ರೆಕ್ಕೆಯ ಕುದುರೆ ಏರಿ ಹಾಡಿಗೆ ಶಿವಣ್ಣನ ಡ್ಯಾನ್ಸ್: ಡಿಕೆಡಿ ನೋಡಿ ಖುಷಿ ಪಟ್ಟ ಗೀತಾ ಶಿವರಾಜ್‌ಕುಮಾರ್

By ಎಸ್ ಸುಮಂತ್

ರೆಕ್ಕೆಯ ಕುದುರೆ ಏರಿ.. ಈ ಹಾಡು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಅವರ ತಂದೆಯೆಂದರೆ ಪ್ರೀತಿ ಪ್ರೇಮ ಹೆಚ್ಚು. ಎಲ್ಲರ ಜೀವನದಲ್ಲೂ ತಂದೆ ಎಂಬ ಪಾತ್ರ ಒಂದೊಂದು ರೀತಿಯ ಮಹತ್ವವನ್ನು ವಹಿಸಿರುತ್ತದೆ. ಮಾದರಿ, ಸ್ಪೂರ್ತಿ, ಜವಾಬ್ದಾರಿ ಹೀಗೆ ಹಲವರ ಬದುಕಿನಲ್ಲಿ ಕಾಣಿಸಿಕೊಂಡರೆ, ಇನ್ನು ಹಲವರ ಬದುಕಿನಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿರುವ ಉದಾಹರಣೆಗಳಿದ್ದಾವೆ. ಆದರೆ ಡಿಕೆಡಿ ಶೋನಲ್ಲಿ ತಂದೆಯ ಪ್ರೀತಿ ಅನಾವರಣವಾಗಿದೆ.

ಈ ವಾರದ ಡಿಕೆಡಿಯಲ್ಲಿ ಹಲವು ಬಗೆಯ ಡ್ಯಾನ್ಸ್‌ ಅನ್ನು ಮಾಡಲಾಗುತ್ತಿದೆ. ಸ್ಪರ್ಧೆ ಹೆಚ್ಚಾದಷ್ಟು ಸ್ಪರ್ಧಿಗಳ ನಡುವೆ ಹೆಚ್ಚೆಚ್ಚು ಕಾಂಪಿಟೇಷನ್ ಹೆಚ್ಚಾಗುತ್ತದೆ. ಈಗ ಆಗುತ್ತಿರುವುದು ಅದೇ. ನಾವೇ ಗೆಲ್ಲಬೇಕು ಎಂಬ ಹಠ ಎಲ್ಲರಲ್ಲೂ ಬಂದಂತಿದೆ. ಹೀಗಾಗಿ ಗೋಲ್ಡನ್ ಹ್ಯಾಟ್‌ಗಾಗಿ ಒಳ್ಳೊಳ್ಳೆ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಅದರಲ್ಲಿ ಇಂದಿನ ಎಪಿಸೋಡಿನಲ್ಲಿ ತಂದೆ ಮಗಳ ಪ್ರೀತಿ ಗಮನ ಸೆಳೆಯುತ್ತಿದೆ.

ಅಸಹಾಯಕ ತಂದೆಯನ್ನು ಮಗಳು ಹೇಗೆ ಸಲಹುತ್ತಾಳೆ?

ಅಸಹಾಯಕ ತಂದೆಯನ್ನು ಮಗಳು ಹೇಗೆ ಸಲಹುತ್ತಾಳೆ?

ನವೀನ್ ಮತ್ತು ಹರ್ಷಿತಾ ಅಪ್ಪ ಮಗಳ ಬಾಂಧವ್ಯ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಅಂತಿಂಥ ಹಾಡಲ್ಲ, ಎಲ್ಲರ ಕಣ್ಣಲ್ಲೂ ನೀರು ತರಿಸುವ ಹಾಡು. ಅದುವೇ ರೆಕ್ಕೆಯ ಕುದುರೆ ಏರಿ ಹಾಡು. ಶಿವಣ್ಣ ಅಭಿನಯದ 'ಕವಚ' ಸಿನಿಮಾದ ಹಾಡಿದು. ಅದರಲ್ಲಿ ಕಣ್ಣು ಕಾಣದ ಅಪ್ಪ. ಆದರೆ ಇಲ್ಲಿ ಅಸಹಾಯಕ ಅಪ್ಪನ ಜೊತೆ ಮುದ್ದು ಮಗಳು ಯಾವ ರೀತಿ ಇರುತ್ತಾಳೆ ಎಂಬುದು ತೋರಿಸಲಾಗಿದೆ. ಹರ್ಷಿತಾ ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ತಂದೆಗೆ ಮಗಳನ್ನು ಎತ್ತಿ ಮುದ್ದಾಡಬೇಕು. ಆಕೆಯನ್ನು ತನ್ನ ಶಕ್ತಿ ಇರುವಷ್ಟು ಸಲಹಬೇಕು ಎನಿಸಿರುತ್ತದೆ. ಆದರೆ ಅದು ಕೆಲವೊಂದಿಷ್ಟು ಜನರಿಂದ ಸಾಧ್ಯವಾಗುವುದಿಲ್ಲ. ಆ ನಿಂದನೆಯೂ ಈ ಡ್ಯಾನ್ಸಿಗೂ ಮುನ್ನ ಅನಾವರಣವಾಗಿದೆ. ಆದರೆ ಇಷ್ಟು ಸಾಫ್ಟ್ ಇರುವ ಹಾಡಿಗೆ ಹೀಗೂ ಹೆಜ್ಜೆ ಹಾಕಬಹುದಾ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಶಿವಣ್ಣನ ಡ್ಯಾನ್ಸ್ ಬಗ್ಗೆ ಗೀತಾ ಹೇಳಿದ್ದು ಹೀಗೆ

ಶಿವಣ್ಣನ ಡ್ಯಾನ್ಸ್ ಬಗ್ಗೆ ಗೀತಾ ಹೇಳಿದ್ದು ಹೀಗೆ

ಈ ವಾರದ ವಿಶೇಷ ಅತಿಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಕರೆಸಿದ್ದಾರೆ. ಮಕ್ಕಳ ಡ್ಯಾನ್ಸ್, ಅವರ ಪ್ರತಿಭೆ ನೋಡಿ ಗೀತಾ ಅವರಿಗೂ ಶಾಕ್ ಆಗಿದೆ. ಈ ಕಾರಣಕ್ಕೆ ಮನಸಾರೆ ಹಾರೈಸಿದ್ದಾರೆ. ಈ ವೇಳೆ 'ಕವಚ' ಸಿನಿಮಾದ ರೆಕ್ಕೆಯ ಕುದುರೆ ಏರಿ ಹಾಡಿಗೆ ನವೀನ್ ಮತ್ತು ಹರ್ಷಿತಾ ಡ್ಯಾನ್ಸ್ ಮಾಡಿದ್ದು, ಶಿವಣ್ಣನ ಮಡದಿ ಗೀತಾ ಅವರಿಗೆ ಖುಷಿಯಾಗಿದೆ. 'ಕವಚ' ಸಿನಿಮಾದಲ್ಲಿರುವ ಹಾಡಿಗಿಂತ ಇದು ತುಂಬಾ ಅದ್ಭುತವಾಗಿದೆ ಎಂದಿದ್ದಾರೆ. ಮಕ್ಕಳ ಡ್ಯಾನ್ಸ್ ಗೆ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಹೆಣ್ಣು ಮಕ್ಕಳಿಗೆ ತಂದೆಯೇ ಮೊದಲ ಹೀರೊ. ಆ ಎಮೋಷನ್ ಅನ್ನ ತುಂಬಾ ಅದ್ಭುತವಾಗಿ ವೇದಿಕೆ ಮೇಲೆ ತಂದಿದ್ದೀರಾ ಎಂದು ಅರ್ಜುನ್ ಜನ್ಯಾ ಹೊಗಳಿದ್ದಾರೆ. ಜಡ್ಜ್‌ಗಳು ತಂದೆಯ ಪ್ರೀತಿಗೆ ಕರಗಿ, ಗೋಲ್ಡನ್ ಹ್ಯಾಟ್ ನೀಡಿದ್ದಾರೆ.

ಹರ್ಷಿತಾಗೆ ಸ್ಪೆಷಲ್ ಗಿಫ್ಟ್

ಹರ್ಷಿತಾಗೆ ಸ್ಪೆಷಲ್ ಗಿಫ್ಟ್

ಹರ್ಷಿತಾ ವೇದಿಕೆ ಮೇಲೆ ಮಾತ್ರ ತಂದೆಯ ಪ್ರೀತಿ ಬಗ್ಗೆ ಡ್ಯಾನ್ಸ್ ಮಾಡಿದ್ದು ಅಲ್ಲ. ಆಕೆಗೆ ತಂದೆ ಎಂದರೆ ತುಂಬಾ ಇಷ್ಟ. ಹೀಗಾಗಿಯೇ ಆ ಫೀಲ್ ಹೆಚ್ಚಾಗಿ ಕಾಣುತ್ತಿತ್ತು. ಆದರೆ ಪರ್ಫಾಮೆನ್ಸ್ ಮುಗಿದ ಮೇಲೆ ಅಪ್ಪ ಈ ನನ್ನ ಡ್ಯಾನ್ಸ್ ನೋಡಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಳು. ಅನುಶ್ರೀ ಸಮಾಧಾನ ಮಾಡಿದರೂ ಅಳು ನಿಲ್ಲುತ್ತಿಲ್ಲ. ಜಡ್ಜಸ್ ಸಮಾಧಾನ ಮಾಡಿದರೂ, ಅಳು ನಿಲ್ಲಲಿಲ್ಲ. ಕಡೆಗೆ ಅವರ ಅಪ್ಪ ಸಸ್ಪೆನ್ಸ್ ಆಗಿ ಬಂದು, ಗಿಫ್ಟ್ ಕೊಟ್ಟಾಗ ಶಾಕ್ ಆಗಿದ್ದಾಳೆ. ಫುಲ್ ಖುಷಿಯಾಗಿದ್ದಾಳೆ.

ಈ ವಾರದ ಡಿಕೆಡಿಯಲ್ಲಿ ಮಸ್ತ್ ಡ್ಯಾನ್ಸ್

ಈಗಾಗಲೇ ಮಕ್ಕಳ ಪ್ರತಿಭೆಯನ್ನು ವಾರಕ್ಕೊಮ್ಮೆ ನೋಡುತ್ತಲೇ ಇರುತ್ತೇವೆ. ಈ ವಾರವೂ ಮಕ್ಕಳಿಂದ ಮಸ್ತ್ ಡ್ಯಾನ್ಸ್ ಮನಸ್ಸಿಗೆ ಮುದ ನೀಡಲಿದೆ ಅನ್ನೋದು ಬಿಟ್ಟಿರುವ ಪ್ರೋಮೋಗಳಿಂದ ಗೊತ್ತಾಗುತ್ತಿದೆ. ಈ ವಾರದ ಶಶಾಂಕ್ ಮತ್ತು ತ್ರಿಶಾಳಿಂದ ಚಿಟ್ಟೆ ಅವತಾರ, ನವೀನ್ ಮತ್ತು ಹರ್ಷಿತಾ ಅಸಹಾಯಕ ತಂದೆ ಮತ್ತು ಮಗಳ ಬಾಂಧವ್ಯ, ಫೈಲ್ಯೂರ್ ಮತ್ತು ಸಕ್ಸಸ್ ಬಗ್ಗೆ ಸದ್ವಿನ್ ಮತ್ತು ಶಾರಿಕ, ಸೈಕ್ ಲವ್ವರ್ ಆಗಿ ಆಶ್ರಿತಾಳನ್ನು ಕಾಡುವ ಜಾನ್ಸನ್, ವಿಕ್ರಮ ಬೇತಾಳ, ದಿಲೀಪ್ ಮತ್ತು ರಮ್ಯಾಳ ಸರ್ಜಿಕಲ್ ಸ್ಟ್ರೈಕ್, ಅಮ್ಮ ಮಕ್ಕಳ ವಾತ್ಸಲ್ಯ ಹೀಗೆ ಹಲವು ವಿಭಿನ್ನ ಕಾನ್ಸೆಪ್ಟ್ ನಲ್ಲಿ ಪರ್ಫಾಮೆನ್ಸ್ ಸಿಗಲಿದೆ.

More from Filmibeat

English summary
Zee Kannada Reality Show DKD Written Update on May 22nd Episode. Here is the details about Geetha Shivarajkumar likes DKD dance show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X