Dance Karnataka Dance Contestants: ಡಿಕೆಡಿಗೆ ಸೆಲೆಕ್ಟ್ ಆದವರದ್ದೆಲ್ಲಾ ಒಂದೊಂದು ಕಥೆ.. ಕೇಳಿ ಕಣ್ಣಿರಾದರೂ ಜಡ್ಜ್‌ಗಳು..!
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಂತ ಕುಣಿಯೋಕೆ ವೇದಿಕೆ ಸಿದ್ಧವಾಗಿತ್ತು. ಕುಣಿಯೋದಕ್ಕೆ ಸ್ಪರ್ಧಿಗಳು ರೆಡಿಯಾಗಿದ್ದರು. ಯಾವಾಗಪ್ಪ ಆ ದಿನ ಬರುತ್ತೆ ಅಂತ ಕಾಯುತ್ತಿದ್ದರು. ಆ ದಿನ ಆರಂಭವಾಗಿ ಒಂದು ದಿನ ಕಳೆದಿದೆ. ಅಬ್ಬಬ್ಬಾ ಆಯ್ಕೆ ಎಪಿಸೋಡಿಗೇನೆ ಜನ ಫಿದಾ ಆಗಿದ್ದಂತು ಸತ್ಯ. ಇನ್ನು ಈ ಮಕ್ಕಳಿಂದ ಇನ್ನೆಷ್ಟು ದೊಡ್ಡ ಮಟ್ಟಕ್ಕೆ ಡ್ಯಾನ್ಸ್ ನಿರೀಕ್ಷಿಸಬಹುದು ಎಂಬ ಕಲ್ಪನೆಯೂ ಬಂದು ಹೋಗಿದೆ.
ಒಂದೊಂದು ಮಕ್ಕಳ ಡ್ಯಾನ್ಸ್ ನೋಡುತ್ತಿದ್ದರೆ ಹೇಗಿತ್ತು ಎಂಬುದನ್ನು ಬರೀ ಪದದಲ್ಲಿ ಹೇಳುವುದಕ್ಕೆ ಕಷ್ಟವಾಗುತ್ತಿದೆ. ಕ್ಯೂರಿಯಾಸಿಟಿ, ಸಸ್ಪೆನ್ಸ್ ಸಿನಿಮಾ ನೋಡುವಾಗ ಥಿಯೇಟರ್ ನಲ್ಲಿ ಸೀಟಿನ ತುದಿ ಹಂಚಿಗೆ ಬಂದು ಕುಳಿತುಕೊಂಡೆವು ಅಂತಾರಲ್ಲ ಅಕ್ಷರಶಃ ಆ ಫೀಲ್ ಕೊಟ್ಟಿದ್ದು ಡಿಕೆಡಿ ಕಾರ್ಯಕ್ರಮ. ಮನೆಯಲ್ಲಿ ಸೋಫಾ ಮೇಲೋ, ಮಂಚದ ಮೇಲೋ ಕುಳಿತಿದ್ದವರು ಅದೆಷ್ಟು ಸಲ ಕೆಳಗೆ ಎದ್ದು ಓ ಮೈ ಗಾಡ್ ಅಂತ ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೋ ಲೆಕ್ಕಕ್ಕಿಲ್ಲ. ಆ ಲೆವೆಲ್ ಗೆ ಇತ್ತು ಡಿಕೆಡಿ ಕಾರ್ಯಕ್ರಮ.
ಜೀ ಕನ್ನಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೊದಲೇ ಡಿಕೆಡಿ ಕಾರ್ಯಕ್ರಮದ ಒಂದಷ್ಟು ಪ್ರೋಮೋಗಳನ್ನು ಬಿಟ್ಟಿದ್ದರು. ವೇದಿಕೆ ಹೇಗಿದೆ, ಸ್ಟಾರ್ ಗಳ ಎಂಟ್ರಿ ಹೇಗಿರುತ್ತೆ ಎಂಬುದನ್ನು ಮೊದಲೇ ಸೂಕ್ಷ್ಮವಾಗಿ ತಿಳಿಸಲಾಗಿತ್ತು. ಆದರೆ ಆರಂಭವಾಗಿದ್ದೆ ತಡ, ಆಂಕರ್ ಅನುಶ್ರೀ ಬಾಯಿಂದ ಎಲ್ಲರ ಬಗ್ಗೆಯೂ ಗುಣಗಾನದ ಪದಗಳ ಮೂಲಕ ಎಂಟ್ರಿ ಸಿಕ್ಕಿದೆ. ಶಿವಣ್ಣನ ಎಂಟ್ರಿ ಮಾತ್ರ ಎಲ್ಲರಿಗಿಂತ ಅದ್ಭುತವಾಗಿತ್ತು. ಅವರು ಕಾರು ಹತ್ತಿದ್ದು, ಅವರನ್ನು ಬಾಡಿಗಾರ್ಡ್ ಗಳು ಕರೆದುಕೊಂಡು ಬಂದಿದ್ದು, ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದು, ವಾರೆವ್ಹಾ.. ಮನೆಯಲ್ಲಿ ಕುಳಿತಿದ್ದವರು ಕೂಡ ಶಿಳ್ಳೆ ಚಪ್ಪಾಳೆ ಹೊಡೆದಿದ್ದಾರೆ.

ಸೆಲೆಕ್ಟ್ ಆದವರ ಲೀಸ್ಟ್ ಇಲ್ಲಿದೆ
ಶನಿವಾರ ಮತ್ತು ಭಾನುವಾರ ಎರಡು ದಿನ ಆಯ್ಕೆಯ ಎಪಿಸೋಡ್ ಗಳು ನಡೆಯಲಿವೆ. ಈಗಾಗಲೇ ಶನಿವಾರದ ಎಪಿಸೋಡ್ ಮುಗಿದಿದೆ. ಈ ಎಪಿಸೋಡಿನಲ್ಲಿ ಎಂತೆಂಥಾ ಡ್ಯಾನ್ಸರ್ ಇದ್ದಾರೆ ಅನ್ನೋದು ಗೊತ್ತಾಗಿದೆ. ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಕುಣಿಯುತ್ತಾರೆ. ಮೈಯಲ್ಲಿ ಮೂಳೆ ಇದೆಯೋ ಇಲ್ಲವೋ ಎಂಬಂತೆ ನರ್ತಿಸುತ್ತಾರೆ. ಜಡ್ಜಸ್ ಗಳಿಗೂ ಇವರ ಮುಂದಿನ ಆಯ್ಕೆ ಕಷ್ಟವಾಗಬಹುದು, ಆ ರೀತಿ ಡ್ಯಾನ್ಸ್ ಮಾಡುತ್ತಿದ್ದಾರೆ. ಶನಿವಾರದ ಎಪಿಸೋಡಿನಲ್ಲಿ ರಾಹುಲ್, ತ್ರಿಷಾ, ಸಾಕ್ಷಾ, ದಕ್ಷತ್ ಗೌಡ, ದಿಶಾ ದೇಚಮ್ಮ, ಋಷಿಕೇಶ್, ಜಾನ್ಸನ್ ಸೆಲೆಕ್ಟ್ ಆಗಿದ್ದಾರೆ.

ಕಲೆ ಇದ್ದವರಿಗೆ ಅವಕಾಶ
ಡಿಕೆಡಿಯಲ್ಲಿ ಸೆಲೆಕ್ಟ್ ಆದ ಬಳಿಕ ಅವರ ಹಿನ್ನೆಲೆಯನ್ನು ಸಾಕಷ್ಟು ಜನ ಹೇಳಿಕೊಂಡಿದ್ದಾರೆ. ಹಾಗೇ ಅವರ ಡ್ಯಾನ್ಸ್ ಗೂ ತೀರ್ಪುಗಾರರು ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ. ಅದರಲ್ಲಿ ಕಷ್ಟದಿಂದ ಬಂದವರೇ ಹೆಚ್ಚಾಗಿದ್ದಾರೆ. ಪ್ರತಿಭೆ ಇದೆ ಅವಕಾಶ ಕಡಿಮೆ ಇದ್ದವರನ್ನು ಜೀ ಕನ್ನಡ ಗುರುತಿಸಿದೆ. ಹೀಗಾಗಿ ಬಡತನದಲ್ಲಿದ್ದವರಿಗೂ, ಕಲೆ ಇರುವವರನ್ನು ಗುರುತಿಸಿ, ವೇದಿಕೆ ಮೇಲೆ ಕರೆತಂದಿದೆ. ಮಕ್ಕಳ ಡ್ಯಾನ್ಸ್ ನೋಡಿಲ್ಲದ ತಾಯಿಯೂ ಅಷ್ಟು ದೊಡ್ಡ ವೇದಿಕೆ ಮೇಲೆ ನೋಡಿ ಕಣ್ಣೀರಾಗಿದ್ದಾರೆ.

ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ..!
* ಮಂಗಳಮುಖಿಯಾದ ಬಳಿಕ ಸಮಾಜ ಹೇಗೆ ನೋಡುತ್ತೆ ಅನ್ನೋದು ಸಾಕ್ಷಾ ನೋವು. ಸಾಕಷ್ಟು ವರ್ಷಗಳಿಂದ ಮನೆಯಿಂದ ಹೊರಗೆ ಇದ್ದಾರೆ. ಮಂಗಳೂರಿನ ಸಾಕ್ಷಾ ಅವರ ಚೆಲ್ತಾ ಚೆಲ್ತಾ ಹೇ ಡಾನ್ಸ್ ಅದ್ಭುತವಾಗಿತ್ತು. ಸಾಕ್ಷಾ ನೋವಿಗೆ ಶಿವಣ್ಣ ಸ್ಪಂದಿಸಿ, ನಾನೀದ್ದೀನಿ ಎಂದಿದ್ದಾರೆ.
* ಬಳ್ಳಾರಿಯ ಋಷಿಕೇಶ್ .. ವಯಸ್ಸು 23.. ಕೆಜಿಎಫ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಲೆ ಇದ್ದವರಿಗೆ ಯಾವ ನ್ಯೂನತೆಯೂ ಅಡ್ಡ ಬರಲ್ಲ ಅನ್ನೋದು ಋಷಿಕೇಶ್ ನೋಡಿದ್ದರೇನೆ ಗೊತ್ತಾಗುತ್ತೆ. ಒಂದು ಕೈ ಇಲ್ಲದೆ ಹೋದರೂ ಡ್ಯಾನ್ಸ್ ಮೇಲಿನ ಪ್ರೇಮ ಅವರನ್ನು ಬಿಟ್ಟು ಬಿಡದೆ ಕಾಡಿದೆ. ಕೃತಕ ಕೈ ಹಾಕಿಸುವುದಕ್ಕೂ ಅಮ್ಮನಿಗೆ ಭಯವಾಗಿದೆ. ಆ ಮುಗ್ಧತೆ ಇಡೀ ಸ್ಟೇಜ್ ಮೇಲೆ ಎಲ್ಲರನ್ನು ಮಂತ್ರ ಮಗ್ನರನ್ನಾಗಿ ಮಾಡಿತ್ತು.
* ದಾವಣಗೆರೆಯ ರಾಹುಲ್.. ಕಾಗದದ ದೋಣಿಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜಡ್ಜ್ ಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಡ್ಯಾನ್ಸ್ ಮುಗಿದ ಬಳಿಕ ರಾಹುಲ್ ಕಥೆ ಕೇಳಿ ಜಡ್ಜಸ್ ಗಳು ಮಂಕಾಗಿದ್ದಾರೆ. ಯುಕೆಜಿಯಲ್ಲಿದ್ದಾಗಲೇ ಅಪ್ಪ ಬಿಟ್ಟು ಹೋಗಿದ್ದರು. ಆಗಿನಿಂದಲೂ ಅಮ್ಮನೇ ನೋಡಿಕೊಳ್ಳುತ್ತಿದ್ದರು. ತಮ್ಮ- ಅಮ್ಮನನ್ನು ಸ್ಟೇಜ್ ಮೇಲೆ ನೋಡಿ ರಾಹುಲ್ ಖುಷಿ ಪಟ್ಟನು.

ತ್ರಿಷಾ, ದಕ್ಷತ್ ಗೌಡ, ದೇಚಮ್ಮ
* ಮಂಗಳೂರಿನ ತ್ರಿಷಾ.. ವಯಸ್ಸು 14.. ಕಣ್ಣು ಹೊಡೆಯಾಕ ಹಾಡಿಗೆ ಬಳುಕಿಸಿದ ಮೈಮಾಟ ನೋಡಿ ಅಕ್ಷರಶಃ ತೀರ್ಪುಗಾರರು ದಂಗಾಗಿ ಹೋದರು.
* ಬೆಂಗಳೂರಿನ ದೇವನಹಳ್ಳಿಯ ದಕ್ಷತ್ ಗೌಡ.. ವಯಸ್ಸಿನ್ನೂ 8 ವರ್ಷವಷ್ಟೇ. ಆಂಜನೇಯನ ಹಾಡಿಗೆ ಹೆಜ್ಜೆ ಹಾಕಿದ, ಆತನ ವಯಸ್ಸಿಗೂ ಆತನ ನೃತ್ಯಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಮೈಯಲ್ಲಿ ಮೂಳೆಗಳೆ ಇಲ್ಲವೇನೋ ಎಂಬಂತೆ ನೃತ್ಯ ಮಾಡಿದ, ಕುಣಿದು ಕುಪ್ಪಳಿಸಿದ. ರಿಯಲ್ ಭಜರಂಗಿಯ ಜೊತೆಗೂ ಹೆಜ್ಜೆ ಹಾಕಿದ. ಶಿವಣ್ಣನಿಗೆ ಆಂಜನೇಯನ ಆಶೀರ್ವಾದವಿರುವ ಡಾಲರ್ ಅನ್ನು ತಂದು ಹಾಕಿದ.
* ದಿಶಾ ದೇಚಮ್ಮ.. ವಯಸ್ಸು 14.. ನಾಗಿಣ್ ಡಾನ್ಸ್ ಗೆ ಶಿವಣ್ಣ ಕ್ಲೀನ್ ಬೋಲ್ಡ್. ದಿಶಾ ನಿನ್ನ ಡಾನ್ಸ್ ಗೆ ನಿಶಾ. ಇನ್ನಷ್ಟು ಡಾನ್ಸ್ ನೋಡುವುದಕ್ಕಾಗಿಯೇ ನಾನು ಬಜ್ಹರ್ ಒತ್ತಲಿಲ್ಲ. ಆಲ್ ದಿ ಬೆಸ್ಟ್ ಅಂತ ಹೇಳಿ ರಾಜ ಪದಕವನ್ನು ಹಾಕಿದರು.


Click it and Unblock the Notifications











