ನುಗ್ಗೆಕಾಯಿ ಬಿಟ್ಟು ಮೀನಿಂದೆ ಬಿದ್ದ ಕ್ರೇಜಿಸ್ಟಾರ್; ಭರ್ಜರಿ ಬ್ಯಾಚುಲರ್ ಆಯ್ತು ಫುಲ್ ಪೋಲಿ

By ಎಸ್ ಸುಮಂತ್

ಭರ್ಜರಿ ಬ್ಯಾಚುಲರ್‌-2 ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜಡ್ಜ್ ಆಗಿದ್ದಾರೆ. ಅವರು ಎಲ್ಲರಿಗೂ ಪ್ರೇಮಗುರು. ಅವರಿದ್ದರೇನೆ ಒಂದು ಕ್ರೇಜ್, ಅಲ್ಲಿರುತ್ತೆ ಜೋಶ್. ಆಗಷ್ಟೇ ಆ ಕಾರ್ಯಕ್ರಮದ ಅಂದ ಹೆಚ್ಚುವುದು. ಈಗ ಭರ್ಜರಿ ಬ್ಯಾಚುಲರ್- 2ನಲ್ಲೂ ಅದು ನಿಜವಾಗಿದೆ. ಪ್ರೋಗ್ರಾಂ ನೋಡುವುದಕ್ಕೇನೆ ಫುಲ್ ಖುಷಿ ಎನಿಸುತ್ತದೆ.

ಸುಕೃತಾ ನಾಗ್, ಅಭಿಜ್ಞಾ ಸಿಕ್ಕಾಪಟ್ಟೆ ಬೋಲ್ಡ್ ಆಗಿನೇ ಮಾತಾಡ್ತಾರೆ. ಇಂದು ಅಭಿಜ್ಞಾ ಹಾಗೂ ಸೂರ್ಯ ಕಾಂತಾರ ಸೀನ್ ಅನ್ನು ರಿಕ್ರಿಯೇಟ್ ಮಾಡಿದ್ದರು. ಅದರಲ್ಲಿ ಶಿವು ಹಾಗೂ ಲೀಲಾ ಕಿತ್ತಾಟ, ಮುದ್ದಾಟ, ಮೀನಾಟ ಎಲ್ಲವೂ ಇತ್ತು. ಅದರಲ್ಲೂ ಕಡೆಯಲ್ಲಿ ಕ್ರೇಜಿ ಸ್ಟಾರ್ ಟಾಕ್ ಇನ್ನು ಸಖತ್ತಾಗಿತ್ತು.

Zee Kannada reality show Bharjari Bachelors-2 double meaning dialogues

ಅಭಿಜ್ಞಾರೇ ಟ್ರೈನರ್

ಸೂರ್ಯ ಕಾಮಿಡಿಯನ್ನ ನೋಡಿದ್ರಿ ಆದರೆ ಅವರಲ್ಲಿ ರೋಮ್ಯಾಂಟಿಕ್ ಗುಣ ತೋರಿಸುವುದಕ್ಕೆ ಹಿಂಗೆ ಮಾಡಿದ್ವಿ ಎಂದ ಅಭಿಜ್ಞಾ, ರಿಹರ್ಸಲ್ ಸಮಯದಲ್ಲಿ ಅವರೇ ಹೇಳಿಕೊಟ್ಟಿದ್ದರು. ಅದನ್ನ ಸ್ಟೇಜ್ ಮೇಲೆ ಹಂಚಿಕೊಂಡಿದ್ದು, ಮೀನಿನ ಮಹತ್ವವನ್ನ ಹೇಳಿದ್ದಾರೆ. 'ಆಕ್ಚುಲಿ ನಾನು ವೆಜಿಟೇರಿಯನ್ ಮೀನು ತಿನ್ನಲ್ಲ. ಆದರೆ ಕುಡ್ಲದವಳು. ಸೋ ನಮ್ಮ ಅಕ್ಕ ಪಕ್ಕದ ಮನೆಯವರಲ್ಲಿ ಯಾವಾಗಲೂ ಮೀನೆ. ಮೀನನ್ನ ತಿಂದರೆ ಮಂಡೆಗೂ ಒಳ್ಳೆಯದು. ಐಲವ್ ಯೂ ಎನ್ನುವ ಬದಲು, ಹೇ ಬಾಗಿ ನಿಂಗಾಗಿ ಮೀನು ತಂದಿದ್ದೇನೆ ಸಾರು ಮಾಡ್ಬಿಡು, ಬೇಗ ಬರ್ತೇನೆ ಎನ್ನುತ್ತಾರೆ. ಬಾಗಿ ಮನೆಯಲ್ಲಿ ಮೀನು ಸಾರು ಎಂದರೆ ಅರ್ಥ ಮಾಡಿಕೊಳ್ಳಬೇಕು ಅವತ್ತು ಏನೋ ಸ್ಪೆಷಲ್ ಅಂತ. ನಮ್ಮ ಕಡೆಯೆಲ್ಲಾ ಏಡಿ, ಮೀನು ಕೊಟ್ಟು ಇಂಪ್ರೆಸ್ ಮಾಡ್ತಾರೆ' ಎಂದಿದ್ದಾರೆ.

ಮೀನಿನ ಕಥೆ ಕೇಳಿದ ಕ್ರೇಜಿ ಸ್ಟಾರ್

ಅಭಿಜ್ಞಾ ಹೇಳಿದ ಮಾತಿಗೆ ಕ್ರೇಜಿಸ್ಟಾರ್‌ಗೆ ಕ್ಯೂರಿಯಾಸಿಟಿ ಜಾಸ್ತಿ ಆಯ್ತು. ಒಂದೊಂದೇ ಮೀನಿನ ಬಗ್ಗೆ ಕೇಳುತ್ತಾ ಸಾಗಿದರು. ಅದಕ್ಕೆ ಅಭಿಜ್ಞಾ ಕೂಡ ಉತ್ತರ ಕೊಟ್ಟಿದ್ದು, ಬಾಂಗ್ಡೆ ಮೀನು ಬರೀ ರೊಮ್ಯಾನ್ಸ್ ಅಷ್ಟೇ. ಕೈ ಕೈ ಹಿಡಿದುಕೊಳ್ಳೋದು, ಅಕ್ಕ ಪಕ್ಕ ಕುಳಿತುಕೊಳ್ಳೋದು. ಕಾಣೆ ಅಂದ್ರೆ ಸ್ವಲ್ಪ ಜಾಸ್ತಿ. ಏನು ಸಮಚಾರ. ಪಾಂಪ್ಲೆಟ್ ಕೊಟ್ರೆ ಲವ್ ಮಾಡೋದು ಲವ್. ಕ್ರ್ಯಾಬ್ ಕೊಟ್ರೆ ಫುಲ್ ಡೈರೆಕ್ಟ್. ಡೈರೆಕ್ಟ್ ಡೈರೆಕ್ಟ್ ಲವ್ ಮಾಡೋದು

ಉತ್ತರ ಕೇಳಿ ಕಾಲೆಳೆದ ಕ್ರೇಜಿ

ಇದೆಲ್ಲವನ್ನು ಕೇಳಿದ ನಿರಂಜನ್ ಶಾಕ್ ಆಗಿದ್ದಾರೆ. ನಾನು ಹಾಗಾದ್ರೆ ಏಡಿ ತಿನ್ನಲ್ಲಮ್ಮ ಇನ್ಮೇಲೆ ಎಂದಿದ್ದಾರೆ. ಆಗ ಅಭಿಜ್ಞಾ, ಅಯ್ಯಯ್ಯೋ ಇದು ಸುಮ್ನೆ ಹೇಳಿದ್ದು, ನಮ್ಮೂರಿನವರು ನೋಡಿ ಏನೇನೋ ಅಂದ್ಕೋಬೇಡಿ ಎಂದರು. ಆಗ ಕಾಲೆಳೆದ ಕ್ರೇಜಿಸ್ಟಾರ್, ಹಾಗಾದ್ರೆ ನಿಮ್ಮೂರಿನವರು ನೋಡಲ್ಲ ಅಂದ್ಕೊಂಡಿದ್ದೀರಾ ಇದನ್ನ. ಒಟ್ನಲ್ಲಿ ನಾಳೆ ನಾಳೆ ನಿಮ್ಮೂರಲ್ಲಿ ಯಾರು ಯಾವ ಥರದ ಮೀನು ತೆಗೆದುಕೊಂಡು ಹೋಗ್ತಾರೆ ಅದು ಯಾಕೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ಸುಕೃತಾಗೆ ಕ್ರೇಜಿ ಪ್ರಶ್ನೆ

ಸುಕೃತಾ ಅಂತು ಈಗಿನ ಜನರೇಷನ್ ಕೋಡ್ ವರ್ಡ್ಸ್‌ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ರವಿಚಂದ್ರನ್ ಅವರಿಗೂ ಸುಕೃತಾ ಕಡೆಯಿಂದ ಕೇಳೋದಕ್ಕೆ ಖುಷಿ. ಅದಕ್ಕೆ ಮೀನಿನ ಬಗ್ಗೆಯೂ ಕೇಳಿದ್ದಾರೆ. ಆದರೆ ಸುಕೃತಾ ಜಾಣೆ ಥರ, ಮೀನು ಕಣ್ಣಿಗೆ ಒಳ್ಳೆಯದು ಎಂದಿದ್ದಾರೆ. ಆಗ ರವಿಚಂದ್ರನ್ ನಾನು ಎದ್ದು ಹೋಗ್ತೀನಪ್ಪ ಎಂದಿದ್ದಾರೆ. ರವಿಚಂದ್ರನ್ 'ಬಾಂಗಡೆ ಮೀನು ಬಲೆಗೆ ಬಿದ್ದಾಗ' ಹಾಗೂ 'ಕಾಯಿ ಕಾಯಿ ನುಗ್ಗೆ ಕಾಯಿ' ಹಾಡನ್ನ ಚೆನ್ನಾಗಿ ವಿವರಿಸಿದ್ದಾರೆ. ಇದನ್ನು ಕೇಳಿದ ಭರ್ಜರಿ ಬ್ಯಾಚುಲರ್ ಶೋ-2ನಲ್ಲಿ ಪೋಲಿ ಮಾತು ಜಾಸ್ತಿ ಆಯ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

More from Filmibeat

English summary
Here is the details about policy talk on the bharjari bachelor-2 show;
Read more about: kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X