For Quick Alerts
  ALLOW NOTIFICATIONS  
  For Daily Alerts

  Dance Karnataka Dance: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಆಯ್ಕೆಯಾದವರಿಗೆ ಪವರ್ ಫುಲ್ ʻರಾಜಪದಕʼ

  By ಎಸ್ ಸುಮಂತ್
  |

  ಕುಣಿದು ಕುಪ್ಪಳಿಸುವುದಕ್ಕೆ ಬಾಕಿ ಇರುವುದು ಒಂದೇ ದಿನ. ಈಗಾಗಲೇ ಜೀ ಕನ್ನಡದ ಡಿಕೆಡಿ ವೇದಿಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗೆಸ್ಟ್‌ಗಳನ್ನು ಕರೆಸಿ ಆಗಿದೆ. ಜಡ್ಜ್‌ಗಳು ಸಿದ್ಧವಾಗಿದ್ದಾರೆ. ಕುಣಿಯುವ ಟ್ಯಾಲೆಂಟ್ ತೋರಿಸಲು ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಡಿಕೆಡಿ ಕಾರ್ಯಕ್ರಮದ ಒಂದೊಂದು ಪ್ರೋಮೊ ಚಿಂದಿ ಅನ್ನಿಸುತ್ತಿದೆ. ಬೇರೆ ಸೀಸನ್‌ಗಿಂತ ಈ ಬಾರಿಯ ಸೀಸನ್ ಮತ್ತಷ್ಟು ಮನರಂಜನೆ ಕೊಡುವುದರಲ್ಲಿ ನೋ ಡೌಟ್ ಅನ್ನೋದು ಪ್ರೂವ್ ಆಗಿದೆ.

  Recommended Video

  Gaddappa | Nagini 2 | ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದ ಗಡ್ದಪ್ಪ ಸೆಂಚುರಿ ಗೌಡ

  ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್‌ಗೆ ಶಿವಣ್ಣನ ಎಂಟ್ರಿಯಾಗಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರ. ಆದರೆ ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷತೆ ಇದೆ. ಕನ್ನಡದ ಮೈಕಲ್ ಜಾಕ್ಸೆನ್, ಎಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ವಿಶೇಷತೆಯೂ ಇದೆ. ಅವರಿಗೆ ಅಂತ ವಿಶೇಷ ಗೌರವ ಸಲ್ಲಿಸಲಾಗುತ್ತೆ. ಅವರ ಹೆಸರಲ್ಲೇ ಸ್ಪರ್ಧಿಗಳಿಗೆ ಮುಖ್ಯವಾದ ವಸ್ತುವೊಂದನ್ನು ನೀಡಲಾಗುತ್ತಿದೆ.

  ಶನಿವಾರ-ಭಾನುವಾರ ಡಿಕೆಡಿ ಮೆಗಾ ಆಡಿಷನ್

  ಶನಿವಾರ-ಭಾನುವಾರ ಡಿಕೆಡಿ ಮೆಗಾ ಆಡಿಷನ್

  ಡಿಕೆಡಿಯಂತ ಅದ್ದೂರಿ ಕಾರ್ಯಕ್ರಮ ಶುರುವಾಗುವುದಕ್ಕೆ ಒಂದೇ ಒಂದು ದಿನ ಬಾಕಿ ಅಷ್ಟೇ. ಈಗಾಗಲೇ ಸ್ಪರ್ಧಿಗಳನ್ನು ಹುಡುಕಿದ್ದೂ ಆಗಿದೆ. ಆದರೆ ಯಾರೆಲ್ಲಾ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ? ಯಾರೆಲ್ಲಾ ರಿಜೆಕ್ಟ್ ಆಗಿದ್ದಾರೆ? ಎಷ್ಟು ಸ್ಪರ್ಧಿಗಳು ಪ್ರಯತ್ನ ಪಟ್ಟಿದ್ದರು ಹಾಗೇ ಆಯ್ಕೆ ಪ್ರಕ್ರಿಯೆ ಹೇಗಿತ್ತು? ಎಂಬ ಎಪಿಸೋಡನ್ನು ಎರಡು ದಿನಗಳ ಕಾಲ ನಡೆಸಲಾಗುತ್ತದೆ. ಈ ಬಗ್ಗೆ ಜೀ ಕನ್ನಡದಲ್ಲಿ ಪ್ರೋಮೊ ಕೂಡ ಬಿಡಲಾಗಿದೆ. ಈ ಪ್ರೋಮೊ ನೋಡಿನೇ ಡಾನ್ಸ್ ಪ್ರಿಯರು ಥ್ರಿಲ್‌ ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

  ಶಿವಣ್ಣನಿಗಾಗಿ ಡಾಲರ್ ತಂದಿದ್ದ ದಕ್ಷಿತ್

  ಶಿವಣ್ಣನಿಗಾಗಿ ಡಾಲರ್ ತಂದಿದ್ದ ದಕ್ಷಿತ್

  ಇಂತ ಹಲವು ಸ್ಪೆಷಲ್ ಮೂಮೆಂಟ್‌ಗಳನ್ನು ನೋಡುವುದಕ್ಕೆ ಶನಿವಾರ (ಏಪ್ರಿಲ್ 16) ಸಿಗುವುದು ಗ್ಯಾರಂಟಿ. ಮಕ್ಕಳಿಗೆ ಶಿವಣ್ಣ ಅಂದರೆ ಇನ್ನಿಲ್ಲದ ಪ್ರೀತಿ. ಅವರು ಗೆಲ್ಲುತ್ತಾರೋ ಇಲ್ಲವೋ ಆದರೆ ಮಕ್ಕಳು ನಿಶ್ಕಲ್ಮಶತೆಯಿಂದ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಪ್ರೋಗ್ರಾಂನಲ್ಲಿ ದಕ್ಷಿತ್ ಗೌಡ ಎಂಬ ಬೆಂಗಳೂರಿನ ಕುವರ ಕೂಡ ಆಯ್ಕೆಯಾಗಿದ್ದಾನೆ. ಹನುಮನ ವೇಷದಲ್ಲಿ ಕುಣಿದ ದಕ್ಷತ್ ಎಲ್ಲರ ಮನಗೆದ್ದಿದ್ದಾನೆ. ಅಷ್ಟೇ ಅಲ್ಲ ಅವನ ಜೊತೆ ಶಿವಣ್ಣ ಕೂಡ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇದೇ ವೇಳೆ ಶಿವಣ್ಣನಿಗೆ ಅಂತ ತಂದಿದ್ದ ಡಾಲರ್ ಅನ್ನು ದಕ್ಷತ್ ಸ್ವತಃ ಅವರ ಕೊರಳಿಗೆ ಹಾಕಿ, ಖುಷಿ ಪಟ್ಟಿದ್ದಾನೆ.

  ಮತ್ತೊಮ್ಮೆ ಮೈಝುಮ್ಮೆನ್ನಿಸುವ ಹೆಜ್ಜೆ ಹಾಕಿದ ಮಕ್ಕಳು

  ಡಿಕೆಡಿ ಕಾರ್ಯಕ್ರಮ ಹೇಗಿರುತ್ತೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ಯಾಕಂದ್ರೆ ಈಗಾಗಲೇ ಹಿಂದಿನ ಹಲವು ಎಪಿಸೋಡ್‌ಗಳಲ್ಲಿ ನೋಡಿಯೇ ಇರುತ್ತೀರಿ. ಡಾನ್ಸ್ ಮಾಡುವವರು ದೇಹದಲ್ಲಿ ಮೂಳೆಯೇ ಇಲ್ಲವೆಂಬವಂತೆ ಕುಣಿದಿರುವುದು, ರಿಸ್ಕ್ ತೆಗೆದುಕೊಂಡು ಡಾನ್ಸ್ ಮಾಡಿರುವುದನ್ನು ಕಂಡಿದ್ದೇವೆ. ಎಷ್ಟೋ ಸಲ ನೋಡುಗರಿಗೆ ಹಾರ್ಟ್ ಬಾಯಿಗೆ ಬಂದಂತ ಫೀಲ್. ತೀರ್ಪುಗಾರರ ಸ್ಥಾನದಲ್ಲಿ ಕುಳಿತ ರಕ್ಷಿತಾ ಪ್ರೇಮ್ ಎಷ್ಟೋ ಸಲ ಕಣ್ಣನ್ನೇ ಮುಚ್ಚಿಕೊಂಡಿದ್ದಾರೆ. ಅಷ್ಟು ಮೈನವಿರೇಳುವ ನೃತ್ಯವನ್ನು ಕಂಡಿದ್ದೇವೆ. ಈ ಬಾರಿಯ ಡಿಕೆಡಿ ಕೂಡ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ಬಿಟ್ಟಿರುವ ಪ್ರೋಮೊದಲ್ಲಿ ಅದು ಪ್ರೂವ್ ಆಗಿದೆ. ಅಷ್ಟೇ ಸೇಫ್ಟಿಯನ್ನು ಕಾಪಾಡಿಕೊಂಡಿರುತ್ತಾರೆ ಅನ್ನೋದು ಮತ್ತೊಂದು ವಿಚಾರ.

  ಪ್ರೋಮೋದಲ್ಲಿ ಎದ್ದು ಕಾಣುತ್ತೆ ಅದ್ಧೂರಿತನ

  ಸಿನಿಮಾಗಳಲ್ಲಿಯೇ ಬಿಗ್ ಬಜೆಟ್ ಸಿನಿಮಾ ತೆಗೆಯುವುದು ತೀರಾ ಕಡಿಮೆ. ಆದರೆ ಜೀ ಕನ್ನಡದಲ್ಲೂ ಶುರುವಾಗುವ ರಿಯಾಲಿಟಿ ಶೋ, ಮದುವೆ ಕಾರ್ಯಕ್ರಮಗಳು ಯಾವ ಬಿಗ್ ಬಜೆಟ್ ಸಿನಿಮಾಗೂ ಕಡಿಮೆ ಇಲ್ಲ. ಅದರಲ್ಲೂ ಶಿವಣ್ಣನನ್ನು ಕರೆಸುತ್ತಿದ್ದಾರೆ ಎಂದಾಗ ಕೊಂಚ ದೊಡ್ಡದಾಗಿಯೇ ಯೋಚನೆ ಮಾಡಬೇಕಾಗುತ್ತೆ. ಅದಕ್ಕೆ ತಕ್ಕಂತೆ ಜೀ ಕನ್ನಡ ಅದ್ದೂರಿಯಾಗಿ ಡಿಕೆಡಿ ಓಪನಿಂಗ್ ಪಡೆದುಕೊಂಡಿದೆ. ಶಿವಣ್ಣನ ಎಂಟ್ರಿ ಮಾತ್ರ ಚಿಂದಿ ಅನ್ನಿಸುತ್ತೆ. ಶಿವಣ್ಣ ಕಾರಿನಲ್ಲಿ ಬರುವಾಗ ಹತ್ತಾರು ಬಾಡಿಗಾರ್ಡ್ಸ್ ಕಾರಿನ ಹಿಂದೆ ಮುಂದೆ ಸುತ್ತುವರೆದು ಶಿವಣ್ಣನನ್ನು ವೇದಿಕೆಗೆ ಕರೆತಂದಿದ್ದಾರೆ. ಅದ್ದೂರಿ ವೇದಿಕೆಯಲ್ಲಿ, ಕಲರ್ ಫುಲ್ ಲೈಟ್‌ಗಳ ನಡುವೆ ಶಿವಣ್ಣ ಕೂಡ ಕುಣಿತ ಹಾಕಿದ್ದಾರೆ. ಇನ್ನು ಸ್ಪರ್ಧಿಗಳ ಕುಣಿತದ ಸಣ್ಣ ಝಲಕ್ ಕೂಡ ಇದರಲ್ಲಿ ಅಡಗಿದೆ.

  DKD ಕಾರ್ಯಕ್ರಮದಲ್ಲಿ ಅಪ್ಪುಗೆ ವಿಶೇಷ ಗೌರವ

  ಡ್ಯಾನ್ಸ್‌ನಲ್ಲಿ ಅಪ್ಪು ಮೀರಿಸುವವರು ಯಾರಾದರೂ ಇದ್ದರಾ ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಉತ್ತರ ಸಿಗುತ್ತಿದೆ. ಅವರಿಲ್ಲದ ಈ ದಿನಗಳಲ್ಲಿ ಅವರ ಡ್ಯಾನ್ಸ್, ಅವರ ಫೈಟ್ ಅನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕರ್ನಾಟಕದ ಮೈಕೆಲ್ ಜಾಕ್ಸೆನ್ ಆಗಿದ್ದವರು ನಮ್ಮ ಅಪ್ಪು. ಅವರ ಸವಿನೆನಪಿಗಾಗಿ ಆಯ್ಕೆಯಾದವರಿಗೆ ರಾಜಪದಕ ನೀಡಲಾಗಿದೆ. ಈಗಾಗಲೇ ಅಪ್ಪುಗಾಗಿ ಜೀ ಕನ್ನಡ ಹಲವು ಕಾರ್ಯಕ್ರಮಗಳ ಮೂಲಕ ಅಪ್ಪುಗೆ ಗೌರವ ಸಲ್ಲಿಸಿದೆ. ಆದರೆ ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಮತ್ತೊಂದು ವಿಶೇಷತೆಯನ್ನು ರೂಢಿಸಿಕೊಂಡಿದೆ. ಅಪ್ಪು ಫೋಟೊ ಇರುವ ಪದಕವನ್ನು ಶಿವಣ್ಣ ಗೆದ್ದವರ ಕೊರಳಿಗೆ ಹಾಕಿದ್ದಾರೆ. ಈ ಎಲ್ಲಾ ವಿಶೇಷ ದೃಶ್ಯಗಳು ಶನಿವಾರ ಮತ್ತು ಭಾನುವಾರದ ಎಪಿಸೋಡ್‌ನಲ್ಲಿ ಸಿಗಲಿದೆ.

  English summary
  Zee Kannada Reality Show DKD Written Update On Shivarajkumrar Entry. Here is the details about DKD Special promo.
  Saturday, April 16, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X