ಮೈಸೂರಿನ ತನುಶ್ರೀಗೆ ಪಕ್ಕದ ಮನೆ ಗೀತಾ ಮಮ್ಮಿ ಆಗಿದ್ದೇಗೆ? ಪುಟಾಣಿ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

By ಎಸ್ ಸುಮಂತ್

ಈ ಹಿಂದೆ ಚೋಟಾ ಚಾಂಪಿಯನ್ ಶೋ ಎಲ್ಲರ ಮನಗೆದ್ದಿತ್ತು. ಅದರಲ್ಲೂ ಮಕ್ಕಳ ಆಟ‌-ತುಂಟಾಟ ಹೀಗೆ ಆ‌ ಮುದ್ದು ಮುದ್ದು ಮಕ್ಕಳ ಒಡನಾಟದ ಜೊತೆಗೆ ಸಮಯ ಹೋಗುತ್ತಾ ಇದ್ದಿದ್ದೇ ಗೊತ್ತಾಗ್ತಾ ಇರಲಿಲ್ಲ. ಕೆಲ ಮಕ್ಕಳು ಸಿಕ್ಕಾಪಟ್ಟೆ ಬುದ್ದಿವಂತರು, ಇನ್ನು ಕೆಲ ಮಕ್ಕಳು ಸಿಕ್ಕಾಪಟ್ಟೆ ತುಂಟರು. ಹೀಗಾಗಿ ಈ ಹಿಂದಿನ ಚೋಟಾ ಚಾಂಪಿಯನ್ ಎಲ್ಲರ ಮನಸ್ಸಿಗೆ ಹತ್ತಿರವಾಗಿತ್ತು.

ಬಹಳ ವರ್ಷಗಳ ಬಳಿಕ ಮತ್ತೆ ಛೋಟಾ ಚಾಂಪಿಯನ್ ಶುರುವಾಗಿದೆ. ಜೀ ಕನ್ನಡದಲ್ಲಿ ವೀಕೆಂಡ್ ನಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವಂತ ಕಾರ್ಯಕ್ರಮ ಸದ್ಯ ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ಕಡೆಯಿಂದ ಮೂಡಿ ಬರುತ್ತಾ ಇದೆ. ಈ ಕಾರ್ಯಕ್ರಮದಲ್ಲಿ ಮುಗ್ಧತೆ ಜೊತೆಗೆ ನೋವಿನ ಕಥೆಯೂ ಕಾಣಿಸುತ್ತಿದೆ.

Chota Champion-Zee Kannada

ಮೈಸೂರಿಂದ ಬಂದ ತನುಶ್ರೀ

ಛೋಟಾ ಚಾಂಪಿಯನ್ ನಡೆಸಿಕೊಡುವಾಗ ಅಲ್ಲಿದ್ದವರು ಮಕ್ಕಳಾಗಿ ಬಿಡುತ್ತಾರೆ. ಅದರಲ್ಲೂ ಮಕ್ಕಳನ್ನು ಮಾತನಾಡಿಸುವಾಗ ಶ್ವೇತಾ ಚೆಂಗಪ್ಪ ಮಗುವೇ ಆಗಿ ಬಿಡುತ್ತಾರೆ. ತನುಶ್ರೀ ವೇದಿಕೆ ಮೇಲೆ ಬರುತ್ತಿದ್ದಂತೆ ಅಂಜಿಕೆಯಿಂದಾನೆ ಬಂದಿದ್ದಾಳೆ. ಶ್ವೇತಾ ಮಗುವಿನಂತೆ ಮಾತಾಡಿಸಿದಾಗ ಮಗು ಕೂಡ ಮುದ್ದಾಗಿ ಮಾತ‌ನಾಡಿದೆ. ಮೈಸೂರಿಂದ ಬಂದಿರುವ ವಿಚಾರವನ್ನು ತಿಳಿಸಿದೆ. ಆಗ ಕುರಿ ಓ ನಮ್ಮ ಮೈಸೂರ ಅಂತ ಮಗುವಿಗೆ ಇನ್ನಷ್ಟು ಹತ್ತಿರವಾಗಲೂ ಪ್ರಯತ್ನಿಸಿದ್ದಾರೆ.

ಆಕ್ಸಿಡೆಂಟ್‌ನಲ್ಲಿ ತಂದೆಯ ಮರಣ

ವೇದಿಕೆ ಮೇಲೆ ತಾಯಿ ಮಗಳನ್ನು ಮಾತನಾಡಿಸುವುದಕ್ಕೂ ಮುನ್ನ ತನುಶ್ರೀ ಅಪ್ಪನ ಬಗೆಗೊಂದು ವಿಟಿ ರೆಡಿ ಮಾಡಿದ್ದಾರೆ. ಅದರಲ್ಲಿ ಆ ತಾಯಿಯ ಕಣ್ಣೀರು ಕಂಡು ವೇದಿಕೆ ಮೇಲಿದ್ದವರು ಕಣ್ಣೀರ ಹಾಕಿದ್ದಾರೆ. ತನುಶ್ರೀ ತಂದೆ ಆಕ್ಸಿಡೆಂಟ್‌ನಲ್ಲಿ ತೀರಿಕೊಂಡಿದ್ದಾರೆ. ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಆದರೂ ಬದುಕುಳಿಯಲಿಲ್ಲ. ಬೇರೆಯವರ ದೇಹದಲ್ಲಾದರೂ ಅವರ ಅಂಗಾಂಗಗಳು ಜೀವಂತವಾಗಿರಲೆಂದು ಅಂಗಾಂಗ ದಾನ ಮಾಡಿದ್ದಾರೆ. ವೇದಿಕೆ ಮೇಲೆಯೂ ಆ ನೋವನ್ನು ಹಂಚಿಕೊಂಡಿದ್ದಾರೆ.

Chota Champion-Zee Kannada

ತನುಶ್ರೀ ಮಮ್ಮಿ ಇವರೇ ನೋಡಿ

ಮಕ್ಕಳಿಗೆ ತನ್ನ ತಂದೆ ತಾಯಿಯನ್ನು ಬಿಟ್ಟರೆ ಬೇರೆಯವರು ಅಷ್ಟು ಬೇಗ ಹತ್ತಿರವಾಗುವುದಿಲ್ಲ. ಆದರೆ ತನುಶ್ರೀಗೆ ಅಪ್ಪ ಹೋದ ಮೇಲೆ ಇಬ್ಬರು ಅಮ್ಮಂದಿರು. ಪಕ್ಕದ ಮನೆಯ ಗೀತಾರನ್ನೇ ತನುಶ್ರೀ ಮಮ್ಮಿ ಅಂತಾರೆ. ವೇದಿಕೆ ಮೇಲೆ ಯಾಕೆ ಮಮ್ಮಿ ಅಂತಾಳೆ ಅನ್ನೋದು ಅನಾವರಣವಾಗಿದೆ. ಯಾರೂ ಇಲ್ಲ ಎಂದು ನೋವಲ್ಲಿರುವಾಗ ನಾವಿದ್ದೀವಿ, ಧೈರ್ಯವಾಗಿರು ಎಂದು ಬೆಂಬಲಕ್ಕೆ ನಿಂತವರು ಗೀತಾ.

ಮಗುವಿನ ಕಷ್ಟ ಕೇಳಿ ಸೀರಿಯಲ್ ಅಮ್ಮಂದಿರ ಕಣ್ಣೀರು

ಛೋಟಾ ಚಾಂಪಿಯನ್ ಶೋನಲ್ಲಿ ಪುಟ್ಟಕ್ಕನ ಮಕ್ಕಳು ರಾಜೇಶ್ವರಿ, ನಂಜವ್ವ, ಚಂದ್ರಕಲಾ ಮೋಹನ್ ವೇದಿಕೆ ಮೇಲಿದ್ದರು. ತನುಶ್ರೀ ತಂದೆಯ ವಿಟಿ ನೋಡಿದಾಗಲೇ ಎಲ್ಲರ ಕಣ್ಣಲ್ಲೂ ಕಣ್ಣೀರು ಹರಿದು ಬಂತು. ಬಳಿಕ ನೆರೆದಿದ್ದವರೆಲ್ಲಾ ತನುಶ್ರೀ ಅಮ್ಮನಿಗೆ ಸಮಾಧಾನ ಮಾಡಿದರು. ಗೀತಾರಿಗೂ ಇನ್ನಷ್ಟು ಸ್ಪೂರ್ತಿ‌ ನೀಡಿದರು. ಯಾರು ಇಲ್ಲ ಅನ್ನೋ ಸಮಯಕ್ಕೆ ದೇವರು ಯಾರನ್ನಾದರೂ ನೀಡ್ತಾನೆ. ಅವರೇ ಗೀತಾ ಅಂತ ನಂಜವ್ವ ಹೇಳಿದ್ರೆ, ಆ ಮಗುವನ್ನು ನೋಡಿಕೊಳ್ಳಲು ಇನ್ನಷ್ಟು ಶಕ್ತಿಯನ್ನು ದೇವರು ನಿಮಗೆ ಕೊಡಲಿ ಎಂದು ಚಂದ್ರಕಲಾ ಮೋಹನ್ ಹಾರೈಸಿದರು. ಇನ್ನು ಅಂಗಾಂಗ ದಾನದ ಬಗ್ಗೆ ರಾಜೇಶ್ವರಿ ಹೆಮ್ಮೆ ಪಟ್ಟುಕೊಂಡರು.

More from Filmibeat

English summary
Zee Kannada reality show Chota Champion Written Update on August 12th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X