DKD: ಗೀತಾ ಹೆಸರಿನವರೇ ಪತ್ನಿಯಾಗಿ ಸಿಕ್ಕಿದ್ದಕ್ಕೆ ಆ ಸಿನಿಮಾ ಕಾರಣ ಎಂದ ಶಿವಣ್ಣ

By ಎಸ್ ಸುಮಂತ್

ವೀಕೆಂಡ್ ಬಂತು ಎಂದರೆ ಸಾಕು ಡಿಕೆಡಿ ನೋಡಲು ಕಾಯುವಂತೆ ಮಾಡಿ ಬಿಟ್ಟಿದೆ ಇತ್ತೀಚಿನ ಶೋಗಳು. ಡ್ಯಾನ್ಸ್ ಮಾಡಿ ಮನರಂಜನೆ ನೀಡುವುದರ ಜೊತೆಗೆ ಮೈಝುಮೆನ್ನಿಸುವ ಪರ್ಫಾಮೆನ್ಸ್ ಗಳನ್ನು ನೀಡುತ್ತಿದ್ದಾರೆ. ಮಕ್ಕಳ ಪರ್ಫಾಮೆನ್ಸ್‌ಗೆ ತೀರ್ಪುಗಾರರೇ ಸೀಟಿನ ತುದಿಗೆ ಬಂದು ಕುಳಿತು ಬಿಟ್ಟಿದ್ದಾರೆ. ಈ ವಾರದ ವೇದಿಕೆಯಲ್ಲೂ ಮೈ ನಡುಗಿಸುವಂತಹ ನೃತ್ಯಗಳು ಕಣ್ಣು ಕಟ್ಟುತ್ತಿವೆ.

ಈ ರಿಯಾಲಿಟಿ ಶೋನಲ್ಲಿ ಹೆಚ್ಚು ಖುಷಿ ಕೊಡುತ್ತಿರುವುದು ಶಿವಣ್ಣನ ನಗು. ಯಾರಿಗೆ ಬೇಡ ಹೇಳಿ ಆ ನಗು. ಅಪ್ಪು ನಿಧನರಾದಾಗಿನಿಂದ ಬರೀ ದುಃಖ, ಕಣ್ಣೀರು, ಮೌನವೇ ಇಡೀ ಕುಟುಂಬವನ್ನು ಆವರಿಸಿದೆ. ಈಗಲೂ ನೋವಿಲ್ಲ ಎಂಬುದಿಲ್ಲ. ಆದರೆ ಕೊಂಚ ಚೇತರಿಕೆ ಕಾಣುತ್ತಿದೆ. ಎಷ್ಟೇ ದುಃಖವಿದ್ದರೂ, ಅಪ್ಪುವಿನ ಜಾಗದಲ್ಲಿ ನಿಂತು ಅಶ್ವಿನಿ ಪುನೀತ್ ರಾಜ್ ಕುಮಾರ್ ಒಂದಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನು ಶಿವಣ್ಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ತನ್ನ ನೋವು ಮರೆಯುತ್ತಿದ್ದಾರೆ. ಒಮ್ಮೊಮ್ಮೆ ಅಪ್ಪು ಫೋಟೊ ನೋಡಿದರು ಮತ್ತೆ ಉಮ್ಮಳಿಸಿ ದುಃಖ ಬಂದು ಬಿಡುತ್ತೆ. ಆದರೂ ಎಲ್ಲವನ್ನೂ ತಡೆದು ನಗುವುದಕ್ಕೆ ಶುರು ಮಾಡಿದ್ದಾರೆ.

ಜೊತೆಯಲಿ ಹಾಡಿಗೆ ಶಿವಣ್ಣ ಸ್ಟೆಪ್ಸ್

ಜೊತೆಯಲಿ ಹಾಡಿಗೆ ಶಿವಣ್ಣ ಸ್ಟೆಪ್ಸ್

ಅಬ್ಬಬ್ಬಾ ಅದೇನು ದೇಹವೋ ಅಲ್ಲವೋ ಗೊತ್ತಿಲ್ಲ. 8 ವರ್ಷದ ದಕ್ಷಿತ್ ಗೌಡ ಮತ್ತು ಐದೇ ವರ್ಷದ ಪ್ರಣನ್ಯ ಮಾಡಿದ ನೃತ್ಯ ಎಲ್ಲರನ್ನೂ ಮೂಖ ವಿಸ್ಮಿತಗೊಳಿಸಿದೆ. ಇಬ್ಬರ ಕೋ- ಆರ್ಡಿನೇಷನ್ ಎಲ್ಲಿಯೂ ಮಿಸ್ ಆಗಿಲ್ಲ. ಮೇಲಿಂದ ಎಗರಿ ಬಿದ್ದರು ನೋವಾಗಿಲ್ಲ. ರಕ್ಷಿತಾ ಅವರಂತೂ ಭಯದಲ್ಲಿಯೇ ಪರ್ಫಾಮೆನ್ಸ್ ನೋಡುತ್ತಿರುತ್ತಾರೆ. ಕೆಲವೊಂದು ಕಠಿಣ ಸ್ಟೆಫ್‌ಗಳಲ್ಲೂ ಮಕ್ಕಳು ಎಡವಿಲ್ಲ. ಶಿವಣ್ಣ ಅಂತು ಮಕ್ಕಳ ಡ್ಯಾನ್ಸ್ ನೋಡಿ ಸೀಟಿನಿಂದ ಎದ್ದು ಚಪ್ಪಾಳೆ ಹೊಡೆದಿದ್ದಾರೆ. ಇದೇ ಶಿವಣ್ಣ ಗೀತಾರನ್ನು ವಿವಾಹವಾಗಿದ್ದರ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ. "ಗೀತಾ ಸಿನಿಮಾ ತುಂಬಾನೇ ಇಷ್ಟಪಟ್ಟಿದ್ದೆ. ಅದಕ್ಕೆ ಗೀತಾ ಹೆಸರಿನವರೇ ಹೆಂಡತಿಯಾಗಿ ಬಂದಿದ್ದಾರೆ." ಎಂದಿದ್ದಾರೆ ಶಿವಣ್ಣ.

ಶಂಕರ್ ನಾಗ್ ಎನರ್ಜಿ ಬಗ್ಗೆ ಶಿವಣ್ಣ ಮೆಚ್ಚುಗೆ

ದಕ್ಷಿತ್ ಮತ್ತು ಪ್ರಣನ್ಯನ ಪರ್ಫಾಮೆನ್ಸ್ ಎಂಥವರಿಗೂ ಶಂಕರ್‌ನಾಗ್ ಅವರನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಡುತ್ತೆ. ಈ ವೇಳೆ ಶಿವಣ್ಣ ಮಾತನಾಡಿ, ಎನರ್ಜಿ ಎಂದರೆ ಶಿವಣ್ಣ ಎನ್ನುತ್ತಿರಲ್ಲ. ಅಲ್ಲ, ಎನರ್ಜಿ ಎಂದರೆ ಶಂಕರ್ ನಾಗ್. ಎಷ್ಟು ಸಮಯಬೇಕಾದರೂ ಕೆಲಸ ಮಾಡುತ್ತಿದ್ದರು. ಸಾಕಷ್ಟು ವಿಷಯಗಳು ತಲೆಯಲ್ಲಿತ್ತು. ನಾನು ಅವರನ್ನು ಭೇಟಿ ಮಾಡಿದ್ದು ಅಪ್ಪಾಜಿಯವರ 'ಒಂದು ಮುತ್ತಿನ ಕಥೆ' ಸಿನಿಮಾ ಸಮಯದಲ್ಲಿ. ನಾನು ಆಗ ಆಕ್ಟರ್ ಆಗಿರಲಿಲ್ಲ. ಕಾರವಾರದಲ್ಲಿ ಶೂಟಿಂಗ್ ಇತ್ತು. ತುಂಬಾ ಆತ್ಮೀಯರಾಗಿದ್ದರು. ನಾನು ಆ ದಿನವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

ಹಂಗೆ ಕುಣಿರೋ ಅಂತ ಕುಣಿದೇ ಬಿಟ್ಟರು ಶಿವಣ್ಣ

ಹಂಗೆ ಕುಣಿರೋ ಅಂತ ಕುಣಿದೇ ಬಿಟ್ಟರು ಶಿವಣ್ಣ

ಜಾನಪದ ಹಾಡು ಎಂದರೆ ಎಂಥವರನ್ನು ಕುಂತಲ್ಲಿಯೇ ಕುಣಿಸಿಬಿಡುತ್ತೆ. ಅದಕ್ಕೆ ಅಷ್ಟು ಪವರ್ ಇದೆ. ಆ ಮ್ಯೂಸಿಕ್ ಡ್ಯಾನ್ಸ್ ಬರದೆ ಇದ್ದವರಿಗೂ ಸ್ಟೆಪ್ ಹಾಕುವಂತೆ ಮಾಡುತ್ತೆ. ಅದರಲ್ಲೂ "ಏಳು ಮಲೆ ಮಾದೇವ.." ಹಾಡು ಎಲ್ಲಿಲ್ಲದ ಕ್ರೇಜ್ ತಂದುಕೊಟ್ಟುಬಿಡುತ್ತೆ. ಇದೀ ಡಿಕೆಡಿ ಕಾರ್ಯಕ್ರಮದಲ್ಲೂ ಅಂಥದ್ದೆ ದೃಶ್ಯವೈಭವ ಸೃಷ್ಟಿಯಾಗಿದೆ. ವಿನಾಯಕ್ -ರಿದ್ಯಾ ಅವರ "ಏಳುಮಲೆ ಮ್ಯಾಲೇರಿ ಕುಂತಾನಲ್ಲೋ ಮಾದೇವ.." ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಅವರಿಬ್ಬರ ಸ್ಟೆಪ್‌ಗೆ ಶಿವಣ್ಣ ಕುಂತಲ್ಲೆ ಕುಣಿಸಿದ್ದಾರೆ. ರಿದ್ಯಾ ಪವರ್‌ಗೆ ರಕ್ಷಿತಾ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕಡೆಗೆ ಶಿವಣ್ಣ ತಮ್ಮ ಶೂ ಬಿಟ್ಟು ಸ್ಟೇಜ್ ಮೇಲೆ ಬಂದು ಮಾದಪ್ಪನಿಗೊಂದು ಕುಣಿತ ಹಾಕಿದ್ದಾರೆ.

ಶಿವಣ್ಣ ಸ್ಟೇಜ್ ಮೇಲಿದ್ದರೆ ಎನರ್ಜಿ ಫಿಕ್ಸ್

ಶಿವಣ್ಣನ ಎನರ್ಜಿ ಕಂಡು ಇಡೀ ಕರ್ನಾಟಕ ಅವರಿಗೆ ಅಭಿಮಾನಿಗಳಾಗಿದ್ದಾರೆ. ಮಕ್ಕಳ ಜೊತೆ ಸೇರಿದರೆ ನೋವನ್ನು ಮರೆಯುವ ಸಾಧ್ಯತೆನೇ ಹೆಚ್ಚು. ಹೀಗಾಗಿಯೇ ಮಕ್ಕಳ ನೃತ್ಯ ನೋಡಿ ಮನಸಾರೆ ನಗುತ್ತಿದ್ದಾರೆ. ಪ್ರೇಕ್ಷಕರು ಕಮೆಂಟ್ ಬಾಕ್ಸ್‌ನಲ್ಲಿ ಶಿವಣ್ಣ ನೀವೂ ಯಾವಾಗಲೂ ಹೀಗೆ ನಗಬೇಕು ಎಂದು ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶಿವಣ್ಣನ ವೇದಿಕೆ ಮೇಲಿನ ಡ್ಯಾನ್ಸ್, ಮನಸ್ಸಿನ ಖುಷಿ ಕಂಡು ಅರ್ಜುನ್ ಜನ್ಯಾ ಅಕ್ಷರಶಃ ಖುಷಿಯಲ್ಲಿ ಕಣ್ಣೀರಾಗಿದ್ದಾರೆ. ಶಿವಣ್ಣನಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮ ಜೊತೆಗೆ ಇರುವುದೇ ನಮ್ಮ ಪುಣ್ಯ ಎಂದಿದ್ದಾರೆ. ಆ ಎಲ್ಲಾ ಖುಷಿಯನ್ನು ಕಂಡ ಶಿವಣ್ಣ ಜನ್ಮ ಕೊಟ್ಟವರಿಗೆ ಕೃತಜ್ಞತೆ ಹೇಳಿದ್ದಾರೆ. ಜೊತೆ ಮನುಷ್ಯ ಎಷ್ಟು ದಿನ ಇರ್ತೀವಿ. ಇದ್ದಾಗ ಎಲ್ಲರ ಮನಸ್ಸಿಗೆ ಇಷ್ಟವಾಗುವಂತೆ, ಎಲ್ಲರ ಜೊತೆಗೂ ಖುಷಿಯಾಗಿರಬೇಕು ಎಂಬ ಅವರ ಮಾತುಗಳು ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿದೆ.

More from Filmibeat

English summary
Zee Kannada Reality Show DKD Written Update On May 15th Episode. Here is the details about Shivarajkumar enjoying movments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X