Praveen Jain: ಪ್ರವೀಣ ಜೈನ್ ಎಲ್ಲಿಯವರು? ಬಣ್ಣದ ಲೋಕಕ್ಕೆ ಪ್ರವೀಣ್ ಆಗಮಿಸಿರುವುದೇ ರೋಚಕ!

By Poorva

ಜನರನ್ನು ಹಾಸ್ಯದ ಮೂಲಕ ರಂಜಿಸುವ ಕೆಲಸ ಕೇವಲ ಕಲಾವಿದನಿಗೆ ಮಾತ್ರ ಸಾಧ್ಯ. ಹಾಸ್ಯದ ಹೊನಲಿನಲ್ಲಿ ರಂಜಿಸಲು ಹಲವಾರು ಜನ ಪ್ರಯತ್ನ ಪಡುತ್ತಾರೆ. ಆದರೆ ಅದು ಎಲ್ಲರಿಂದ ಸಾಧ್ಯ ಆಗುವುದಿಲ್ಲ, ಕೆಲವರಿಂದ ಮಾತ್ರ ಸಾಧ್ಯ. ಅಂತವರಲ್ಲಿ ಪ್ರವೀಣ್ ಜೈನ್ ಕೂಡ ಒಬ್ಬರು. ಜೀವನದಲ್ಲಿ ಅನೇಕ ಅಡೆತಡೆ ಎದುರಾದರೂ ಅದೆಲ್ಲವನ್ನು ಮೆಟ್ಟಿ ನಿಂತು ಜೀವನದಲ್ಲಿ ಹೇಗಾದರೂ ಮುಂದೆ ಬರಬೇಕು ಎಂಬುವುದು ಇವರ ಆಸೆ.

ಪ್ರವೀಣ್ ಜೈನ್ ಮೂಲತಃ ಚಂದ್ರ ನಿಲಯ ಜನತಾ ಕಾಲನಿ ಪಡ್ಡಂದಡ್ಕ ಮೂಡಬಿದಿರೆಯ ನಿವಾಸಿಯಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು ತಮ್ಮ ಪದವಿಯನ್ನು ದವಳ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಕಾಲೇಜಿನಲ್ಲಿ ಎನ್ ಎಸ್ ಎಸ್ ಯಲ್ಲಿ ಇವರು ಸೇವೆ ಸಲ್ಲಿಸುತ್ತಾ ಇರುವ ವೇಳೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕಗಳನ್ನು ಮಾಡುತ್ತಾ ಜನರನ್ನು ರಂಜಿಸುತ್ತ ಇದ್ದರು. ಇವರ ತಂದೆ ಧರ್ಣೇಂದ್ರ, ತಾಯಿ ಪ್ರಮೀಳಾ, ಅಣ್ಣ ಪ್ರಣೀತ್. ಪ್ರವೀಣ್ ತಾಯಿಯ ಗರ್ಭದಲ್ಲಿ ಇರಬೇಕಾದರೆ ಪ್ರವೀಣ್ ತಂದೆ ತಾಯಿಗೆ ಬಹಳ ಹಿಂಸೆ ನೀಡುತ್ತಿದ್ದರು, ಇದರಿಂದ ನೊಂದ ಪ್ರಮೀಳಾ ತಂದೆ ಇವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಸಾಕಿದ್ದರು.

ಹುಟ್ಟುತ್ತಲೇ ತಂದೆಯಿಂದ ದೂರ ಇರುವ ಪ್ರವೀಣ್ ತನ್ನ ತಾಯಿಗೆ ಬಹಳ ಭಯ ಪಡುತ್ತಾರೆ. ತಂದೆ ಇದ್ದಿದ್ದರೂ ತಾಯಿಯ ಹಾಗೆ ಸಾಕಲು ಯಾರಿಂದಲೂ ಆಗದು ಎಂದು ಹೇಳುತ್ತಾರೆ ಪ್ರವೀಣ್. ಇನ್ನು ತಾಯಿ ಪ್ರಮೀಳಾ ಪ್ರವೀಣ್ ನನ್ನು ಉನ್ನತ ವಿದ್ಯಾಭ್ಯಾಸ ಮಾಡಿಸುವ ವೇಳೆ ಕಿವಿ ಒಲೆಯನ್ನು ಅಡವಿಟ್ಟು ಓದಿಸಿದ್ದರು.

ಮಕ್ಕಳ ಭವಿಷ್ಯಕ್ಕೆ ಹಗಲಿರುಳು ದುಡಿದ ತಾಯಿ

ಮಕ್ಕಳ ಭವಿಷ್ಯಕ್ಕೆ ಹಗಲಿರುಳು ದುಡಿದ ತಾಯಿ

ಆ ದಿನದಿಂದ ಪ್ರವೀಣ ಮನದಲ್ಲಿ ಗಾಢವಾಗಿ ಒಂದು ವಿಚಾರ ಸ್ಪಷ್ಟ ಆಗಿತ್ತು.. ನನಗಾಗಿ ಇಷ್ಟು ಕಷ್ಟ ಪಡುತ್ತಿರುವ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುವುದು ಪ್ರವೀಣ್ ಮಹದಾಸೆ ಕೂಡ. ರಂಗ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಏನಾದರೂ ಮಾಡಿ ಸಾಧನೆ ಮಾಡಬೇಕು ಎಂದುಕೊಂಡು ಛಲ ಬಿಡದೆ ಕೆಲಸ ಮಾಡುತ್ತಾರೆ. ಅದೇ ರೀತಿ ಪ್ರವೀಣ್ ಗೆ ಒಂದು ಅವಕಾಶ ಸಿಗುತ್ತದೆ. ತುಳು ಭಾಷೆಯ ಪೆಟ್ ಕಮ್ಮಿ ಎನ್ನುವ ಚಿತ್ರಕ್ಕೆ ಪ್ರವೀಣ್ ಆಯ್ಕೆ ಆಗುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ಪ್ರವೀಣ್ ಗೆ ಆ ಸಿನಿಮಾದಲ್ಲಿ ನಟನೆ ಮಾಡಲು ಆಗುವುದಿಲ್ಲ.

ಕಾಮಿಡಿ ಕಿಲಾಡಿ ಮೂಲಕ ಜನರನ್ನು ರಂಜಿಸಿದ ಪ್ರವೀಣ

ಕಾಮಿಡಿ ಕಿಲಾಡಿ ಮೂಲಕ ಜನರನ್ನು ರಂಜಿಸಿದ ಪ್ರವೀಣ

ಆ ಬಳಿಕ ಕಾಮಿಡಿ ಕಿಲಾಡಿಗಳು ಸೀಸನ್ ಎರಡರಕ್ಕೆ ಆಡಿಷನ್ ನೀಡುತ್ತಾರೆ. ಆದರೆ ಅದರಲ್ಲಿ ಸೆಲೆಕ್ಟ್ ಆಗದ ಕಾರಣ ಶಿಕ್ಷಣವನ್ನು ಪೂರೈಸಿಕೊಂಡು ಒಳ್ಳೆಯ ಉದ್ಯೋಗವನ್ನು ಮಾಡುತ್ತಾ ಇರುವ ವೇಳೆ ಪುನಃ ಕಾಮಿಡಿ ಕಿಲಾಡಿಗಳೂ ಸೀಸನ್ ತ್ರೀಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಕೂಡ ಆಗುತ್ತಾರೆ. ಆ ಮೂಲಕ ಅವರು ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನಲ್ಲಿ ಕೂಡ ಭಾಗಿ ಆಗುತ್ತಾರೆ. ಇನ್ನು ಪ್ರವೀಣ್ ಅವರಿಗೆ ನಟನೆ ಮಾಡಲು ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿದೆ. ಇದೀಗ ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೇ ಧಾರಾವಾಹಿಯಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿದೆ. ಜೊತೆಗೆ ಹಲವಾರು ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಪ್ರವೀಣ್ ಪಾಲಾಗಿದೆ.

ಸಿನಿಮಾಗಳಲ್ಲಿ ಉತ್ತಮ ಪಾತ್ರ ಮಾಡುತ್ತಿರುವ ಪ್ರವೀಣ್

ಸಿನಿಮಾಗಳಲ್ಲಿ ಉತ್ತಮ ಪಾತ್ರ ಮಾಡುತ್ತಿರುವ ಪ್ರವೀಣ್

ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುವುದು ಪಾತ್ರಧಾರಿಯ ಕೆಲಸ ಕೂಡ. ಆ ಕೆಲಸವನ್ನು ಪ್ರವೀಣ್ ಮಾಡುತ್ತಾ ಬಂದಿದ್ದಾರೆ. ಪ್ರವೀಣ್ ತಾನು ಬೆಳೆಯುವುದರ ಜೊತೆಗೆ ತನ್ನ ಊರಿನ ಜನರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಆಗಿಕಂ ಎಂಬ ಕಲಾ ತರಬೇತಿ ಕೇಂದ್ರದಿಂದ ಅದ್ಭುತ ಪ್ರತಿಭೆಗಳನ್ನು ತಯಾರು ಮಾಡುತ್ತಿದ್ದಾರೆ. ಧಾರವಾಹಿ, ಸಿನಿಮಾ ಕ್ಷೇತ್ರದಲ್ಲಿ ಹಾಸ್ಯ ನಟನಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಸ್ಯದ ಹೊನಲಿನಲ್ಲಿ ಜನರನ್ನು ತೇಲಾಡಿಸುತ್ತ ಇರುವ ಪ್ರವೀಣ ಜೈನ್ ಇನ್ನಷ್ಟು ಕಾಲ ರಂಗ ಕ್ಷೇತ್ರದಲ್ಲಿ ಬೆಳೆಯಲಿ ಎಂಬುವುದು ನಮ್ಮ ಆಶಯ.

More from Filmibeat

English summary
Praveen jain serial journey story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X