Jodi No 1 winner : ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಗೆದ್ದ ಅಭಿಜಿತ್‌ಗೆ ಕೊಟ್ಟ ಬಹುಮಾನ ಮೊತ್ತವೆಷ್ಟು?

By ಪೂರ್ವ

ಜೋಡಿ ನಂಬರ್ ಒನ್ ರಿಯಾಲಿಟಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಜೋಡಿ ನಂಬರ್ ಒನ್ ಗ್ರಾಂಡ್ ಫಿನಾಲೆ ಕೂಡ ಆಗಿ ವಿನ್ನರ್ ಅನೌನ್ಸ್ ಮಾಡಿದ್ದಾರೆ. ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಅನ್ನು ನಟ ಅಭಿಜಿತ್ ಹಾಗೂ ರೋಹಿಣಿ ಗೆದ್ದುಕೊಂಡಿದ್ದಾರೆ. ಅಭಿಜಿತ್ ಹಾಗೂ ರೋಹಿಣಿ ಶೋ ಮೊದಲ ದಿನದಿಂದ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರು ಹಾಗೆಯೇ ತಾವು ಯಾರಿಗೂ ಕೂಡ ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಇವರು ತಮ್ಮ ಛಾಪನ್ನು ಮೂಡಿಸಿದ್ದರು.

ಅಭಿಜಿತ್ ಅವರಿಗೆ ಸಿನಿಮಾ ರಂಗದಲ್ಲಿ ಹೊಸತಲ್ಲ ನಟನೆಯ ಮೂಲಕ ಖ್ಯಾತಿ ಪಡೆದಿದ್ದ ನಟನಿಗೆ ಇತ್ತೀಚೆಗೆ ಅವಕಾಶಗಳ ಕೊರತೆ ಉಂಟಾಗಿತ್ತು. ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಈ ನೋವನ್ನು ರೋಹಿಣಿ ತೋಡಿಕೊಂಡರು. ಅಭಿಜಿತ್ ಅವರಿಗೆ ತನ್ನ ಹೆಂಡತಿ ರೋಹಿಣಿ ಎಂದರೆ ಬಲು ಇಷ್ಟ. ರೋಹಿಣಿ ಅವರೊಂದಿಗೆ ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡಿದ್ದರು. ಹಾಗೆಯೇ ಉತ್ತಮ ಮನೋರಂಜನೆಯನ್ನು ನೀಡಿದ್ದರು. ಇದೀಗ ಇಬ್ಬರು ಜೋಡಿಗಳು ಜೋಡಿ ನಂಬರ್ ಒನ್ ರಿಯಾಲಿಟಿ ಶೋನ ಮೊದಲನೇ ಸ್ಥಾನದಲ್ಲಿ ಇದ್ದಾರೆ. ಇವರಿಗೆ ಐದು ಲಕ್ಷ ರುಪಾಯಿ ಹಣ ಬಹುಮಾನವಾಗಿ ನೀಡಲಾಗಿದೆ. ಇನ್ನು ಜೋಡಿ ನಂಬರ್ ಒನ್ ಶೋನ ಮೊದಲ ರನ್ನರ್ ಅಪ್ ಆದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಅವರು ಸಹ ಬಹುಮಾನ ಸ್ವೀಕರಿಸಿದರು.

ರನ್ನರ್ ಅಪ್ ಕಿರಿಕ್ ಕೀರ್ತಿ-ಅರ್ಪಿತಾ

ರನ್ನರ್ ಅಪ್ ಕಿರಿಕ್ ಕೀರ್ತಿ-ಅರ್ಪಿತಾ

ಕಿರಿಕ್ ಕೀರ್ತಿ ಕೂಡ ಎಲ್ಲರ ಕಾಲು ಎಳೆಯುತ್ತಾ ಸದಾ ನಗುತ್ತಾ ಇರುತ್ತಾರೆ. ಇನ್ನು ಎರಡನೇ ರನ್ನರ್ ಅಪ್ ಸ್ಥಾನವನ್ನು ಸಂತು ಹಾಗೂ ಮಾನಸ ಗೆದ್ದುಕೊಂಡಿದ್ದಾರೆ. ಸಂತು ಹಾಗೂ ಮಾನಸ ಕಿಲಾಡಿ ಜೋಡಿಗಳು ಎಂದರೆ ತಪ್ಪಾಗದು ಇಬ್ಬರು ಒಬ್ಬರಿಗೊಬ್ಬರು ಕಾಲು ಎಳೆಯುತ್ತಾ ಪರಸ್ಪರ ಪ್ರೀತಿಯಿಂದ ಇದ್ದಾರೆ. ಇನ್ನು ಈ ಜೋಡಿಗಳು ಅನೇಕ ಥರದ ಜೋಕುಗಳನ್ನು ಮಾಡಿ ಜಡ್ಜ್‌ಗಳನ್ನು ನಗಿಸುತ್ತಿದ್ದರು. ಇನ್ನೂ ಈ ಇಬ್ಬರ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಯಾವುದೇ ಟಾಸ್ಕ್ ಕೊಟ್ಟರು ಅದನ್ನು ಇಬ್ಬರು ನಿಷ್ಠೆಯಿಂದ ಮಾಡುತ್ತಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ದಿಗಂತ್ ಐಂದ್ರಿತಾ ದಂಪತಿ

ಕಾರ್ಯಕ್ರಮಕ್ಕೆ ಆಗಮಿಸಿದ ದಿಗಂತ್ ಐಂದ್ರಿತಾ ದಂಪತಿ

ಇನ್ನೂ ಕಾರ್ಯಕ್ರಮಕ್ಕೆ ಗೆಸ್ಟ್‌ಗಳಾಗಿ ದಿಗಂತ್ ಹಾಗೂ ಐಂದ್ರಿತಾ ರೈ ಆಗಮಿಸಿದ್ದರು. ಇವರಿಬ್ಬರನ್ನು ನೋಡಲು ಅಭಿಮಾನಿಗಳಲ್ಲಿ ಕಾತರತೆ ಮೂಡಿತ್ತು. ಎಲ್ಲೋ ಮಳೆಯಾಗಿದೆ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಲು ಮುಂದಾದರು ದಿಗಂತ್ ಈ ವೇಳೆ ಶ್ವೇತಾ ಚಂಗಪ್ಪ ದಿಗಂತ್ ಕಾಲೆಳೆಯಲು ನೋಡುತ್ತಾರೆ. ಶ್ವೇತಾ ಹೇಳುತ್ತಾರೆ ಈ ಬಾರಿ ಸೆಕೆಂಡ್ ಹನಿಮೂನ್‌ಗೆ ತೆರಳದ್ದೀರಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಐಂದ್ರಿತಾ-ದಿಗಂತ್ ನಾಚಿ ನೀರಾಗುತ್ತರೆ. ಜೋಡಿ ನಂಬರ್ ವನ್ ರಿಯಾಲಿಟಿ ಅನೇಕ ಜನರ ಭಾಂದವ್ಯ ವನ್ನು ಹೆಚ್ಚು ಮಾಡಿದ ರಿಯಾಲಿಟಿ ಶೋ ಎಂದರೆ ತಪ್ಪಾಗಲಾರದು.

ವೀಕ್ಷಕರ ಮನ ರಂಜಿಸಿದ ಸ್ಪರ್ಧಿಗಳು

ವೀಕ್ಷಕರ ಮನ ರಂಜಿಸಿದ ಸ್ಪರ್ಧಿಗಳು

ಸ್ಪರ್ಧಿಗಳ ಎಲ್ಲಾ ಪ್ಯಾಮಿಲಿಗಳನ್ನು ವೇದಿಕೆಗೆ ಕರೆಯಿಸಿ ವೀಕ್ಷಕರಿಗೆ ಪರಿಚಯ ಮಾಡಲಾಗಿತ್ತು. ಹಾಗೆಯೇ ಜೋಡಿಗಳ ಮರು ಮದುವೆ ಕೂಡ ಮಾಡುತ್ತಾರೆ. ಗೋವಿಂದೇ ಗೌಡ ಹಾಗೂ ದಿವ್ಯ ಜೋಡಿ ಕೂಡ ಅದ್ಭುತ ವಾಗಿ ಮನರಂಜನೆ ನೀಡಿದರು. ಗಂಡನನ್ನು ಮಗು ಥರ ನೋಡಿಕೊಳ್ಳುವ ಹೆಂಡತಿ, ಹೆಂಡತಿ ಏನು ಹೇಳಿದರು ಅದನ್ನು ತಂದು ಕೊಡುವ ಗಂಡ ಹೀಗೆ ಸುಂದರ ದಾಂಪತ್ಯ ಜೀವನ ಇವರದ್ದು. ಇನ್ನು ಪ್ರಣವ್ ಹಾಗೂ ನೇಹಾ ಕೂಡ ಉತ್ತಮವಾಗಿ ಸ್ಪರ್ಧೆ ನೀಡಿ ಜನರಿಗೆ ಮನೋರಂಜನೆ ನೀಡುವುದರಲ್ಲಿ ಸಫಲರಾಗಿದ್ದಾರೆ.

ಕೃಷ್ಣೇಗೌಡರಿಗೆ ವಿಶೇಷ ಪ್ರಶಸ್ತಿ

ಕೃಷ್ಣೇಗೌಡರಿಗೆ ವಿಶೇಷ ಪ್ರಶಸ್ತಿ

ಭವಾನಿ ಸಿಂಗ್ ಹಾಗೂ ಪಂಕಜಾ ಕೂಡ ಫ್ಯಾಮಿಲಿ ರೌಂಡ್ ನೆನಪಿಸಿಕೊಂಡು ಭಾವುಕರಾದರು. ಕಾರ್ಯಕ್ರಮಕ್ಕೆ ಬಾರದೆ ಹೋಗಿದ್ದರೆ ಇದೆಲ್ಲ ಮಿಸ್ ಆಗಿ ಹೋಗುತ್ತಿತ್ತು ಎಂದರು. ಪ್ರೊಫೆಸರ್ ಕೃಷ್ಣೇಗೌಡ ಹಾಗೂ ಕಲ್ಪನಾ ಅವರು ಕೂಡ ಈ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದರು. ಈ ವೇಳೆ ಸಾಹಿತಿ ಪ್ರೊ. ಕೃಷ್ಣೇಗೌಡರಿಗೆ ಕರ್ನಾಟಕ ಹೆಮ್ಮೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

More from Filmibeat

English summary
Zee Kannada reality show Jodi no.1 Update on October 9th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X