Jodi No 1: ಪ್ರೋಮೋದಲ್ಲಿಯೇ ಹೊಟ್ಟೆ ಉಣ್ಣಾಗುವಷ್ಟು ನಗು.. ಇನ್ನು ಶೋನನಲ್ಲಿ ಎಷ್ಟು ನಗು ಇರುತ್ತೋ..?
ಜೋಡಿ ನಂ1 ರಿಯಾಲಿಟಿ ಶೋ ಮತ್ತೆ ಶುರುವಾಗುತ್ತಾ ಇದೆ. ಸೀಸನ್ 1ರಲ್ಲಿ ಹಲವು ಜೋಡಿಗಳು ಭಾಗವಹಿಸಿ, ತಮ್ಮ ಸಂಗಾತಿಯ ಇಷ್ಟ ಕಷ್ಟವನ್ನು ಅರಿತಿದ್ದರು. ಮೊದಲ ಸೀಸನ್‌ನಲ್ಲೂ 10 ಜೋಡಿಗಳು ಈ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಪ್ರೀತಿಯ ಪಯಣವನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದರು. ಇದೀಗ ಖ್ಯಾತಿ ಪಡೆದಿದ್ದಂತ ಶೋ ಮತ್ತೆ ಶುರುವಾಗುತ್ತಿದೆ. ಜೋಡಿ ನಂ1 ಸೀಸನ್ 2 ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
ಜೋಡಿ ನಂ1 ಕಾರ್ಯಕ್ರಮದಲ್ಲಿ ಹಲವು ರೀತಿಯ ಗೇಮ್ ಶೋಗಳು ಇರಲಿವೆ. ಗಂಡ-ಹೆಂಡತಿ ತಮ್ಮ ತಮ್ಮ ಬದುಕನ್ನು ಹೇಗೆ ಅರ್ಥೈಸಿಕೊಂಡಿದ್ದಾರೆ. ಬೇರೆಯವರಿಗೆ ಯಾವ ಅಂಶಗಳು ಮಾದರಿಯಾಗುತ್ತವೆ. ಸುಖ ಸಂಸಾರಕ್ಕೆ ಯಾವುದೆಲ್ಲಾ ಸೂತ್ರಗಳು ಬೇಕಾಗುತ್ತವೆ ಎಂಬೆಲ್ಲಾ ಮಾಹಿತಿಗಳು ಜೋಡಿ ನಂ1 ಸೀಸನ್ 2ರಲ್ಲೂ ಸಿಗಲಿದೆ.

ಜೋಡಿ ನಂ1 ಪ್ರೋಮೋ ಬಿಟ್ಟ ಜೀ ಕನ್ನಡ
ಜೋಡಿ ನಂ 1 ಮೊದಲ ಸೀಸನ್‌ನಲ್ಲಿಯೇ ಸಾಕಷ್ಟು ಖ್ಯಾತಿ ಪಡೆದಿತ್ತು. ನಗು, ಅಳು, ಬಾಂಧವ್ಯ, ಬದುಕಿನ ಬಂಡಿ, ಕಷ್ಟ ಸುಖ, ಇಷ್ಟ - ಕಷ್ಟ ಎಲ್ಲವೂ ಅನಾವರಣವಾಗಿತ್ತು. ಆ ಶೋ ನೋಡಿದವರಿಗೂ ಸಂಸಾರ ಸಾಗರದಲ್ಲಿ ನಮ್ಮ ಒಬ್ಬರದ್ದೆ ಕಷ್ಟ ಅಲ್ಲ. ಅನುಭವಿಸುವವರು ಇನ್ನು ಇದ್ದಾರೆ. ನಾವು ಸರಿ ಮಾಡಿಕೊಂಡು ಹೋಗೋಣಾ ಎಂದು ಅದೆಷ್ಟೋ ಜನಕ್ಕೆ ಸ್ಪೂರ್ತಿ ನೀಡಿದ್ದಂತ ಶೋ ಆಗಿತ್ತು. ಈಗ ಮತ್ತೆ ಸೀಸನ್ 2 ಬರುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ. ಜೀ ಕನ್ನಡ ಅದರ ಪ್ರೋಮೋ ಬಿಟ್ಟಿದೆ.
ಈ ಬಾರಿ ಯಾರೆಲ್ಲಾ ಬರಲಿದ್ದಾರೆ..?
'ಜೋಡಿ ನಂ 1 ಸೀಸನ್ 2ನಲ್ಲಿ ಈ ಬಾರಿ ಧಾರಾವಾಹಿ ಕಲಾವಿದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ಜೋಡಿ ಕೂಡ ಬಂದಿದೆ. ಲಾವಣ್ಯ -ಶಶಿ, ಸುನೇತ್ರ ಪಂಡಿತ್ -ರಮೇಶ್ ಪಂಡಿತ್, ಚಿದಾನಂದ್ -ಕವಿತಾ, ಮಾಲತಿ ಸರದೇಶಪಾಂಡೆ -ಯಶವಂತ, ಚೈತ್ರಾ-ಆನಂದ್, ಸಂಜು ಬಸಯ್ಯ-ಪಲ್ಲವಿ, ಮಂಜುನಾಥ್-ಅನುಷಾ, ಗಣೇಶ್ ಕಾರಂತ್-ಶ್ರೀವಿದ್ಯಾ, ನೇತ್ರಾವತಿ-ಸದಾನಂದ.

ನಗು ತರಿಸಿದ ಪ್ರೋಮೋ
ಲಾವಣ್ಯ ಗಂಡನ ಬಳಿ ನನ್ನಿಷ್ಟದ ಕಲರ್ ಯಾವುದು ಅಂತ ಕೇಳಿದರೆ ತಪ್ಪು ಹೇಳುತ್ತಾರೆ ಶಶಿ. ಸುನೇತ್ರ ಪಂಡಿತ್ ಹಾಗೂ ಹಾರ ಯಾರು ಮೊದಲು ಹಾಕುತ್ತಾರೆ ಎಂಬ ವಿಚಾರಕ್ಕೆ ಕಿತ್ತಾಡಿದ್ದಾರೆ. ರಂಗೋಲಿ ವಿಚಾರವಾಗಿ ಚಿದಾನಂದ ಮತ್ತು ಕವಿತಾ ಕಿತ್ತಾಡಿದ್ದಾರೆ. ಹೆಂಡತಿ ಮುಖವನ್ನು ಕೋತಿಯಂತೆ ಬಿಡಿಸಿ ಯಶವಂತ್ ಸರದೇಶಪಾಂಡೆ ಹಾಗೂ ಮಾಲತಿ ಕಿತ್ತಾಡಿದ್ದಾರೆ. ಮೇಕಪ್ ಮಾಡುವ ವಿಚಾರಕ್ಕೆ ಚೈತ್ರಾ ಮತ್ತು ಆನಂದ್ ಕಿತ್ತಾಡಿದ್ದಾರೆ. ಹೈಟ್ ಮ್ಯಾಚ್ ಮಾಡುವಲ್ಲಿ ಸಂಜು ಬಸಯ್ಯ, ಪಲ್ಲವಿ ಗೆದ್ದಿದ್ದಾರೆ. ವರ್ಕೌಟ್ ವಿಚಾರದಲ್ಲಿ ಮಂಜುನಾಥ್ -ಅನುಷಾ ಮುಳುಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರೋ ಗಣೇಶ್ ಕಾರಂತ್ -ಶ್ರೀವಿದ್ಯಾ ಅಡುಗೆ ವಿಚಾರದಲ್ಲಿ ಕಿತ್ತಾಡಿದ್ದಾರೆ. ಹೆಂಡತಿಯ ಫೇವರಿಟ್ ತಿಂಡಿ ಗೊತ್ತಿಲ್ಲದೆ ನೇತ್ರಾವತಿ ಕೈಲಿ ಸದಾನಂದ ಒದೆ ತಿಂದಿದ್ದಾರೆ.
ಈ ಬಾರಿಯ ಶೋನಲ್ಲಿ ಬದಲಾವಣೆ
ಕಳೆದ ಶೋನಲ್ಲಿ ಈ ರೀತಿಯ ಸರ್ಕಸ್ ಎಲ್ಲಾ ಮಾಡಲಾಗಿತ್ತು. ಅದಕ್ಕೆಂದೆ ಈಗ ಜೋಡಿಗಳು ಹಳೆಯ ಆಟಗಳನ್ನೇ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದರೆ ಈ ಬಾರಿ ವಿಭಿನ್ನವಾಗಿರಲಿದೆ ಎಂದು ತೀರ್ಪುಗಾರರ ಸ್ಥಾನಕ್ಕೆ ಮತ್ತೆ ಮರಳಿದ ಪ್ರೇಮ್ ಮತ್ತು ಮಾಳವಿಕ ಹೇಳಿದ್ದಾರೆ.


Click it and Unblock the Notifications











