twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡದಲ್ಲಿ ಕಣ್ತುಂಬಿಕೊಳ್ಳಿ 'ಗಟ್ಟಿಮೇಳ' ಜಾತ್ರೆ

    |

    ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ, ಈ ಮೆಚ್ಚುಗೆಯ ಪರಿಣಾಮ ರಾಯಚೂರಿನಲ್ಲಿ ಗಟ್ಟಿಮೇಳ ಜಾತ್ರೆ ಎಂಬ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೂನ್ 22 ರಂದು ರಾಯಚೂರಿನ ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಸುಮಾರು 20,000ಕ್ಕೂ ಅಧಿಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಭಾರಿ ವರ್ಣರಂಜಿತವಾಗಿ ನಡೆದ ಗಟ್ಟಿಮೇಳ ಜಾತ್ರೆ ಇದೇ ಭಾನುವಾರ ಮಧ್ಯಾಹ್ನ 3:00ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಗಟ್ಟಿಮೇಳದ ಕಲಾವಿದರು ರಾಯಚೂರಿನ ಸ್ಥಳಗಳಿಂದ ಕರಪತ್ರಗಳಲ್ಲಿ ನಿವಾಸಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿತು. ಕಲಾವಿದರು ಸ್ಥಳೀಯ ಆಹಾರದ ರುಚಿ ನೋಡುವ ಮತ್ತು ರಾಯಚೂರಿನ ಬೀದಿಗಳಲ್ಲಿ ಅಭಿಮಾನಿಗಳೊಂದಿಗೆ ನರ್ತಿಸುವ ಅವಕಾಶ ಪಡೆದರು. ಜೀ ಕನ್ನಡ ರಾಯಚೂರಿನ ನಿವಾಸಿಗಳೊಂದಿಗೆ ಬೆಳಿಗ್ಗೆ 3 ಕಿಮೀ ಮೆರವಣಿಗೆಯ ಮೂಲಕ ಗಟ್ಟಿಮೇಳ ಜಾತ್ರೆ ಆಚರಿಸಿದೆ.

    ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ' ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ'

    ಗಟ್ಟಿಮೇಳ ತಂಡ ಜಾತ್ರೆ ಆರಂಭಕ್ಕೆ ಮೊದಲು ಆಶೀರ್ವಾದಕ್ಕಾಗಿ ಮಂತ್ರಾಲಯದ ಜನಪ್ರಿಯ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾಯಚೂರಿನ ಜನತೆಗಾಗಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭವನ್ನು ನಿರೂಪಕಿ ಅನುಶ್ರೀ ನಿರೂಪಿಸಿದ್ದು, ಗಟ್ಟಿಮೇಳ ತಂಡದ ಅದ್ಭುತ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸಾಕ್ಷಿಯಾದರು.

    Zee kannada presenting Gattimele jaatre

    ವೇದಾಂತ್ ವಸಿಷ್ಟ ಮತ್ತು ಅಮೂಲ್ಯರವರ ಸೋಲೋ ಕಾರ್ಯಕ್ರಮ ರಾತ್ರಿಯ ಮನರಂಜನಾ ಸಮಯಕ್ಕೆ ಕಳೆ ನೀಡಿತ್ತು. ಪ್ರೇಕ್ಷಕರು, ಗಟ್ಟಿಮೇಳ ಧಾರಾವಾಹಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ, ಅನುಶ್ರೀ ಆಯೋಜಿಸಿದ ಮನರಂಜನಾ ಆಟಗಳನ್ನು ಆನಂದಿಸಿದರು. ಜಾತ್ರೆ ದಿವಂಗತ ನರಸಿಂಹರಾಜು ರವರಿಗೆ ಧನ್ಯವಾದ ಅರ್ಪಿಸುವುದನ್ನೂ ಒಳಗೊಂಡಿತ್ತು, ಗಟ್ಟಿಮೇಳದ ಪ್ರಮುಖ ಪಾತ್ರಧಾರಿಯಾದ ಸುಧಾನರಸಿಂಹರಾಜು ಅವರ ಪುತ್ರಿಯಾಗಿದ್ದಾರೆ.

    Zee kannada presenting Gattimele jaatre

    ನರಸಿಂಹರಾಜು ಕನ್ನಡ ಮನರಂಜನಾ ಉದ್ದಿಮೆಯಲ್ಲಿ ಅದ್ಭುತ ಹಾಸ್ಯನಟರಾಗಿದ್ದಾರೆ. ಅವರು ಕರ್ನಾಟಕದ ಚಾರ್ಲಿ ಚಾಪ್ಲಿನ್ ಎಂದೇ ಜನಪ್ರಿಯರಾಗಿದ್ದಾರೆ. ಈ ಅವಿಸ್ಮರಣೀಯ ಗೌರವಕ್ಕೆ ಗಟ್ಟಿಮೇಳ ಜಾತ್ರೆಯಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಯಿತು.

    ಅಂದ್ಹಾಗೆ, ಗಟ್ಟಿಮೇಳದ ಕಥೆ ಅಡೆತಡೆಗಳನ್ನು ಎದುರಿಸುವ, ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಹಿಳೆ, ತನ್ನ ನಾಲ್ಕು ಹೆಣ್ಣುಮಕ್ಕಳು ಧಾರ್ಮಿಕ ಆಚರಣೆಗಳ ಭಾಗವಾಗುವುದನ್ನು ನೋಡುವ ದೊಡ್ಡ ಕನಸನ್ನು ಕಾಣುವ ಮಹಿಳೆಯ ಹೋರಾಟವನ್ನು ತೋರಿಸುತ್ತದೆ.

    English summary
    Gattimela Jaatre With stunning performances and on-ground engagement activities with the leading stars from Gattimela. The event will be telecasted on Sunday 7th July at 3:00 PM, only on Zee Kannada
    Thursday, July 4, 2019, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X