ಡಿಸಿ ಸ್ನೇಹಾ ಸಾವಿಗೆ ಅಜ್ಜಿ ಹಾರ್ಟ್ ವೀಕ್; ಕಮೆಂಟ್ ನೋಡಿ ನಕ್ಕು ನಕ್ಕು ಸಾಯೋದು ಫಿಕ್ಸ್..!

By ಎಸ್ ಸುಮಂತ್

ಇತ್ತೀಚಿನ ದಿನಗಳಲ್ಲಿ ಧಾರಾವಾಹಿ ಪ್ರಿಯರು ಕಡಿಮೆ ಏನು ಇಲ್ಲ. ಈ ಮೊದಲೆಲ್ಲ ಧಾರಾವಾಹಿ ಅಂದ್ರೆ ಹೆಣ್ಣು ಮಕ್ಕಳಿಗೆ ಮಾತ್ರ ಎಂಬಂತ ಮಾತುಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ. ಎಷ್ಟೋ ಧಾರಾವಾಹಿಗಳಿಗೆ ಗಂಡು ಮಕ್ಕಳು ಕೂಡ ಅಭಿಮಾನಿಗಳಾಗಿದ್ದಾರೆ. ಅಮ್ಮಂದಿರ ಜೊತೆಗೆ ಕೂತು ಸೀರಿಯಲ್ ನೋಡುತ್ತಾರೆ. ಕಥೆ, ಮೇಕಿಂಗ್ ಎಲ್ಲವೂ ಅಷ್ಟು ರಿಚ್ ಆಗಿನೇ ಇದೆ.

ಈಗ ಪ್ರಸಾರ ಆಗ್ತಾ ಇರುವಂತ ಎಲ್ಲಾ ಧಾರಾವಾಹಿಗಳು ಕೂಡ ಮೆಗಾ ಧಾರಾವಾಹಿಯೇ ಆಗಿದೆ. ವರ್ಷಾನುಗಟ್ಟಲೇ ಟೆಲಿಕಾಸ್ಟ್ ಆಗುತ್ತವೆ. ಅದರಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಹಲವು ವರ್ಷಗಳಿಂದ ಬರುತ್ತಿದೆ. ಕೆಲವೊಂದು ಸಲ ಬಿಟ್ಟರೆ ಈ ಸಿರಿಯಲ್ ತನ್ನ ಟಿಆರ್ಪಿಯಲ್ಲೂ ಹಿಂದೆ ಬಿದ್ದಿಲ್ಲ. ಕಥೆಯಲ್ಲೂ ಒಳ್ಳೆ ಟ್ವಿಸ್ಟ್ ನೀಡುತ್ತಲೆ ಇದೆ. ಇದೀಗ ಡಿಸಿ ಸ್ನೇಹಾ ಸಾವಿನಿಂದ ಅಜ್ಜಿ ನೊಂದು ಬೆಂದಿದ್ದಾರೆ.

Zee kannada puttakkana makkalu Written Update on Troll page comment based story

ಪುಟ್ಟಕ್ಕನ ಆಸೆ ಈಡೇರಿಸಿದ್ದ ಸ್ನೇಹಾ

ಗಂಡನನ್ನು ಬಿಟ್ಟು ಬಂದ ಮೇಲೆ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದ ಪುಟ್ಟಕ್ಕ, ಮಕ್ಕಳ ಓದಿಗೇನೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಳು. ಅದರಲ್ಲೂ ಎರಡನೇ‌ಮಗಳು ಸ್ನೇಹಾ ಡಿಸಿಯಾಗಬೇಕು ಎಂದೇ ಬಯಸಿದ್ದಳು. ಮದುವೆಯಾದ ಮೇಲೆ ಸ್ನೇಹಾ ಕಷ್ಟಪಟ್ಟು ಓದಿ, ಡಿಸಿಯಾದಳು. ಆದರೆ ಸಿಂಗಾರಮ್ಮ ಕೋಪಕ್ಕೆ ಆಕ್ಸಿಡೆಂಟ್ ನಲ್ಲಿ ಬಲಿಯಾದಳು.

ಅಜ್ಜಿ ಹಾರ್ಟ್ ವೀಕ್ ಆಗಿತ್ತಂತೆ

ಸ್ನೇಹಾಳಿಗೆ ಸಾಕಷ್ಟು ಅಭಿಮಾನಿಗಳಿದ್ದರು. ಕಂಠಿ-ಸ್ನೇಹಾಗೆ ಇದ್ದ ಫ್ಯಾನ್ಸ್ ಬೇರೆ. ಸ್ನೇಹಾ ಡಿಸಿಯಾದ ಮೇಲೆ ಅವಳ ಸಾಧನೆಯನ್ನು ಟಿವಿ ಮುಂದೆ ಕೂತು ಸಾಕಷ್ಟು ಜನ ಕೊಂಡಾಡುತ್ತಿದ್ದರು. ಅದರಲ್ಲೂ ಅಜ್ಜಿಯಂದಿರು ತುಂಬಾನೇ ಇಷ್ಟಪಡುತ್ತಿದ್ದರು. ಹಾಗೇ ಇಷ್ಟಪಡುತ್ತಿದ್ದ ಸ್ನೇಹಾ ಡಿಸಿಯಾದ ಮೇಲೆ ಸತ್ತು ಹೋದ್ರೆ..? ಎಂಥವರ ಹಾರ್ಟ್ ಗೆ ಆಗಲಿ ನೋವಾಗಲ್ವಾ. ಅದ್ಕೆ ಅಜ್ಜಿ ಹಾರ್ಟ್ ಅರ್ಧ ವೀಕ್ ಆಗಿದ್ಯಂತೆ. ಅದನ್ನ ಪಾಪ ಅವರ ಮೊಮ್ಮಗ ನೊಂದು ಕಮೆಂಟ್ ಹಾಕಿದ್ದಾರೆ.

ನೆಟ್ಟಿಗರ ಕಾಮೆಂಟ್

ಟೆಲಿವುಡ್ ಕನ್ನಡ ಎಂಬ ಟ್ರೋಲ್ ಪೇಜ್ ನಲ್ಲಿ ಪುಟ್ಟಕ್ಕನ ಮಕ್ಕಳು ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಬಂದಂತ ಬೆಸ್ಟ್ ಕಮೆಂಟ್ ಇದಾಗಿದೆ. 'ನಮ್ಮ ಅಜ್ಜಿ ಹಾರ್ಟ್ ಪುಟ್ಟಕ್ಕನ ಮಕ್ಕಳು ನೋಡೊ ಅರ್ಧ ವೀಕ್ ಆಗಿದೆ. ಡಿಸಿ ಸತ್ತಾಗಲೇ ನನ್ನು ಕರ್ಕೊಂಡ್ ಬಿಡು ದೇವ್ರೆ ಅಂತಿದ್ರು. ನಮ್ಮ ಅಜ್ಜಿ ಜೀವ ಉಳಿಸಿ' ಎಂದು ಜಯರಾಮ್ ಎನ್ನುವವರು ಕಮೆಂಟ್ ಹಾಕಿದ್ದಾರೆ. ಅದಕ್ಕೆ ಇನ್ನೊಬ್ಬರು ಕಮೆಂಟ್ ಮಾಡಿದ್ದು, ಅಪ್ಪಿ ತಪ್ಪಿತಪ್ಪಿಯೂ ಭಾಗ್ಯಲಕ್ಷ್ಮೀ ಸೀರಿಯಲ್ ತೋರಿಸಿಬಿಟ್ಟೀರಾ. ಅಲ್ಲಿ ಸಿಕ್ಕಾಪಟ್ಟೆ ಎಮೋಷನಲ್ಸ್ ಸೀನ್ಸ್ ನಡಿತಾ ಇದೆ ಎಂದು ಕಮೆಂಟ್ ಹಾಕಿದ್ದಾರೆ.

ಕಮೆಂಟ್ ಓದಿದವರು ನಕ್ಕು ನಕ್ಕು ಸುಸ್ತು

ಇದೊಂದೆ ಕಮೆಂಟ್ ಅಂತ ಅಲ್ಲ. ಸಾಕಷ್ಟು ಫನ್ನಿ ಕಮೆಂಟ್ ಗಳು ಈ ಪೋಸ್ಟ್ ಗೆ ಬಂದಿವೆ. ಎಲ್ಲರಿಗೂ ಪಾಪ ಜಯರಾನ್ ಅವರ ಅಜ್ಜಿಯದ್ದೇ ಚಿಂತೆಯಾಗಿದೆ. ನಿಜವಾಗಿಯೂ ಅವರ ಅಜ್ಜಿ ಧಾರಾವಾಹಿ ಪ್ರಿಯರ..? ಸ್ನೇಹಾರ ಅಭಿಮಾನಿಯ ಎಂಬ ಹಲವು ಪ್ರಶ್ನೆಗಳು ವೀಕ್ಷಕರನ್ನ ಕಾಡುತ್ತಿವೆ.

More from Filmibeat

English summary
Zee kannada puttakkana makkalu Written Update on Troll page comment based story. Here is the details about DC Sneha's death has been a heartbreaking for grand mother;
Read more about: serial filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X