ರಿಷಿಕಾ ರಗಳೆ; ಗುಟ್ಟು ಬಿಚ್ಚಟ್ಟ ದಿಗಂತ್-ಐಂದ್ರಿತಾ

ಕನ್ನಡದ ನಟ-ನಟಿಯರ ಬಗ್ಗೆ ಕೇಳಿದ ಪ್ರಶ್ನೆಗೆ ದಿಂಗತ್ ನೀಡಿದ ಉತ್ತರ ಮಾರ್ಮಿಕ ಎನಿಸುವಂತಿತ್ತು. ಎಲ್ಲರನ್ನು ಮೆಚ್ಚಿಕೊಳ್ಳುವ ಹಚ್ಚಿಕೊಳ್ಳುವ ದಿಗಂತ್ ಸ್ವಭಾವ ಅವರ ಉತ್ತರದಲ್ಲೂ, ಅದನ್ನು ಹೇಳುವ ರೀತಿಯಲ್ಲೂ ವ್ಯಕ್ತವಾಗುತ್ತಿತ್ತು. ಅತ್ಯುತ್ತಮ ಕನ್ನಡದ ನಟ ಸುದೀಪ್ ಅಂದರೆ ನಟಿ ರಾಧಿಕಾ ಪಂಡಿತ್ ಎಂದರು ದಿಗಂತ್. ಇನ್ನು ಐಂದ್ರಿತಾ ರೇ ಕೂಡ ಸುದೀಪ್ ಹೆಸರನ್ನೇ ಹೇಳಿದ್ದು ವಿಶೇಷ ಎನಿಸಿತು.
ದಿಗಂತ್ ಹಾಗೂ ಐಂದ್ರಿತಾ ಜೋಡಿಗೆ ಬಿಂದಾಸ್ ಆಗಿ ಪ್ರಶ್ನೆ ಕೇಳಿದ ರಿಷಿಕಾಗೆ ಭಾರಿ ಬಿಂದಾಸ್ ಆಗಿಯೇ ಉತ್ತರ ಕೊಟ್ಟ ಈ ಜೋಡಿಹಕ್ಕಿಗಳು ರಿಷಿಕಾ ನೀಡಿದ ಎಲ್ಲಾ ಸ್ಪರ್ಧೆಗಳಲ್ಲೂ ಜಯ ದಾಖಲಿಸಿದರು. ಕೊನೆಗೆ ಈ ಇಬ್ಬರಲ್ಲಿ ದಿಗಂತ್ ಗೆದ್ದು ಗೆಲುವಿಗೆ ಕೊಡುವ ಬಹುಮಾನ ತಮ್ಮದಾಗಿಸಿಕೊಂಡರು. ಜೊತೆಗಿದ್ದ ಐಂದ್ರಿತಾ 'ನಿನದೆಲ್ಲಾ ನನದೇ..' ಎಂದು ಹಾಡಿದಂತೆ ಪ್ರೇಕ್ಷಕರಿಗೆ ಕೇಳಿಸಿದ್ದರೆ ಆಶ್ಚರ್ಯವೇನೂ ಇಲ್ಲ.
ಶೋ ಕೊನೆಯಲ್ಲಿ ನಿರೂಪಕಿ (!) ರಿಷಿಕಾ ಸಿಂಗ್, "ಇಷ್ಟು ಹೊತ್ತೂ ನಾವು ಮಾಡಿದ್ದು ಒಂದು 'ಫನ್ನಿ ಶೋ'. ಇದನ್ನು ತುಂಬಾ ಚೆನ್ನಾಗಿ, ಬಿಂದಾಸ್ ನಡೆ-ನುಡಿಗಳಿಂದ ನೆರವೇರಿಸಿಕೊಟ್ಟರು ನಮ್ಮ ಇಂದಿನ ಜೋಡಿ ದೂದ ಪೇಡಾ ದಿಗಂತ್ ಹಾಗೂ ಐಂದ್ರಿತಾ ರೈ. ನೀವಿಬ್ಬರೂ ನನ್ನ ಸ್ನೇಹಿತರಿದ್ದಂತೆ ಎಂದು ತಮ್ಮ ನಿನ್ನೆಯ ಕಾರ್ಯಕ್ರಮಕ್ಕೆ ತೆರೆ ಎಳೆದರು. ತಕ್ಷಣ, ದಿಗಂತ್-ಐಂದ್ರಿತಾ ಜೋಡಿ ಟಿವಿ ಪರದೆಯಿಂದ ಮರೆಯಾಯ್ತು! (ಒನ್ ಇಂಡಿಯಾ ಕನ್ನಡ)


Click it and Unblock the Notifications











