ಡ್ರಾಮಾ ಜೂನಿಯರ್ಸ್: ಕ್ರೇಜಿಸ್ಟಾರ್ ಜೊತೆ ಡಿಂಪಲ್ ಕ್ವೀನ್ ರೊಮ್ಯಾನ್ಸ್, ಕನಸುಗಾರನ ಫ್ಯಾನ್ಸ್ ಫುಲ್ ಖುಷ್
ರವಿಮಾಮನ ಕ್ರೇಜ್ ಆಗಲಿ, ಕನಸುಗಾರನ ಹಾಡುಗಳ ಕ್ರೇಜ್ ಆಗಲಿ ಕಡಿಮೆ ಆಗುವುದಕ್ಕೆ ಸಾಧ್ಯಾನೇ ಇಲ್ಲ. 90 ದಶಕದ ಹಾಡುಗಳು ಈಗಲೂ ಎವರ್ ಗ್ರೀನ್. ಪ್ರೇಮಲೋಕದ ಹಾಡುಗಳು ಇದೀಗ ಡ್ರಾಮಾ ಜೂನಿಯರ್ ಸೀಸನ್‌ನಲ್ಲೂ ಕಂಗೊಳಿಸಲಿವೆ. ಮನಸ್ಸಿಗೆ ಮುದ ನೀಡಲಿವೆ. ಈಗಾಗಲೇ ಸ್ಯಾಂಪಲ್ ಒಂದನ್ನು ಬಿಟ್ಟು ವೀಕ್ಷಕರ ಮನತಣಿಯುವಂತೆ ಮಾಡಿದೆ ಜೀ ಕನ್ನಡ ವಾಹಿನಿ.
ವಾರ ಪೂರ್ತಿ ಜೀ ಕನ್ನಡದಲ್ಲಿ ಮನರಂಜನೆಯ ಮಹಾಪೂರವೇ ಸಿಗುತ್ತಿದೆ. ಧಾರಾವಾಹಿಗಳ ನಡುವೆ ರಿಯಾಲಿಟಿ ಶೋಗಳು ಹೆಸರುವಾಸಿಯಾಗಿವೆ. ವೀಕೆಂಡ್ ಬಂತೆಂದರೆ ರಿಯಾಲಿಟಿ ಶೋಗಳು ಒಂದಕ್ಕೊಂದು ಕಾಂಪಿಟೇಷನ್ ಕೊಡುವಂತಹ ರೀತಿ ಮೂಡಿ ಬರುತ್ತಿವೆ. ಡ್ರಾಮಾ ಜೂನಿಯರ್ಸ್ ಸೀಸನ್ 4 ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇನ್ನು ಡಿಕೆಡಿಯಲ್ಲೂ ಬಳುಕುವ ಬಳ್ಳಿಗಳಂತೆ ಮೈನವಿರೇಳುವ ನೃತ್ಯಗಳು ಕಣ್ಣಿಗೆ ಕಟ್ಟುತ್ತಿವೆ.

ಪೌರ ಕಾರ್ಮಿಕರಿಗಾಗಿ ಡ್ರಾಮಾ ಮಾಡಿದ ಮಕ್ಕಳು
ಮೇ 1 ಕಾರ್ಮಿಕರ ದಿನಾಚರಣೆ. ಅಂದು ಎಲ್ಲರೂ ದುಡಿಯುವ ವರ್ಗದವರಿಗೆ ಗೌರವ ಸಲ್ಲಿಸುತ್ತಾರೆ. ಅಭಿನಂದನೆಗಳನ್ನು ಹೇಳುತ್ತಾರೆ. ದುಡಿಯುವ ವರ್ಗ ಬೇರೆ ಬೇರೆಯಾಗಿರುತ್ತೆ. ಅದರಲ್ಲಿ ಪೌರಕಾರ್ಮಿಕರ ವೃತ್ತಿ ಕಠಿಣವೇ ಆಗಿರುತ್ತದೆ. ಅಂತಹ ಕಠಿಣವಾದ ದುಡಿಮೆ ಮಾಡುವವರ ಬಗ್ಗೆ ಸ್ಕಿಟ್ ಮಾಡಿದ್ದಾರೆ. ನಾವೂ ಚರಂಡಿಯನ್ನೇ ಬಾಚಿದರೂ, ಗಲೀಜಿನಲ್ಲಿಯೇ ಮುಳುಗೆದ್ದರೂ, ನಮ್ಮ ಮಕ್ಕಳು ಏಸಿ ರೂಮಿನಲ್ಲಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ತಂದೆ- ತಾಯಿ ಆಸೆ. ಇದಕ್ಕಾಗಿಯೇ ಮಳೆ, ಗಾಳಿ, ಬಿಸಿಲು ಎನ್ನದೆ ದುಡಿಯುವುದು. ಬೆಂಗಳೂರಿನಲ್ಲಿ ರಸ್ತೆ ಗುಡಿಸಿ, ಸ್ವಚ್ಛ ಮಾಡುವವರನ್ನು ಕರೆದು ಸನ್ಮಾನ ಮಾಡಿದ್ದಾರೆ. ಮಕ್ಕಳ ನಟನೆಗೆ ಪೌರಕಾರ್ಮಿಕರು ಮೂಕ ವಿಸ್ಮಿತರಾಗಿದ್ದಾರೆ. ಮೇ1 ರಂದು ಈ ರೀತಿಯಾಗಿ ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಲು ಹೊರಟಿದೆ ಜೀ ಕನ್ನಡ.
ರವಿಮಾಮನ ಡಿಂಪಲ್ ಕ್ವೀನ್ ಗಾನಬಜಾನ
ಡಾ.ರವಿಚಂದ್ರನ್ ಸಿನಿಮಾದ ಹಾಡುಗಳು ಎಂದರೆ ಯಾವಾಗಲೂ ಕೇಳಬೇಕೆನಿಸುತ್ತೆ. ಅದರಲ್ಲೂ ಕ್ರೇಜಿಸ್ಟಾರ್ ಪ್ರೀತಿಯ ಹಾಡುಗಳನ್ನು ಕೇಳುತ್ತಿದ್ದರೆ ಅದೆಂತದ್ದೇ ಬೇಸರ ಇರಲಿ ಅರೆ ಕ್ಷಣದಲ್ಲಿ ಮಾಯವಾಗಿ ಬಿಡುತ್ತದೆ. ಅಷ್ಟೇ ಅಲ್ಲ ರೊಮ್ಯಾಂಟಿಕ್ ಹಾಡುಗಳಿಗೆ ನಾಚಿ ನೀರಾಗಿ ಬಿಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ಎಲ್ಲರಿಗೂ ರವಿಚಂದ್ರನ್ ಹಾಡೊಂದು ಫುಲ್ ಮನರಂಜನೆ ನೀಡಲಿದೆ. 'ಲೋಕವೇ ಹೇಳಿದ ಮಾತಿದು..' ಹಾಡಿಗೆ ರಚಿತಾ ರಾಮ್ ಮತ್ತು ರವಿಚಂದ್ರನ್ ಹೆಜ್ಜೆ ಹಾಕಿದ್ದಾರೆ. ಮನಸ್ಸಿಗೆ ಖುಷಿ ನೀಡುವ ಈ ನೃತ್ಯಕ್ಕೆ ಪ್ರೇಕ್ಷಕರು ತಲೆಯಾಡಿಸುತ್ತಿದ್ದಾರೆ. ಡ್ಯಾನ್ಸ್ ಬಿಡುವುದಕ್ಕೂ ಮುನ್ನ ಫೋಟೊವೊಂದನ್ನು ಶೇರ್ ಮಾಡಿ, ಇದು ಯಾವ ಹಾಡಿನ ಮರುಸೃಷ್ಟಿ ಗೆಸ್ ಮಾಡಿ ಅಂತ ಜೀ ಕನ್ನಡ ತಲೆಗೆ ಹುಳ ಬಿಟ್ಟಿದೆ. ಆದರೆ ಲೋಕವೇ ಹೇಳಿದ ಮಾತಿದು ಹಾಡಿಗೆ ಇಬ್ಬರ ನೃತ್ಯ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ರವಿಚಂದ್ರನ್‌ಗೆ ಹಳೆ ನೆನಪು ತರಿಸಿದ ಮಕ್ಕಳು
ರವಿಚಂದ್ರನ್ ಸಿನಿಮಾಗಳೆಂದರೆ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ಅದೆಷ್ಟೋ ಸಿನಿಮಾಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಸಿನಿಮಾದ ಮನರಂಜನೆ ನೀಡಿದ್ದರು. ಇದೀಗ ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ಕ್ರೇಜಿಸ್ಟಾರ್‌ನ ಲೋಕವನ್ನು ಮರುಸೃಷ್ಟಿ ಮಾಡುತ್ತಿದ್ದಾರೆ. ರಚಿತಾ ರಾಮ್ ಜೊತೆಗೆ ಲೋಕವೇ ಹೇಳಿದ ಮಾತಿದು ಅಂತ ರವಿಮಾಮ ಹೇಳಿದ್ರೆ ರಣಧೀರನಾಗಿ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. 'ಒಂದಾನೊಂದು ಕಾಲದಲ್ಲಿ ಆರಂಭ ಅಂತ ಎಲ್ಲಾ ಮಕ್ಕಳು ರವಿಚಂದ್ರನ್ ಬಳಿ ಹೋಗಿ ಏನಾಯ್ತು ಅಂಕಲ್ ಅಂತ ಈ ವೀಕೆಂಡ್ ಶೋನಲ್ಲಿ ಸಿಕ್ಕಾಪಟ್ಟೆ ಮಜಾ ನೀಡಲಿದ್ದಾರೆ.

ಲಕ್ಷ್ಮೀ ಅಮ್ಮನ ಬ್ಯೂಟಿಯೇ ಗ್ರೇಟು
ಪ್ರತಿ ವಾರದಂತೆ ಈ ವಾರವೂ ಅದ್ಭುತವಾದ ಪರ್ಫಾರ್ಮೆನ್ಸ್ ಮಕ್ಕಳಿಂದ ಸಿಗಲಿದೆ. ರವಿಚಂದ್ರನ್ ಸಿನಿಮಾಗಳೊಟ್ಟಿಗೆ ಡ್ರಾಮಾ, ಡ್ಯಾನ್ಸ್ ಮಾಡುವ ಮಕ್ಕಳಿಂದ ಫ್ಯಾಷನ್ ಶೋ ಕೂಡ ನಡೆಯಲಿದೆ. ಈ ಫ್ಯಾಷನ್ ಶೋನಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ವೇಷಭೂಷಣ. ಆದರೆ, ಎಷ್ಟೇ ಸುಂದರಿಯರು ಎಂಟ್ರಿ ಕೊಟ್ಟರು ಕಡೆಗೆ ಲಕ್ಷ್ಮೀ ಅವರ ಸೌಂದರ್ಯವೇ ಹೆಚ್ಚು. ಈ ಮಾತು ಹೇಳಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್. ಅದರಂತೆ ಲಕ್ಷ್ಮೀ ಅವರಿಗೆ ಕಿರೀಟ ತೊಡಿಸಲಾಗಿದೆ.


Click it and Unblock the Notifications











