Jodi no1: ಜೀ ಕನ್ನಡದ ಹೆಣ್ಣು‌ ಮಕ್ಕಳು ಒಟ್ಟಿಗೆ ಸೇರಿದರೆ ಗಾಸಿಪ್‌ಗಳದ್ದೇ ಸುರಿಮಳೆ..!

By ಎಸ್ ಸುಮಂತ್

ಗಾಸಿಪ್ ಹುಟ್ಟಿಕೊಳ್ಳುವ ಮೂಲ ಯಾವುದು ಎಂದು ಹುಡುಕಾಡಿದರೆ ಖಂಡಿತ ಎಲ್ಲರಿಗೂ ಕಣ್ಣು ಬೀಳುವುದು ಹೆಣ್ಣು‌ ಮಕ್ಕಳ ಮೇಲೆ. ಗಂಡು ಮಕ್ಕಳೇನು ಗಾಸಿಪ್ ಮಾಡಲ್ಲ ಅಂತ ಅಲ್ಲ. ಆದರೆ‌ ಕೊಂಚ ಜಾಸ್ತಿ ಹೆಣ್ಣು ಮಕ್ಕಳ ಹೆಸರೇ ಚಾಲ್ತಿಯಲ್ಲಿರುತ್ತದೆ. ಇದೀಗ ಜೀ ಕನ್ನಡದ ಹೆಣ್ಣು ಮಕ್ಕಳೆಲ್ಲ ಒಟ್ಟಿಗೆ ಕೂತಿದ್ದಾರೆ. ಈ ರೀತಿ ಹೆಣ್ಣು ಮಕ್ಕಳೆಲ್ಲಾ ಕುಳಿತರೆ ಕೇಳಬೇಕಾ..? ಗಾಸಿಪ್ ಶುರು.

ಜೀ ಕನ್ನಡದಲ್ಲಿ ಧಾರಾವಾಹಿಗಳಷ್ಟೇ ರಿಯಾಲಿಟಿ ಶೋ ಕೂಡ ಎಲ್ಲರ ಗಮನ ಸೆಳೆಯುತ್ತವೆ. ಜೋಡಿ ನಂಬರ್ 1 ಸೀಸನ್ ಮತ್ತೆ ಬಂದಿದೆ. ತೆರೆಮೇಲೆ ಒಂದು ರೀತಿ ಕಾಣುವವರು, ನಿಜ ಜೀವನದಲ್ಲಿ ಮತ್ತೊಂದು ರೀತಿ ಕಾಣುತ್ತಾರೆ. ಕೆಲವೊಂದಿಷ್ಟು ಜೋಡಿಗಳು ಸ್ಪೂರ್ತಿಯಾಗಿಯೂ ನಿಲ್ಲುತ್ತಾರೆ. ಇದೀಗ ಜೋಡಿ ನಂಬರ್ 1 ಸೀಸನ್ 2 ನಲ್ಲಿರುವ ಮಹಿಳಾ ಮಣಿಗಳೆಲ್ಲಾ ಒಂದು ಕಡೆ ಸೇರಿದ್ದಾರೆ.

Zee Kannada Jodi No 1 contestants reels

ಜೋಡಿ ನಂ1 ಸ್ಪರ್ಧಿಗಳ ಟೈಮ್ ಪಾಸ್

ಸೀರಿಯಲ್ ಆಗಲಿ, ರಿಯಾಲಿಟಿ ಶೋ ಆಗಲಿ ಗ್ಯಾಪ್ ಸಿಕ್ಕಿದರೆ ಸಾಕು ಅಲ್ಲಿರುವ ಇಡೀ ತಂಡ ಆಕ್ಟೀವ್ ಆಗಿ ಬಿಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹೆಚ್ಚಿನ ಪ್ರಾಶಸ್ತ್ಯ ಪಡೆಯುವುದಕ್ಕೆ ಶುರು ಮಾಡಿದಾಗಿನಿಂದ ಆಕ್ಟರ್‌ಗಳ ಕ್ರೇಜ್ ಕೂಡ ಹೆಚ್ಚಾಗಿದೆ. ಕಲಾವಿದರು ಈ ಮೊದಲು ರೀಲ್ಸ್‌ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ಆದರೆ, ಈಗ ರೀಲ್ಸ್ ಮಾಡುವುದರಲ್ಲಿಯೇ ಅವರು ಬ್ಯುಸಿಯಾಗಿ ಬಿಡುತ್ತಿದ್ದಾರೆ.

ಪತಿಯರಿಲ್ಲದೆ ಕುಳಿತ ಪತ್ನಿಯರು

ಜೋಡಿ ನಂ1 ಸೀಸನ್‌ನಲ್ಲಿ ಹಲವು ಜೋಡಿ ಸ್ಪರ್ಧಿಗಳು ಇದ್ದಾರೆ. ಈಗಾಗಲೇ ವಿಭಿನ್ನವಾದಂತ ಗೇಮ್‌ಗಳನ್ನು ಜೀ ಕನ್ನಡ ಆಡಿಸಿದೆ. ಹಳ್ಳಿಗಳಿಗೆ ಹೋಗಿ, ಹಳ್ಳಿ ಜೀವನವನ್ನು ತೋರಿಸಿದೆ. ಜೋಡಿಗಳ ಶೂಟಿಂಗ್‌ ನಡೆಯುವಾಗ ಮತ್ತೊಂದು ಜೋಡಿ ಬ್ರೇಕ್ ತೆಗೆದುಕೊಂಡಿದೆ ಎಂದರೆ ಅಲ್ಲಿ ರೀಲ್ಸ್ ಅಬ್ಬರ ಶುರುವಾಗುತ್ತದೆ ಎಂದೇ ಅರ್ಥ.

ಗಮನ ಸೆಳೆದ ಮಾಲತಿ, ಸುನೇತ್ರಾ, ಲಾವಣ್ಯ

ಜೋಡಿ ನಂ1 ಶೋನಲ್ಲಿ ಇರುವ ಜೋಡಿಗಳಲ್ಲಿ ಕೆಲ ಜೋಡಿಗಳು ಗಮನ ಸೆಳೆಯುತ್ತವೆ. ಅದರಲ್ಲಿ ಸುನೇತ್ರಾ, ಮಾಲತಿ ದೇಶಪಾಂಡೆ ಜೋಡಿ ಜೊತೆಗೆ ಲಾವಣ್ಯ ಹಾಗೂ ಶಶಿ ಜೋಡಿ ಮತ್ತಷ್ಟು ಗಮನ ಸೆಳೆಯುತ್ತದೆ. ಈಗ ಟೈಂ ಪಾಸ್ ಮಾಡುವುದಕ್ಕೆ ಅಂತ ಕುಳಿತಿದ್ದ ಮಹಿಳಾ ಮಣಿಗಳಲ್ಲಿ ಕೂಡ ಲಾವಣ್ಯ, ಸುನೇತ್ರಾ, ಮಾಲತಿ ಗಮನ ಸೆಳೆಯುತ್ತಿದ್ದಾರೆ. ಮೇಕಪ್ ವಿಚಾರ, ಗಾಸಿಪ್ ಮಾಡುವ ರೀಲ್ಸ್ ನಲ್ಲಿಯೂ ಈ ಮೂವರು ಮಹಿಳಾ ಮಣಿಗಳೇ ಗಮನ ಸೆಳೆಯುತ್ತಿದ್ದಾರೆ. ಅದರ ಜೊತೆಗೆ ವಿದ್ಯಾ ಕೂಡ ತಮ್ಮ ಆಕ್ಷನ್ -ರಿಯಾಕ್ಷನ್ ಅದ್ಭುತವಾಗಿ ಕೊಟ್ಟಿದ್ದಾರೆ.

ಹೆಣ್ಣೈಕ್ಳ ರೀಲ್ಸ್ ನೋಡಿ ಏನಂದ್ರು ನೆಟ್ಟಿಗರು?

ಜೀ ಕನ್ನಡ ಈ ರೀಲ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಒಳ್ಳೆ ವೀವ್ಸ್ ಪಡೆಯುತ್ತಿರುವ ಈ ರೀಲ್ಸ್ ಗೆ ಅಭಿಮಾನಿಗಳು ಕಮೆಂಟ್ಸ್ ಕೂಡ ಪಾಸ್ ಮಾಡುತ್ತಿದ್ದಾರೆ. ಅದರಲ್ಲೂ ತಮ್ಮ ತಮ್ಮ ನೆಚ್ಚಿನ ನಟಿ ಮಣಿಯರಿಗೆ ಹಾರ್ಟ್ ನೀಡಿದ್ದಾರೆ. ಬೆಂಕಿ ಸಿಂಬಲ್ ಹಾಕಿ ಸಪೋರ್ಟ್ ಮಾಡಿದ್ದಾರೆ. ಅದರಲ್ಲೂ ವಿದ್ಯಾ ಅವರ ಮುಖಭಾವಕ್ಕೆ ಹಲವರು ಸೋತು ಹೋಗಿದ್ದಾರೆ. ಗಾಸಿಪ್ ರೀಲ್ಸ್ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದೆ.

More from Filmibeat

English summary
zee kannada reality show jodi no 1 contestants gossip reels goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X