For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ತಾರೆ 'ಸೌಂದರ್ಯ ವಿವಾಹ' ಪ್ರಸಾರ

  |

  ಅತಿ ಕಡಿಮೆ ಅವಧಿಯಲ್ಲಿಯೇ ಪಂಚಭಾಷಾತಾರೆಯಾಗಿ ತನ್ನ ಸಹಜ ಅಭಿನಯದಿಂದ ಎಲ್ಲರ ಮನಸೂರೆಗೊಂಡು ಹೆಸರಿಗೆ ತಕ್ಕ ಹಾಗೆ ನಿಜವಾಗಿಯೂ ಸೌಂದರ್ಯದ ಗಣಿಯೇ ಆಗಿದ್ದ ಸೌಂದರ್ಯ ಹುಟ್ಟಿದ್ದು ಜುಲೈ 18. ಅದರ ನೆನಪಿಗೆ ಸೊಸೆ ಧಾರಾವಾಹಿ ತಂಡ 'ಚೆಂದದ ಸೊಸೆ ಸೌಂದರ್ಯ' ಎನ್ನುವ ವಿಶೇಷ ಕಾರ್ಯಕ್ರಮ ಸಿದ್ಧಪಡಿಸಿದ್ದು ಇದೇ ಜುಲೈ 7 ಮತ್ತು 8 ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  1992 ರಲ್ಲಿ 'ಗಂಧರ್ವ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸೌಂದರ್ಯ ಯಶಸ್ಸಿನ ಉತ್ತುಂಗಕ್ಕೇರಿದ್ದು ತೆಲುಗು ಚಿತ್ರೋದ್ಯಮದಲ್ಲಿ. ಸ್ಟಾರ್ ಗಳಾದ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಶ್ರೀಕಾಂತ್, ಸುಮನ್, ಮತ್ತಿತರ ದಿಗ್ಗಜರ ಜೊತೆ ನಾಯಕಿಯಾಗಿ ನಟಿಸಿದ ಸೌಂದರ್ಯ ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾದರು.

  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದ ಸೌಂದರ್ಯಾ, ಏಪ್ರಿಲ್ 17, 2004 ರಂದು ತಮ್ಮ 31 ನೇ ವಯಸ್ಸಿನಲ್ಲಿ ನಮ್ಮಿಂದ ಮರೆಯಾದರು. ಅದಾಗಿ ಎಂಟು ವರ್ಷಗಳೇ ಸಂದಿವೆ.

  ಸೌಂದರ್ಯದ ಜೊತೆಗೆ ಪ್ರತಿಭೆಯೂ ಮೇಳೈಸಿದ್ದ ಅಪರೂಪದ ನಟಿಯನ್ನು ಚಿತ್ರರಂಗ ಸೇರಿದಂತೆ ಪ್ರತಿಯೊಬ್ಬರೂ ಮಿಸ್ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಅಂಥ ಕಲಾವಿದೆಯ ವೃತ್ತಿ ಬದುಕಿನ ಒಂದಷ್ಟು ವಿವರಗಳು 'ಚೆಂದದ ಸೊಸೆ ಸೌಂದರ್ಯ' ಸಂಚಿಕೆಗಳಲ್ಲಿ ಇವೆ. ಜೀವನದ ಪ್ರಮುಖ ನಿರ್ಧಾರವಾದ ಮದುವೆ ವಿಷಯದಲ್ಲಿ ಸೌಂದರ್ಯ ಅವರ ಅಮ್ಮನ ಇಚ್ಛೆಯಂತೆಯೇ ನಡೆದುಕೊಂಡು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

  ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ನಡೆದ ಆ ಮದುವೆ ಮತ್ತು ಆರತಕ್ಷತೆಗೆ ಕನ್ನಡ ತಾರೆಗಳಾದ ವಿಷ್ಣುವರ್ಧನ್, ಭಾರತಿ, ಅಂಬರೀಷ್, ಸುದೀಪ್, ಪ್ರಕಾಶ್ ರೈ ಮತ್ತಿತರರು, ತೆಲುಗು ತಾರೆಗಳಾದ ಚಿರಂಜೀವಿ, ವೆಂಕಟೇಶ್, ಕೃಷ್ಣ, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗ ಗಣ್ಯರು ಭಾಗವಹಿಸಿದ್ದರು. ಸೌಂದರ್ಯ-ರಘು ಮದುವೆಯ ವಿಡಿಯೋವನ್ನು 'ಚೆಂದದ ಸೊಸೆ ಸೌಂದರ್ಯ'ದಲ್ಲಿ ಕಣ್ತುಂಬಿಸಿಕೊಳ್ಳಬಹುದು.

  ಸೌಂದರ್ಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅಮ್ಮ, ಅತ್ತಿಗೆ, ಅತ್ತೆ ಅವರ ಚಿತ್ರಗಳನ್ನು ನಿರ್ಮಿಸಿದ್ದ, ನಿರ್ದೇಶಿಸಿದ್ದ ದ್ವಾರಕೀಶ್, ಗಿರೀಶ್ ಕಾಸರವಳ್ಳಿ, ಆತ್ಮೀಯ ಸ್ನೇಹಿತೆ ಮಾಳವಿಕಾ, ಅವಿನಾಶ್ ಮುಂತಾದವರು ಸೌಂದರ್ಯ ನೆನಪು ಮಾಡಿಕೊಳ್ಳುತ್ತ ಕಣ್ಣೀರಾಗಿದ್ದಾರೆ. ವಿಶೇಷ ಎಂದರೆ ಸೌಂದರ್ಯ ಪತಿ, 'ಸೊಸೆ' ಧಾರವಾಹಿಯನ್ನು ಅವರ ಹೆಸರಿನಲ್ಲಿ ನಿರ್ಮಿಸುತ್ತಿರುವ ರಘು ಮೊದಲ ಬಾರಿಗೆ ಕೆಮರಾ ಮುಂದೆ ಸೌಂದರ್ಯ ಬಗ್ಗೆ ಮಾತಾಡಿದ್ದಾರೆ.

  ಅಷ್ಟು ದೊಡ್ಡ ಸಿನೆಮಾತಾರೆಯಾಗಿದ್ದರೂ ಮನೆಯಲ್ಲಿ ಎಷ್ಟು ಚೆಂದದ ಸೊಸೆಯಾಗಿದ್ದರು ಎನ್ನುವುದು ಈ ವಿಶೇಷ ಸಂಚಿಕೆಗಳ ವಿಶೇಷ. 'ಚೆಂದದ ಸೊಸೆ ಸೌಂದರ್ಯ' ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Late Soundarya's special programme 'Chendada Sose Soundarya' telecasts at Zee Kannada channel on July 7th and 8th 2012, at 9-00 PM. It includes actress Soundary's exclusive Videos, photos of her and Interviews of her Husband Raghu. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X