twitter
    For Quick Alerts
    ALLOW NOTIFICATIONS  
    For Daily Alerts

    DKD: ಹುಲಿ ವೇಷ ಹಾಕಿ ಮಂಗಳೂರಿನ ಮಹೇಶ ಅಳಿಸಿದ, ಕುಣಿಸಿದ, ನಗಿಸಿದ : ಹೇಗಿರುತ್ತೆ ಇವತ್ತಿನ ಡಿಕೆಡಿ..?

    By ಎಸ್ ಸುಮಂತ್
    |

    ಡಿಕೆಡಿ ಹೇಗಿರುತ್ತೆ ಎಂದರೆ ಪ್ರತಿವಾರದಂತೆ ಸಖತ್ ಮಜಭೂತವಾಗಿ ಇರುತ್ತದೆ ಎಂದು ನೀವೂ ಹೇಳಬಹುದು. ಆದರೆ ಅದಕ್ಕೂ ಮೀರಿದ್ದೊಂದು ಮೈ ರೋಮಾಂಚಗೊಳಿಸುವಂತಹ ಸನ್ನಿವೇಶವೊಂದು ಇಂದಿನ ಎಪಿಸೋಡಿನಲ್ಲಿ ಎಲ್ಲರಿಗೂ ಸಿಗುತ್ತೆ. ಮಹೇಶನ ಪರ್ಫಾಮೆನ್ಸ್ ನಗಿಸುತ್ತೆ, ಅಳಿಸುತ್ತೆ, ಕುಣಿಸುತ್ತೆ. ಇದಕ್ಕೆ ನಿಂತು ಚಪ್ಪಾಳೆ ತಟ್ಟಲೇಬೇಕಾಗುತ್ತದೆ.

    ಪ್ರತಿ ವಾರದಂತೆ ವಿಭಿನ್ನ ಕಾನ್ಸೆಪ್ಟ್ ಗಳೊಂದಿಗೆ ಈ ವಾರದ ಡಿಕೆಡಿಯೂ ಸಜ್ಜಾಗಿದೆ. ಡ್ಯಾನ್ಸ್ ಜೊತೆಗೆ ಹೆಚ್ಚು ಜಿಮ್ನಾಸ್ಟಿಕ್‌ನಿಂದಲೇ ಮಕ್ಕಳು ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಈ ವಾರವೂ ಮೈಝುಮ್ಮೆನ್ನಿಸುವ ಡ್ಯಾನ್ಸ್ ಎಲ್ಲರಿಗೂ ಸಿಗಲಿದೆ. ಆದರೆ ಶಿವಣ್ಣನ ಮನಸಾರೆ ನಗುವಿಗೂ ಈ ಶೋ ಕಾರಣವಾಗಿದೆ.

    ಬಂಗಾರಮ್ಮನ ವಿರುದ್ಧ ನಿಂತ ಸ್ನೇಹಾ: ದಂಗಾದ ಪುಟ್ಟಕ್ಕಬಂಗಾರಮ್ಮನ ವಿರುದ್ಧ ನಿಂತ ಸ್ನೇಹಾ: ದಂಗಾದ ಪುಟ್ಟಕ್ಕ

    ಮಹೇಶನ ಡ್ಯಾನ್ಸ್‌ಗೆ ಫಿದಾ ಆಗದವರಿಲ್ಲ

    ಮಹೇಶನ ಡ್ಯಾನ್ಸ್‌ಗೆ ಫಿದಾ ಆಗದವರಿಲ್ಲ

    ಮಹೇಶ ಇಂದು ಹುಲಿ ವೇಷ ಹಾಕಿ ಘರ್ಜಿಸಲಿದ್ದಾನೆ. ಈ ಘರ್ಜನೆಗೆ ಇಡೀ ಡಿಕೆಡಿ ವೇದಿಕೆ ಅಲ್ಲಾಡಿ ಹೋಗಿದೆ. ಎಗರಿ ಬಿದ್ದರೂ ಮಹೇಶನ ಮೈಗೆ ನೋವಾಗುವುದೇ ಇಲ್ಲ. ಕೈಯಲ್ಲಿ ಮಡಕೆ ಹೊಡೆಯುತ್ತಾನೆ, ತಲೆಯಲ್ಲಿಯೇ ತೆಂಗಿನ ಕಾಯಿ ಹೊಡೆಯುತ್ತಾನೆ. ಆದರೂ ಕೊಂಚವೂ ಆ ಕಡೆ ಈ ಕಡೆ ಅಲುಗಾಡದೆ ಮತ್ತದೇ ಡ್ಯಾನ್ಸ್ ಮಾಡುತ್ತಾನೆ. ಆದರೆ ಇದನ್ನು ನೋಡಿದ ರಕ್ಷಿತಾಗೆ ಎದೆಯಲ್ಲಿ ನಡುಕ, ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಅರ್ಜುನ್ ಜನ್ಯಾಗಂತು ಹುಲಿ ವೇಷಲ್ಲಿ ಇಂಥದ್ದೊಂದು ಪರ್ಫಾಮೆನ್ಸ್ ಮಾಡಬಹುದಾ ಎಂಬ ಆಶ್ಚರ್ಯ ಆಗಿತ್ತು. ಶಿವಣ್ಣನಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡ ಮಹೇಶ.

    ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ 'ಗಟ್ಟಿಮೇಳ' ಖ್ಯಾತಿಯ 'ವೇದಾಂತ್'ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ 'ಗಟ್ಟಿಮೇಳ' ಖ್ಯಾತಿಯ 'ವೇದಾಂತ್'

    ಮಹೇಶನ ಹಿಂದಿದೆ ಕರುಣಾಜನಕ ಕಥೆ

    ಮಹೇಶನ ಹಿಂದಿದೆ ಕರುಣಾಜನಕ ಕಥೆ

    ತಾಯಿಯೇ ಮಕ್ಕಳಿಗೆ ದೈವ ಅನ್ನೋದನ್ನು ಸುಮ್ನೆ ಹೇಳುವುದಿಲ್ಲ. ಪ್ರತಿಯೊಬ್ಬ ತಾಯಿಗೂ ತನ್ನ ಮಕ್ಕಳ ಭವಿಷ್ಯ, ಕನಸು ತುಂಬಾ ಮುಖ್ಯವಾಗುತ್ತದೆ. ಅವರಿಗಾಗಿ ತನ್ನ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ. ಏನೋ ಸಾಧನೆ ಮಾಡುತ್ತೀನಿ ಎಂಬ ಮಗನಿಗೆ. ನೀನು ಸಾಧನೆ ಮಾಡು. ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ದುಡಿಯುತ್ತಿನಿ ಎಂಬ ಧೈರ್ಯ ಕೊಡುತ್ತಾಳೆ. ಆ ಧೈರ್ಯವೇ ಇಂದು ಮಹೇಶನನ್ನು ಡಿಕೆಡಿ ವೇದಿಕೆಗೆ ಕರೆತಂದಿರುವುದು. ಮೂಲತಃ ಸೊಲ್ಲೂರಿನವರಾದರು ಮಹೇಶ್ ಹುಟ್ಟಿ ಬೆಳೆದಿದ್ದೆಲ್ಲಾ ಮಂಗಳೂರಿನಲ್ಲಿ. ಮುದ್ದಾದ ಕುಟುಂಬದಲ್ಲಿ ಅಮ್ಮ, ತಂಗಿ, ಮಹೇಶ ಇದ್ದಾರೆ. ಅಮ್ಮ ಟೈಲರ್‌ರಿಂಗ್ ಮಾಡುತ್ತಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಮಕ್ಕಳ ಕನಸಿಗೆ ಹೆಗಲಾಗಿ ನಿಂತವರು. ಡ್ಯಾನ್ಸ್ ಎಂದರೆ ಪ್ರಾಣ ಬಿಡುವ ಮಹೇಶ್ ಮೊದಲಿಗೆ ಹಾಕಿದ್ದೆ ಹುಲಿ ವೇಶದ ನೃತ್ಯ. ಇದರಿಂದಾಗಿ ಇಂದು ಡಿಕೆಡಿಯಲ್ಲಿ ಬಂದು ನಿಂತಿದ್ದಾನೆ. ಇಲ್ಲಿಯೂ ಹುಲಿಯಾಗಿ ಘರ್ಜಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾನೆ. ವೇದಿಕೆ ಮೇಲೆ ಇಡೀ ಫ್ಯಾಮಿಲಿ ನೋಡಿ ಒಂದು ಕ್ಷಣ ನೋಡುಗರಿಗೂ ಕಣ್ಣೀರು ಬಾರದೆ ಇರುವುದಿಲ್ಲ. ತಾಯಿ ಮಕ್ಕಳಿಗಾಗಿ ಕಷ್ಟಪಡುವುದು ಸಾಮಾನ್ಯ. ಆದರೆ ಆ ಕಷ್ಟವನ್ನು ಮಕ್ಕಳು ಅರ್ಥ ಮಾಡಿಕೊಂಡು ತಾಯಿಗೆ ಜೊತೆಯಾದರೆ ಆ ಕಷ್ಟಕ್ಕೊಂದು ಅರ್ಥ ಬರುತ್ತದೆ.

    ಹುಲಿ ಜೊತೆಗೆ ದೇವಿಯೂ ಬಂದಳು

    ಹುಲಿ ಜೊತೆಗೆ ದೇವಿಯೂ ಬಂದಳು

    ವೇದಿಕೆ ಮೇಲೆ ಹುಲಿ ಘರ್ಜಿಸುತ್ತಿದ್ದರೆ ದೇವತೆಗಳ ಆಗಮನವೂ ಆಗಿದೆ. ಅಷ್ಟು ದೇವತೆಗಳು ಒಟ್ಟಿಗೆ ಬಂದಾಗ, ಮೈ ರೋಮಾಂಚನವಾಗಿದ್ದಂತು ಸತ್ಯ. ದೇವರಿಗೆ ಒಂದು ಸಂಗೀತ, ನೋಡ ನೋಡುತ್ತಿದ್ದಂತೆ ಗುಂಪಾಗಿ ಬಂದ ದೇವತೆಯರು. ಅದೊಂದು ಸ್ಪರ್ಧೆ ಎನ್ನಿಸಲೇ ಇಲ್ಲ. ಕುಳಿತಿದ್ದವರಲ್ಲೂ ಭಾವ ಮೂಡಿತ್ತು. ಭಕ್ತಿಯಿಂದ ಮನಸ್ಸಲ್ಲಿಯೇ ಬೇಡಿಕೊಂಡರು. ಚಿನ್ನಿ ಮಾಸ್ಟರ್ ಕೂಡ ಕೂತಲ್ಲಿಂದಲೇ ಕೈಮುಗಿದರು. ಅರ್ಜುನ್ ಜನ್ಯ ಎಲ್ಲಾ ದೇವಿಗಳ ಎಂಟ್ರಿ ನೋಡಿ ಭಯಗೊಂಡರು. ವೇದಿಕೆ ಮೇಲೆ ಏನು ಆಗುತ್ತಿದೆ ಅಂತಾನೇ ಗೊತ್ತಾಗದ ರೀತಿ ಇತ್ತು. ಕಾಡಿಗೆ ಬಂದಿದ್ದೇವಾ? ಇಲ್ಲಾ ಯಾವುದೋ ದೇವ ಲೋಕಕ್ಕೆ ಬಂದಿದ್ದೇವಾ? ಯಾರ ಡ್ಯಾನ್ಸ್ ನೋಡುವುದು ಎಂಬ ಗೊಂದಲ ರಕ್ಷಿತಾ ಅವರಿಗಂತು ಮೂಡಿತ್ತು.

    ಹೂವಿ ಬಳಿ ಆ ಸೀರೆ ಕಂಡು ಮಾಲಿನಿ ಕೆಂಡಾಮಂಡಲ: ರಾಹುಲ್ ಪೇಚಾಟ!ಹೂವಿ ಬಳಿ ಆ ಸೀರೆ ಕಂಡು ಮಾಲಿನಿ ಕೆಂಡಾಮಂಡಲ: ರಾಹುಲ್ ಪೇಚಾಟ!

    ವೇದಿಕೆ ಮೇಲಿಂದ ಇಳಿದು ಕುಣಿದರು ಶಿವಣ್ಣ

    ಕುಳಿತಲ್ಲಿಯೇ ಕುಣಿಯುವಂತ ಪರ್ಫಾಮೆನ್ಸ್ ಕೊಟ್ಟರೆ ಸೀಟಿನ ಮೇಲೆ ಕುಳಿತುಕೊಳ್ಳುವುದಕ್ಕೆ ಆಗುತ್ತದಾ..? ಅದರಲ್ಲೂ ಶಿವಣ್ಣನಿಗೆ ಅದು ಸಾಧ್ಯವಾ..? ಹುಲಿ ವೇಷದಲ್ಲಿ ಮಹೇಶ ಘರ್ಜಿಸುತ್ತಿದ್ದರೆ ಶಿವಣ್ಣನ ಮನಸ್ಸು ಕುಣಿಯುತ್ತಿದ್ದು, ಕಾಲು ವೇದಿಕೆ ಮೇಲೆ ನಡಿ ಎನ್ನುತ್ತಿತ್ತು. ಅದರಂತೆ ಡ್ಯಾನ್ಸ್ ಮುಗಿದ ಮೇಲೆ ಹುಲಿ ಬಂದು ಶಿವಣ್ಣನ ಮುಂದೆ ಬಂದು ಘರ್ಜಿಸಿದರೆ ಸುಮ್ಮನೆ ಕುಳಿತುಕೊಳ್ಳುತ್ತಾರಾ..? ನೋ ವೇ ಚಾನ್ಸೆ ಇಲ್ಲ. ಶಿವಣ್ಣ ಕೂಡ ಹುಲಿಯ ಜೊತೆಗೆ ಘರ್ಜಿಸಿದ್ದಾರೆ. ಆ ಘರ್ಜನೆಗೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಸುರಿದಿದೆ.

    English summary
    Zee Kannada Reality Show Dance Karnataka Dance Update About May 29th Episode. Here is the details about on Mahesha Huli Dance.
    Sunday, May 29, 2022, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X