DKD: ಶಶಾಂಕ್ - ತ್ರಿಶಾ ಪರ್ಫಾಮೆನ್ಸ್‌ಗೆ ಬೆಚ್ಚಿಬಿದ್ದ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ!

By ಎಸ್ ಸುಮಂತ್

ಡಿಕೆಡಿನಲ್ಲಿ ನೋಡಿ ಮಜಾ ಮಾಡುವ ಪರ್ಫಾಮೆನ್ಸ್‌ಗಿಂತ ಎದೆ ಝಲ್ ಎನ್ನುವ ಪರ್ಫಾಮೆನ್ಸ್ ಹೆಚ್ಚಾಗಿ ಸಿಗುತ್ತದೆ. ಕಾಂಪಿಟೇಷನ್ ದಿನೇ ದಿನೇ ಹೆಚ್ಚಾಗುವ ಕಾರಣ ಸ್ಪರ್ಧಿಗಳು ಕೂಡ ವಾರ ವಾರಕ್ಕೂ ತಮ್ಮ ಪರ್ಫಾಮೆನ್ಸ್‌ ಅನ್ನ ಉತ್ತಮ ಮಾಡಿಕೊಳ್ಳುತ್ತಾ ಬರುತ್ತಾರೆ. ಈ ವಾರದ ಪರ್ಫಾಮೆನ್ಸ್‌ನಲ್ಲಿ ಕೂಡ ಕಣ್ಣಿಗೆ ಹಬ್ಬವನ್ನೇ ಕೊಟ್ಟಿದ್ದಾರೆ.

ಡಿಕೆಡಿಯಲ್ಲಿ ಡ್ಯಾನ್ಸ್ ಜೊತೆಗೆ ಜಿಮ್ನಾಸ್ಟಿಕ್ ಮೆಥೆಡ್‌ಗಳನ್ನು ಬಳಸಲಾಗುತ್ತಿದೆ. ಮಕ್ಕಳ ಡ್ಯಾನ್ಸ್ ಜೊತೆಗೆ ಸಾಹಸ ನೋಡಿ ರಕ್ಷಿತಾ ಎದೆ ಅದೆಷ್ಟು ಬಾರೀ ಝಲ್ ಎನ್ನುತ್ತಿತ್ತೋ. ಮಕ್ಕಳ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಕ್ಕಿಂತ ರಕ್ಷಿತಾ ಭಯಗೊಂಡಿದ್ದೆ ಹೆಚ್ಚು. ಚಿನ್ನಿ ಮಾಸ್ಟರ್, ಶಿವಣ್ಣ, ಅರ್ಜುನ್ ಜನ್ಯ ಮಕ್ಕಳ ಡ್ಯಾನ್ಸ್ ನೋಡಿ ಎಂಜಾಯ್ ಮಾಡುತ್ತಿದ್ದರು. ಆದರೆ ಇವತ್ತು ಚಿನ್ನಿ ಮಾಸ್ಟರೇ ಭಯಬೀಳುವಂತಹ ಪರ್ಫಾಮೆನ್ಸ್ ಕಾಣಬಹುದು.

ಡ್ಯಾನ್ಸ್ ನೋಡಿ ಶಿವಣ್ಣ ಚಿನ್ನಿ ಮಾಸ್ಟರ್ ಭಯ?

ಡ್ಯಾನ್ಸ್ ನೋಡಿ ಶಿವಣ್ಣ ಚಿನ್ನಿ ಮಾಸ್ಟರ್ ಭಯ?

ಚಿನ್ನಿ ಮಾಸ್ಟರ್ ಇಷ್ಟು ದಿನ ಮಕ್ಕಳ ಡ್ಯಾನ್ಸ್ ನೋಡಿ ಭಯಗೊಂಡಿದ್ದೆ ಇಲ್ಲ. ಮಸ್ತ್ ಎಂಜಾಯ್ ಮಾಡ್ತಾ ಇದ್ದರು. ಖುಷಿಯಲ್ಲಿ ಎದ್ದು ಕುಣಿಯುತ್ತಿದ್ದರು. ಆದರೆ ಮೊದಲ ಬಾರಿಗೆ ಚಿನ್ನಿ ಮಾಸ್ಟರ್ ಎದೆ ಝಲ್ ಎಂದಿದೆ. ಅದಕ್ಕೆ ಕಾರಣ ಶಶಾಂಕ್ ಮತ್ತು ತ್ರಿಶಾ ಪರ್ಫಾಮೆನ್ಸ್. ನಿನ್ನಲ್ಲೇ ನಾನು ಜೊತೆಯಾಗಿ ಅನ್ನೋ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಕಣ್ಣು ಕಟ್ಟಿ ಮಾಡಿದ ಪರ್ಫಾಮೆನ್ಸ್ ಇದಾಗಿದ್ದು, ಕಣ್ಣು ಕಟ್ಟಿಯೇ ಹಿಂದಿನಿಂದ ಎಗರಿದ್ದು ಇದೆಯಲ್ಲ ಅದಕ್ಕೆ ಚಿನ್ನಿ ಮಾಸ್ಟರ್ ಎದೆ ಝಲ್ ಎಂದಿದೆ.

ತ್ರಿಶಾ-ಶಶಾಂಕ್ ಕಣ್ಮುಚ್ಚಿ ಕುಣಿದ ನೃತ್ಯಕ್ಕೆ ಫುಲ್ ಮಾರ್ಕ್ಸ್

ತ್ರಿಶಾ-ಶಶಾಂಕ್ ಕಣ್ಮುಚ್ಚಿ ಕುಣಿದ ನೃತ್ಯಕ್ಕೆ ಫುಲ್ ಮಾರ್ಕ್ಸ್

ಕಣ್ಣು ಬಿಟ್ಟು ಡ್ಯಾನ್ಸ್ ಮಾಡುವುದೇ ಕಷ್ಟ ಅಂಥದ್ರಲ್ಲಿ ಇಬ್ಬರು ಕಣ್ಣು ಕಟ್ಟಿಕೊಂಡು ಡ್ಯಾನ್ಸ್ ಮಾಡಿದರೆ ಹೇಗಿರಬೇಡ? ತ್ರಿಶಾ ಮತ್ತು ಶಶಾಂಕ್ ನೃತ್ಯ ಅಷ್ಟು ಅದ್ಭುತವಾಗಿತ್ತು. ತ್ರಿಷಾ ಕಣ್ಣು ಕಾಣಿಸದಂತೆ ಬಟ್ಟೆ ಕಟ್ಟಿಕೊಂಡಿದ್ದಳು. ತ್ರಿಶಾಗೆ ಸರಿಯಾದ ರೀತಿಯಲ್ಲಿ ಶಶಾಂಕ್ ಗೈಡ್ ಮಾಡುತ್ತಿದ್ದ. ಕಣ್ಣು ಕಾಣದೆ ಹೋದರು ಡ್ಯಾನ್ಸ್‌ನ ಫೀಲ್ ಮಾಡಿಸುತ್ತೇನೆಂದು ಹೊರಟ ಶಶಾಂಕ್, ಎಲ್ಲಿಯೂ ಎಡವದೆ ಸ್ಟೆಪ್‌ಗಳನ್ನು ಹಾಕಿದರು. ಇವರಿಬ್ಬರ ಕೋ- ಆರ್ಡಿನೇಷನ್ ಅದ್ಭುತವಾಗಿ ಬಂದಿದೆ. ಆದರೆ ನೋಡುಗರ ಎದೆ ಝಲ್ ಎನಿಸದೆ ಇರುವುದಿಲ್ಲ.

ತ್ರಿಶಾ-ಶಶಾಂಕ್ ನೃತ್ಯ ಹೊಗಳಿದ ರಕ್ಷಿತಾ

ತ್ರಿಶಾ-ಶಶಾಂಕ್ ನೃತ್ಯ ಹೊಗಳಿದ ರಕ್ಷಿತಾ

ಕಣ್ಣು ಮುಚ್ಚಿಕೊಂಡು ಮಾಡಿದರು ಒಂದೇ ಒಂದು ಸ್ಟೆಪ್ ಕೂಡ ಮಿಸ್ ಆಗಿರಲಿಲ್ಲ. ಅಷ್ಟು ಅದ್ಬುತವಾಗಿ ಹೆಜ್ಜೆ ಹಾಕಿದ ಜೋಡಿಗೆ ರಕ್ಷಿತಾ ಫುಲ್ ಫಿದಾ ಆಗಿದ್ದಾರೆ. ಡ್ಯಾನ್ಸ್ ಎಂಜಾಯ್ ಮಾಡಿದ ಬಳಿಕ, ಇಬ್ಬರಿಗೆ ಶಬ್ಬಾಶ್‌ಗಿರಿ ಕೊಟ್ಟಿದ್ದಾರೆ. ಕಣ್ಣು ಬಿಟ್ಟು ಎಷ್ಟೋ ತಪ್ಪುಗಳನ್ನು ಮಾಡುತ್ತೇವೆ. ಆದರೆ ಕಣ್ಣು ಮುಚ್ಚಿಯೂ ಒಂದು ಮಿಸ್ಟೇಕ್ ಮಾಡದೆ ಮಾಡಿದ ಪರ್ಫಾಮೆನ್ಸ್ ಎಂದರೆ ಇದೊಂದೆ ಎಂದಿದ್ದಾರೆ. ತ್ರಿಶಾ-ಶಶಾಂಕ್ ಕೂಡ ಕಣ್ಣು ಮುಚ್ಚಿದ್ದರೂ, ಕೊನೆವರೆಗೆ ಅದ್ಭುತವಾದ ಪರ್ಫಾಮೆನ್ಸ್ ಅನ್ನೇ ತೋರಿಸಿದ್ದಾರೆ.

ಕಣ್ಣಿಲ್ಲದ ನೃತ್ಯಕ್ಕೆ ಎಲ್ಲರೂ ಫಿದಾ

ತ್ರಿಶಾ ಮತ್ತು ಶಶಾಂಕ್ ಮಾಡುತ್ತಿರುವ ನಿನ್ನಲ್ಲೇ ನಾನು ಜೊತೆಯಾಗಿ ಹಾಡಿನ ಕುಣಿತಕ್ಕೆ ನೋಡುಗರು ಫಿದಾ ಆಗಿದ್ದಾರೆ. ಜೀ ಕನ್ನಡ ಅಧಿಕೃತ ಅಕೌಂಟ್‌ನಲ್ಲಿ ಹಾಕಿರುವ ಸಿಂಪಲ್ ಕ್ಲಿಪ್‌ಗೆ ಕಮೆಂಟ್‌ಗಳ ಸುರಿಮಳೆ ಬಂದಿದೆ. ಇದು ನೆಕ್ಸ್ಟ್ ಲೆವೆಲ್ ಡ್ಯಾನ್ಸ್ ಎಂದು ಹಲವರು ಹೊಗಳಿದ್ದಾರೆ. ಇವರು ಖಂಡಿತ ಫೈನಲ್ ತಲುಪಲಿದ್ದಾರೆ ಎಂದು ಇನ್ನು ಹಲವರು ಹೊಗಳಿದ್ದಾರೆ. ಒಟ್ಟಾರೆ ಇಂದಿನ ತ್ರಿಶಾ ಮತ್ತು ಶಶಾಂಕ್ ಪರ್ಫಾಮೆನ್ಸ್ ಎಲ್ಲರ ಅಚ್ಚುಮೆಚ್ಚುಗೆಯಾಗಿದೆ.

More from Filmibeat

English summary
Zee Kannada Reality Show Dance Karnataka Dance Update On June 26th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X