For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ ನಾಗವಲ್ಲಿ

  By ಪೂರ್ವ
  |

  ಜೋಡಿ ನಂಬರ್ ವನ್ ರಿಯಾಲಿಟಿ ಶೋ ಚೆನ್ನಾಗಿ ಮೂಡಿಬರುತ್ತಿದೆ. ಜೋಡಿ ಹಕ್ಕಿಗಳ ಕಲರವವನ್ನು ಈ ಕಾರ್ಯಕ್ರಮವನ್ನು ಶ್ವೇತಾ ಚಂಗಪ್ಪ ನಡೆಸಿ ಕೊಡುತ್ತಿದ್ದಾರೆ. ಹಾಗೆಯೇ ಮಾಳವಿಕ ಹಾಗೂ ಪ್ರೇಮ್ ಜಡ್ಜ್ ಆಗಿ ಈ ಕಾರ್ಯಕ್ರಮ ವನ್ನೂ ಸಖತ್ ಆಗಿ ಎಂಜಾಯ್ ಮಾಡುತ್ತಾ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

  ಜೋಡಿ ನಂಬರ್ ವನ್ ರಿಯಾಲಿಟಿ ಶೋ ಹಿಟ್ ಆಗಿದೆ. ಮಾನಸ ಹಾಗೂ ಸಂತು ಜೋಡಿ ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡುತ್ತಿದ್ದು ನಗೆ ಗಡಲಲ್ಲಿ ತೇಲುವಂತೆ ಮಾಡಿದೆ. ಶೋನಲ್ಲಿ ಈ ವಾರ ಜೋಡಿಗಳಿಗೆ ಅಡುಗೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ನಿನಾದ್ ಹಾಗೂ ರಮ್ಯಾ ಅವರಿಗೂ ಈ ಟಾಸ್ಕ್ ನೀಡಲಾಯಿತು. ಆ ವೇಳೆ ರಮ್ಯಾ ಅವರಿಗೆ ಗೈಡ್ ಮಾಡುವ ಅವಕಾಶ ಮಾತ್ರ ನೀಡಲಾಗಿತ್ತು.

  ಈ ವೇಳೆ ನಿನಾದ್ ಸಹಾಯಕ್ಕಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಜೇಶ್‌ನನ್ನು ನೇಮಿಸಲಾಯಿತು. ನೀನಾದ್ ಕಿವಿಗೆ ಹೆಡ್ ಫೋನ್ ಕೊಡಲಾಗುತ್ತದೆ. ಈ ವೇಳೆ ರಾಕೇಶ್ ಹಾಗೂ ನೀನಾದ್‌ಗೆ ರಮ್ಯಾ ಗೈಡ್ ಮಾಡುತ್ತಾರೆ. ಇದರಲ್ಲಿ ಈ ವೇಳೆ ಜನರಿಗೆ ಮನರಂಜನೆ ನೀಡಲು ರಾಕೇಶ್ ಸಾಕಷ್ಟು ಕಸರತ್ತುಗಳನ್ನು ಮಾಡಿದರು. ನಿನಾದ್ ನನ್ನ ಕಂಡು ಐ ಲವ್ ಯೂ ಎಂದು ಹೇಳುತ್ತಾಳೆ ರಮ್ಯಾ ಅದಕ್ಕೆ ರಾಕೇಶ್ ಐ ಲವ್ ಯು ಟೂ ಎಂದು ಹೇಳುತ್ತಾನೆ ಒಟ್ಟಿನಲ್ಲಿ ಆಟ ಮಜವಿತ್ತು.

  ಐ ಲವ್ ಯೂ ಎಂದ ರಮ್ಯಾ

  ಐ ಲವ್ ಯೂ ಎಂದ ರಮ್ಯಾ

  ಇದನ್ನು ನೋಡಿದ ರಮ್ಯಾ ಹೇಳುತ್ತಾರೆ ಐ ಲವ್ ಯು ಅಂದಿದ್ದು ನಿಮಗೆ ಅಲ್ಲ ನನ್ನ ಗಂಡನಿಗೆ ಎಂದು ಹೇಳಿದಾಗ ನಿನಾದ್ ನೋಡುತ್ತಾನೆ. ಏನೋ ನನ್ನ ಹೆಂಡತಿ ಗೆ ಐ ಲವ್ ಯು ಅನ್ನುತಿಯಾ ಎಂದು ಹೇಳಿದಾಗ ಇಲ್ಲ ನಾನು ಏನು ಹೇಳಿಲ್ಲ ಎಂದು ಹೇಳುತ್ತಾನೆ. ಬಳಿಕ ರಮ್ಯಾ, ನೀನಾದ್‌ನನ್ನು ಕಂಡು ಐ ಲವ್ ಯು ಎಂದು ಹೇಳಿದಾಗ ನಿನಾದ್ ನಾಚಿ ನೀರಾಗುತ್ತಾನೆ. ರಮ್ಯಾ ಹಾಗೂ ನಿನಾದ್‌ಗೆ ಪೈಪೋಟಿ ನೀಡಲು ನೇಹಾ ಹಾಗೂ ಆಕೆಯ ಗಂಡ ಭರ್ಜರಿಯಾಗಿ ಅಡುಗೆ ಮಾಡುತ್ತಾರೆ. ಇವರಿಗೆ ಹನುಮಂತು ಸಾಥ್ ನೀಡಿದರು.

  ನೇಹಾ ದಂಪತಿಗೆ ಸಾಥ್ ನೀಡಿದ ಹನುಮಂತು

  ನೇಹಾ ದಂಪತಿಗೆ ಸಾಥ್ ನೀಡಿದ ಹನುಮಂತು

  ಅಭಿಜಿತ್ ದಂಪತಿ ಹಾಗೂ ಸಂತು ದಂಪತಿ ಕೂಡ ಉತ್ತಮವಾಗಿ ಅಡುಗೆ ಮಾಡಿದರು ಸಂತುಗೆ ಅನಿಕ ಜೋಡಿ ಆದರೆ ಅಭಿಜಿತ್‌ಗೆ ನಾಗವಲ್ಲಿ ಜೋಡಿ ಆಗಿರುವುದು ಮಾತ್ರ ಸಖತ್ ಆಗಿತ್ತು. ಅನಿಕಾ ಇಂಗ್ಲೀಷ್ ನಲ್ಲಿ ಜಾಸ್ತಿ ಮಾತನಾಡುವುದರಿಂದ ಆಕೆಗೆ ಸಂತು ಹೆಂಡತಿ ಹೇಳುತ್ತಿರುವ ಮಾತುಗಳು ಅಷ್ಟಾಗಿ ಅರ್ಥ ಆಗುತ್ತಿರಲಿಲ್ಲ. ಆದರೂ ಅದೇನು ಇದೇನು ಏನು ಹೇಳುತ್ತಿದ್ದೀರ ಎಂದೆಲ್ಲ ಕೇಳಿ ಮಾಡುತ್ತಿದ್ದಳು.

  ಮಾನಸ ಗೈಡ್ ಗೆ ಅನೀಕ ಸುಸ್ತ್

  ಮಾನಸ ಗೈಡ್ ಗೆ ಅನೀಕ ಸುಸ್ತ್

  ಆದರೆ ಮಾನಸ ಕಮಾಂಡಿಗೆ ಅನಿಕಾ ಮಾತ್ರ ಫುಲ್ ಸುಸ್ತಾಗಿದ್ದಾರೆ. ಸಂತು ಹಾಗೂ ಅನಿಕಾ ಕೈಗೆ ಕೋಳ ಹಾಕಿ ಅಡುಗೆ ಮಾಡಲು ಟಾಸ್ಕ್ ನೀಡಿದ್ದರು. ಮಾನಸ ಕಮಾಂಡ್ ನೀಡಲು ಮಾತ್ರ. ಆದರೆ ಕೊನೆಗೆ ಮಾನಸ ಕೂಡ ಅಡುಗೆಗೆ ಸಹಾಯ ಮಾಡಲು ಹೇಳಲಾಗುತ್ತದೆ. ಬಿರಿಯಾನಿಯನ್ನು ತಯಾರಿಸಿ ಅದಕ್ಕೆ ಬೇಕಾದ ಸಲಾಡ್ ಅನ್ನು ತಯಾರಿ ಮಾಡಿತು ಈ ಜೋಡಿ.

  ವಾಣಿ ಮಾತಿಗೆ ನಕ್ಕ ಪ್ರೇಕ್ಷಕರು

  ವಾಣಿ ಮಾತಿಗೆ ನಕ್ಕ ಪ್ರೇಕ್ಷಕರು

  ಇವರಿಗೆ ಪ್ರತಿ ಸ್ಪರ್ಧಿ ಆಗಿ ಅಭಿಜಿತ್ ದಂಪತಿ ಇದ್ದರು. ಅಭಿಜಿತ್‌ಗೆ ಅಡುಗೆಗೆ ಸಹಾಯ ಮಾಡಲು ನಾಗವಲ್ಲಿಯನ್ನು ನೇಮಿಸಲಾಗಿತ್ತು. ನಾಗವಲ್ಲಿ ರೂಪ ಹಾಕಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಬಹಳ ಅದ್ಭುತ ಆಗಿ ನಟಿಸಿ ಸೈ ಎನಿಸಿಕೊಂಡರು. ಅಭಿಜಿತ್‌ಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಾ ಜನರಿಗೆ ಮನೋರಂಜನೆಯನ್ನು ನೀಡುತ್ತಾ ಜನರ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಸಂತು ಗೆ ನಾಗವಲ್ಲಿ ರೂಪದಲ್ಲಿದ್ದ ವಾಣಿ ಚಮಕ್ ನೀಡುತ್ತಿದ್ದ ವೇಳೆ ಸಂತು ಮಾತು ವಾಣಿಗೆ ಸಖತ್ ನಗು ತರಿಸುತ್ತದೆ.

  English summary
  Zee Kannada reality show Jodi no.1 Update on September 18th. Know more about episode.
  Monday, September 19, 2022, 21:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X