ಬಹಳ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಮುಕ್ತಾಯದ ಸುಳಿವು ಸಿಕ್ತು!
ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್‌ನಲ್ಲಿ ಇತ್ತು. ಟಿಆರ್ಪಿ ವಿಚಾರದಲ್ಲಿ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದೆ ಇಲ್ಲ. ಮೂವರು ಮಕ್ಕಳನ್ನು ಯಾರ ಸಪೋರ್ಟ್ ಇಲ್ಲದೆ ಸಾಕಿ, ಬೆಳೆಸಿ, ಓದಿಸಿದ ಪುಟ್ಟಕ್ಕನ ಕಥೆ ಅದು. ಅದೆಷ್ಟೋ ಊರುಗಳಲ್ಲಿ ಅಂಥದ್ದೊಬ್ಬ ಪುಟ್ಟಕ್ಕ ಸಿಗುತ್ತಾಳೆ. ಹೀಗಾಗಿಯೇ ಪುಟ್ಟಕ್ಕನ ಮಕ್ಕಳ ಕಥೆ ಮನೆ ಮನೆಯ ಕಥೆಯಾಗಿ ಎಲ್ಲರ ಮನಸ್ಸನ್ನು ಹೊಕ್ಕಿತ್ತು.
ಸಹನಾ, ಕಾಳಿ, ಸ್ನೇಹಾ, ಕಂಠಿ, ಸುಮ, ಮುರುಳಿ, ಅತ್ತೆ ಮಾವ ಹೀಗೆ ಎಲ್ಲರಿಗಿಂತ ಮುಖ್ಯವಾಗಿ ಪುಟ್ಟಕ್ಕನ ಪಾತ್ರಗಳು ಜನರ ಮನಸ್ಸನ್ನು ಕದಡಿಸಿತ್ತು. ಸೀರಿಯಲ್ ನೋಡುವಾಗ ಅದೆಷ್ಟೋ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ ಇನ್ಮುಂದೆ ಆದ್ರೂ ಒಳ್ಳೆಯದಾಗಲೀ ಎಂದು ಬಯಸುತ್ತಿದ್ದರು. ಚೆನ್ನಾಗಿಯೇ ಹೋಗ್ತಾ ಇದ್ದಂತ ಕಥೆ, ಸ್ನೇಹಾಳ ಪಾತ್ರ ಸತ್ತ ಮೇಲೆ ಜವಲು ದಾರಿಯಂತೆ ಎಲ್ಲೆಲ್ಲೋ ಸಾಗ್ತಾ ಇದೆ. ಇದೀಗ ಇನ್ನೊಂದು ವರ್ಷದಲ್ಲಿ ಈ ಸೀರಿಯಲ್ ಮುಕ್ತಾಯವಾಗುತ್ತೆ ಎಂಬುದನ್ನು ನಿರ್ದೇಶಕ ಆರೂರು ಜಗದೀಶ್ ಅವರೇ ಹೇಳಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ವರ್ಷದಲ್ಲಿ ಸೀರಿಯಲ್ ಅಂತ್ಯ
'ಪುಟ್ಟಕ್ಕನ ಗುರಿಗಳು ರೀಚ್ ಆಗುತ್ತವೆ. ಒಳ್ಳೆ ಎಂಡಿಂಗ್ ಅಂತು ಕೊಡ್ತೀವಿ. ಬೋರ್ ಹೊಡೆಸಿ ಸೀರಿಯಲ್ ಎಂಡ್ ಮಾಡಲ್ಲ. ಒಳ್ಳೆ ಟಿಆರ್ಪಿ, ಪೀಕ್‌ನಲ್ಲಿರುವಾಗಲೇ ಈ ಸೀರಿಯಲ್ ಎಂಡ್ ಆಗುತ್ತೆ. ಎಂಡ್ ಆಗುವುದಕ್ಕೆ ಇನ್ನೊಂದು ವರ್ಷ ಹೋಗಬಹುದು ಎಂದುಕೊಳ್ಳುತ್ತೇನೆ. ಸ್ಮೂತ್ ರನ್ನಿಂಗ್ ನಡೀತಾ ಇದೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಮಾರು ಹದಿನೇಳು ಜನ ಅಷ್ಟೇ ಇದ್ರು. ಆದರೆ ಇಲ್ಲಿ ಕ್ರೌಡ್ ಜಾಸ್ತಿ ಇದೆ. ಹೆಣ್ಣು ಮಕ್ಕಳದ್ದೇ ಧಾರಾವಾಹಿ. ಹೀಗಾಗಿ ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ'
ಕಂಟೆಂಟ್ ಒಪ್ಪಿಕೊಂಡ ಜನ
'ಅದ್ದೂರಿ ವೆಚ್ಚದಲ್ಲಿ ಮಾಡದೆ ಇದ್ದರು, ಕಂಟೆಂಟ್ ಇರುವಂತ ಧಾರಾವಾಹಿ ಮಾಡಿದ್ರೆ, ಸಂಬಂಧಗಳಿಗೆ ಹತ್ತಿರವಾದ ಕಥೆ ಮಾಡಿದ್ರೆ ಖಂಡಿತ ಅದು ಹಿಟ್ ಆಗುತ್ತೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರ ಕೂಡ ಹಿಟ್ ಆಗಿದೆ. ಕಾಳಿ, ಗೋಪಾಲ, ರಾಜೀ, ಸಹನಾ, ಸ್ನೇಹಾ ಎಲ್ಲರ ಪಾತ್ರವೂ ಹಿಟ್ ಆಗಿದೆ. ಇನ್ನು ಕೊನೆಯ ಮಗಳು ಸುಮ ಪಾತ್ರವೊಂದು ಹಿಟ್ ಆಗಬೇಕಿದೆ'
ಸುಮ ಪಾತ್ರಕ್ಕೂ ಬರಲಿದೆ ತೂಕ
'ಸುಮ ಪಾತ್ರಕ್ಕೂ ಒಂದು ತೂಕ ಬರುವಂತೆ ಮಾಡುತ್ತೀವಿ. ಕೊನೆಯಲ್ಲಿ ಅವಳ ಕನಸು ಏನಿದೆ ಪುಟ್ಟಕ್ಕನ ಮೂಲಕ ಈಡೇರಿಸುವಂತೆ ಮಾಡ್ತೀವಿ. ಆರಂಭದಲ್ಲಿ ಪುಟ್ಟಕ್ಕನ ಮಕ್ಕಳು ಏನು ಕನಸು ಕಂಡಿದ್ದರೋ ಅದೆಲ್ಲದಕ್ಕೂ ಒಂದು ಡೆಸ್ಟಿನಿ ಕೊಡುವ ಪ್ರಯತ್ನ ಅಂತು ಮಾಡ್ತೀವಿ' ಎಂದು ಜಗದೀಶ್ ವಿವರಣೆ ನೀಡಿದ್ದಾರೆ.
ಸೀರಿಯಲ್ ಮಾಡದೆ ಇರಲು ಕಾರಣ?
'ಪುಟ್ಟಕ್ಕ ಗಾಡ್ ಗಿಫ್ಟ್ ಹೋಗ್ತಾ ಇದೆ. ಆದರೆ ಎಲ್ಲಾ ಸೀರಿಯಲ್ 1000 ಎಪಿಸೋಡ್ ಹೋಗುತ್ತೆ ಅಂತ ಹೇಳುವುದಕ್ಕೆ ಆಗಲ್ಲ. ಎಷ್ಟೋ ಸೀರಿಯಲ್ ಅರ್ಧಕ್ಕೆ ನಿಂತಿವೆ. 500-600 ಎಪಿಸೋಡಿಗೆ ನಿಂತಿವೆ. ಟಿಆರ್ಪಿ ಬಂದಿಲ್ಲ ಅಂದ್ರೆ ಆ ಸೀರಿಯಲ್ ಅಲ್ಲಿಗೆ ನಿಲ್ಲಿಸಲೇಬೇಕಾಗುತ್ತದೆ. ಆಗ ನಿರ್ಮಾಪಕನಿಗೆ ತುಂಬಾ ಕಷ್ಟ ಆಗುತ್ತೆ. ಅದೇ ಗೊಂದಲ ನಂಗು ಇದೆ. ಜನ ಯಾವ ಥರದ ಕಥೆ ನೋಡ್ತಾರೆ, ಯಾವ ಥರ ನಾವೂ ಜನರಿಗೆ ಕೊಡಬೇಕು ಎಂಬುದರ ಬಗ್ಗೆ ಟೆನ್ಶನ್ ಆಗುತ್ತೆ. ಇಷ್ಟೊತ್ತಿಗೆ ಎರಡು ಸೀರಿಯಲ್ ಮಾಡಬೇಕಿತ್ತು. ಆದರೆ ಸ್ವಲ್ಪ ಮುಂದಕ್ಕೆ ಹಾಕ್ತಾ ಇದ್ದೀನಿ" ಎಂದು ಹೇಳಿದ್ದಾರೆ.


Click it and Unblock the Notifications











