Mahanati: ಉಮಾಶ್ರೀ ಪಾತ್ರ ಮಾಡಿ 'ಕಾಟೇರ' ನಮಸ್ಕಾರ ಪಡೆದ ಆರಾಧನಾ!
ಜೀ ಕನ್ನಡದಲ್ಲಿ ಮಹಾನಟಿ ಶೋನಲ್ಲಿ ಈ ವಾರ ಹಿರಿಯ ಕಲಾವಿದೆಯರ ನಟನೆಯನ್ನು ರಿ-ಕ್ರಿಯೇಟ್ ಮಾಡುವ ಮೂಲಕ ವಿಶೇಷ ಪ್ರದರ್ಶನ ನೀಡುತ್ತಿದ್ದಾರೆ. ಕಲಾವಿದರ ಪ್ರತಿಭೆಗೆ ಎಲ್ಲರೂ ಮನಸೋತಿದ್ದಾರೆ. ಈ ವಾರವಂತು ಮಹಾನಟಿ ನೋಡಿ ಖುಷಿ ಪಟ್ಟವರೆ ಹೆಚ್ಚು.
ಉಮಾಶ್ರೀ, ಕಲ್ಪನಾ, ಮಂಜುಳಾ ಅವರ ಅಭಿನಯವನ್ನೆಲ್ಲಾ ರೀ-ಕ್ರಿಯೇಟ್ ಮಾಡುವುದು ಎಂದರೆ ಅಷ್ಟೊಂದು ಸುಲಭದ ಮಾತಲ್ಲ. ಅವರವರ ಅಭಿನಯಕ್ಕೆ ಅವರೇ ಸಾಟಿ. ಆದರೆ ಇದೀಗ ಮಹಾನಟಿ ವೇದಿಕೆಯಲ್ಲಿ ಮಹಾನಟಿಯರ ಹಾಡು, ಡೈಲಾಗ್ ರೀ-ಕ್ರಿಯೇಟ್ ಆಗಿದೆ.

ಪುಟ್ಮಲ್ಲಿಯಾಗಿ ಕಾಡಿದ ಆರಾಧನಾ
'ಪುಟ್ನಂಜ' ಸಿನಿಮಾವನ್ನು ಯಾರಾದರೂ ಮರೆಯುವುದಕ್ಕೆ ಸಾಧ್ಯವಾ? ಸಿಟಿಯಿಂದ ಬರುವ ರೋಜಾ, ಹಳ್ಳಿಯ ಮಾವನನ್ನು ಮದುವೆಯಾಗಿ, ಮತ್ತೆ ಡಿವೋರ್ಸ್ ಕೊಡುವುದಕ್ಕೆ ಹೋಗಿ, ತನ್ಮ ಮಗುವಿಗೆ ತಾಯಿಯಾದಾಗ ಬದಲಾಗುವುದು. ಇಡೀ ಸಿನಿಮಾದಲ್ಲಿ ಪುಟ್ಮಲ್ಲಿಯಾಗಿ ಕಾಡುವುದು ಉಮಾಶ್ರೀ. ಅಂದು ಅವರ ವಯಸ್ಸಿಗಿಂತ ಹಿರಿಯ ಪಾತ್ರದಲ್ಲಿ ನಟಿಸಿದ್ದರು. ಮೊಣಕಾಲಿನ ಮೇಲಿನ ಸೀರೆ, ಸದಾ ಜಗಿಯುವ ಎಲೆ ಅಡಿಕೆ, ಆ ವಯಸ್ಸಾದವರಂತಿನ ಮಾತು. ಈಗಿನ ಜನರೇಷನ್ ಅದನ್ನು ಇಮಿಟೇಟ್ ಮಾಡುವುದಕ್ಕೆ ಸಾಧ್ಯವಾ ಎನ್ನುವಾಗಲೇ ಅದನ್ನೇ ಇಮಿಟೇಟ್ ಮಾಡಿದ್ದು ಆರಾಧನಾ. ಇಂತಹ ಚಾಲೆಂಜಿಂಗ್ ಪಾತ್ರಗಳ ಮೂಲಕವೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆಗ ಮಾತ್ರ ಅವರ ಸಾಮರ್ಥ್ಯ ಗೊತ್ತಾಗುವುದು. ಈಗ ಆರಾಧನಾರ ನಟನೆಗೂ ಎಲ್ಲರೂ ಹೆಮ್ಮೆ ಪಟ್ಟಿದ್ದಾರೆ.
ಥೇಟ್ ವಾಯ್ಸ್ ನೀಡಿದ ಆರಾಧನಾ
ಉಮಾಶ್ರೀ ಅವರು ಆ ಸಿನಿಮಾದಲ್ಲಿ ಪುಟ್ನಂಜನನ್ನು ಕೂಗುವುದು, ಸಮಾಧಾನ ಮಾಡುವ ಧ್ವನಿ ಸಾಮಾನ್ಯವಾಗಿ ಎಲ್ಲರಿಗೂ ನೆನಪಿದ್ದೆ ಇರುತ್ತದೆ. ಜೊತೆಗೆ ಡಿವೋರ್ಸ್ ನೋಟೀಸ್ ಕಳುಹಿಸಿದ್ದಾಳೆ ಎಂದಾಕ್ಷಣ ಹೋಗು ಮಗ ಅವಳಿಗೆ ಬುದ್ದಿ ಕಲಿಸು ಎಂಬ ಡೈಲಾಗ್ ಕೂಡ ಇದೆ. ಆರಾಧನಾ ಕೂಡ ಬಾಯಲ್ಲಿ ಅಡಿಕೆ ಎಲೆ ಜಗಿಯುವಂತೆ ಡ್ರಾಮಾ ಮಾಡಿ ಆ ವಾಯ್ಸ್ ಕೊಟ್ಟಿದ್ದಾರೆ. ಲೋ ಪುಟ್ನಂಜ ಅಂತ ಕೂಗಿದಾಕ್ಷಣವೇ ವೇದಿಕೆ ಮೇಲಿದ್ದವರೆಲ್ಲ ಒಂದು ಕ್ಷಣ ಇದೇನು ಪುಟ್ನಂಜ ಸಿನಿಮಾದ ವಾಯ್ಸ್ ಅನ್ನು ಹಾಗೇ ಬಿಟ್ಟಿದ್ದಾರೆ ಎನಿಸಿತ್ತು. ಆದರೆ ಅದು ಆರಾಧನಾ ವಾಯ್ಸ್ ಆಗಿತ್ತು.

ಖುಷಿಗೆ ಕಣ್ಣೀರು ಹಾಕಿದ ಆರಾಧನಾ
ಆರಾಧನಾರ ವಾಯ್ಸ್, ನಟನೆ ನಿಜಕ್ಕೂ 'ಪುಟ್ನಂಜ' ಸಿನಿಮಾದ ಉಮಾಶ್ರೀ ಅವರನ್ನೇ ನೋಡಿದಂತೆ ಆಗಿತ್ತು. ಸ್ಕಿಟ್ ಮುಗಿದ ಕೂಡಲೇ ಆರಾಧನಾ ಸಿಕ್ಕಾಪಟ್ಟೆ ಕಣ್ಣೀರು ಹಾಕಿದರು. ಅನುಶ್ರೀ ಸಮಾಧಾನ ಮಾಡುವುದಕ್ಕೆ ಹೋದರೆ ಇದು ಸಂತಸದ ಕಣ್ಣೀರು ಎಂದರು. ನಾನು ಈ ಅಭಿನಯ ಮಾಡುವಾಗ ಭಯ ಇತ್ತು. ಒಷ್ಟೊಂದು ಚೆನ್ನಾಗಿ ಮಾಡುತ್ತೀನಿ ಅಂತ ಗೊತ್ತಿರಲಿಲ್ಲ. ಎಲ್ಲರೂ ಇಷ್ಟೊಂದು ಸಪೋರ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದರು.
ಆರಧಾನಾಗೆ ಕಾಟೇರ ಚಪ್ಪಾಳೆ
ಎಲ್ಲರೂ ಕೂಡ ಆರಾಧನಾ ಪರ್ಫಾಮೆನ್ಸ್ ಗೆ ಚಪ್ಪಾಳೆ ತಟ್ಟಿದ್ದರು. ಇದು ಇನ್ನಷ್ಟು ಖುಷಿ ಕೊಟ್ಟಿತ್ತು. ತರುಣ್ ಸುಧೀರ್ ಅವರು ಕೂಡ ಆರಾಧನಾಳ ನಟನೆಗೆ ಚಪ್ಪಾಳೆ ತಟ್ಟಿದರು. ತುಂಬಾ ಚೆನ್ನಾಗಿ ನಟಿಸಿದೆ ಎಂದರು. ಅಂದು ಉಮಾಶ್ರೀ ಅಮ್ಮ ಅವರು ಅವರ ವಯಸ್ಸಿಗಿಂತ ಹೆಚ್ಚು ಪಟ್ಟಾದಂತ ನಟನೆ ಮಾಡಿದ್ದರು. ನಿಮ್ಮಲ್ಲೂ ಅದೇ ಧ್ವನಿ ಕೇಳಿಸಿತು. ಆಲ್ ದಿ ಬೆಸ್ಟ್ ಅಂತ ಹೇಳಿ ಕಾಟೇರ ಸಿನಿಮಾ ಸ್ಟೈಲ್‌ನಲ್ಲಿ ನಮಸ್ಕಾರ ಹೇಳಿದರು. ಇಡೀ ವೇದಿಕೆ ಅದೇ ತರ ನಮಸ್ಕಾರ ಹೇಳಿ, ಬೆಂಬಲ ನೀಡಿದರು.


Click it and Unblock the Notifications











