Puttakkana Makkalu: ಪುಟ್ಟಕ್ಕನ ಹೋರಾಟಕ್ಕೆ ಹೊರಟ ಸುಬ್ಬು ಬಗ್ಗೆ ವೀಕ್ಷಕರಿಗೆ ಅಯ್ಯೋ ಪಾಪ ಅನ್ನಿಸಿದ್ದೇಕೆ..?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಿಂದ ನಂಬರ್ ಒನ್ ಸ್ಥಾನವನ್ನೇ ಉಳಿಸಿಕೊಂಡಿತ್ತು. ಧಾರಾವಾಹಿಯ ಕಥೆಯೂ ಅಷ್ಟೇ ಗಟ್ಟಿಯಾಗಿತ್ತು. ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿತ್ತು. ಮೂರು ಹೆಣ್ಣು ಮಕ್ಕಳು, ಬಡತನ, ಸ್ವಾಭಿಮಾನ, ಹಠ, ಛಲ ಎಲ್ಲವೂ ಆ ಧಾರಾವಾಹಿಯಲ್ಲಿ ಅಡಗಿತ್ತು. ಸಹನಾ, ಸ್ನೇಹ, ಸುಮಾ ಮೂವರು ಹೆಣ್ಣು ಮಕ್ಕಳದ್ದು ಒಂದೊಂದು ಕಥೆಯಾಗಿತ್ತು. ತಾಯಂದಿರ ಕಷ್ಟವನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು, ತಾಯಿಗೆ ಬೇರೆಯವರ ಮುಂದೆ ಹೇಗೆ ಗೌರವ ಕೊಡಬೇಕು ಎಂಬುದೆಲ್ಲವನ್ನು ಪುಟ್ಟಕ್ಕ ಹಾಗೂ ಪುಟ್ಟಕ್ಕನ ಮಕ್ಕಳಿಂದ ಕಲಿಯುವ ಅಗತ್ಯವಿತ್ತು.
ಈಗ ಧಾರಾವಾಹಿಯ ರೀತಿಯೇ ಬೇರೆ ಆಗಿದೆ. ಹೊಸ ಧಾರಾವಾಹಿಗಳ ಆಗಮನ, ಹಳೆ ಧಾರಾವಾಹಿಗಳಿಂದ ಟಫ್ ಕಾಂಪಿಟೇಷನ್ ಎಲ್ಲದರಿಂದ ಪುಟ್ಟಕ್ಕ ಅದ್ಯಾಕೋ ಸ್ಪರ್ಧೆಗೆ ಒಡ್ಡುತ್ತಿಲ್ಲ. ಕೊಟ್ಟ ಟ್ವಿಸ್ಟ್‌ಗಳು ಜನರಿಗೆ ಕುತೂಹಲವನ್ನೇನು ಬರಿಸುತ್ತಿಲ್ಲ. ಇದೀಗ ಪುಟ್ಟಕ್ಕನ ಹೋರಾಟಕ್ಜೆ ಸುಬ್ಬು ಕೈ ಜೋಡಿಸಿದ್ದು, ವೀಕ್ಷಕರಿಗೇನೆ ಒಂದಷ್ಟು ಸಿಂಪಥಿ ಹುಟ್ಟಿದೆ.

ಸ್ನೇಹ ಮೇಲೆ ಆರೋಪ
ಸ್ನೇಹಾ ತನ್ನ ತಾಯಿಯ ಆಸೆಯಂತೆ ಡಿಸಿ ಆದ್ಲು. ಹಾಗೇ ಊರಿನ ಸಮಸ್ಯೆಯನ್ನು ಬಗೆಹರಿಸುತ್ತಿದ್ದಳು. ಆದರೆ ಸಿಂಗಾರಮ್ಮನ ಕುತಂತ್ರದಿಂದ ಆಕ್ಸಿಡೆಂಟ್‌ನಲ್ಲಿ ಸಾವನ್ನಪ್ಪಿದ್ದಳು. ಸ್ನೇಹಾ ಡಿಸಿಯಾಗಿದ್ದ ಕಾರಣ ಸಕಲ ಸರ್ಕಾರಿ ಗೌರವಗಳೊಂದಿಗೇನೆ ಅಂತ್ಯ ಸಂಸ್ಕಾರ ಮಾಡಲಾಯ್ತು. ಈ ವೇಳೆ ರಾಷ್ಟ್ರಧ್ವಜವನ್ನು ಹೊದಿಸಲಾಗಿತ್ತು. ಇದೀಗ ಪೊಲೀಸರು ಬಂದು ಆ ರಾಷ್ಟ್ರಧ್ವಜವನ್ನು ವಾಪಸ್ ಪಡೆದಿದ್ದಾರೆ.
ಪುಟ್ಟಕ್ಕನ ಬದುಕಿನಲ್ಲಿ ರಾಜಿ ಆಟ
ಸದ್ಯ ಸತ್ತು ಹೋಗಿರೋ ಸ್ನೇಹಾ ಮೇಲೆ ಭ್ರಷ್ಟಾಚಾರದ ಆರೋಪ ಕೇಳೊ ಬಂದಿದೆ. ರೈತರ ಜಮೀನುಗಳನ್ನು ಮೋಸ ಮಾಡಿರುವ ಆರೋಪ ಬಂದಿದೆ. ಹೀಗಾಗಿ ಸ್ನೇಹಾಳ ಪ್ರತಿಕೃತಿ ದಹಿಸಿ ಜನರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಸ್ನೇಹಾಳ ಇನ್ಶೂರೆನ್ಸ್ ಹಣ ಮೆರ್ಚ್ಯೂಡ್ ಆಗಿದೆ ಎಂದು ಇನ್ಶುರೆನ್ಸ್ ಅಧಿಕಾರಿಯೇ ಹೇಳಿದ್ದಾನೆ. ಅದನ್ನ ಶಾಲೆಗೆ ದಾನವಾಗಿ ಕೊಟ್ಟರೆ ಅದರಲ್ಲಿ ಹಣವೇ ಇರಲಿಲ್ಲ. ಇದೆಲ್ಲದರ ಹಿಂದೆ ರಾಜೀ ಕೈವಾಡವಿರೋದು ಕಾಣಿಸ್ತಾ ಇದೆ.
ಹೋರಾಟಕ್ಕೆ ಕುಂತ ಸುಬ್ಬು
ಮಗಳ ಮೇಲೆ ಬಂದಿರುವ ಆರೋಪ ಸತ್ಯವಲ್ಲ. ನನ್ನ ಮಗಳು ಭ್ರಷ್ಟಳಲ್ಲ ಎಂದು ಪುಟ್ಟಕ್ಕನ ಮನೆಯವರೆಲ್ಲ ಸೇರಿ ಹೋರಾಟಕ್ಕೆ ಕುಳಿತಿದ್ದಾರೆ. ಬಂಗಾರಮ್ಮ ಕೂಡ ಪುಟ್ಟಕ್ಕನ ಜೊತೆಗೆ ಕೂತಿದ್ದಾಳೆ. ಈಗ ಸುಬ್ಬು ಕೂಡ ಸಾಥ್ ನೀಡಿದ್ದಾನೆ. ಪುಟ್ಟಕ್ಕನ ಹೋರಾಟಕ್ಕೆ ಕೈ ಜೋಡಿಸಿದ್ದಾನೆ. ಸ್ನೇಹಾ ಯಾವ ಭ್ರಷ್ಟಾಚಾರವನ್ನು ಮಾಡಿಲ್ಲ, ರೈತರ ಯಾವ ಭೂಮಿಯನ್ನು ಕಬಳಿಸಿಲ್ಲ ಎಂಬುದನ್ನು ಪ್ರೂವ್ ಮಾಡಬೇಕಿದೆ. ಹೀಗಾಗಿಯೇ ಮನೆಯವರೆಲ್ಲ ಧರಣಿ ಕೂತಿದ್ದಾರೆ.
ಸುಬ್ಬು ಕಂಡು ವೀಕ್ಷಕರ ಸಿಂಪಥಿ
ಸುಬ್ಬು ಕೂಡ ಪ್ರತಿಭಟನೆ ಕೂತಿದ್ದು ಕಂಡು ವೀಕ್ಷಕರಿಗೆ ಶಾಕ್ ಆಗಿದೆ. ಪೋಸ್ಟರ್ ಒಂದನ್ನು ಬಿಟ್ಟು, ಇದನ್ನ ಗೆಸ್ ಮಾಡಿ ಎಂದಾಗ ಸುಬ್ಬು ಹೆಸರೇ ಹೆಚ್ಚಾಗಿ ಕಮೆಙಟ್ ಮಾಡಿದ್ದಾರೆ. ಆದ್ರೆ ಸುಬ್ಬು ಧರಣಿ ಕೂತಿದ್ದು ಕಂಡು ವೀಕ್ಷಕರು ಶಾಕ್ ಆಗಿದ್ದಾರೆ. ಯಾಕಂದ್ರೆ ಸುಬ್ಬು ಜೀವನವೇ ಈಗ ತೂಗುಯ್ಯಾಲೆ ಆಗಿದೆ. ಶ್ರಾವಣಿಯನ್ನ ಮದುವೆಯಾಗಿಲ್ಲ ಆದರೂ ಗಂಡನೆಂದು ಒಪ್ಪಿಕೊಂಡಿದ್ದಾನೆ. ಅತ್ತ ಯಜಮಾನರ ಮನೆ ಮುಂದೆ ಹೋಗಿ ಹೋಗಿ ನಿಲ್ಲುತ್ತಿದ್ದಾನೆ. ಇದೆಲ್ಲ ಗೊತ್ತಿರುವ ವೀಕ್ಷಕರು ಸುಬ್ಬುದೇ ಜೀವನ ಸರಿ ಇಲ್ಲದೆ ಇರುವಾಗ ಸುಬ್ಬು ಬಂದು ಪುಟ್ಟಕ್ಕನ ಜೊತೆಗೆ ಪ್ರತಿಭಟನೆಗೆ ಕೂತಿದ್ದಾನೆ ಎನ್ನುತ್ತಿದ್ದಾರೆ. ಆದರೂ ಸುಬ್ಬು ಮನಸ್ಸು ಗ್ರೇಟ್ ಅಂತಿದ್ದಾರೆ. ತನಗೆ ಕಷ್ಟ ಆದ್ರೂ ಬೇರೆಯವರ ಕಷ್ಟಕ್ಕೆ ಮಿಡಿಯುತ್ತಿದ್ದಾನೆ ಅಂತಿದ್ದಾರೆ.


Click it and Unblock the Notifications











