Bharjari Bachelors: 'ಮುಂಗಾರು ಮಳೆ' ರೀ-ಕ್ರಿಯೇಟ್ ಮಾಡಿದ ರುದ್ರ-ಚಂದನ.. ಅಳಬೇಕಾದವ್ರು ನಕ್ಕಿದ್ಯಾಕೆ?
ಜೀ ಕನ್ನಡದಲ್ಲಿ ವೀಕೆಂಡ್ ಸಿಕ್ಕಾಪಟ್ಟೆ ಮಜಾ ಕೊಡುತ್ತೆ. ಒಂದೊಂದು ಪ್ರೋಗ್ರಾಂ ಒಂದೊಂದು ರೀತಿಯ ವಿಭಿನ್ನತೆಯನ್ನು ಹೊಂದಿರುತ್ತದೆ. ಮನರಂಜನೆಯ ಮಹಾತಾಣವಾಗಿದೆ. ಹೊಸ ಕಾನ್ಸೆಪ್ಟ್‌ನಲ್ಲೂ ಪ್ರೋಗ್ರಾಂ ನೀಡುತ್ತಿದೆ. ಸದ್ಯ 'ಭರ್ಜರಿ ಬ್ಯಾಚುಲರ್ಸ್' ಪ್ರೋಗ್ರಾಂ ಅಂತು ಎಲ್ಲರ ಗಮನ ಸೆಳೆಯುತ್ತಿದೆ. ಒಂದಷ್ಟು ಜೋಡಿಗಳು ಈ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿವೆ.
ರವಿಚಂದ್ರನ್ ಹಾಗೂ ರಚಿತಾ ರಾಮ್ ಬ್ಯಾಚುಲರ್ಸ್ ಜಡ್ಜಸ್ ಆಗಿದ್ದಾರೆ. ಅಕುಲ್ ಎಲ್ಲರ ಕಾಲೆದುಕೊಂಡೆ ಕಾರ್ಯಕ್ರಮ ಮಾಡುತ್ತಾರೆ. ಹೊಸ ಹೊಸ ಟಾಸ್ಕ್‌ಗಳನ್ನು ನೀಡಿ, ಅದರಲ್ಲಿ ಬ್ಯಾಚುಲರ್ಸ್ ಹುಡುಗಿಯರ ಮನಸ್ಸನ್ನು ಗೆಲ್ತಾರಾ ಹೇಗೆ ಅನ್ನೋದನ್ನು ನೋಡ್ತಾರೆ. ಇವತ್ತು ಭರ್ಜರಿ ಬ್ಯಾಚುಲರ್ಸ್‌ನಲ್ಲಿ 'ಮುಂಗಾರು ಮಳೆ' ಸಿನಿಮಾದ ದೃಶ್ಯವನ್ನು ರೀ-ಕ್ರಿಯೇಟ್ ಮಾಡಲಾಗಿದೆ. ಆದರೆ, ಅದು ಮನರಂಜನೆಯಾಗಿ ಕಾಡಿದೆ.

"ರೀ ನಂದಿನಿ.." ಸದಾ ಕಾಡುವ ಡೈಲಾಗ್
'ಮುಂಗಾರು ಮಳೆ' ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಖಾತೆಯಲ್ಲಿ ಸದಾ ಮಿನುಗುವಂತ ಸಿನಿಮಾ. ಪೂಜಾ ಗಾಂಧಿಯನ್ನು ಪರಿಚಯಿಸಿದಂತ ಸಿನಿಮಾ. ಮುಂಗಾರು ಮಳೆ ಬಂದ ಮೇಲೆ ಪೂಜಾ ಗಾಂಧಿ ಮಳೆ ಹುಡುಗಿಯಾಗಿಯೇ ಪರಿಚಿತರಾದರೂ. ಅದರಲ್ಲೂ ಮಳೆಯಲ್ಲಿ ಕೂತು, ಬಾಟೆಲ್ ಹಿಡಿದುಕೊಂಡು "ರೀ ನಂದಿನಿ, ನೀವೂ ನಂಗೆ ಸಿಗೋದಿಲ್ಲ ಅಂತ ಗೊತ್ತಾಗೋಯ್ತು ಬಿಡ್ರಿ.." ಅನ್ನೋ ಡೈಲಾಗ್ ಈಗಲೂ ಎಷ್ಟೋ ಗಂಡು ಮಕ್ಕಳ ಹೃದಯ ಕೆದಕುವಂತ ಡೈಲಾಗ್. 2006ರಲ್ಲಿ ರಿಲೀಸ್ ಆಗಿದ್ದಂತಹ ಸಿನಿಮಾ ಇದು.
ನೀವೂ ಸಿಗಲ್ಲ ಅಂತ ಗೊತ್ತಾಗೋಯ್ತು ಎಂದ ರುದ್ರ
'ಮುಂಗಾರು ಮಳೆ'ಯ ಹಾಡುಗಳು, ಡೈಲಾಗ್ಸ್ ಸದಾ ಕಾಲಕ್ಕೂ ಸಲ್ಲುವಂತದ್ದೆ. ಈಗ 'ಭರ್ಜರಿ ಬ್ಯಾಚುಲರ್ಸ್' ಸ್ಟೇಜ್‌ನಲ್ಲಿ ರುದ್ರ ಮಾಸ್ಟರ್ ಹಾಗೂ ಚಂದನಾ ಇದೇ ಡೈಲಾಗ್ ಅನ್ನು ರೀ-ಕ್ರಿಯೇಟ್ ಮಾಡಿದ್ದಾರೆ. ಚಂದನಾ ಗುಲಾಬಿ ಬಣ್ಣದ ಗೌನ್ ತೊಟ್ಟು, ಕೊಡೆ ಹಿಡಿದು ನಿಂತರೆ, ನೆಲದ ಮೇಲೆ ಕೂತ ರುದ್ರ ಮಾಸ್ಟರ್ ಬಾಟೆಲ್ ಹಿಡಿದು ಡೈಲಾಗ್ ಡೆಲಿವರಿ ಮಾಡಿದ್ದಾರೆ.

ಅಳಬೇಕಾದ ಡೈಲಾಗ್‌ಗೆ ಎಲ್ಲರೂ ನಕ್ಕಿದ್ಯಾಕೆ?
ರುದ್ರ ಮಾಸ್ಟರ್ ಅಂದ್ರೆ ಡ್ಯಾನ್ಸ್.. ಡ್ಯಾನ್ಸ್ ಅಂದ್ರೆ ರುದ್ರ ಮಾಸ್ಟರ್.. ಆದ್ರೆ 'ಭರ್ಜರಿ ಬ್ಯಾಚುಲರ್ಸ್'ಗೆ ಬಂದ ಮೇಲೆ ಹೊಸ ಹೊಸ ಕಲೆಯನ್ನು ಹೊರ ಹಾಕುತ್ತಿದ್ದಾರೆ. ಅದರಲ್ಲಿ ಈಗ 'ಮುಂಗಾರು ಮಳೆ'ಯ ಡೈಲಾಗ್ ಕೂಡ ಒಂದು. ಇದು ಎಂಟರ್ಟೈನ್ಮೆಂಟ್ ವೇದಿಕೆಯೇ ಸರಿ. ಆದರೆ, ಆ ಒಂದು ಡೈಲಾಗ್ ಪರ್ಫಾಮೆನ್ಸ್ ಹೇಗಿರಬೇಕಿತ್ತು ಅಂದ್ರೆ ರುದ್ರ ಮಾಸ್ಟರ್ ಡೈಲಾಗ್ ಡೆಲವರಿಯಲ್ಲಿ, ನಂದಿನಿ ಪಾತ್ರ ವಹಿಸಿಕೊಂಡಿದ್ದ ಚಂದನಾ ಕಣ್ಣಲ್ಲಿ ಮತ್ತೊಮ್ಮೆ ನೋಡುಗರು ಕಳೆದು ಹೋಗಬೇಕಿತ್ತು. ಆದ್ರೆ ರುದ್ರ ಮಾಸ್ಟರ್ ಕಥೆ ಓದಿದ ಥರ ಡೈಲಾಗ್ ಹೇಳಿದ್ರು, ಯಾವುದೋ ಕಾಮಿಡಿ ಮಾಡ್ತಿದ್ದಾರೆ ಅನ್ನೋ ಥರ ಚಂದನಾ ಎಕ್ಸ್ ಪ್ರೆಷನ್ ಇತ್ತು. ಅಳು ಬರಬೇಕಾದವರ ಮುಖದಲ್ಲೆಲ್ಲಾ ಮಂದಹಾಸ ಮೂಡಿತ್ತು.
ರೀ-ಕ್ರಿಯೇಟ್ ಅಂದ್ರೆ ಅದು ಮಫ್ತಿ
ಕೆಲವೊಂದು ಸಿನಿಮಾಗಳು ಹಿಸ್ಟರಿ ಕ್ರಿಯೇಟ್ ಮಾಡಿರುತ್ತವೆ. ಅಂತಹ ಸಿನಿಮಾಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಾಗಲೂ ಯೋಚನೆ ಮಾಡಬೇಕಾಗುತ್ತದೆ. ಯಾಕಂದ್ರೆ, ಹಳೆಯದ್ದು ಜನರ ಮನಸ್ಸಲ್ಲಿ ಉಳಿದು ಬಿಟ್ಟಿರುತ್ತೆ. ಇತ್ತೀಚೆಗಷ್ಟೇ ಶಿವಣ್ಣ ಹಾಗೂ ಛಾಯಾ ಸಿಂಗ್ ಒಂದೇ ವೇದಿಕೆಯಲ್ಲಿ ಜೊತೆಗಿದ್ದರು. ಅದು ಡಿಕೆಡಿ. ಈ ವೇಳೆ 'ಮಫ್ತಿ' ಸಿನಿಮಾದ ಅಣ್ಣ ತಂಗಿಯ ಆ ಒಂದು ಡೈಲಾಗ್ ಅನ್ನು ರೀ-ಕ್ರಿಯೇಟ್ ಮಾಡುವುದಕ್ಕೆ ಹೊರಟಿದ್ದರು. ಸಿನಿಮಾ ನೋಡಿದಾಗಿನ ಭಾವನಾತ್ಮಕ ಸನ್ನಿವೇಶ ಹೇಗಿತ್ತೋ ರೀ-ಕ್ರಿಯೇಟ್ ಮಾಡಿದಾಗಲೂ ಎಲ್ಲರ ಮುಖದಲ್ಲಿ ಅದು ಮತ್ತೊಮ್ಮೆ ಕ್ರಿಯೇಟ್ ಆಗಿತ್ತು.


Click it and Unblock the Notifications











