ಲವ್, ಫ್ಲರ್ಟ್, ಬಾಯ್ ಫ್ರೆಂಡ್ ಬಗ್ಗೆ ಸುಕೃತಾ ಇಷ್ಟೊಂದು ತಿಳ್ಕೊಂಡವ್ರ?
ಜೀ ಕನ್ನಡದಲ್ಲಿ 'ಭರ್ಜರಿ ಬ್ಯಾಚುಲರ್- 2' ಶೋ ಶುರುವಾಗಿದೆ. ಈ ಶೋನಲ್ಲಿ ಹಲವು ಜೋಡಿಗಳು ಮನರಂಜನೆ ನೀಡುತ್ತಿದ್ದಾರೆ. ಅದರಲ್ಲೂ ಸುಕೃತಾಗೆ ಪ್ರವೀಣ್ ಜೋಡಿಯಾಗಿದ್ದಾರೆ. ಹೆಣ್ಣು ಮಕ್ಕಳನ್ನ ಇಂಪ್ರೆಸ್ ಮಾಡುವ ಟಾಸ್ಕ್‌ನಲ್ಲಿ ಸುಕೃತಾಗೆ, ಪ್ರವೀಣ್ ಅವರ ತಂದೆಯ ಜೊತೆಗಿನ ಫೋಟೋ ಗಿಫ್ಟ್ ನೀಡಿದ್ದರು. ಸದ್ಯ 'ಭರ್ಜರಿ ಬ್ಯಾಚುಲರ್ಸ್-2' ಶೋ ಟೀಂ ಕೂಡ ಮನರಂಜನೆ ಕೊಡೋದಕ್ಕೆ ಎಫರ್ಟ್ ಹಾಕ್ತಾ ಇದ್ದಾರೆ.
ಸುಕೃತ ನಾಗ್ ಕಲರ್ಸ್ ಕನ್ನಡದ ಸೀರಿಯಲ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ 'ಅಗ್ನಿಸಾಕ್ಷಿ' ಸೀರಿಯಲ್‌ನಲ್ಲಿ ಅಂಜಲಿ ಎಂಬ ಪಾತ್ರದಲ್ಲಿ ಸುಮಾರು ವರ್ಷಗಳ ಕಾಲ ನಟಿಸಿದ್ರು. ಇತ್ತೀಚೆಗೆ 'ಭಾಗ್ಯಲಕ್ಷ್ಮೀ' ಸೀರಿಯಲ್‌ನಲ್ಲಿ ಕನ್ನಿಕಾ ಎಂಬ ನೆಗೆಟಿವ್ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಈಗಿನ ಕೋಡ್ ವರ್ಡ್ಸ್ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅದೇನಂಥ ಹೇಳ್ತೀವಿ ಓದಿ.

ಬಾಯ್ಸ್ ಕಥೆ ಹೇಳಿದ ಸುಕೃತಾ
ಹುಡುಗರ ವಿಚಾರದಲ್ಲಿ ಫ್ಲಾಗ್ ಬಗ್ಗೆ ಡಿಟೈಲ್ ಆಗಿ ಹೇಳಿದ್ದಾರೆ. ರೆಡ್ ಫ್ಲಾಗ್, ಗ್ರೀನ್ ಫ್ಲಾಗ್, ಬೇಜ್ ಫ್ಲಾಗ್. ರೆಡ್ ಫ್ಲಾಗ್ ಅಂದ್ರೆ ಫುಲ್ ಟಾಕ್ಸಿಕ್. ಒಬ್ಬರ ಜೊತೆಗೆ ಇರಲ್ಲ. ಸಿಕ್ಕ ಸಿಕ್ಕವರ ಜೊತೆಗೆ ಓಡಾಡೋದು. ಗ್ರೀನ್ ಫ್ಲಾಗ್ ಅಂದ್ರೆ ಜಂಟಲ್ ಮ್ಯಾನ್. ಒಬ್ಬಳೇ ಗರ್ಲ್ ಫ್ರೆಂಡ್. ಯಾರಿಗೂ ಮೋಸ ಮಾಡಲ್ಲ. ಬೇಜ್ ಫ್ಲಾಗ್ ಅಂದ್ರೆ ಜೆನ್ಯೂನ್ ಆಗಿನೂ ಇರಲ್ಲ. ಫ್ಲರ್ಟ್ ಕೂಡ ಮಾಡ್ಕೊಂಡು ಓಡಾಡ್ತಾರೆ. ಇದು ಹುಡುಗರ ನಡವಳಿಕೆ ಅಂತ ಮಾಹಿತಿ ನೀಡಿದ್ದಾರೆ.
ಆಶ್ಚರ್ಯದಿಂದ ಕೇಳಿದ ರಚ್ಚು
ಸುಕೃತಾ ಅವರ ಈ ಮಾತನ್ನು ಕೇಳಿದ ರಚಿತಾ ರಾಮ್‌ಗೆ ಆಶ್ಚರ್ಯವಾಗಿದೆ. ಹಾಗಾದ್ರೆ ಹುಡುಗ್ರು ಈಗ ಹೇಳಿದ್ದಾರೆಂದು ಕೇಳಿದ್ದಾರೆ. ಅದಕ್ಕೆ ಕಾಲೆಳೆದ ನಿರಂಜನ್ ಹುಡುಹ್ರು ಓಡಾಡ್ತಾ ಯಾವ ಫ್ಲಾಗ್ ಹಿಡಿದುಕೊಂಡು ಬರೋದು ಅಂತ ಕೇಳ್ತಾ ಇದಾರೆ ಎಂದಿದ್ದಾರೆ. ಆಗ ಸುಕೃತಾ, ಹುಡುಗರು ಗ್ರೀನ್ ಫ್ಲಾಗ್ ನಲ್ಲಿರಬೇಕು. ಆದರೆ ಈಗಿನ ಕಾಲದ ಹುಡುಗರೆಲ್ಲಾ ಆಲ್ಮೋಸ್ಟ್ ರೆಡ್ ಫ್ಲಾಗ್ ಹಿಡಿದಿರುವವರೆ ಎಂದು ಹುಡುಗರ ಮರ್ಯಾದೆ ತೆಗೆದಿದ್ದಾರೆ.
ವೇದಿಕೆ ಮೇಲೆ ಹೇಳಿದ್ದೇನು ಸುಕೃತಾ
ಸುಕೃತಾ ಫ್ಲಾಗ್ ಬಗ್ಗೆ ಹೇಳುತ್ತಾ ಬರೀ ಹುಡುಗರ ಮರ್ಯಾದೆ ಮಾತ್ರ ತೆಗೆದಿದ್ದಲ್ಲ. ಇತ್ತ ಹುಡುಗಿಯರನ್ನು ಸಾಚಾ ಅಲ್ಲ ಅಂದುಬಿಟ್ರು. ಹುಡುಗಿರೇನು ಕಡಿಮೆ ಇಲ್ಲ ಹುಡುಗಿಯರಿಗೂ ಅಷ್ಟೇನೆ. ರೆಡ್ ಫ್ಲಾಗ್ ಥರಾನೇ ಬಾಯ್ ಫ್ರೆಂಡ್‌ನ ಚೇಂಜ್ ಮಾಡ್ತಾನೆ ಇರ್ತರೆ ಅಂತ ಟಾಂಟ್ ಕೊಟ್ಟಿದ್ದಾರೆ.
ಕ್ರೇಜಿಸ್ಟಾರ್ ಕೂಡ ಶಾಕ್
ಕ್ರೇಜಿಸ್ಟಾರ್ ರವಿಚಂದ್ರನ್ ಈ ಶೋನ ಜಡ್ಜ್ ಆಗಿದ್ದಾರೆ. ಈ ಮೊದಲೇ ಸುಕೃತಾ ಹೇಳಿದ್ದ ಬಾಯ್ ಬೆಸ್ಟೀ ವಿವರಣೆ ಕೇಳಿ ಬೆಸ್ತು ಬಿದ್ದು ಹೋಗಿದ್ದರು. ಬಾರಮ್ಮ ಒಂದು ವಾರ ಈ ಜಡ್ಜ್ ಪ್ಲೇಸ್‌ನಲ್ಲಿ ಕೂತ್ಕೊ ಅಂತ ಹೇಳಿದ್ರು. ಇದೀಗ ಫ್ಲಾಗ್ ವಿವರಣೆ ಕೇಳಿಯೂ ಶಾಕ್ ಆಗಿದ್ದಾರೆ. ಇಂದು ಸುಕೃತಾ ಅವರ ಆಸೆಯನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಈಡೇರಿಸಿದ್ದಾರೆ. ರವಿಚಂದ್ರನ್ ಜೊತೆಗೆ ಡ್ಯಾನ್ಸ್ ಮಾಡಬೇಕೆಂಬ ಆಸೆ ಅವಳದ್ದಾಗಿತ್ತು. ಅದನ್ನ ಈಡೇರಿಸಿದ್ದಾರೆ. ಬಂಗಾರದಿಂದ ಬಣ್ಣಾನ ತಂದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸುಕೃತಾ ಅಂತು ಇದರಿಂದ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











