Jodi No 1: ವೇದಿಕೆ ಮೇಲೆ ಲಾವಣ್ಯ ಹಳೇ ಪ್ರೇಮಿ ಬಂದ್ಬಿಟ್ನಾ..? ಮುಂದೇನಾಯ್ತು?
ಜೀ ಕನ್ನಡದ ವೀಕೆಂಡ್ ಮನರಂಜನೆಯಲ್ಲಿ 'ಜೋಡಿ ನಂ 1' ಕೂಡ ಒಂದು. ಈ ಬಾರಿ ಸೀಸನ್ 2ಗೆ ಬಂದಿರುವ ಜೋಡಿಗಳೆಲ್ಲಾ ಸೂಪರ್ ಅಂತಾನೇ ಹೇಳಬಹುದು. ತೆರೆ ಮೇಲೆ ಮಿಂಚುತ್ತಿದ್ದರು ಕೂಡ ಈ ಜೋಡಿಗಳ ತೆರೆಹಿಂದಿನ ಕಥೆ ಬೇರೆಯದ್ದೇ ಆಗಿದೆ. ಈ ರಿಯಾಲಿಟಿ ಶೋನಲ್ಲಿ ಆ ಎಲ್ಲಾ ವಿಚಾರಗಳು ಅನಾವರಣವಾಗುತ್ತಿವೆ.
'ಜೋಡಿ ನಂ 1' ರಿಯಾಲಿಟಿ ಶೋನಲ್ಲಿ ಹಲವು ರೀತಿಯಾದಂತ ಗೇಮ್ ಶೋಗಳು ಇರಲಿವೆ. ವಾರಕ್ಕೊಮ್ಮೆ ವಿಭಿನ್ನ ರೀತಿಯಾದಂತ ಆಟವನ್ನು ಆಡಿಸಲಾಗುತ್ತದೆ. ಈ ವಾರ ಶಾಲಾ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಅದರಲ್ಲಿ ಲಾವಣ್ಯ ಮತ್ತು ಶಶಿ ತಮ್ಮ ಸ್ಕೂಲ್ ಡೇಸ್ ಅನುಭವವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ.

ಲಾವಣ್ಯಗೆ ಸ್ಕೂಲ್ ಲೈಫ್‌ನಲ್ಲೇ ಬಂದಿತ್ತು ಲವ್ ಲೆಟರ್
'ನನ್ನ ಸ್ಕೂಲ್ ಲೈಫ್ ಬರೀ ಅಪ್ಪನಿಂದ ಹೊಡೆಸಿಕೊಳ್ಳುವುದು, ಬೈಸಿಕೊಳ್ಳುವುದು. ಲವ್ ಲೆಟರ್ ಕೊಡುವ ಹುಡುಗರಿಂದ ಪಾರಾಗುವುದು. ಅದು ಜನವರಿ ಫಸ್ಟ್. ಅಪ್ಪ ಗೇಟ್ ಓಪನ್ ಮಾಡೋದಕ್ಕೆ ಅಂತ ಹೋದ್ರು. ಆಗ ಕಾಂಪೌಂಡ್ ಮೇಲೆ ಕೇಕು, ಲವ್ ಲೆಟರ್, ಗ್ರೀಟಿಂಗ್ ಕಾರ್ಡ್ ಅನ್ನೆಲ್ಲಾ ಒಂದರ ಮೇಲೆ ಒಂದರಂತೆ ಇಟ್ಟಿದ್ದರು. ಯಾರು ಅಂತ ಗೊತ್ತಿಲ್ಲ. ಅಪ್ಪ ಆ ಲೆಟರ್ ತೆಗೆದು ನೋಡಿದರು. ಆಗ ಅವನ್ಯಾರೋ ಶೈನಿಂಗ್ ಪೆನ್ನಲ್ಲಿ ಹಂಗ್ ಲವ್ ಮಾಡ್ತೀನಿ ಹಿಂಗ್ ಲವ್ ಮಾಡ್ತೀನಿ ಅಂತ ತುಂಬಿಸಿದ್ದ. ಆದರೆ, ಪತ್ರದ ಕೊನೆಯಲ್ಲಿ ಹೆಸರು ಬರೆಯದೆ, ಸನ್ ಅಂತ ಬರೆದಿದ್ದ. ಅದನ್ನು ನೋಡಿ ನಾನು ಅವನ ಹೆಸರು ಸೂರ್ಯನೇ ಆಗಿರಬೇಕು ಎಂದುಕೊಂಡೆ'.
ಕುರಿ ಪ್ರತಾಪ್ ಚಮಕ್‌ಗೆ ಲಾವಣ್ಯ ಶೇಕ್
ಲಾವಣ್ಯ ಇಷ್ಟೆಲ್ಲ ಹೇಳುವಾಗ ಕುರಿ ಪ್ರತಾಪ್ ಒಂದು ಚಮಕ್ ಕೊಟ್ಟಿದ್ದಾರೆ. ಆ ಹಳೆ ಬಾಯ್ ಫ್ರೆಂಡ್‌ನ ಕರೆಸಿದ್ದೀವಿ. ಬರುತ್ತಾನೆ ನೋಡಿ ಎಂದಾಗ, ಶಶಿ ಮಚ್ಚು ಮಚ್ಚು ಎಲ್ಲಿಟ್ಟೀದ್ದೀರಿ ಅಂತ ಕೇಳಿದ್ದಾರೆ. ಆದರೆ, ಲಾವಣ್ಯಗೆ ಹಳೆಯ ಬಾಯ್ ಫ್ರೆಂಡ್ ಬಗ್ಗೆ ಭಯ ಹುಟ್ಟಿದೆ. ಅದು ಸುಮ್ಮನೆ ರೇಗಿಸಿದ್ದಾಗಿತ್ತು. ಆಗ ಕಥೆ ಮುಂದುವರೆಸಿದ ಲಾವಣ್ಯ, 'ಆ ಲೆಟರ್ ಎಲ್ಲಾ ಮುಗಿದ ಮೇಲೆ ಒಬ್ಬ ಬಂದ. ಲಾವಣ್ಯನಿಂಗೆ ಲೆಟರ್ ಎಲ್ಲಾ ಬಂದಿತ್ತಲ್ಲ ನೋಡಿದ್ಯಾ ಎಂದ, ನೀನು ಯಾರು ಅಂತ ಕೇಳಿದರೆ ಕೈ ಮೇಲೆಲ್ಲಾ ಲಾವಣ್ಯ ಅಂತ ಕೊಯ್ದುಕೊಂಡಿದ್ದ'.
ಲೆಟರ್ ಕೊಟ್ಟ ಹುಡುಗನ ಹಿಂದೆ ಓಟ
'ಆ ರಕ್ತ ನೋಡಿದ ಭಯಕ್ಕೆ ನಾನು ಕಿರುಚಿಕೊಂಡೆ. ನಮ್ಮ ಅಕ್ಕ ಮೋಹನ ಬಂದ ಕೂಡಲೇ ಅವನು ಓಡುವುದಕ್ಕೆ ಶುರು ಮಾಡಿದ. ಅವನ ಹಿಂದೆ ನಮ್ಮ ಅಕ್ಕ, ನಮ್ಮ ಅಕ್ಕನ ಹಿಂದೆ ನಾನು, ನನ್ನ ಹಿಂದೆ ನಮ್ಮ ಅಪ್ಪ ಓಡುವುದಕ್ಕೆ ಶುರು ಮಾಡಿದ್ದೆವು. ಈ ರೀತಿ ಹುಡುಗರ ಕಾಟದಿಂದಾನೇ ನಂಗೆ ಐದು ಸ್ಕೂಲ್ ಬದಲಾಯಿಸಿದ್ದಾರೆ. ನಂಗೆ ಮತ್ತೊಂದು ಬೇಜಾರು ಅಂದರೆ ಚೆನ್ನಾಗಿರುವವರು ಯಾರು ಲೈನ್ ಹಾಕುತ್ತಾವಿರಲಿಲ್ಲ. ಹಾಲ್ ಮಂಜ, ಸೈಕಲ್ ಸೀನ ಇಂತವರೇ ಬಿದ್ದಿದ್ದರು'.
ಶಶಿಗೂ ಹಳೆಯದ್ದೊಂದು ಕಥೆ ಇದೆ
ಶಶಿಗೂ ಕುರಿ ಪ್ರತಾಪ್ ಚಮಕ್ ಕೊಟ್ಟಿದ್ದಾರೆ. ಒಂದು ಹುಡುಗಿಯ ಫೋನ್ ಒಡೆದು ಹಾಕಿದ್ದು, ನೆನಪು ಇದೆಯಾ. ಆ ಹುಡುಗಿಯ ಅಪ್ಪ ಹುಡುಕಿಕೊಂಡು ಬಂದಿದ್ದಾರೆ. ಮಾತನಾಡಿಸಿ ಕಳುಹಿಸು ಎಂದಾಗ ಶಶಿ ಶಾಕ್ ಆಗಿದ್ದಾರೆ. ಅದು ಚಮಕ್ ಎಂದು ಗೊತ್ತಾದ ಮೇಲೆ ಶಶಿ ಹಳೆ ಕಥೆ ಹೇಳಿದ್ದಾರೆ. ಹುಡುಗಿಯೊಬ್ಬಳು ಬಂದು ಮೊಬೈಲ್ ಕೊಟ್ಟಾಗ ಅದನ್ನು ಚಚ್ಚಿ ಸ್ಪೀಕರ್ ತೆಗೆದ ಕಥೆ ಹೇಳಿದ್ದಾರೆ.


Click it and Unblock the Notifications











