ಅಮ್ಮಂದಿರ ದಿನಕ್ಕೆ ಅಮ್ಮಂದಿರ ಡ್ರಾಮಾ.. ಜಡ್ಜಸ್ ಗಳು ಫುಲ್ ಮಜಾ..!
ಜೀ ಕನ್ನಡದಲ್ಲಿ ಡ್ರಾಮಾ ಜ್ಯೂನಿಯರ್ ಪ್ರತಿ ಎಪಿಸೋಡಿನಂತೆ ಈ ಬಾರಿಯೂ ಎಲ್ಲರ ಗಮನ ಸೆಳೆದಿದೆ. ಮಕ್ಕಳ ಪ್ರತಿಭೆಗಂತು ಎಲ್ಲರೂ ತಲೆಬಾಗಿದ್ದಾರೆ. ನಕ್ಕು ನಲಿದಿದ್ದಾರೆ. ಬರೀ ನಟನೆ ಮೂಲಕ ಮನರಂಜನೆ ಕೊಡುವ ಶೋ ಅಂತ ಇದನ್ನು ನಡೆಸಿಕೊಡುತ್ತಿಲ್ಲ. ಆಗಾಗ ಏನೆಲ್ಲಾ ವಿಶೇಷ ದಿನಗಳು ಇರುತ್ತವೆಯೋ ಆ ವಿಶೇಷ ದಿನಗಳಿಗಾಗಿ ವಿಶೇಷ ಕಾರ್ಯಕ್ರಮ ಮಾಡುತ್ತಾರೆ.
ಇದೀಗ ಅಮ್ಮಂದಿರ ದಿನ ಹತ್ತಿರವಾಗಿದೆ. ಅಮ್ಮಂದಿರ ದಿನ ಸ್ವಲ್ಪ ಹೆಚ್ಚು ವಿಶೇಷವೆಂದೇ ಹೇಳಬಹುದು. ಎಲ್ಲರ ಜೀವನದಲ್ಲೂ ಅವರವರ ತಾಯಿ ತುಂಬಾನೇ ಮುಖ್ಯವಾಗುತ್ತಾರೆ. ಸೆಲೆಬ್ರೆಟಿಗಳ ಪಾಲಿಗೂ ಅಮ್ಮಂದಿರೇ ದೇವರು. ಅದೆಷ್ಟೋ ನಟಿಯರು ಇಂದು ತೆರೆಮೇಲೆ ರಾರಾಜಿಸುವುದಕ್ಕೆ ಇದೇ ಅಮ್ಮಂದಿರು ಕಾರಣರಾಗಿದ್ದಾರೆ. ಮನೆಯಲ್ಲಿ ಬೇಡವೆಂದರೂ ಮಗಳಿಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡಿರುವವರು ಇದ್ದಾರೆ. ಜೀ ಕನ್ನಡ ಅಮ್ಮಂದಿರಿಗಾಗಿಯೇ ಸ್ಪೆಷಲ್ ಎಪಿಸೋಡ್ ಮಾಡಿದ್ದಾರೆ. ಖುಷಿಯ ಜೊತೆಗೆ ನಕ್ಕು ನಲಿಯುತ್ತಾರೆ.

ಡ್ರಾಮಾ ಜ್ಯೂನಿಯರ್‌ನಲ್ಲಿ ಅಮ್ಮಂದಿರಿಂದ ಪರ್ಫಾಮೆನ್ಸ್
ಜೀ ಕಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಡ್ರಾಮಾ ಜೂನಿಯರ್ ನೋಡದೆ ಇರುವವರು ಯಾರು ಇಲ್ಲ. ಯಾಕೆಂದರೆ ಮಕ್ಕಳ ಆ ಪರ್ಫಾಮೆನ್ಸ್ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತೆ. ಒಬ್ಬೊಬ್ಬರು ಒಂದೊಂದು ವಿಭಿನ್ನ ಗೆಟಪ್‌ನಲ್ಲಿ ಮನರಂಜಿಸುತ್ತಾರೆ. ಆದರೆ ಈ ವೀಕೆಂಡ್ ರಂಜಿಸುವುದು ಮಕ್ಕಳ ಅಲ್ಲ. ಬದಲಾಗಿ ಅವರ ತಾಯಂದಿರು. ಮಕ್ಕಳಿಗಾಗಿ ಇದೀಗ ಅಮ್ಮಂದಿರು ರಂಜಿಸಲು ಹೊರಟಿದ್ದಾರೆ. ಜೀ ಕನ್ನಡ ವೇದಿಕೆ ವಿಶ್ವ ಅಮ್ಮಂದಿರ ದಿನದ ವಿಶೇಷತೆಗಾಗಿ ಪುಟಾಣಿಗಳ ಅಮ್ಮಂದಿರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.
ಜಡ್ಜಸ್‌ಗಳ ತೀರ್ಪು ಅಮ್ಮಂದಿರಿಗಾ? ಮಕ್ಕಳಿಗಾ?
ಇಷ್ಟು ದಿನ 'ಡ್ರಾಮಾ ಜ್ಯೂನಿಯರ್ಸ್' ರಿಯಾಲಿಟಿ ಶೋನಲ್ಲಿ ಮಕ್ಕಳ ಡ್ರಾಮಾ ನೋಡಿ ನೋಡಿ ಖುಷಿಯಾಗಿದ್ದಾರೆ. ಆದರೆ ಇದೀಗ ಅಮ್ಮಂದಿರ ಡ್ರಾಮಾ ನೋಡಿ ಖುಷಿಪಡುವ ಕ್ಷಣ ಸಿಕ್ಕಿದೆ. ಮಕ್ಕಳ ಜೊತೆ ಸೇರಿದರೆ ದೊಡ್ಡವರು ಕೂಡ ಮಕ್ಕಳಾಗಿ ಬಿಡುತ್ತಾರೆ. ಈ ವೇದಿಕೆಯಲ್ಲಿಯೂ ಅದೇ ಆಗಿರುವುದು. ತಾಯಂದಿರು ಕೂಡ ಮಕ್ಕಳಂತೆಯೇ ವೇದಿಕೆ ಮೇಲೆ ಎಲ್ಲರನ್ನೂ ನಗಿಸುತ್ತಿದ್ದಾರೆ. 'ಕಾಳಿದಾಸ'ನ ಪ್ರೇಯಸಿ, ಆಪ್ತಮಿತ್ರ ನಾಗವಲ್ಲಿ, ಯಮದೂತ ಹೀಗೆ ಒಂದಾ ಎರಡಾ ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಕ್ತಪ್ರಹ್ಲಾದನ ದೃಶ್ಯ ವೈಭವ ಹೇಗಿದೆ?
'ಡ್ರಾಮಾ ಜೂನಿಯರ್' ಈ ವಾರದ ಸಂಚಿಕೆಯಲ್ಲಿ ತಾಯಂದಿರೇ ಮಕ್ಕಳಾಗಿ ನಗಿಸುವುದರ ಜೊತೆಗೆ ಮತ್ತೊಂದು ವಿಶೇಷತೆ ಕೂಡ ಕಣ್ಣಿಗೆ ಕಟ್ಟುತ್ತದೆ. ಭಕ್ತ ಪ್ರಹ್ಲಾದ ನಾಟಕವನ್ನು ಮಕ್ಕಳು ಮಾಡಿದ್ದಾರೆ. ಅದು ಎಷ್ಟು ಅದ್ಭುವಾಗಿದೆ ಎಂದರೆ ಎರಡು ಕಣ್ಣುಗಳು ಸಾಲುವುದಿಲ್ಲ. ಅದು ಈ ವಾರದ ಸಂಚಿಕೆಗೆ ಒಪ್ಪುತ್ತದೆ. ಜಡ್ಜಸ್ ಅನ್ನು ಕಲರ್ ಫುಲ್ ಬೆಳಕಿನಲ್ಲಿ ಕೂರಿಸಿ, ನಾರಾಯಣನನ್ನು ಹುಡುಕುವ ಆ ರೋಚಕತೆಯನ್ನು ಅಷ್ಟೇ ಅದ್ಭುತವಾಗಿ ತೋರಿಸಿದ್ದಾರೆ. ನಾರಾಯಣನನ್ನು ಹುಡುಕುವ ರೀತಿಗೆ ಇದು ನಿಜಕ್ಕೂ ಇಷ್ಟು ಚಿಕ್ಕ ಮಕ್ಕಳೇನಾ ಎನಿಸದೆ ಇರದು. ನಟನೆಯಲ್ಲಿ ಪ್ರೌಢಿಮೆ ಹೆಚ್ಚಿದೆ. ಪೌರಾಣಿಕ ನಾಟಕಗಳೆಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಪೌರಾಣಿಕ ನಾಟಕಗಳ ಡೈಲಾಗ್‌ಗಳನ್ನೇ ಮಕ್ಕಳು ಸಲೀಸಾಗಿ ಹೊಡೆಯುತ್ತಿದ್ದಾರೆ. ಇದಕ್ಕೆ ಜಡ್ಜಸ್ ಅಲ್ಲ ಪ್ರೇಕ್ಷಕರೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಈ ವಾರದ ತೆನಾಲಿರಾಮ, ಬಸವಣ್ಣನ ಚರಿತ್ರೆ
ಮಕ್ಕಳು 'ಡ್ರಾಮಾ ಜೂನಿಯರ್ಸ್' ವೇದಿಕೆಯಲ್ಲಿ ತಮ್ನ ಪ್ರತಿಭೆಯನ್ನು ತೋರಿಸುವುದರ ಜೊತೆಗೆ ಹಲವು ಸಂದೇಶಗಳನ್ನು ನೀಡುತ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳ ಪಾತ್ರ ಮಾಡುವ ಮೂಲಕ ಸಂದೇಶವನ್ನು ಜಗತ್ತಿಗೆ ಸಾರಿದ ಹೇಳುತ್ತಾರೆ. ಈ ವಾರದ ಸಂಚಿಕೆ ಆ ವಿಚಾರದಲ್ಲೂ ಮಹತ್ವ ಪಡೆಯುತ್ತಿದೆ. ಮಕ್ಕಳು ಬಸವಣ್ಣ ಮತ್ತು ತೆನಾಲಿ ರಾಮನ ಕಥೆಯನ್ನು ಹೇಳಲಿದ್ದಾರೆ. ಇದಕ್ಕೆ ಜೀ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್‌ಗಳನ್ನು ಹಾಕಿ, ಇಬ್ಬರು ಗಣ್ಯ ವ್ಯಕ್ತಿಗಳ ಬಗೆಗಿನ ಪ್ರಶ್ನೆಗಳನ್ನು ಕೇಳಿದ್ದಾರೆ.


Click it and Unblock the Notifications











