Drama Juniors 5: ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಹಾವಳಿ ಇಡೋಕೆ ಬಂದ್ರೂ ಮುದ್ದು ಮಕ್ಕಳು.. ಯಾವಾಗಿಂದ ಶುರು?
'ಡ್ರಾಮಾ ಜೂನಿಯರ್ಸ್' ಜೀ ಕನ್ನಡ ಪ್ರಾರಂಭ ಮಾಡಿದಾಗಿನಿಂದಲೂ ಸಹ ಅಲ್ಲಿ ಬರುವಂತಹ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿದೆ. 'ಡ್ರಾಮಾ ಜೂನಿಯರ್ಸ್' ಒಂದರಿಂದ ನಾಲ್ಕರವರೆಗೂ ಸಹ ಡ್ರಾಮಾ ಜೂನಿಯರ್ಸ್ ನಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದಾರೆ.
ಈ ಪ್ರತಿಭೆಗಳು ಈಗಾಗಲೇ ಸಿನಿಮಾ ಕ್ಷೇತ್ರ, ಕಿರುತೆರೆಯಲ್ಲಿ ತಮ್ಮ ಪ್ರತಿಮೆ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿದ್ದಾರೆ. ಇದೆಲ್ಲವೂ ಕೂಡ ಡ್ರಾಮಾ ಜೂನಿಯರ್ಸ್ ವೇದಿಕೆ ಪುಟಾಣಿ ಮಕ್ಕಳಿಗೆ ಕೊಟ್ಟಂತಹ ಒಂದು ಉಡುಗೊರೆ.

ಈಗ ಹೊಸ ಪ್ರತಿಭೆ ಅನ್ವೇಷಣೆಗಾಗಿ 'ಡ್ರಾಮಾ ಜೂನಿಯರ್ಸ್' ಸೀಸನ್ 5 ಶುರುವಾಗುತ್ತಿದೆ. ಎಂದಿನಂತೆ ಜಡ್ಜ್‌ಗಳಾಗಿ ಹಿರಿಯ ನಟಿ ಜೂಲಿ ಲಕ್ಷ್ಮಿ, ವಿ. ರವಿಚಂದ್ರನ್ ಜೊತೆಗೆ ರಚಿತಾ ರಾಮ್ ಕೂಡ 'ಡ್ರಾಮಾ ಜೂನಿಯರ್ಸ್'ನಲ್ಲಿ ಇರಲಿದ್ದು, ಎಲ್ಲರೂ ಸಹ ಮುತ್ತು ಮಕ್ಕಳ ಅಭಿನಯಕ್ಕಾಗಿ ಕಾಯುತ್ತಾ ಇದ್ದಾರೆ.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ 'ಡ್ರಾಮಾ ಜೂನಿಯರ್ಸ್' ಸೀಸನ್ 5 ಪ್ರಾರಂಭವಾಗಲಿದೆ. ಯಾವ ಯಾವ ಮಕ್ಕಳಲ್ಲಿ ಎಂತಹ ಪ್ರತಿಭೆ ಅಡಗಿದೆ ಎಂಬುವುದು ಶನಿವಾರ ಮತ್ತು ಭಾನುವಾರ ವೇದಿಕೆಯ ಮೇಲೆ ಪ್ರದರ್ಶನವಾಗುತ್ತದೆ. 'ಡ್ರಾಮಾ ಜೂನಿಯರ್ಸ್' ಒಂದು ಪ್ರಸಿದ್ಧ ರಿಯಾಲಿಟಿ ಶೋ ಆಗಿದ್ದು ಜನರು ಡ್ರಾಮಾ ಜೂನಿಯರ್ಸ್ ನೋಡಲು ಕಾತುರರಾಗಿದ್ದಾರೆ.
ಜೀ ಕನ್ನಡದ ಜನಪ್ರಿಯ ಶೋ ಡ್ರಾಮಾ ಜೂನಿಯರ್ ಇನ್ನೆರಡು ದಿನಗಳಲ್ಲಿ ಎಲ್ಲರನ್ನು ರಂಜಿಸಲು ಬರುತ್ತಿದೆ. ನವೆಂಬರ್ 18 ಹಾಗೂ 19ರಂದು ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವನ್ನು ಕಾಣಲಿದೆ. ಈಗಾಗಲೇ 4 ಸೀಸನ್ ಮುಗಿಸಿ ಈಗ ಐದನೇ ಸೀಸನ್‌ಗೆ ಕಾಲಿಟ್ಟಿದೆ. ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರೊಮೋ ಒಂದನ್ನ ರಿಲೀಸ್ ಮಾಡಲಾಗಿದೆ. ಪ್ರೊಮೋದಲ್ಲಿ ಆನಂದ್ ಬಸ್ ಕಂಡಕ್ಟರ್ ಆಗಿ, ರಚಿತರಾಮ್ ಡ್ರೈವರ್‌ರಾಗಿದ್ದಾರೆ ಇನ್ನು ರವಿಚಂದ್ರನ್ ರವರು ಹಾರ್ಮೋನಿಯಂ ಹಿಡಿದುಕೊಂಡರೆ, ಲಕ್ಷ್ಮಿ ಕನ್ನಡಿ ಹಿಡಿದುಕೊಂಡು ಡ್ರಾಮಾ ಜೂನಿಯರ್ಸ್ ಸೀಸನ್ 5ರ ಬಸ್‌ನ್ನು ಹತ್ತಿದ್ದು, ರವಿಚಂದ್ರನ್ ಬಸ್‌ನೊಳಗೆ ಕುಳಿತು ರೈಯಾ ರೈಯಾ ಅಂದಿದ್ದಾರೆ.

ಡ್ರಾಮಾ ಜೂನಿಯರ್ ಸೀಸನ್ 5 ಪ್ರಾರಂಭಕ್ಕೆ ಅಂತಿಮ ಕ್ಷಣಗಣನೆ ಶುರುವಾಗಿದೆ ಹಲವಾರು ದಿನಗಳಿಂದ ಕಾಯುತ್ತಿದ್ದ ವೀಕ್ಷಕರ ಕಣ್ಣಿಗೆ ರಸದೌತಣವನ್ನು ಉಣಬಡಿಸಲು ಡ್ರಾಮಾ ಜೂನಿಯರ್ಸ್ ಬರುತ್ತಿದ್ದಾರೆ. ಇನ್ಮುಂದೆ ಏನಿದ್ದರೂ ಶನಿವಾರ ಮತ್ತು ಭಾನುವಾರ ಜೂನಿಯರ್‌ಗಳದ್ದೇ ಕಾರು ಬಾರು. ಪುಟಾಣಿಗಳು ಫುಲ್ ಎಂಟರ್ಟೈನ್ಮೆಂಟ್ ನೀಡಲು ಸಜ್ಜಾಗಿದ್ದಾರೆ. ಜೂನಿಯರ್ಸ್ ಪ್ರತಿಭೆಯನ್ನು ತಿದ್ದಲು ರವಿಚಂದ್ರನ್ ಹಾಗೂ ಹಿರಿಯ ನಟಿ ಲಕ್ಷ್ಮಿ ಜಡ್ಜ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯೂ ಸಹ ಫುಲ್ ಎಂಟರ್ಟೈನ್ಮೆಂಟ್ ನೀಡುತ್ತೇವೆ ಎಂದು ಡ್ರಾಮಾ ಜೂನಿಯರ್ಸ್ ಗಳು ವೀಕ್ಷಕರಿಗೆ ಪ್ರಾಮಿಸ್ ಮಾಡಿದ್ದಾರೆ.
ಮಕ್ಕಳ ಕೈಯಲ್ಲಿ ಡಬಲ್ ಮೀನಿಂಗ್ ಇರೋ ಡೈಲಾಗ್‌ನ್ನು ಹೇಳಿಸಬೇಡಿ ಎಂದು ವೀಕ್ಷಕರು ಮನವಿಯನ್ನ ಮಾಡಿಕೊಂಡಿದ್ದಾರೆ. ಮಕ್ಕಳ ಕೈಯಲ್ಲಿ ಒಳ್ಳೆಯ ಡೈಲಾಗ್‌ಗಳನ್ನು ಹೇಳಿಸಿ ಅಭಿನಯವನ್ನು ಮಾಡಿಸಿ. ಆಗ ಮಕ್ಕಳ ಮನಸ್ಸಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅದು ಬಿಟ್ಟು ಬೇರೆ ಬೇರೆ ಡಬಲ್ ಮೀನಿಂಗ್ ಬರುವ ಸ್ಕ್ರಿಪ್ಟ್ ಅನ್ನು ಬರೆದು ಮಕ್ಕಳ ಕೈಯಲ್ಲಿ ಮಾಡಿಸಬೇಡಿ. ಸಾಮಾಜಿಕ ಕಳಕಳಿ ಸಾರುವ ಸ್ಕ್ರಿಪ್ಟ್‌ಗಳು ಇರಲಿ ಎಂದು ವೀಕ್ಷಕರು ಮನವಿ ಮಾಡಿದ್ದಾರೆ.


Click it and Unblock the Notifications











