ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ
ಕನ್ನಡದಲ್ಲಿ ಮೂಡಿ ಬರುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಹೊಸ ಮೈಲಿಗಲ್ಲನ್ನು ದಾಟಿದೆ. ಪುಟ್ಟಕ್ಕನ ಮಕ್ಕಳು ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾದಾಗಿನಿಂದ ಅಗ್ರಸ್ಥಾನದಲ್ಲೇ ಇದೆ. ಇಲ್ಲಿವರೆಗೂ ಒಂದು ಎಪಿಸೋಡಿನಲ್ಲೂ ಬೋರ್ ಎನಿಸೋ ವಿಚಾರಗಳನ್ನು ಧಾರಾವಾಹಿಯಲ್ಲಿ ಪ್ರಸಾರವಾಗಿಲ್ಲ. ಬಡತನ, ಸಿರಿತನ, ಹಗೆತನ, ಪ್ರೀತಿ-ಪ್ರೇಮದ ಒದ್ದಾಟ, ನ್ಯಾಯ, ಅನ್ಯಾಯ ಈ ಎಲ್ಲಾ ಅಂಶಗಳು ಧಾರಾವಾಹಿಯಲ್ಲಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.
ಧಾರಾವಾಹಿ ಅಂದರೆ ಮೂಗು ಮುರಿಯುತ್ತಿದ್ದವರು ಕೂಡ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಬಿಟ್ಟು ಬಿಡದಂತೆ ನೋಡಲು ಶುರು ಮಾಡಿದ್ದಾರೆ. ದಿನ ದಿನಕ್ಕೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟಕ್ಕನ ಮಕ್ಕಳು ಎಪಿಸೋಡ್ ಗಳನ್ನು ಮಿಸ್ ಮಾಡದೇ ನೋಡಲು ಕಾತುರರಾಗಿರುತ್ತಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿವೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಕಥೆ ಇದೆ. ಸೀರಿಯಲ್‌ನ ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಸಾಗುತ್ತಿದೆ. ಕ್ಯೂರಿಯಾಸಿಟಿಯನ್ನು ಉಳಿಸಿಕೊಂಡು ಕಥೆ ಸಾಗುತ್ತಿದೆ. ಮಂಡ್ಯ ಭಾಷೆಯಲ್ಲಿ ಡೈಲಾಗ್ ಗಳಿದ್ದು, ಈ ಭಾಷೆಯ ಶೈಲಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಈಗ ಬಂಗಾರಮ್ಮ ಮತ್ತು ನಂಜಮ್ಮನ ಸ್ಪರ್ಧೆ ನೋಡೋದೆ ಚೆಂದ. ಇನ್ನು ರಾಜೇಶ್ವರಿ ಗಂಡ ಗೋಪಾಲನ ಜೊತೆಗೆ ಪದೇ ಪದೇ ಪುಟ್ಟಕ್ಕನ ವಿಚಾರಕ್ಕೆ ಕಾಲು ಕೆರೆದುಕೊಮಡು ಜಗಳವಾಡುತ್ತಿರುತ್ತಾಳೆ. ಪ್ರತಿ ಬಾರಿ ಪುಟ್ಟಕ್ಕನನ್ನು ಮಣ್ಣು ಮುಕ್ಕಿಸಬೇಕು ಎಂದು ಏನಾದರೂ ಒಂದು ಪಿತೂರಿಯನ್ನು ಮಾಡುತ್ತಲೇ ಇರುತ್ತಾಳೆ. ಆದರೆ ರಾಜೀ ಮಾಡುವುದೆಲ್ಲಾ ಉಲ್ಟಾ ಆಗಿ, ಕೊನೆಗೆ ಅವಳೇ ತೊಂದರೆ ಅನುಭವಿಸುವಂತಾಗುತ್ತದೆ.
ಪುಟ್ಟಕ್ಕನ ಮಕ್ಕಳು ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಸೇರಿದಂತೆ ತಾರಾಗಣವೇ ಇದೆ. ಉಮಾಶ್ರೀ ಅವರಲ್ಲದೆ, ಕಾರ್ಯಕ್ರಮದಲ್ಲಿ ಸಂಜನಾ ಬುರ್ಲಿ, ಮಂಜು ಭಾಷಿಣಿ, ಧನುಷ್, ಪವನ್ ಕುಮಾರ್, ಚಂದನಾ ಮಹಾಲಿಂಗಯ್ಯ, ಸಾರಿಕಾ ರಾಜೆ ಅರಸ್, ಅಕ್ಷರ, ಹಂಸ ನಾರಾಯಣ್ ಮತ್ತು ಅನೇಕ ಪ್ರಮುಖ ನಟರು ಧಾರಾವಾಹಿಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಈ ಧಾರಾವಾಹಿಯಲ್ಲಿ ತಾಯಿ ಒಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಹೇಗೆ ಸಾಕುತ್ತಾಳೆ. ಕಷ್ಟಪಟ್ಟು ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಅವರಿಗೆ ಮದುವೆ ಮಾಡುವುದು ಹೇಗೆ.? ಯಾರ ಸಹಾಯವೂ ಪಡೆಯದೇ ಮಕ್ಕಳನ್ನು ಹೇಗೆ ಸಾಕುತ್ತಾಳೆ ಎಂಬುದೇ ಈ ಸಿರಿಯಲ್ ನ ಕಥೆ.
ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇಂದಿಗೆ 100 ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಧಾರಾವಾಹಿ ತಂಡ ಪ್ರೇಕ್ಷಕರನ್ನು ನೇರವಾಗಿ ತಲುಪುವ ನಿರ್ಧಾರ ಮಾಡಿ, ಇಂದು ಸಂಜೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಅಭಿಮಾನಿಗಳೊಟ್ಟಿಗೆ ಸಂಭ್ರಮಾಚರಣೆ ಮಾಡಿದೆ.


Click it and Unblock the Notifications











