ಮುರಳಿ ಮೇಷ್ಟ್ರಿಗೆ ಪ್ರೀತಿ ಹೇಳುತ್ತಾಳಾ ಸಹನಾ? ರಾಜೇಶ್ವರಿ ಅಟ್ಟಹಾಸಕ್ಕೆ ಕೊನೆ ಎಂದು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ರೋಚಕವಾಗಿ ಮೂಡಿಬರುತ್ತಿದೆ. ಬಂಗಾರಮ್ಮನವರ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು ಆಗಿದೆ. ಇನ್ನು ರಾಜೇಶ್ವರಿ ಮಗ ಪುರುಷಿ ಪುಟ್ಟಕ್ಕನ ಮೆಸ್‌ಗೆ ಬಂದಿದ್ದಾನೆ, ಅಮ್ಮ ಮಾಡಿದ ಕುತಂತ್ರವನ್ನು, ಅಪ್ಪನಿಗೆ ಬೈಯುತ್ತಿದ್ದಿದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ.

ಸ್ನೇಹಾ ಈ ವೇಳೆ ಇದಕ್ಕೆಲ್ಲ ನೀನು ತಲೆಕೆಡಿಸಿಕೊಳ್ಳಬೇಡ ಓದಿನತ್ತ ಇನ್ನೂ ಹೆಚ್ಚು ನಿಗಾ ವಹಿಸು ಏನಾದರೂ ಗೊತ್ತಾಗದೇ ಇದ್ದರೇ ನನ್ನ ಅಥವಾ ಸುಮಾನ ಕೇಳು ಹೇಳಿಕೊಡುತ್ತೇವೆ ಎಂದು ಹೇಳಿ ಅಲ್ಲಿಂದ ಸ್ನೇಹಾ ಹೋಗುತ್ತಾಳೆ.

ಸುಮನ ಬಳಿ ಪುರುಷಿ ಹೇಳುತ್ತಾನೆ ''ಸುಮ ಇವತ್ತು ಮುರಳಿ ಮೇಸ್ಟ್ರು ಬರಲ್ವಂತೆ, ಅವರಿಗೆ ಹುಷಾರಿಲ್ವಂತೆ ಇವತ್ತು ಕೊನೆ ಕ್ಲಾಸ್ ಇಲ್ಲ, ಇದೆಲ್ಲ ನಾವು ಪ್ರೆಂಡ್ಸ್ ಗ್ರೂಪಿನಿಂದ ಮೇಸೆಜ್ ಬಂದಿತ್ತು ಹಾಗೆ ತಿಳಿಯಿತು ಎಂದು ಹೇಳುತ್ತಾನೆ.

ಕೈತಪ್ಪಿ ತಾಗಿತು ಎನ್ನುವ ಸಹನಾ

ಕೈತಪ್ಪಿ ತಾಗಿತು ಎನ್ನುವ ಸಹನಾ

ಬಳಿಕ ಸಹನಾ ಬಳಿ ಕೇಳುತ್ತಾನೆ ಏನಕ್ಕ ಮೊನ್ನೆ ಮುರಳಿ ಮೇಸ್ಟ್ರು ಪಾಠ ಮಾಡುತ್ತಿರುವಾಗ ಆನ್‌ಲೈನ್‌ನಲ್ಲಿ ನಿನ್ನ ಮುಖ ಕಂಡಿತಂತೆ'' ಎಂದಾಗ ಮುಜುಗರಕ್ಕೆ ಒಳಗಾದ ಸಹನಾ ''ಅದು ಕೈ ತಪ್ಪಿ ಫೋನ್ ತಾಗಿ ನನ್ನ ಮುಖ ಕಂಡಿತು'' ಎಂದು ಹೇಳುತ್ತಾಳೆ.

ಎಲ್ಲವನ್ನು ಕೇಳಿಸಿಕೊಳ್ಳುತ್ತಾಳೆ ಕೆಲಸದಾಕೆ

ಎಲ್ಲವನ್ನು ಕೇಳಿಸಿಕೊಳ್ಳುತ್ತಾಳೆ ಕೆಲಸದಾಕೆ

ಬಳಿಕ. ''ಏನಾದರೂ ತಿಂಡಿ ಬೇಕಾ ಎಂದೆಲ್ಲ ಕೇಳುತ್ತಾಳೆ, ಅದಕ್ಕೆ ಪುರುಷಿ ಖಾಲಿ ಟೀ ಕುಡಿದಿದ್ದು ಅಮ್ಮಗೆ ಗೊತ್ತಾದರೆ ರಂಪ ಮಾಡುತ್ತಾಳೆ, ಇನ್ನೂ ತಿಂಡಿ ಏನಾದರೂ ಮಾಡಿದರೆ ಅಷ್ಟೆ ಕತೆ ನಾನಿನ್ನು ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ, ಈ ವೇಳೆ ಸುಮ ನಗಾಡುತ್ತಾ ಅಕ್ಕನ ಕಾಲು ಎಳೆಯುತ್ತಾಳೆ. ಅಕ್ಕ ಇವತ್ತು ಮುರಳಿ ಮೇಸ್ಟ್ರು ಬರಲ್ವಂತೆ ಇವತ್ತು ಮೇಸ್ಟ್ರುಗೆ ಊಟ ಕೊಡಲು ಹೋಗಲು ಇದ್ಯಾ ಎಂದಾಗ ಸಹನಾ ನಾಚಿಕೊಳ್ಳುತ್ತಾ ಹೇಯ್ ಸುಮ್ಮನಿರೇ ಎಂದೆಲ್ಲ ಹೇಳುತ್ತಿರುತ್ತಾಳೆ. ಅಕ್ಕ ಇವತ್ತು ಮೇಷ್ಟ್ರು ರಜೆ ಹಾಕಿದ್ದಾರೆ ಎಂದರೆ ನಿನಗೆ ಇನ್ನೂ ಗೊತ್ತಾಗಿಲ್ವ ಎಂದಾಗಂತು ಸಹನಾ ನಾಚಿ ನೀರಾಗಿದ್ದಳು. ಇದನ್ನೆಲ್ಲ ಪುಟ್ಟಕ್ಕನ ಕೆಲಸದಾಕೆ ಆಲಿಸುತ್ತಿದ್ದಳು.

ಪುಟ್ಟಕ್ಕನ ಕಾಲಿಗೆ ಚುಚ್ಚಿದ ಗಾಜಿನ ಸೀಸ

ಪುಟ್ಟಕ್ಕನ ಕಾಲಿಗೆ ಚುಚ್ಚಿದ ಗಾಜಿನ ಸೀಸ

ಇನ್ನೂ ಪುಟ್ಟಕ್ಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಗಾಜಿನ ಸೀಸ ಕಾಲಿಗೆ ಸಿಕ್ಕಿ ಕಾಲಿಗೆ ಚುಚ್ಚಿಕೊಳ್ಳುತ್ತೆ ಆ ವೇಳೆಗೆ ಅಲ್ಲಿರುವವರೆಲ್ಲ ಅಲ್ಲಿ ಬಂದು ಪುಟ್ಟಕ್ಕನ ಮೆತ್ತಗೆ ಮನೆಗೆ ಕರೆದುಕೊಂಡು ಬರುತ್ತಾರೆ, ಬ್ಯಾಂಡೇಜ್ ಹಾಕುತ್ತಾರೆ ಕಾಲಿಗೆ. ಬಳಿಕ ಸ್ನೇಹಾ ಅಲ್ಲಿಗೆ ಆಗಮಿಸುತ್ತಾಳೆ, ಅವ್ವ ಏನವ್ವ ಇದೆಲ್ಲ ಎಂದಾಗ ಪುಟ್ಟಕ್ಕ ಕಾಲಿಗೆ ಸ್ವಲ್ಪ ತಾಗಿತು ಎಂದು ಹೇಳುತ್ತಾಳೆ, ಅದಕ್ಕೆ ಪಕ್ಕದಲ್ಲಿ ನಿಂತಿದ್ದಾತ ಯಾರೋ ಬಡ್ಡಿ ಹೈದ ಸೀಸಾವನ್ನು ರೋಡ್‌ಗೆ ಎಸೆದು ಹೋಗಿದ್ದಾನೆ ಇದರಿಂದ ಪುಟ್ಟಕ್ಕನ ಕಾಲಿಗೆ ಅದು ಚುಚ್ಚಿಕೊಂಡು ಬಿಟ್ಟಿತು ಎನ್ನುತ್ತಾನೆ.

ಗಂಡನ ಅವಸ್ಥೆಗೆ ಪರದಾಡಿದ ಶಾಂತಮ್ಮ

ಗಂಡನ ಅವಸ್ಥೆಗೆ ಪರದಾಡಿದ ಶಾಂತಮ್ಮ

ಶಾಂತಕ್ಕ ಅಳುತ್ತಾ ಬರುತ್ತಾರೆ. ನನ್ನ ಗಂಡನಿಗೆ ಇಲ್ಲಿ ಚಿಕಿತ್ಸೆ ಸಾಕಾಗುತ್ತಿಲ್ಲಂತೆ, ಇಲ್ಲಿನ ಡಾಕ್ಟರ್ ಕೈ ಚೆಲ್ಲಿ ಕುಳಿತಿದ್ದಾರೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ, ಕೈ ಕಾಲೇ ಆಡುತ್ತಿಲ್ಲ ಪುಟ್ಟಕ್ಕ ಅಂದಾಗ ಪುಟ್ಟಕ್ಕ ತನ್ನಲ್ಲಿದ್ದ ಕೊಂಚ ಒಡವೆಗಳನ್ನು ಶಾಂತನಿಗೆ ಕೊಟ್ಟು ಇನ್ನೂ ಬೇಕಾದರೆ ಕೇಳು ದೊಡ್ಡ ಆಸ್ಪತ್ರೆಗೆ ಸೇರಿಸು ಎಂದು ಹೇಳುತ್ತಾಳೆ. ಈ ವೇಳೆ ಶಾಂತವ್ವ ಅಲ್ಲಿಂದ ತೆರಳುತ್ತಾಳೆ. ಇನ್ನು ಸ್ನೇಹಾ ರಾಜೇಶ್ವರಿಯ ಅಟ್ಟಹಾಸವನ್ನು ಮಟ್ಟಹಾಕುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada Puttakkana Makkalu Serial May 27th Episode Written Update. Intresting turn came in the serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X