ಡ್ರಾಮಾ ಜ್ಯೂನಿಯರ್: 'ಏಕಾಂಗಿ' ಹಾಡಿಗೆ ಡ್ಯುಯೆಟ್ ಹಾಡಿದ 'ಮಲ್ಲ' ಜೋಡಿ

By ಎಸ್ ಸುಮಂತ್

ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕೆಂಬ ವಿಡಿಯೋವೊಂದು ಓಡಾಡುತ್ತಾ ಇದೆ. ಅದು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಡ್ಯಾನ್ಸ್ ವಿಡಿಯೋ. ನನ್ನಾಣೆ ಕೇಳೆ ನನ್ನ ಪ್ರಾಣವೇ ಹಾಡಿಗೆ ರವಿಚಂದ್ರನ್ ಹಾಗೂ ಪ್ರಿಯಾಂಕಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ವಾವ್ ಎನ್ನುವ ಫೀಲ್ ಮನದಲ್ಲಿಯೇ ಮೂಡುತ್ತಿದೆ.

ಹೇಳಿ ಕೇಳಿ ರವಿಚಂದ್ರನ್ ಜೊತೆಗೆ ಹೆಜ್ಜೆ ಹಾಕುವುದೆಂದರೆ ಸುಮ್ಮನೇನಾ. ರವಿಮಾಮ ಅಂದಿಗೂ ಇಂದಿಗೂ ಎಂದೆಂದಿಗೂ ಎಲ್ಲರ ಹಾರ್ಟ್ ಫೇವರಿಟ್. ಇನ್ನು ಪ್ರಿಯಾಂಕಾ ಉಪೇಂದ್ರ ಕೂಡ ಎವರ್‌ಗ್ರೀನ್ ಬ್ಯೂಟಿ ಮೆಂಟೈನ್ ಮಾಡಿರುವ ಚೆಲುವೆ. 'ಮಲ್ಲ' ಸಿನಿಮಾದಲ್ಲಿ ಇಬ್ಬರ ಜೋಡಿ ನೋಡಿ ಖುಷಿ ಪಟ್ಟವರಿಗೆ ಮತ್ತೆ ಡ್ರಾಮಾ ಜ್ಯೂನಿಯರ್ ವೇದಿಕೆ ಮೇಲೆ ಡ್ಯುಯೆಟ್ ಆಡುವ ಅವಕಾಶವೂ ಒದಗಿ ಬಂದಿದೆ.

ರವಿಚಂದ್ರನ್ ಜೊತೆಗೆ ಡ್ಯಾನ್ಸ್

ರವಿಚಂದ್ರನ್ ಜೊತೆಗೆ ಡ್ಯಾನ್ಸ್

ಡ್ರಾಮಾ ಜ್ಯೂನಿಯರ್‌ನಲ್ಲಿ ವಾರಕ್ಕೊಮ್ಮೆ ಹಲವು ವಿಶೇಷತೆಗಳು ಕಾಣಸಿಗುತ್ತವೆ. ಆಗಾಗ ವಿಶೇಷವಾಗಿ ಅತಿಥಿಗಳನ್ನು ಕರೆಸುತ್ತಿರುತ್ತಾರೆ. ಅದರಂತೆ ಈ ವಾರ ಪ್ರಿಯಾಂಕಾ ಉಪೇಂದ್ರ ಬಂದಿದ್ದು, ಸಖತ್ ಖುಷಿ ನೀಡಿದೆ. ಇನ್ನು ಇದೇ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ಸ್ಟೇಪ್ ಹಾಕಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಸದ್ಯ ಜೀ ಕನ್ನಡ ಅಪ್ಲೋಡ್ ಮಾಡಿದ್ದು, ಪ್ರಿಯಾಂಕಾ ಉಪೇಂದ್ರ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರವಿಚಂದ್ರನ್ ಸಿನಿಮಾ ನಟಿಯರ ಮಸ್ತಿ

ರವಿಚಂದ್ರನ್ ಸಿನಿಮಾ ನಟಿಯರ ಮಸ್ತಿ

ಡ್ರಾಮಾ ಜ್ಯೂನಿಯರ್‌ನಲ್ಲಿ ಸಖತ್ ಟ್ಯಾಲೆಂಟ್ ಇರುವ ಮಕ್ಕಳು ವಾರದಲ್ಲಿ ಎರಡು ದಿನ ನಕ್ಕು ನಲಿಸುತ್ತಾರೆ. ಈ ಮಧ್ಯೆ ರವಿಚಂದ್ರನ್ ಕಡೆಯಿಂದ ಮತ್ತಷ್ಟು ಮಸ್ತಿ ಸಿಗುವುದು ಗ್ಯಾರಂಟಿ. ಜೀ ಕನ್ನಡ ಹಿರಿಯ ಕಲಾವಿದರಿಗೆ ಸಾಕಷ್ಟು ಗೌರವ ನೀಡುತ್ತದೆ. ಅದರಂತೆ ರವಿಚಂದ್ರನ್ ಹುಟ್ಟುಹಬ್ಬ. ಬೇರೆ ಏನಾದರೂ ಸ್ಪೆಷಲ್ ದಿನವಾದರೆ ಅಂದು ರವಿಚಂದ್ರನ್‌ಗಾಗಿಯೇ ಆ ವೇದಿಕೆಯನ್ನು ಮೀಸಲಿಡುತ್ತೆ.‌ ಅದರಲ್ಲೂ ರವಿಚಂದ್ರನ್ ಜೊತೆಗೆ ಈ ಹಿಂದೆಯೆಲ್ಲಾ ನಟಿಸಿದ್ದ ನಟಿ ಮಣಿಯರು ಕರೆತಂದು, ಅಲ್ಲೊಂದು ಹಳೆಯ ಭಾವಯಾನ ನಿರ್ಮಾಣವಾಗುವಂತೆ ಮಾಡುತ್ತದೆ. ಹೊಸ ಲೋಕವನ್ನೇ ಸೃಷ್ಟಿಸಿ ಬಿಡುತ್ತದೆ. ಕಳೆದ ಬಾರಿ ಖುಷ್ಭು ಅವರನ್ನು ಕರೆಸಿ ಕ್ರೇಜಿಸ್ಟಾರ್‌ಗೆ ಬಿಗ್ ಸರ್ಪೈಸ್ ನೀಡಿತ್ತು. ಇದೀಗ ಪ್ರಿಯಾಂಕಾ ಉಪೇಂದ್ರ ಆಗಮನದಿಂದ ಇನ್ನಷ್ಟು ಕಳೆ ಬಂದಿದೆ.

ಪ್ರಿಯಾಂಕಾ ಡ್ರೆಸ್‌ಗೆ ಫಿದಾ

ಪ್ರಿಯಾಂಕಾ ಡ್ರೆಸ್‌ಗೆ ಫಿದಾ

ನಟಿಯರು ಹಾಕುವ ಕಾಸ್ಟ್ಯೂಮ್ ಮೇಲೆ ಸದಾ ಎಲ್ಲರ ಚಿತ್ತ ನೆಟ್ಟಿರುತ್ತದೆ. ಇದೀಗ ಪ್ರಿಯಾಂಕಾ ಉಪೇಂದ್ರ ಹಾಕಿರುವ ಗ್ರೀನ್ ಗೌನ್ ಮೇಲೆ ಎಲ್ಲರ ಗಮನ ಸೆಳೆದಿದೆ. ಇದೊಂಥರ ಡಿಫ್ರೆಂಟ್ ಆಗಿ ರೆಡಿ ಮಾಡಲಾಗಿದೆ. ಪಾಚಿ ಗ್ರೀನ್ ಡ್ರೆಸ್ ತುಂಬಾ ಅದ್ಭುತವಾಗಿ ಕಾಣುತ್ತಿದ್ದು, ನೆಟ್ಟಿಗರು ಬ್ಯೂಟಿಫುಲ್ ಡ್ರೆಸ್ ಎಂದು ಕಮೆಂಟ್ ಹಾಕುವ ಮೂಲಕ ತಮ್ಮ ಆಸೆ, ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಡ್ರಾಮಾ ಜ್ಯೂನಿಯರ್‌ನಲ್ಲಿ ಕಾನೂನಿನ ಪಾಠ

ಡ್ರಾಮಾ ಜ್ಯೂನಿಯರ್ ಮನೆರಂಜನೆಯ ಜೊತೆಗೆ ಒಂದಷ್ಟು ಉಪಯೋಗಕರ ಸಂದೇಶವನ್ನು ನೀಡುತ್ತದೆ. ಈ ವಾರ ಲೋಕ ಅದಲಾತ್ ಬಗ್ಗೆಯೂ ಮಾಹಿತಿ ನೀಡುತ್ತಿದೆ. 1987 ಕಾಯ್ದೆಯ ಬಗ್ಗೆ ಡ್ರಾಮಾದ ಮೂಲಕ ಪಾಠ ಮಾಡುತ್ತಿದ್ದಾರೆ. ಅದರಲ್ಲೂ ಲೋಕಾಯುಜ್ತದಲ್ಲಿಯೇ ಇದ್ದವರನ್ನು ಕರೆಯಿಸಿ, ಆ ಬಗ್ಗೆ ಜಾಗೃತಿ‌ ಮೂಡಿಸುತ್ತಿದೆ ಜೀ ಕನ್ನಡ ವಾಹಿನಿ.

More from Filmibeat

English summary
zee kannada Reality show drama junior Written Update on July 1st episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X