twitter
    For Quick Alerts
    ALLOW NOTIFICATIONS  
    For Daily Alerts

    ಡ್ರಾಮಾ ಜೂನಿಯರ್ ನಲ್ಲಿ ಮಕ್ಕಳ ಯುದ್ಧಭೂಮಿ ಹೇಗಿದೆ ಗೊತ್ತಾ..?

    By ಎಸ್ ಸುಮಂತ್
    |

    ಡ್ರಾಮಾ ಜೂನಿಯರ್ ಸೀಸನ್ 4ರಲ್ಲಿ ಮಕ್ಕಳು ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ. ಒಂದೊಂದು ಮಕ್ಕಳ ಪ್ರತಿಭೆಯನ್ನು ಕಂಡು ಜಡ್ಜಸ್ ಗಳು ಮನಸ್ಸಾರೆ ನಕ್ಕು ನಲಿಯುತ್ತಿದ್ದಾರೆ. ಒಮ್ಮೊಮ್ಮೆ ತೀರ್ಪುಗಾರರನ್ನು ನಗಿಸುತ್ತಾರೆ, ಅಳಿಸುತ್ತಾರೆ, ಎದ್ದು ಕುಣಿಯುವಂತೆ ಮಾಡುತ್ತಾರೆ. ವೀಕೆಂಡ್ ನಲ್ಲಿ ಮಕ್ಕಳಿಂದಲೇ ಸಿಗುತ್ತಿದೆ ಸಾಕಷ್ಟು ಮನರಂಜನೆ. ಇದಕ್ಕೆ ಸಾಕ್ಷಿಯಾಗಿದೆ ಜೀ ಕನ್ನಡ ವಾಹಿನಿ.

    ಡ್ರಾಮಾ ಜೂನಿಯರ್ ಸೀಸನ್ ಶುರುವಾಗಿ ಅದೇ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಈ ವಾರವಂತು ಕೊನೆ ವಾರಕ್ಕಿಂತ ಸ್ಪೆಷಲ್ ಆದ ಸ್ಕಿಟ್ ಗಳನ್ನು ಮಕ್ಕಳು ಮಾಡುತ್ತಿದ್ದಾರೆ. ಪೌರಾಣಿಕ, ಧಾರ್ಮಿಕ ಕಥೆಗಳ ಜೊತೆಗೆ ಮಾನವೀಯ ಮೌಲ್ಯವನ್ನು ಅರ್ಥ ಮಾಡಿಸುವ ಸ್ಕಿಟ್ ಗಳನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಕಾಮಿಡಿಯ ಡ್ರಾಮಾ ಕೂಡ ನೀಡುತ್ತಿದ್ದಾರೆ.

    ಮಕ್ಕಳು ಸೃಷ್ಟಿಸಿದ್ದ ಯುದ್ಧ ಭೂಮಿ ಹೇಗಿದೆ ಗೊತ್ತಾ..?

    ಕರ್ಣ ಮತ್ತು ಅರ್ಜುನನ ನಡುವಿನ ಯುದ್ಧ ವೈಭವವನ್ನು ಕಣ್ಣ ಮುಂದೆ ತಂದಿದ್ದಾರೆ . ಅಕ್ಷರಶಃ ಪೌರಾಣಿಕ ನಾಟಕವನ್ನೇ ನೋಡಿದಂತ ಫೀಲ್ ನೀಡುತ್ತಿದೆ. ಬಿಡುವ ಬಾಣಗಳು, ಮಕ್ಕಳ ನಟನೆ ಎಲ್ಲವೂ ನಿಜವಾದ ಕರ್ಣನನ್ನೇ ನೋಡುತ್ತಿದ್ದಿವೇನೋ ಎಂಬಂತ ಫೀಲ್ ಕೊಡುತ್ತಿದ್ದಾರೆ. ಇನ್ನು ಸೆಟ್ ಕೂಡ ಅದ್ಭುತವಾಗಿದೆ. ಸುಂದರ ಲೋಕದಲ್ಲಿ ಈ ಪುಟಾಣಿ ಪ್ರಚಂಡರು ಯುದ್ಧ ಭೂಮಿಯನ್ನೇ ಸೃಷ್ಟಿಸಿದ್ದಾರೆ. ನೋಡುವುದಕ್ಕೆ ಎರಡು ಕಣ್ಣೂ ಸಾಲದ್ದಾಗಿದೆ.

    ಮಕ್ಕಳ ಮಾನವೀಯತಾ ಡ್ರಾಮಾಕ್ಕೆ ಜಡ್ಜಸ್ ಗಳು ಫಿದಾ

    ಮಕ್ಕಳ ಮಾನವೀಯತಾ ಡ್ರಾಮಾಕ್ಕೆ ಜಡ್ಜಸ್ ಗಳು ಫಿದಾ

    ಈ ವೀಕೆಂಡ್ ಮಕ್ಕಳ ಸ್ಕಿಟ್ ಗಳು ನಾನಾ ವಿಶೇಷತೆಯನ್ನು ಹೊಂದಿದೆ. ಅದರಲ್ಲೂ ಸದ್ಯದ ಸ್ಥಿತಿಗೆ ತಕ್ಕಂತೆ ಏನು ಬೇಕಾಗಿದೆಯೋ ಅದನ್ನ ಮಕ್ಕಳು ಮಾಡಿ ತೋರಿಸಿದ್ದಾರೆ. ಧರ್ಮ ಧರ್ಮಗಳ ನಡುವೆ ನಡೆಯುತ್ತಿರುವ ಸಮರವನ್ನು ಬಿಟ್ಟು ಮೊದಲು ಮನುಷ್ಯರಾಗಿ ಬಾಳೋಣಾ ಎಂಬುದನ್ನು ಹಲವರು ಮರೆತಂತಿದೆ. ಇದನ್ನು ಮಕ್ಕಳು ನೆನಪಿಸಿದ್ದಾರೆ. ರಾಘವೇಂದ್ರ ಸ್ವಾಮಿ ವೈಭವದ ಸ್ಕಿಟ್ ಮಾಡುವಾಗ, ಅಲ್ಲಿಗೆ ಮುಸ್ಲಿಂ ವ್ಯಕ್ತಿಯು ಬರುತ್ತಾನೆ. ಮಾಂಸಹಾರ ತಂದು ಇದನ್ನು ತಿನ್ನಿ ಎಂದಾಗ ರಾಘವೇಂದ್ರ ಸ್ವಾಮೀಗಳು ಆ ಮಾಂಸಾಹಾರವನ್ನು ಸಸ್ಯಹಾರವನ್ನಾಗಿ ಪರಿವರ್ತಿಸಿ, ತಿನ್ನಲು ಹೋಗುತ್ತಾರೆ. ಆಗ ಛೇ ನಾನು ತಪ್ಪು ಮಾಡಿದೆ ಎಂದು ಕೊರಗುತ್ತಾನೆ. ಆಗ ನಾನು ನೀನು ಮಾನವರಪ್ಪ ಎನ್ನುತ್ತಾನೆ. ಈ ಸ್ಕಿಟ್ ಜಡ್ಜಸ್ ಗಳಿಗೆ ತುಂಬಾನೆ ಇಷ್ಟವಾಗಿದೆ. ಮೊದಲು ಮಾನವರಾಗಬೇಕು ಎಂಬುದೇ ಎಲ್ಲರ ಆಸೆ. ಅದನ್ನೇ ರವಿಚಂದ್ರನ್ ಅವರು ಕೂಡ ಹೇಳಿದ್ದಾರೆ. ಇವತ್ತಿನ ದಿನಕ್ಕೆ ಇದೇ ತುಂಬಾ ಮುಖ್ಯವಾಗಿರುವುದು ಎಂದು ಸಂತಸ ಪಡುತ್ತಾರೆ. ಮಕ್ಕಳ ಪ್ರತಿಯೊಂದು ನಡೆ-ನುಡಿ ಜಡ್ಜಸ್ ಗಳನ್ನು ಮೂಕವಿಸ್ಮಿತರನ್ನಾಗಿಸಿದೆ. ಧರ್ಮ, ಆಚರಣೆ ಬೇರೆ ಬೇರೆಯಾಗಿರಬಹುದು, ಆದರೆ ನಾವೂ ಮೊದಲು ಮಾನವರು ಎಂಬ ಮಾತು ಅದೆಷ್ಟು ಸತ್ಯ.

    ನಕ್ಕು ನಗಿಸುವ ಪೋರರು-ಪೋರಿಯರು

    ನಕ್ಕು ನಗಿಸುವ ಪೋರರು-ಪೋರಿಯರು

    ವಾರ ವಾರವೂ ಸ್ಪರ್ಧೆ ಬೇರೆಯದ್ದೇ ರೀತಿಯಾಗುತ್ತ ಹೋಗುತ್ತದೆ. ಸ್ಪರ್ಧೆ ಕಠಿಣವಾಗುತ್ತಾ ಹೋಗುತ್ತದೆ. ಹೊಸ ಹೊಸ ಸ್ಕಿಟ್ ಗಳನ್ನು ಮಾಡಲು ಶುರು ಮಾಡುತ್ತಾರೆ. ಈ ವಾಋವೂ ಕಳೆದ ವಾರಕ್ಕಿಂತ ಅದ್ಭುತವಾದ ಡ್ರಾಮಾ ಮಾಡಿದ್ದು, ಒಂದಷ್ಟು ಸೀರಿಯಸ್ ವಿಚಾರಗಳ ಜೊತೆಗೆ ಒಂದಷ್ಟು ಕಾಮಿಡಿ ವಿಚಾರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಕ್ಕಳು ಏನೇ ಮಾಡಿದರು ಅದ್ಭುತ ಎನ್ನುವುದು ಇದಕ್ಕೆ ನೋಡಿ. ಅದರಂತೆ ಮಕ್ಕಳ ಎಲ್ಲಾ ಆಟಗಳು, ಎಲ್ಲಾ ಪಾಠಗಳು ಜನರನ್ನು ಅದ್ಭುತವಾಗಿ ರೀಚ್ ಆಗುತ್ತಿದೆ. ತೀರ್ಪುಗಾರರಾಗಿ ಕುಳಿತ ಲಕ್ಷ್ಮೀ, ರವಿಚಂದ್ರನ್, ರಚಿತಾ ಅವರು ನಕ್ಕು ನಕ್ಕು ಸುಸ್ತಾಗಿ ಹೋಗಿದ್ದಾರೆ.

    ಕಾರ್ಮಿಕರಿಗಾಗಿ ವಿಶೇಷ ನಮನ

    ಕಾರ್ಮಿಕರಿಗಾಗಿ ವಿಶೇಷ ನಮನ

    ಮೇ 1 ಕಾರ್ಮಿಕರ ದಿನಾಚರಣೆ. ಅಂದು ಎಲ್ಲರು ದುಡಿಯುವ ವರ್ಗದವರಿಗೆ ಗೌರವ ಸಲ್ಲಿಸುತ್ತಾರೆ, ಅಭಿನಂದನೆ ಹೇಳುತ್ತಾರೆ. ದುಡಿಯುವ ವರ್ಗ ಬೇರೆ ಬೇರೆಯಾಗಿರುತ್ತೆ. ಅದರಲ್ಲಿ ಪೌರಕಾರ್ಮಿಕ ವೃತ್ತಿ ಕಠಿಣವೇ ಆಗಿರುತ್ತದೆ. ಅಂತ ಕಠಿಣವಾದ ದುಡಿಮೆ ಮಾಡುವವರ ಬಗ್ಗೆ ಸ್ಕಿಟ್ ಮಾಡಿದ್ದಾರೆ. ನಾವೂ ಚರಂಡಿಯನ್ನೇ ಬಾಚಿದರೂ, ಗಲೀಜಿನಲ್ಲಿಯೇ ಮುಳುಗೆದ್ದರು ನಮ್ಮ ಮಕ್ಕಳು ಏಸಿ ರೂಮಿನಲ್ಲಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿ ಆಸೆ. ಇದಕ್ಕಾಗಿಯೇ ಮಳೆ, ಗಾಳಿ, ಬಿಸಿಲು ಎನ್ನದೆ ದುಡಿಯುವುದು. ಬೆಂಗಳೂರಿನಲ್ಲಿ ರಸ್ತೆ ರಸ್ತೆ ಗುಡಿಸಿ, ಸ್ವಚ್ಛ ಮಾಡುವವರನ್ನು ಕರೆದು ಸನ್ಮಾನ ಮಾಡಿದ್ದಾರೆ. ಮಕ್ಕಳ ನಟನೆಗೆ ಪೌರಕಾರ್ಮಿಕರು ಮೂಕ ವಿಸ್ಮಿತರಾಗಿದ್ದಾರೆ. ಮೇ1 ರಂದು ಈ ರೀತಿಯಾಗಿ ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಲು ಹೊರಟಿದೆ ಜೀ ಕನ್ನಡ.

    English summary
    zee kannada reality shoe Drama junior Written Update on may 1stth episode. Here is the details about Karna and Arjuna drama
    Monday, May 2, 2022, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X