್ರೀತು ಬಳಿ ಮನದ ನೋವು ಹೇಳಿಕೊಂಡ ಆದಿ

  ಪ್ರೀತು ಬಳಿ ಮನದ ನೋವು ಹೇಳಿಕೊಂಡ ಆದಿ

  ಇನ್ನೂ ಮನೆಗೆ ತಲುಪಿದ ವೇಳೆ ಆದಿ, ಪ್ರೀತು ಬಳಿ ಎಲ್ಲಾ ವಿಚಾರವನ್ನು ಹೇಳಿ ಬೇಸರಿಸಿಕೊಳ್ಳುತ್ತಾನೆ. ಸಾರಥಿಗೆ ಹಣ ಕೊಡುವ ವಿಚಾರ ಪಾರುಗೆ ಕೂಡ ಗೊತ್ತಿರಲಿಲ್ಲ ಅವಳಿಗೆ ಕೂಡ ಸರ್‌ಪ್ರೈಸ್ ಆಗಿ ಇರಲಿ ಎಂದು ಕರೆದುಕೊಂಡು ಹೋಗಿದ್ದೆ ಎನ್ನುತ್ತಾನೆ. ಅದಕ್ಕೆ ಪ್ರೀತು, ಅಣ್ಣ ನೀನು ನನ್ನ ಹಾಗೂ ಜನನಿಯನ್ನು ಕರೆದುಕೊಂಡು ಹೋಗಬೇಕಿತ್ತು ಆಗ ಸಾರಥಿ ಹಣ ತೆಗೆದುಕೊಳ್ಳುತ್ತಿದ್ದರು, ನೀನು ಯಾಕೆ ಹೇಳಲಿಲ್ಲ ಎಂದು ಕೇಳುತ್ತಾನೆ ಬಳಿಕ ಅಷ್ಟೂ ಹಣವನ್ನು ಹೇಗೆ ನೀನು ಅರೆಂಜ್ ಮಾಡಿದೆ ಎಂದು ಕೇಳುತ್ತಾನೆ. ಗೆಳೆಯನ ಬಳಿ ಕೇಳಿದೆ, ಪಾರು ಬಳಿ ಅಧಿಕಾರ ಇದೆ ಆದ್ರು ಪಾರು ಬಳಿ ಕೇಳಿಲ್ಲ ಅಮ್ಮ ಬಂದ ಮೇಲೆ ಅಮ್ಮನ ಬಳಿ ಹೇಳಿ ಗೆಳೆಯನಿಗೆ ವಾಪಸ್ ಹಣ ಕೊಡಬಹುದು ಎಂದು ಆಲೋಚಿಸಿದೆ ಎಂದು ಹೇಳುತ್ತಾನೆ.

  ಪಾರು ಬಳಿಗೆ ಸುಳಿಯದ ಜನನಿ

  ಪಾರು ಬಳಿಗೆ ಸುಳಿಯದ ಜನನಿ

  ಇನ್ನೂ ಪಾರು ಹೇಳುತ್ತಾಳೆ ನಾಳೆ ಆಫೀಸ್‌ಗೆ ತೆರಳುತ್ತಾ ನನ್ನ ದೇವಸ್ಥಾನಕ್ಕೆ ಬಿಟ್ಟು ಆಫೀಸ್‌ಗೆ ಹೋಗಿ ಎಂದು ಹೇಳುತ್ತಾರೆ. ಅದಕ್ಕೆ ಆದಿ ಹೇಳುತ್ತಾನೆ ನೀನು ಅಲ್ಲಿಯೂ ಕೂಡ ಅಪ್ಪನಿಗೆ ಬೇರೆ ಮನೆ ಮಾಡುವ ಬಗ್ಗೆ ಮಾತನಾಡ ಕೂಡದು ಬೇರೆ ಮನೆ ಮಾಡಿದರೆ ನಿನ್ನ ತಂದೆಯನ್ನು ನೋಡಲು ನಿನಗೆ ಅವಕಾಶ ಸಿಗದು ಆದರೆ ಈಗ ನಿನ್ನ ಅಪ್ಪನನ್ನು ಪ್ರತಿನಿತ್ಯ ನೋಡಬಹುದು ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಎಣಿಸಿಕೊಳ್ಳಬೇಕು ಹಾಗಾದರೆ ಮಾತ್ರ ದೇವಸ್ಥಾನಕ್ಕೆ ಬಿಡುವುದಾಗಿ ಆದಿ ಹೇಳುತ್ತಾನೆ. ಇನ್ನೂ ಜನನಿ ಮಾತ್ರ ಪಾರು ಬಳಿ ಮಾತನಾಡಲು ಬಾರದೇ ಮೌನಕ್ಕೆ ಶರಣಾಗಿದ್ದಾಳೆ. ಮುಂದೇನಾಗುತ್ತದೇ ಎಂಬುವುದನ್ನು ಕಾದುನೋಡಬೇಕಿದೆ.

  English summary
  Zee Kannada Paru Serial June 06th Episode Written Update. twists in Paaru serial story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X