ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಚಿನ್ನಿ ಮಾಸ್ಟರ್ ಲೈಫ್‌ ಸ್ಟೋರಿ ರಿವೀಲ್!

By ಎಸ್ ಸುಮಂತ್

ಡಿಕೆಡಿಯಲ್ಲಿ ಚಿನ್ನಿ ಮಾಸ್ಟರ್ ಕೂಡ ಸೆಂಟರ್ ಆಫ್ ಅಟ್ರಾಕ್ಷನ್. ಡಿಕೆಡಿಯಲ್ಲಿ ಅವರದ್ದೇ ಆದ ಒಂದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಇದೆ. ಲಕಲಕಲಕ ಎಂಬುದೇ ಈ ಸೀಸನ್ ನ ಫೇಮಸ್ ಕಮೆಂಟ್ ಆಗಿದೆ. ಅವರಿಗೆ ಡ್ಯಾನ್ಸ್ ಇಷ್ವಾದರೆ ಮುಗೀತು ಗಡ್ಡ ಕರೆದುಕೊಂಡು ಸಖತ್ ಡೈಲಾಗ್ ಹೊಡೆಯುತ್ತಾರೆ. ಆ ಡೈಲಾಗ್ ಹೊಡೆಯುವಾಗ ನೋಡುಗರೆಲ್ಲಾ ಒಂದು ಕ್ಷಣ ನಕ್ಕು ನಕ್ಕು ಖುಷಿ ಪಡುತ್ತಾರೆ. ಚಿನ್ನಿ ಮಾಸ್ಟರ್ ಎಂದಾಕ್ಷಣಾ ನೆನಪಾಗುವುದೇ ಲಕಲಕಲಕ ಡೈಲಾಗ್.

ಆದರೆ ಡಿಕೆಡಿಯಲ್ಲಿ ಈ ವಾರದ ಎಪಿಸೋಡ್ ಅದ್ಭುತವಾಗಿದೆ ಎಂದೇ ಹೇಳಬಹುದು. ಡ್ಯಾನ್ಸ್ ಜೊತೆ ಜೊತೆಗೆ ಭಾವನೆಗಳ ಮೇಲೆ ಮನರಂಜನೆ ನೀಡಿದ್ದಾರೆ. ಪ್ರತಿ ವಾರ ಓ ಮೈ ಗಾಡ್ ಎಂಬಂತ ಸ್ಟೆಪ್ ಹಾಕುತ್ತಿದ್ದವರು, ಈ ವಾರ ನೋಡುಗರ ಕಣ್ಣು ಒದ್ದೆ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಎಮೋಷನಲ್ ಸೀನ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಚಿನ್ನಿ ಮಾಸ್ಟರ್ ಎಪಿಸೋಡ್ ಕೂಡ ಒಂದು.

ವೇದಿಕೆ ಮೇಲೆ ಚಿನ್ನಿ ಮಾಸ್ಟರ್ ಜೀವನ

ವೇದಿಕೆ ಮೇಲೆ ಚಿನ್ನಿ ಮಾಸ್ಟರ್ ಜೀವನ

ಈ ವಾರದ ಸಂಚಿಕೆಯಲ್ಲಿ ಚಿನ್ನಿ ಮಾಸ್ಟರ್ ಬಗೆಗೊಂದು ಪ್ರದರ್ಶನ ನೀಡಿದ್ದಾರೆ. ಡ್ಯಾನ್ಸ್ ಮೂಲಕವೇ ಚಿನ್ನಿ ಮಾಸ್ಟರ್ ಬಗ್ಗೆ ಗೊತ್ತು ಮಾಡಿದ್ದಾರೆ. ಈ ಎಪಿಸೋಡ್ ನೋಡುವುದಕ್ಕೆ ಖುಷಿಯಾಗುತ್ತಿದೆ. ಚಿನ್ನಿ ಮಾಸ್ಟರ್ ಬಗ್ಗೆ ಗೊತ್ತಿಲ್ಲದವರಿಗೂ ಅದ್ಭುತವಾದ ರೀತಿಯಲ್ಲಿ ಗೊತ್ತು ಮಾಡಿದ್ದಾರೆ. ಚಿನ್ನಿ ಮಾಸ್ಟರ್ ಬದುಕು ಹೇಗಿತ್ತು, ಹೇಗೆಲ್ಲಾ ಬದಲಾಯಿತು, ಆ ಬದುಕಿನ ದಾರಿಯಲ್ಲಿ ಸವೆಸಿದ್ದೆಷ್ಟು, ಗಳಿಸಿದ್ದೆಷ್ಟು ಎಲ್ಲವೂ ಅನಾವರಣವಾಗಿದೆ. ತೆರೆ ಮೇಲೆ ಕಂಡಾಗ ಅವರನ್ನು ಕಣ್ಣಾರೆ ನೋಡಿ, ಮನಸಾರೆ ನಾವೂ ಹೀಗೆ ಆಗಬೇಕು ಎಂದುಕೊಳ್ಳುತ್ತೇವೆ. ಆದರೆ ಆ ಸ್ಥಾನಕ್ಕೆ ಬರುವುದಕ್ಕೆ ಮುನ್ನ ಅವರು ಪಟ್ಟ ಪಾಡು ಹೇಗಿರುತ್ತೆ ಎಂಬುದು ಗೊತ್ತಿರಲ್ಲ. ಅದನ್ನು ಇವತ್ತು ಡ್ಯಾನ್ಸ್ ಮೂಲಕ ತೋರಿಸಿದ್ದಾರೆ.

ಚಿನ್ನಿ ಮಾಸ್ಟರ್ ಸೃಷ್ಟಿಸಿ ಅರುಣ್ ಮಾಸ್ಟರ್

ಚಿನ್ನಿ ಮಾಸ್ಟರ್ ಸೃಷ್ಟಿಸಿ ಅರುಣ್ ಮಾಸ್ಟರ್

ಇಂದು ಡಿಕೆಡಿ ವೇದಿಕೆಯಲ್ಲಿ ತಮ್ಮ ಶಿಷ್ಯಂದಿರ ಜೊತೆಗೆ ಮಾಸ್ಟರ್ ಗಳು ಕುಣಿಯುವ ಎಪಿಸೋಡ್ ಆಗಿದೆ. ಹೀಗಾಗಿಯೇ ಮಕ್ಕಳ ಜೊತೆಗೆ ಮಾಸ್ಟರ್‌ಗಳು ದೃಶ್ಯ ಮಾಡಿದ್ದಾರೆ. ದೃಶ್ಯ ವೈಭದ ಜೊತೆಗೆ ಭಾವನೆಗಳ ಸಂಗಮವೂ ಆಗಿದೆ. ಅರುಣ್ ಮಾಸ್ಟರ್ ತಮ್ಮದೇ ಆದ ಶೈಲಿಯಲ್ಲಿ ಚಿನ್ನಿ ಮಾಸ್ಟರ್ ಜೀವನವನ್ನು ವೇದಿಕೆ ಮೇಲೆ ಬಿಡಿಸಿದ್ದಾರೆ. ಇದು ನೋಡುಗರನ್ನು ಬೆರಗುಗೊಳಿಸಿದೆ.

ದೃಶ್ಯ ನೋಡಿ ಚಿನ್ನಿ ಮಾಸ್ಟರ್ ತಬ್ಬಿದ ಜಡ್ಜಸ್

ದೃಶ್ಯ ನೋಡಿ ಚಿನ್ನಿ ಮಾಸ್ಟರ್ ತಬ್ಬಿದ ಜಡ್ಜಸ್

ಚಿನ್ನಿ ಮಾಸ್ಟರ್ ಭಾರತದ ಫೇಮಸ್ ನೃತ್ಯ ನಿರ್ದೇಶಕರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಕೂಡ ಕಷ್ಟದ ಹಾದಿಯನ್ನೇ ಸವೆಸಿದ್ದಾರೆ. ಯಶಸ್ಸು ಗಳಿಸುವ ಮುನ್‌ ಸೋಲು ಗೆಲುವು ಎಂಬುದು, ಎಲ್ಲರ ಜೀವನದಲ್ಲೂ ಇದ್ದಿದ್ದೆ. ಕಷ್ಟವೇ ಪಡದೆ, ಅವಮಾನವನ್ನೇ ಎದುರಿಸದೆ ಗೆದ್ದವರು ಯಾರು ಇಲ್ಲ. ಚಿನ್ನಿ ಮಾಸ್ಟರ್ ಕೂಡ ಆ ಸಮಯದಲ್ಲಿ ಹೆಚ್ಚು ಕುಗ್ಗಿದ್ದಾರೆ. ಕುಗ್ಗಿದಾಗ ಜೊತೆ ನಿಂತದ್ದು ಯಾರು ಗೊತ್ತಾ..? ಅಂಥ ಸಂದರ್ಭದಲ್ಲಿ ಜೊತೆಯಾದವರ ಬಗ್ಗೆಯೂ ಡ್ಯಾನ್ಸ್ ಮೂಲಕ ಅನಾವರಣಗೊಳಿಸಿದ್ದಾರೆ.

ಜೀವನಗಾಥೆ ಕೇಳಿ ಜಡ್ಜಸ್ ಹೇಳಿದ್ದೇನು?

ಅರುಣ್ ಮಾಸ್ಟರ್ ಇಂಥದ್ದೊಂದು ವೈಭವ ಕ್ರಿಯೇಟ್ ಮಾಡಿದ್ದು, ನೋಡುಗರಿಗೆ ಖುಷಿ ಕೊಟ್ಟಿದೆ. ವೇದಿಕೆ ಮೇಲೆ ಚಿನ್ನಿ ಮಾಸ್ಟರ್ ಕುಟುಂಬದ ಫೋಟೋಗಳೊಟ್ಟಿಗೆ ಡ್ಯಾನ್ಸ್ ಮಾಡಲಾಗಿದೆ. ಶಿವಣ್ಣ ಅಂತು ತುಂಬಾ ಖುಷಿ ಪಟ್ಟಿದ್ದು, ಮಹಾಗುರುಗೆ ಗುರು ಇವರು ಎಂದು ಹೊಗಳಿದ್ದಾರೆ. ನಿಮ್ಮ ಬಗ್ಗೆ ಬಹಳಷ್ಟು ಹೆಮ್ಮೆ ಇದೆ ಎಂದು ರಕ್ಷಿತಾ ಮನಸಾರೆ ಹೊಗಳಿದ್ದಾರೆ. ಇನ್ನು ಅರ್ಜುನ್ ಜನ್ಯಾ ತಬ್ಬಿ ಖುಷಿಪಟ್ಟಿದ್ದಾರೆ. ಕರ್ನಾಟಕ ನನಗೆ ಈ ಸ್ಥಾನ ಕೊಟ್ಟಿದೆ ಎಂದು ಚಿನ್ನಿ‌ಮಾಸ್ಟರ್ ಮನಸ್ಸಾರೆ ಹೇಳಿದ್ದಾರೆ.

More from Filmibeat

English summary
Zee Kannada Reality Show choreographer Chinni Master Life Story. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X